Wednesday, June 17, 2020

25 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ, ಸ್ಯಾನಿಟೈಜರ್ ವಿತರಿಸಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ



ಈ ದಿವಸ ವಾರ್ತೆ
ಮುದ್ದೇಬಿಹಾಳ:
ಬುಧವಾರದಂದು ಮುದ್ದೇಬಿಹಾಳ ಪಟ್ಟಣದ ದಾಸೋಹ ನಿಲಯದಲ್ಲಿ   ದೇವರಹಿಪ್ಪರಗಿ ಕ್ಷೇತ್ರದ ಬಸವನಬಾಗೇವಾಡಿ ತಾಲೂಕಿನ ವ್ಯಾಪ್ತಿ, ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷಾ ಕೇಂದ್ರಗಳ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯಸ್ಥರ  ಸಭೆ ನಡೆಸಿ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾಸ್ಕ ಮತ್ತು 100 ಎಮ್‌ಎಲ್ ಸ್ಯಾನಿಟೈಜರ್‌ವನ್ನು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಶಾಲಾ ಆಡಳಿತಾಧಿಕಾರಿಗಳಿಗೆ ವಿತರಿಸಿದರು.


ದಿವ್ಯ ಸಾನ್ನಿಧ್ಯವನ್ನು ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು.
ಶಾಸಕ ಎ.ಎಸ್. ಪಾಟೀಲ ಅವರ ತಂದೆಯವರಾದ ಸಂಗನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸೋಮನಗೌಡ ಪಾಟೀಲ, ಬಿ.ಇ.ಓ ರೇಣುಕಾ ಕಲ್ಬುರ್ಗಿ, ಪಿ.ಎಸ್.ಐ. ಮಲ್ಲಪ್ಪ ಮಡ್ಡಿ, ಶಂಕರಗೌಡ ಹಿರೇಗೌಡ, ಗೋಪಾಲ ಹೂಗಾರ, ಸ್ಕೌಟ್ಸ್ & ಗೌಡ್ಸ್ ಉಪಾಧ್ಯಕ್ಷರಾದ ಜಿ.ಎಚ್.ಚವ್ಹಾಣ, ಎಲ್.ಕೆ.ನದಾಫ್, ಎಸ್.ಆರ್. ಸುಲ್ಪಿ, ಎಸ್.ಜಿ. ಮುತ್ತಪ್ಪನವರ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಿದ್ದಮ್ಮ ಸಿದರಡ್ಡಿ, ಯು.ಬಿ.ಧರಿಕಾರ, ಎ.ಎಸ್. ಬಾಗವಾನ, ಎಚ್.ಎಲ್.ಕರಂಡೆ, ಪ್ರೊ. ಎಸ್.ಎಸ್.ಹೂಗಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾ.ನಿ.ಪ. ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಡಿ.ಬಿ.ವಡವಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನಾ ಮಹಾಮಾರಿ ರೋಗದ ಮಧ್ಯೆಯೇ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಸಕ ನಡಹಳ್ಳಿ ಅವರು ಇಡೀ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾಸ್ಕ್, ಸಾನಿಟೈಜರ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಎ.ಎಸ್. ಬಾಗವಾನ ಪ್ರಾರ್ಥಿಸಿದರು. ಜಿ.ಎಚ್. ಚವ್ಹಾಣ ಸ್ವಾಗತಿಸಿದರು. ಗೋಪಾಲ ಹೂಗಾರ ನಿರೂಪಿಸಿದರು. 

No comments:

Post a Comment