Saturday, July 29, 2023

ಸಂವಿಧಾನವನ್ನು ಓದಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಕಷ್ಟದ ಕೆಲಸ: ಡಾ ಬಿ ಎಂ ಪುಟ್ಟಯ್ಯ

ಈ ದಿವಸ ವಾರ್ತೆ

ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ : ಗಾಂಧೀಜಿ ಕಲ್ಪನೆ ಸ್ವಾವಲಂಬಿ ಭಾರತವನ್ನು ಇರುವ ಹಾಗೆ ಮುಂದುವರೆಸಬೇಕೆಂಬುದಾಗಿತ್ತು. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನವರದು ಭಾರತವನ್ನು ಆಳಬೇಕೆಂಬುದಾಗಿತ್ತು, ಭಾರತದಲ್ಲಿ ತಲತಲಾತರದಿಂದ ಶೋಷಣೆಗೆ ಒಳಗಾದ ಬಹುಸಂಖ್ಯಾತರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವುದಾಗಿತ್ತು ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ ಬಿ ಎಂ ಪುಟ್ಟಯ್ಯ ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಪ್ರಬುದ್ಧ ಭಾರತ ಎಂಬ ವಿಷಯದ ಕುರಿತು ವಿಷಯ ಮಂಡಿಸಿ ಮಾತನಾಡಿದರು. ಭಾರತದ ಸಂವಿಧಾನವನ್ನು ಓದಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಕಷ್ಟದ ಕೆಲಸ ಎಂದರು. ಪ್ರತಿಯೊಬ್ಬರು ಸಂವಿಧಾನದ ಆರ್ಟಿಕಲ್ 51 ಓದಿಕೊಳ್ಳಬೇಕು ಪ್ರಬುದ್ಧ ಭಾರತ ನಿರ್ಮಾಣಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಅಡ್ಡಿಯಾಗಿದೆ ಇದರಿಂದ ಭಾರತದಲ್ಲಿ ಜನರ ಇಂದ್ರಿಯಗಳು ಮಲಿನಗೊಂಡಿವೆ, ಭಾರತ ಸಂವಿಧಾನವನ್ನು ನಾವು ಕೇವಲ ಕಾನೂನು ಗ್ರಂಥಗಳೆಂದು ಪರಿಗಣಿಸಿದ್ದೇವೆ ಇದು ಕೇವಲ ಕಾನೂನು ಗ್ರಂಥವಾಗಿರದೆ ನೈತಿಕ, ಮನೋವೈಜ್ಞಾನಿಕ ಗ್ರಂಥವಾಗಿದೆ ಎಂದು ಹೇಳಿದರು.                   

ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.

No comments:

Post a Comment