Sunday, May 28, 2023

ಪ್ರಜಾಪ್ರಭುತ್ವ ಸಾಮಾಜಿಕ, ಆರ್ಥಿಕವಾಗಿ ಸಧೃಡಗೊಳಿಸದಿದ್ದರೆ ವಿಫಲ: ಸುಭಾಸ ರಾಜಮಾನೆ

ವಿಜಯಪುರ : ಕಳೆದ 75 ವರ್ಷಗಳಿಂದ ಪ್ರಜಾತಂತ್ರ ಉಸಿರಾಡುತ್ತ ಹಾಗೋ ಹೀಗೋ ಹಾರಾಡುತ್ತಾ ಬಂದಿದೆ ಎಂದು ವಿಚಾರವಾದಿ ಸುಭಾಸ ರಾಜಮಾನೆ ಹೇಳಿದರು.
ಅವರು ನಗರದ ಕಂದಗಲ್ ಹನುಮಂತರಾಯ ರಂಗAದಿರದಲ್ಲಿ ಹಮ್ಮಿಕೊಂಡ ಕುಮಾರ ಕಕ್ಕಯ್ಯ ಪೋಳ ಬಿ. ಗಂಗಾಧರ ವೇದಿಕೆಯಲ್ಲಿ ಪ್ರಜಾಪ್ರಭುತ್ವ : ಯುವ ಸ್ಪಂದನದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿನ ಆಶಯಗಳು ನಾಮಕೆ ವಾಸ್ತೆ ಸೇರಿಸಿದ್ದಾರೆ. ಅದು ಇಲ್ಲಿಯವರೆಗೆ ಜಾರಿಯಾಗಿಲ್ಲ ಎಂದು ಸ್ವತಃ ಅಂಬೇಡ್ಕರ ಅವರೇ ಹೇಳಿದ್ದರು. ಸಾಮಾಜಿಕ, ಆರ್ಥಿಕವಾಗಿ ಸಧೃಡಗೊಳಿಸದಿದ್ದರೆ ವಿಫಲವಾಗುತ್ತದೆ ಎಂದರು.
ರಾಜಕೀಯ ಪ್ರಜಾತಂತ್ರ ಬಡ ದೀನ ದಲಿತರ ಆರ್ಥಿಕ ಪದ್ದತಿಗಾಗಿ ಕೃಷಿ, ಶಿಕ್ಷಣ ಆರೋಗ್ಯ ಸ್ಟೇಟ್ ಒಡೆತನದಲ್ಲಿರಬೇಕು. ಸಾಮಾಜಿಕವಾಗಿ ಏಳ್ಗೆ ಬಯಸದೆ ಇಲ್ಲದಿದ್ದರೆ. ಬಡವರಾಗಿಯೇ ಇರುತ್ತಾರೆ. ಇಲ್ಲದಿದ್ರೆ ರಾಜಕಾರಣಿಗಳು ತಮ್ಮ ಸ್ವ ಹಿತಾಸಕ್ತಿ ಬೆಳೆಸಿಕೊಂಡು ಹೋಗುತ್ತಾರೆ ಎಂದರು. ಇಂದು ನಾವು ಆರ್ಥಿಕವಾಗಿ ಸಮಾನತೆ ತರಬೇಕಾಗಿದೆ. ಪ್ರಜಾಪ್ರಭುತ್ವ ಉಳಿಸಿಕೊಂಡು ಹೊಗಬೇಕಾಗಿದೆ. ಇದರಿಂದ ಸರ್ವಾಧಿಕಾರಕ್ಕೆ ಮೂಗುದಾರ ಹಾಕಬಹುದು ಎಂದರು. 
ಈ ಸಂದರ್ಭದಲ್ಲಿ ಕಲ್ಯಾಣಿ ಎಂ ಎಸ್ ಮೋಹನ ಮೇಟಿ ಚೆನ್ನು ಕಟ್ಟಿಮನಿ, ಪ್ರಿಯಾಂಕಾ ಮಾವಿನಕಾಯಿ ಇದ್ದರು.

No comments:

Post a Comment