Saturday, July 4, 2020

ಅನಕ್ಷರಸ್ಥ ಅಭಿಜಾತ ಕಾಮೇಗೌಡ



ಕುರಿಗಳು ಮಾರಿ ಕಟ್ಟೆ ಕಟ್ಟಿಸಿದ
ಕರುನಾಡಿನ ಭಗೀರಥ
ಪ್ರಕೃತಿ ರಕ್ಷಣೆಗೆಂದೆ ಪಣತೊಟ್ಟ
ಕಾಮೇಗೌಡ ಅನಿಕೇತ

ಅಕ್ಷರ ಕಲಿಯದ ಓದು ಬಾರದ
ಅನಕ್ಷರಸ್ಥ ಈ ತಾತಾ
ಮೂಕ ಜೀವಿಗಳ ನರಳಾಟವ
ಅರಿತ ಅಭಿಜಾತ

ಪ್ರಾಣಿ, ಪಕ್ಷಿಗಳ ಉಳಿವಿಗಾಗಿ
ತನ್ನ ಮನದ ಇಂಗಿತ
ಸಮಾಜಕ್ಕೆ ತಿಳಿಸಿ, ಜನರಿಂದ
ಎನಿಸಿಕೊಂಡ ಉನ್ಮತ

ಅವಮಾನ ಸಹಿಸಿ, ಪರಿಸರ
ಸಂರಕ್ಷಣೆಗಾಗಿ ನಿರತ
ಕೂಡಿಟ್ಟ ಹಣದಿ ಕೆರೆ, ಕಟ್ಟೆ 
ನಿರ್ಮಿಸಿದ ಪಂಡಿತ 

ಕಾಮೇಗೌಡರ ನಿಸ್ವಾರ್ಥತೆ 
ಕಾಡು ಇಂದು ಚೈತ್ರರಥ
ಪ್ರಾಣಿ ಸಂಕುಲ ವರ್ಷವೀಡಿ
ಇಲ್ಲಿವೇ ನಲಿಯುತ

ಅಜ್ಜನ ಈ ಅದ್ಭುತ ಕಾರ್ಯಕ್ಕೆ
ಪ್ರಶಂಸೆಗಳ ಅನವರತ
ಇತಿಹಾಸದಲ್ಲಿ ಹಸಿರಾಯಿತು
ಇವರ ಉಸಿರು ಅಮೃತ.

ಮೌಲಾಲಿ ಕೆ ಆಲಗೂರ (ಬೋರಗಿ)
ಸಾ.ಸಿಂದಗಿ ಜಿ.ವಿಜಯಪುರ

No comments:

Post a Comment