Sunday, May 28, 2023

ಸರಕಾರ ಜನರಿಗೆ ಜಿಎಸ್‌ಟಿ ಹೆಸರಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದೆ: ನೀರಜ್ ಜೈನ್




ವಿಜಯಪುರ: ಶ್ರೀಮಂತರಿಗೆ ಸಬ್ಸಿಡಿ ನೀಡುವ ಮೂಲಕ 30 ಲಕ್ಷ ಕೋಟಿ ಸರಕಾರಕ್ಕೆ ಹೊರೆಮಾಡಿದ್ದಾರೆ. ಲಕ್ಷ ಕೋಟಿ ಬೆಲೆಯ ಏರ್ ಇಂಡಿಯಾ ವನ್ನು ಸರಕಾರ ಕಡಿಮೆ ಅಂದರೆ 2700 ಕೋಟಿ ಬೆಲೆಗೆ ಮಾರುವ ಮೂಲಕ ಜನರಿಗೆ ಪಂಗನಾಮ ಹಾಕಿದೆ. ಸರಕಾರ ಜನರಿಗೆ ಜಿಎಸ್‌ಟಿ ಹೆಸರಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದೆ. ರೈತರಗೆ ಸಿಗಬೇಕಾದ ಸವಲತ್ತು ಸಿಗದೆ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪುಣೆಯ ಹಿರಿಯ ಪ್ರಗತಿಪರ ವಿಚಾರವಾದಿ ನೀರಜ್ ಜೈನ್ ಅವರು ಹೇಳಿದರು.
ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಮಾತುಗಳನ್ನು ಆಡಿದರು.
ದೇಶದಲ್ಲಿ ಇಂತಹ ಅನಾಹುತಗಳಿಗೆ ಕಾರಣವಾದ ಬಿಜೆಪಿ ಒಮ್ಮೆ ಕರ್ನಾಟಕದಲ್ಲಿ ಸೋತರೆ ಸಾಲದು ಅದರ ಬುಡವನ್ನು ಕಿತ್ತು ಹಾಕಬೇಕು ಗಾಂಧಿ ಸ್ವಾತಂತ್ರ‍್ಯ ಚಳುವಳಿಯನ್ನು ಜನ ಅಂದೋಲನವಾಗಿ ಮಾಡಿದರು ಉಪ್ಪಿನ ಸತ್ಯಾಗ್ರಹ ಮೂಲಕ ಜನ ಬ್ರಿಟಿಷರ ವಿರುದ್ಧ ಪ್ರತಿಭಟಿಸುವಂತೆ ಮಾಡಿದರು ಇದಕ್ಕೆ ಬ್ರಿಟಿಷ್ ಪತ್ರಕರ್ತ ಭಾರತೀಯರಿಗೆ ಸ್ವಾಭಿಮಾನ ಬಂದಿದೆ ಎಂದು ಬರೆದದನ್ನು ನಾವು ಗಾಂಧಿಯ ಚಳುವಳಿಯ ಸಂಘಟನಾತ್ಮಕ ಶಕ್ತಿ ಏನು ಎಂದು ತಿಳಿದುಕೊಳ್ಳಬಹುದು. ಗಾಂಧಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛ ಮಾಡುತ್ತಿದ್ದರು ತಮ್ಮ ಆಶ್ರಮದಲ್ಲಿ ಎಲ್ಲ ವರ್ಗದ ಜನರಿಗೆ ಇರಲು ಅವಕಾಶ ಮಾಡಿ ಕೊಟ್ಟಿದ್ದರು. ಗಾಂಧಿ ರಾಮನನ್ನು ಸ್ಮರಿಸುತ್ತಿದ್ದರು ಆ ರಾಮ ಅಯೋಧ್ಯೆ ರಾಜಾ ರಾಮನಲ್ಲ ಗಾಂಧೀಜಿ ರಾಮ ರಾಮ ಚರಿತ ಮನಸದ ರಾಮನಾಗಿದ್ದಾನೆ. ಇದು ಗಾಂಧಿ ದೇಶ ಆಗಿದ್ದರಿಂದ ಎಲ್ಲ ರಾಜ್ಯಗಳು ಐಕ್ಯತೆ ಹೆಸರಲ್ಲಿ ಒಂದುಗೂಡಿದೆ ಇದು ನಮ್ಮ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ ನಮ್ಮಲ್ಲಿನ ವಿವಿಧತೆಯಲ್ಲಿನ ಏಕತೆ ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಗಾಂಧೀಜಿಯ ಸ್ವರಾಜದ ಬೇರುಗಳು ನಮ್ಮಲ್ಲಿ ಗಟ್ಟಿಯಾಗಿ ನೆಲೆಯೂರಿವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವಿಚಾರವಾದಿ ಜಾನಪದ ವಿದ್ವಾಂಸ ಕಾಳೇಗೌಡ ನಾಗವಾರ ಮಾತನಾಡಿ, ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರತಿ ಹಳ್ಳಿಗೆ ಕೆರೆ ಕಟ್ಟಿಸಿದರು.1947ರ ನಂತರ ಬಹು ಸಂಖ್ಯಾತರಿಗೆ ಶಿಕ್ಷಣ ದೊರೆಯಿತು ಹೆಣ್ಣುಮಕ್ಕಳ ವಿಚಾರದಲ್ಲಿ ಅಂಬೇಡ್ಕರ್ ಮತ್ತು ಲೋಹಿಯಾ ಅವರಿಗೆ ಇರುವಂತಹ ಕಾಳಜಿ ಮತ್ತೊಬ್ಬರಿಗಿಲ್ಲ ಇವತ್ತಿಗೂ ಕೂಡಾ ಹೆಣ್ಣುಮಕ್ಕಳು ತಮ್ಮ ನಿತ್ಯ ಕರ್ಮಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತ ನಂತರ ಮಾಡುವಂತಹ ದುಸ್ಥಿತಿ ಇದೆ. ಅಧಿಕಾರ ಮತ್ತು ಸಂಪತ್ತು ನಮಗೆ ದೊಡ್ಡ ಅಪಾಯ ಇದನ್ನು ತಲೆಗೆ ಹಚ್ಚಿಕೊಳ್ಳದೆ ವಸಂತ ಮಾಸದ ಕೋಗಿಲೆಯಂತೆ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭೀಷೇಕ ಚಕ್ರವರ್ತಿ, ಫಾ. ಟಿಯೋಲ್, ಚಂದ್ರಶೇಖರ ಘಂಟೆಪ್ಪಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

No comments:

Post a Comment