Saturday, July 29, 2023

ಕಾದಂಬರಿಗಳನ್ನು ಬರೆಯುವ ಕಲೆ ಪೋತೆ ಅವರಿಗೆ ಕರಗತವಾಗಿದೆ:ಡಾ ವಿಕ್ರಮ ವಿಸಾಜಿ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಪ್ರೊ ಎಚ್ ಟಿ ಪೋತೆ ಅವರಿಗೆ ಅವರ ಜನ್ಮಸ್ಥಳ ಇಂಡಿ ತಾಲೂಕಿನ ಹಂಜಗಿಯ ಬಾಲ್ಯದ ದಿನಗಳು, ಅವರ ವಿಜಯಪುರದ ವಿದ್ಯಾರ್ಥಿ ಜೀವನದ ದಿನಗಳು ಹಾಗೂ ಕಲಬುರಗಿಯ ಅವರ ನಂಟು ಕಂಡುಬರುತ್ತವೆ ಅವರ ಕಥಾ ಪಾತ್ರಗಳಲ್ಲಿ ಊಹಾತ್ಮಕ ಪಾತ್ರಗಳು ಬರುವುದಿಲ್ಲ ವರ್ತಮಾನದ ಸತ್ಯ ಘಟನೆಗಳು ಹೇಳುತ್ತವೆ ಅವರ 6 ಕಥಾ ಸಂಕಲನಗಳು ಹಾಗೂ ಎರಡು ಕಾದಂಬರಿಗಳಲ್ಲಿ ಮತ್ತೆ ಮತ್ತೆ ಬರುವ ಪಾತ್ರ ಅಪ್ಪ ಬಹುಷಃ ಅವರ ಜೀವನದಲ್ಲಿ ಅವರ ತಂದೆ ತಿಪ್ಪಣ್ಣ ಅವರು  ಗಾಢವಾದ ಪ್ರಭಾವ ಬೀರಿದಂತೆ ತೋರುತ್ತದೆ ಎಂದು ಕಲಬುರಗಿ ಕೇಂದ್ರೀಯ ವಿ ವಿ ಪ್ರಾಧ್ಯಾಪಕ ಡಾ ವಿಕ್ರಮ ವಿಸಾಜಿ ಅವರು ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಸೃಜನ ಸಾಹಿತ್ಯ ಕುರಿತು ಮಾತನಾಡಿದರು.ತಮ್ಮ ಸುತ್ತ -ಮುತ್ತಲಿನ ವಿಷಯಗಳನ್ನು ತಮ್ಮ ಕಥಾವಸ್ತುವಾಗಿಸಿಕೊಂಡವರು ವರ್ತಮಾನದ ವಿಷಯಗಳನ್ನು ವಿಷಯವಾಗಿ ಇಟ್ಟುಕೊಂಡು ಕಥೆಗಳನ್ನು ಹಾಗೂ ಕಾದಂಬರಿಗಳನ್ನು ಬರೆಯುವ ಕಲೆ ಪೋತೆ ಅವರಿಗೆ ಕರಗತವಾಗಿದೆ ಚರಿತ್ರೆಯನ್ನು ವರ್ತಮಾನಕ್ಕೆ ತಂದಿರುವ ಅವರು ಬುದ್ಧ ಬಸವ, ಅಂಬೇಡ್ಕರ್ ದೇವನೂರು ಮಹಾದೇವ, ಬಿ ಬಸಲಿಂಗಪ್ಪ, ಡಾ ಸಿದ್ದಲಿಂಗಯ್ಯ ಅವರ ಪತ್ರಗಳನ್ನು ಬಳಸಿಕೊಂಡು ಮಹಾಬಿಂದು ಎಂಬ ಅಪರೂಪದ ಕಾಂದಬರಿಯನ್ನು ಬರೆದಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ, ಡಾ ಶಿವಗಂಗಾ ಬಲಗುಂದಿ, ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

No comments:

Post a Comment