Saturday, July 29, 2023

ನಮ್ಮ ನಮ್ಮ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಇಂದು ಮಾಡಬೇಕಿದೆ : ಬಿ ಎಂ ಗುರುನಾಥ



 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಜಾತಿ ಅನ್ನುವಂತಹದು ಈ ದೇಶದಲ್ಲಿ ಬಹು ಸಂಖ್ಯಾತರನ್ನು ಶೋಷಣೆಗೆ ಒಳಪಡಿಸಿದೆ ನಮ್ಮ ನಮ್ಮ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಇಂದು ಮಾಡಬೇಕಿದೆ ಚರ್ಚೆಗಳು ನಾಲ್ಕು ಗೋಡೆ ಒಳಗಿನ ಭಾಷಣಕ್ಕೆ ಸೀಮಿತವಾಗದೆ ನಮ್ಮನ್ನು ನಂಬಿರುವ ಸಮುದಾಯದ ಒಳತಿಗಾಗಿ ಶ್ರಮಿಸಬೇಕಿದೆ ಎಂದು ಚಿತ್ರದುರ್ಗದ ಸಾಹಿತಿ ಬಿ ಎಂ ಗುರುನಾಥ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ,  ವೇದಿಕೆಯಲ್ಲಿ ಇದ್ದರು.

No comments:

Post a Comment