Saturday, September 4, 2021

05-09-2021 EE DIVASA KANNADA DAILY NEWS PAPER

ಸೆ.4 ರಿಂದ ಗಣಪತರಾವ ಮಹಾರಾಜರ ಶಾಂತಿ ಕುಟೀರದಲ್ಲಿ ಸಪ್ತಾಹ





 ಈ ದಿವಸ ವಾರ್ತೆ ವಿಜಯಪುರ: ತಾಲೂಕಿನ ಸುಕ್ಷೇತ್ರ ಕನ್ನೂರದಲ್ಲಿರುವ ಗಣಪತರಾವ ಮಹಾರಾಜರ ಶಾಂತಿ ಕುಟೀರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೆ.4 ರಿಂದ 10 ರವರೆಗೆ ಸಪ್ತಾಹ ನಡೆಯಲಿದೆ.

ಕೊವಿಡ್ ಹಿನ್ನೆಲೆಯಲ್ಲಿ ನಿಯಮಾವಳಿಗಳ ಪಾಲನೆಯೊಂದಿಗೆ ಈ ಬಾರಿ ಸಪ್ತಾಹವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕಳೆದ 50 ವರ್ಷಗಳಿಂದಲೂ ಆಶ್ರಮದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಶ್ರಾವಣ ವದ್ಯ ತ್ರಯೋದಶಿಯಿಂದ ಭಾದ್ರಪದ ಶುದ್ಧ ಚತುರ್ಥಿಯವರೆಗೆ ಸಪ್ತಾಹ ಆಚರಿಸುವ ಸಂಪ್ರದಾಯ ನಡೆದುಬಂದಿದೆ. ಕೊರೋನಾ ಪ್ರಭಾವದಿಂದ ಕೊಂಚ ಭಿನ್ನ ಶೈಲಿಯಲ್ಲಿ ಅಂದರೆ ವರ್ಚುವಲ್ ಸಪ್ತಾಹವಾಗಿ ಜ್ಞಾನಯಜ್ಞ ರೂಪದಿಂದ ಆಚರಿಸಲಾಗುವುದು. ಈ ಸಪ್ತಾಹದಲ್ಲಿ ನಾಡಿನ ಹಾಗೂ ದೇಶದ ವಿವಿಧ ಪ್ರಾಂತಗಳಿAದ ಅನುಭಾವಿಗಳು ಸಂತರು ವಿದ್ವಾಂಸರು ಅನುಭಾವದ ರಸದೌತಣ ಉಣಬಡಿಸಲಿದ್ದಾರೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಚಿನ್ಮಯ ಮಿಷನ್ ಬೆಂಗಳೂರಿನ ಸ್ವಾಮಿ ಬ್ರಹ್ಮಾನಂದಜೀ, ವಿಜಯಪುರ ಷÀಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮಿಗಳು, ವಿದ್ವಾನ ಕೆ.ಎಸ್. ನಾರಾಯಣಾಚಾರ್, ಎಸ್. ಷಡಕ್ಷರಿ, ಡಾ. ಗುರುರಾಜ್ ಕರಜಗಿ, ಕನ್ನಡದ ಕಬೀರ ಪದ್ಮಶ್ರೀ ಇಬ್ರಾಹಿಂ ಸುತಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಡಾ. ಆರತಿ ವ್ಹಿ.ಬಿ ಸೇರಿದಂತೆ ಇನ್ನೂ ಹಲವು ಸಂತ ಮಹಾಂತರು ಹಾಗೂ ಮರಾಠಿ ವಕ್ತಾರರು, ವಿದ್ವಾಂಸರಿAದ ಉಪನ್ಯಾಸ, ಪ್ರವಚನಗಳು ಮೂಡಿ ಬರಲಿವೆ. 

ಗಣಪತರಾವ ಮಹಾರಾಜರು ದತ್ತಾವತಾರಿ ಎಂದೇ ಪ್ರಸಿದ್ಧರಾಗಿರುವರು. ಅವರ ಅಧ್ಯಾತ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿ ಇವತ್ತಿಗೂ ಪ್ರಸ್ತುತ. ಸಾದಾ ಜೀವನ ಉಚ್ಚ ವಿಚಾರವೇ ಅವರ ನಿಲುವು ಆಗಿತ್ತು. ತಾವು ಪಡೆದ ಆತ್ಮಾನಂದವನ್ನು ಎಲ್ಲರೂ ಪ್ರಾಪ್ತಮಾಡಿಕೊಳ್ಳಲಿ ಎಂಬುವುದೇ ಅವರ ಧ್ಯೇಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಚಿಂತನೆಗಳನ್ನು ಪ್ರಸ್ತುತಪಡಿಸಲು ಈ ಸಪ್ತಾಹ ಆಯೋಜಿಸಲಾಗುತ್ತಿದೆ ಎಂದು ಆಶ್ರಮದ ಅಧ್ಯಕ್ಷ ಗೋವಿಂದಲಾಲ ಬಾಹೇತಿ ಮಾಹಿತಿ ನೀಡಿದ್ದಾರೆ.