Saturday, July 29, 2023

ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು :ಡಾ. ಟಿ. ಯಲ್ಲಪ್ಪ ಉತ್ತಮ ಬೆಳವಣಿಗೆ:

ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -೪: ಆಧುನಿಕ ಜಗತ್ತಿನ ಸಮಸ್ಯೆಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಕವಿತೆಗಳಲ್ಲಿ ಸಮಾಜದ ನೋವು -ನಲಿವು, ಬಡತನ, ಅನಕ್ಷರತೆ, ನಿರುದ್ಯೋಗ ಸೇರಿದಂತೆ ಕಂದಾಚಾರಗಳ ಕುರಿತು ಕವಿತೆ ಬರೆದು ಕವಿಗಳು ಆಧುನಿಕ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು  ಬೆಂಗಳೂರಿನ ಹಿರಿಯ ಕವಿ ಡಾ. ಟಿ. ಯಲ್ಲಪ್ಪ ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೪ರ ಕಾವ್ಯ ಸಂಭ್ರಮ-೧ ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ಕವಯಿತ್ರಿ ಇಂದುಮತಿ ಲಮಾಣಿ ಅವರು ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳು ಅರ್ಥಪೂರ್ಣವಾಗಿ ಕವಿತೆಗಳನ್ನು ವಾಚಿಸುವ ಮೂಲಕ ಸಮ್ಮೇಳನದ ಮೆರಗು ಹೆಚ್ಚಿಸಿದ್ದಾರೆ ಎಂದು ಹೇಳಿದರು , ಡಾ, ಜಯಮಂಗಲ ಚಂದ್ರಶೇಖರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಜಿಲ್ಲೆಗಳ ಕವಿಗಳಾದ ಸಂತೆಬೆನ್ನೂರ ಫೈಜ್ನಟ್ರಾಜ್‌, ಡಾ.ರತ್ನಾಕರ ಕುನಗೋಡು,ಮಹಾಂತೇಶ ಪಾಟೀಲ , ರಮೇಶ ಗಬ್ಬೂರ, ಇಂಚರಾ ನಾರಾಯಣಸ್ವಾಮಿ, ದಾಕ್ಷಾಯಣಿ ಹುಡೇದ, ಜಬೀವುಲ್ಲಾ ಎಂ ಅಸದ್, ಸಿದ್ದು ಸವಳಸಂಗ, ಪಿ ಆರ್ ವೆಂಕಟೇಶ್, ಸಿದ್ದು ಬಾರಿಗಿಡದ,ಮಮತಾ ಅರಸಿಕೇರಿ, ಡಾ ಎಚ್ ಬಿ ನಡುವಿನಕೇರಿ, ಡಾ ಎಂ ಎಸ್ ಶಿವಶರಣ, ಈರಣ್ಣ ಮಾದರ ,ಡಾ ಮಲ್ಲಿಕಾರ್ಜುನ ಮೇತ್ರಿ, ವಿಶಾಲ ಮ್ಯಾಸರ್, ಮೈಲಾರಪ್ಪ ಬೂದಿಹಾಳ, ವಸಂತಕುಮಾರ ಕಡ್ಲಿಮಟ್ಟಿ, ಸಿದ್ದು ಸತ್ಯಣ್ಣವರ, ಶಂಕರ ಚಾಮರಾಜನಗರ ಮತ್ತು ಸಿದ್ಧಾರೂಢ ಕಟ್ಟಿಮನಿ ಅವರು ತಮ್ಮ ಕವನವನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಕಲಬುರಗಿ ದಸಾಪ ಅಧ್ಯಕ್ಷ ಡಾ. ಸುನೀಲ ಜಾಬಾದಿ, ಅವರು ಗೋಷ್ಠಿಯನ್ನು ಸಂಯೋಜಿಸಿದರು ಅಶೋಕ ಬಾಬು ಸ್ವಾಗತಿಸಿದರು. ಸವಿತಾ ಲಮಾಣಿ, ವಿಕ್ರಂ ನಿಂಬರ್ಗಾ ನಿರೂಪಿಸಿದರು. ರಾಹುಲ ದ್ರಾವಿಡ್‌ ವಂದಿಸಿದರು.

No comments:

Post a Comment