Saturday, July 29, 2023

ಸಂವಿಧಾನ ಉಳಿದರೆ ಎಲ್ಲ ಧರ್ಮಗ್ರಂಥಗಳು ಉಳಿಯಲು ಸಾಧ್ಯ:ಪ್ರೊ ಎಚ್ ಟಿ ಪೋತೆ


 ಈ ದಿವಸ ವಾರ್ತೆ

ವಿಜಯಪುರ: ಸಂವಿಧಾನ ಉಳಿದರೆ ಎಲ್ಲ ಧರ್ಮಗ್ರಂಥಗಳು ಉಳಿಯಲು ಸಾಧ್ಯ. ಯಾವ ದೇಶ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಂಸ್ಕೃತವನ್ನು ಕಲಿಯಲಿಕ್ಕೆ ಬಿಡಲಿಲ್ಲ ಅಂತಹ ದೇಶದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಮೂಲಕ ನೀಡಿದ ಸ್ವಾತಂತ್ರ್ಯದ ಮೂಲಕ ಇವತ್ತು ಮಲ್ಲೇಪುರಂ ಜಿ ವೆಂಕಟೇಶ್ ಅವರು ಇವತ್ತು ಸಂಸ್ಕೃತ ಪಾಳಿ ಭಾಷೆಯಲ್ಲಿ ಪಾಂಡಿತ್ಯ ಪಡೆದು ನಮ್ಮ ನಡುವೆ ಇದ್ದಾರೆ ಎಂದು ಪ್ರೊ ಎಚ್ ಟಿ ಪೋತೆ ಅವರು ಹೇಳಿದರು.     ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಾದಿ ಶರಣರ ಆತ್ಮಗಳು ಬೀದಿಯಲ್ಲಿ ಅಲೆದಾಡುತ್ತಿವೆ ಅವರ ಫೋಟೋಗಳಿಗೆ ಮಠಗಳಲ್ಲಿ ಜಾಗ ಸಿಕ್ಕಿದೆ ಎಂದು ಇಂದಿನ ಸಮಾಜದಲ್ಲಿ ಬುದ್ಧ ಬಸವ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.         ದಲಿತ ಸಾಹಿತಿಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಇಂದು ದಲಿತ ಸಾಹಿತ್ಯ ಬಹಳ ವಿಶಾಲವಾಗಿ ಬೆಳದಿದೆ. ಅಸ್ಪೃಶ್ಯತೆ ಕಾರಣಕ್ಕೆ ಭಾರತ ಅಂಗವಿಕಲ ಭಾರತವಾಗಿ ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಭಾರತದ ಮಣಿಪುರದಲ್ಲಿ ಈಚೆಗೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ ವಿಷಯ ಇದರ ವಿರುದ್ಧ ಸಂಘಟಿತ ಹೋರಾಟ ಅವಶ್ಯಕತೆಯಿದೆ ಎಂದರು.

No comments:

Post a Comment