Saturday, July 29, 2023

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ : ಡಾ.ಸೂರ್ಯಕಾಂತ ಸುಜ್ಯಾತ



 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಶಿಕ್ಷಣ ಪಡೆಯಲು ಅವಕಾಶ ಪಡೆದ ನಾವು ಅನಾಗರಿಕರಂತೆ ವರ್ತಿಸುತ್ತಿದ್ದೇವೆ, ಸುಶಿಕ್ಷಿತರಾದ ನಾವು ಆಳುವ ವರ್ಗ ಆಗದೆ ಆಳುಗಳಾಗಿದ್ದೇವೆ,ನಾವು ನೂರಕ್ಕೆ 90ರಷ್ಟು ಇರುವ ಜನರನ್ನು ಶಿಕ್ಷಣದಿಂದ ವಂಚಿಸಲು ಇಂದಿನ ಸರಕಾರ ಹೊಂಚುಹಾಕುತ್ತಿದೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ ಎಂದು ಕಲಬುರಗಿ ಸಾಹಿತಿ ಡಾ ಸೂರ್ಯಕಾಂತ ಸುಜ್ಯಾತ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, , ಚಿತ್ರದುಗ ಸಾಹಿತಿ ಬಿ.ಎಂ.ಗುರುನಾಥ ವೇದಿಕೆಯಲ್ಲಿ ಇದ್ದರು.

No comments:

Post a Comment