Saturday, July 29, 2023

ಪ್ರಬುದ್ಧ ಭಾರತ ಕಲ್ಪನೆಯಲ್ಲಿ ಮಾಡುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ ; ಸಚಿವ ಎಂ.ಬಿ.ಪಾಟೀಲ


ಈ ದಿವಸ ವಾರ್ತೆ

ವಿಜಯಪುರ: ನೈಜಯವಾಗಿರುವ ಸಾಹಿತ್ಯ ದಲಿತ ಸಾಹಿತ್ಯ ಅದು ದಲಿತರ ಸಾಮಾಜಿಕ ಸಮಸ್ಯೆಗಳ ಸುತ್ತ ರಚನೆ ಆಗಿರುವಂತಹದು 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದಂತಹ ಸಾಮಾಜಿಕ ಕ್ರಾಂತಿಯನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೆರವೇರಿಸಿದ್ದಾರೆ ದಲಿತ ಸಾಹಿತ್ಯ ಬಹಳ ಶ್ರೇಷ್ಠವಾದುದು ಪ್ರಬುದ್ಧ ಭಾರತ ಕಲ್ಪನೆಯಲ್ಲಿ ಮಾಡುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಬೃಹತ್  ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.        ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನವನ್ನು ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.         ಪ್ರಾಸ್ತವಿಕವಾಗಿ ದಸಾಪ ರಾಜ್ಯ ಉಪಾಧ್ಯಕ್ಷ ವೈ ಎಂ ಭಜಂತ್ರಿ ಅವರು ಮಾತನಾಡಿ 25 ವರ್ಷಗಳ ಸಂಘಟನೆಯಲ್ಲಿ ಬೆವರು ಹನಿಗಳಿವೆ ಅವು ಸಸಿಯಾಗಿ ಮರವಾಗಿ ನಮ್ಮವರಿಗೆ ಫಲ ನೀಡಿದರೆ ನಮ್ಮ ದಲಿತ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಸಂಘಟನೆ ಸಾರ್ಥಕವಾಗುತ್ತದೆ ಎಂದರು. ದಲಿತ ಸಾಹಿತ್ಯ ಪರಿಷತ್ತು ಉತ್ತರ ಕರ್ನಾಟಕದ ಕೌದಿಯಂತಿದೆ ಅದರೊಳಗೆ ತುಂಡು ತುಂಡು ಬಟ್ಟೆಗಳಿವೆ ಅವುಗಳನ್ನು ಜೋಡಿಸುವ ಕಾರ್ಯವನ್ನು ನಮ್ಮ ರಾಜ್ಯಾಧ್ಯಕ್ಷರಾದ ಡಾ ಅರ್ಜುನ ಗೊಳಸಂಗಿ ಅವರು ಮಾಡಿದ್ದಾರೆ ಎಂದರು. 


ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, ನಾಗಠಾಣ ಶಾಸಕ ವಿಠ್ಠಲ ಕಟಧೋಂಡ, ಮಾಜಿ ಶಾಸಕ ರಾಜು ಆಲಗೂರ, ಮುತ್ತಪ್ಪ ಪೋತೆ, ದಸಂಸ ರಾಜ್ಯ ಸಂಚಾಲಕ ಡಿ.ಜಿಸಾಗರ,  ಬಿ ಎಚ್ ನಾಡಗೇರಿ, ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,  ಸುಜಾತಾ ಚಲವಾದಿ, ತಾಲೂಕು ಅಧ್ಯಕ್ಷೆ ಡಾ ಪೂರ್ಣಿಮಾ ಧಾಮಣ್ಣವರ ಡಾ.ಗಾಂಧೀಜಿ ಮೊಳಕೇರಿ,ಹೇಮಲತಾ ವಸ್ತ್ರದ  ಸಿದ್ದು ರಾಯಣ್ಣವರ  ಇದ್ದರು.

No comments:

Post a Comment