Saturday, July 29, 2023

ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ: ಡಾ.ಸೋಮಕ್ಕ

ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಗಂಗಾವತಿ ಸಾಹಿತಿ ಡಾ ಸೋಮಕ್ಕ ಅವರು ಹೇಳಿದರು. ಅವರು  ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.ಭಾರತದ ಪ್ರತಿಯೊಬ್ಬರು ಗೊಡ್ಡು ಸಂಪ್ರದಾಯದಿಂದ ಹೊರ ಬರಬೇಕು ಮೊದಲ ಬಾರಿಗೆ ಬುದ್ಧನ ಕಾಲದಲ್ಲಿ,12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿ ಪ್ರಬುದ್ಧ ಭಾರತ ಬಂದಿತ್ತು ಪ್ರಸ್ತುತ ಸಂದರ್ಭದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಗಟ್ಟಿಗೊಳಿಸುವ ಮೂಲಕ ಪ್ರಬುದ್ಧ ಭಾರತ ಕಟ್ಟಬೇಕಿದೆ ನಾವು ಬುದ್ಧನ ರೀತಿಯಲ್ಲಿ ಎಚ್ಚಗೊಂಡಾಗ ಬಸವಣ್ಣನವರಂತೆ ತಳ ಸಮುದಾಯದವರನ್ನು ತಬ್ಬಿಕೊಂಡಾಗ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ , ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ, ಚಿತ್ರದುಗ ಸಾಹಿತಿ ಬಿ.ಎಂ.ಬಿರಾದಾರ ವೇದಿಕೆಯಲ್ಲಿ ಇದ್ದರು.

No comments:

Post a Comment