Saturday, July 29, 2023

ಭಾರತದ ಸಂವಿಧಾನ ಒಂದು ಮಹಾಕಾವ್ಯವಾಗಿದೆ: ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ



ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ಯಾವುದೇ ಒಬ್ಬ ವ್ಯಕ್ತಿ ಆತನ ನಿಧನದ ನಂತರ ಅವು ಬದುಕಿದರೆ ಸಿದ್ಧಾಂತಗಳಾಗುತ್ತವೆ, ಚಿಂತನೆ ಇಲ್ಲದ ಚಟುವಟಿಕೆ ಮತ್ತು ಚಟುವಟಿಕೆಯಿಲ್ಲದ ಚಿಂತನೆ ಕುರುಡಾಗುತ್ತವೆ ಮನಸ್ಮೃತಿ ವೈದಿಕರು ಹೇಗೆ ಬದುಕಬೇಕು, ಬೈಬಲ್ ಕ್ರಿಸ್ತರು ಹೇಗೆ ಬದುಕಬೇಕು, ಕುರಾನ್ ಮುಸ್ಲಿಂರು ಹೇಗೆ ಬದುಕಬೇಕು ಎಂದು ತಿಳಿಸಿದರೆ ಭಾರತದ ಸಂವಿಧಾನ ಎಲ್ಲರೂ ಕೂಡಿ ಹೇಗೆ ಬದುಕಬೇಕು ಎಂದು ತಿಳಿಸುತ್ತದೆ ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ ಅವರು ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಎಂಬ ವಿಷಯ ಮಂಡಿಸಿ ಮಾತನಾಡಿದರು.ಅಂಬೇಡ್ಕರ್ ಅವರು ದೇಶದ ಸಂಪತ್ತು ಅವಕಾಶ ವಂಚಿತ ಜನರು ಆರ್ಥಿಕವಾಗಿ ಸಬಲರಾಗಲು ಮೀಸಲಾತಿಯನ್ನು ತಂದರು ಕೆಲವು ಪ್ರಮುಖ ವಿಷಯಗಳಿಗೆ ವಿರೋಧ ವ್ಯಕ್ತವಾದಾಗ ಅವುಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದರು.ನಮ್ಮ ದೇಶದಲ್ಲಿ ಇಂದಿಗೂ ಪುನಾ ಒಪ್ಪಂದದ ದುರುಪಯೋಗವಾಗುತ್ತಿದೆ ಎಂದು ಆಘಾತ ವ್ಯಕ್ತಪಡಿಸಿದ ಅವರು ಅಂಬೇಡ್ಕರ್ ಅವರು ಜಗತ್ತಿನ ಎಲ್ಲ ಸಂವಿಧಾನಗಳನ್ನು ಅಭ್ಯಸಿಸಿ ಭಾರತದ ಸಂವಿಧಾನವನ್ನು ರಚಿಸಿದರು. ಭಾರತದಲ್ಲಿ ಸಮಾಜವಾದಿ ಪ್ರಜಾಪ್ರಭುತ್ವ ಜಾರಿಗೊಳಿಸುವುದು ಅವರ ಉದ್ದೇಶವಾಗಿತ್ತು ಸಂವಿಧಾನದ ಪೀಠಕೆಯಲ್ಲಿ ನಮಗೆ ನಾವೇ ಅರ್ಪಿಸಿಕೊಳ್ಳುತ್ತಿದ್ದೇವೆ ಎಂದು ಬರೆದಿರುವುದು ಭಾರತದ ಎಲ್ಲರೂ ಅದ್ದನ್ನು ಒಪ್ಪಿಕೊಂಡಿದ್ದೇವೆ ಎಂಬುದಾಗಿದೆ. ಭಾರತದ ಸಂವಿಧಾನ ಒಂದು ಮಹಾಕಾವ್ಯವಾಗಿದೆ ಇತ್ತೀಚಿಗೆ ಸಂವಿಧಾನಕ್ಕೆ ಅಪಮಾನವಾಗುವ ಘಟನೆಗಳು ಜರುಗುತ್ತಿವೆ, ನಮ್ಮ ಸಂವಿಧಾನ ಇವತ್ತು ತನ್ನ ಪ್ರಸ್ತುತತೆ ಉಳಿಸಿಕೊಂಡಿದೆಯೇ ಎಂಬುದನ್ನು ಚಿಂತಿಸಬೇಕಿದೆ ಭಾರತ ಒಂದು ದೇಶವಲ್ಲ ಇದು ಹಲವು ದೇಶಗಳ ಒಂದು ಒಕ್ಕೂಟವಾಗಿದೆ ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡಲಾಗುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ, ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

No comments:

Post a Comment