Tuesday, October 31, 2023

ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ


                                 ರಫೀ ಭಂಡಾರಿ

                           ಪ.ಗು.ಸಿದ್ದಾಪೂರ

                                     ಎ.ಎಂ.ಮದರಿ

 ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯ ಮೂರು ಮಂದಿ ಸಾಧಕರಿಗೆ ವಿವಿಧ ವಿಭಾಗದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸಾಹಿತ್ಯ ಕ್ಷೇತ್ರಕ್ಕೆ ಪ.ಗು. ಸಿದ್ದಾಪುರ, ಪತ್ರಿಕಾ ಕ್ಷೇತ್ರಕ್ಕೆ ರಫೀ ಭಂಡಾರಿ, ಸಂಕೀರ್ಣ ವಿಭಾಗದಲ್ಲಿ ಸಾಹಿತಿ ಎ.ಎಂ. ಮದರಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ.ಗು. ಸಿದ್ದಾಪುರ:

ಜಿಲ್ಲೆಯ ಮುಳವಾಡದ ಪ.ಗು. ಸಿದ್ದಾಪುರ ಅವರು ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಜುಲೈ 1, 1985 ರಂದು ಜನಿಸಿದ ಪ.ಗು. ಸಿದ್ದಾಪುರ ಅವರು ಚಿತ್ರಕಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದವರು.

ಪ.ಗು. ಸಿದ್ದಾಪುರ ಸಹಜವಾಗಿಯೇ ಮಕ್ಕಳ ಸಾಹಿತ್ಯದಲ್ಲಿಯೇ ಅಪಾರ ಕೃಷಿ ಮಾಡಿದ್ದಾರೆ. ಬಣ್ಣದ ಚಿಟ್ಟೆ, ಹಸಿರು ತೋರಣ, ಪಣತೊಟ್ಟ ಪ್ರಾಣಿಗಳು, ಕಲ್ಲು ಸಕ್ಕರೆ, ಅಕ್ಕರೆಯ ಅಜ್ಜ, ಮಂಗಳನ ಅಂಗಳಕೆ, ಚಿನ್ನದ ಜಿಂಕೆ ಹೀಗೆ ಮಕ್ಕಳ ಸಾಹಿತ್ಯಕ್ಕೆ ಸಂಬAಧಿಸಿದ 32 ಕೃತಿಗಳನ್ನು ರಚಿಸಿದ್ದಾರೆ.

ರಫೀ ಭಂಡಾರಿ:

ಪತ್ರಿಕೋದ್ಯಮ, ಉರ್ದು ಸಾಹಿತ್ಯ, ಸಂಘಟನೆಯಲ್ಲಿ ರಫೀ ಭಂಡಾರಿ ಅವರದ್ದು ಪ್ರಸಿದ್ಧ ಹೆಸರು. ಅವರು ಕಳೆದ 37 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ರಫೀ ಭಂಡಾರಿ ಅವರು ಉರ್ದು ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿದ್ದಾರೆ.

ಭಂಡಾರಿಯವರು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಸದಸ್ಯರಾಗಿ, ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ಉರ್ದು ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಎ.ಎಂ. ಮದರಿ:

ಸಿಂದಗಿ ತಾಲೂಕಿನಲ್ಲಿ ಜನಿಸಿ, ಕೊಪ್ಪಳ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ಎ.ಎಂ. ಮದರಿ ಶಿಕ್ಷಕರಾಗಿ, ಜಿಲ್ಲಾ ಖಜಾನೆ ಅಧಿಕಾರಿಯಾಗಿ ಬೆಳೆದು ನಿರಂತರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.

1952 ರಲ್ಲಿ ಸಿಂದಗಿ ತಾಲೂಕಿನ ಮದರಿಯಲ್ಲಿ ಜನಿಸಿದ ಎ.ಎಂ. ಮದರಿ ಅವರು ಬಲು ಕಷ್ಟದಿಂದ ಜೀವನ ಸವೆಸಿದವರು. 38 ವರ್ಷಗಳ ಕಾಲ ಸರ್ಕಾರಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

No comments:

Post a Comment