Wednesday, October 11, 2023

ಅ.14 ರಂದು 15 ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ಬಂಜಾರ ಧರ್ಮ ಗುರುಗಳ ಮಹಾಸಭಾದ ಉದ್ಘಾಟನಾ ಸಮಾರಂಭ

ಈ ದಿವಸ ವಾರ್ತೆ

ವಿಜಯಪುರ:  ಅಕ್ಟೋಬರ್ 14 ರಂದು ತಿಕೋಟ ತಾಲೂಕಿನ ತೊರವಿ ತಾಂಡಾ - 01 ರಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಶ್ರೀ ಮರಿಯಮ್ಮದೇವಿ ಹಾಗೂ ಶ್ರೀ ನಂದುಲಾಲ ಮಹಾರಾಜರ 15 ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ಬಂಜಾರ ಧರ್ಮ ಗುರುಗಳ ಮಹಾಸಭಾದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷರಾದ ಡಾ. ಬಾಬುರಾಜೇಂದ್ರ ಹೇಳಿದರು.

ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾತ್ರಾ ದುಹೋತ್ಸವದ ಉದ್ಘಾಟನೆಯನ್ನು ಗೋವಾ ಮುಖ್ಯಮಂತ್ರಿಗಳಾದ ಡಾ. ಪ್ರಚೋದ ಸಾರಂಶರವರು ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ನಗರ ಶಾಸಕರಾದ ಬರನಗೌಡ ಪಾಟೀಲ ಯತ್ನಾಳ)ರವರು ವಹಿಸಿಕೊಳ್ಳಲಿದ್ದಾರೆ. ಕರ್ನಾಟಕ ಸರ್ಕಾರ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿಯವರು ಸಮಾರಂಭದ ನೇತೃತ್ವ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಲಿದ್ದಾರೆ. ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲರವರು ಬಂಜಾರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದರೆ ಮಹಾರಾಷ್ಟ್ರ ರಾಜ್ಯ ಸಚಿವರಾದ ಸಂಜಯ ರಾಥೋಡರವರು ಅಖಿಲ ಕರ್ನಾಟಕ ಬಂಜಾರಾ ಧರ್ಮಗುರುಗಳು ಮಹಾಸಭಾದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲಬುರಗಿ ಸಂಸದರಾದ ಡಾ.ಉಮೇಶ ಜಾಧವರವರು ಸಮಾರಂಭದ ಧ್ವಜಾರೋಹಣ ನರವೇರಿಸಲಿದ್ದಾರೆ. ವಿಧಾನ ಪರಿಷತ ಸದಸ್ಯರಾದ ಪ್ರಕಾರ ರಾಠೋಡ್ ಭಾವಚಿತ್ರಕ್ಕೆ ಪುಷ್ಪಾರ್ಚನ ನೇರವರಿಸಲಿದ್ದಾರೆ. ಕಿಶನಭಾವು ರಾಥೋಡ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಅತಿಥಿಗಳಾಗಿ ಉಪಸ್ಥಿತಿಯಿರಲಿದ್ದಾರೆ.


ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಬಾಬುಸಿಂಗ ಮಹಾರಾಜರು, ಬೌಧಾಗ, ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಗುರುಮಹಾಂತ ಶಿವಯೋಗಿಗಳು, ಬಸವಲಿಂಗ ಸ್ವಾಮಿಗಳು, ಸಿದ್ದಲಿಂಗ ಮಹಾಸ್ವಾಮಿಗಳು, ಪರ್ವತಲಿಂಗ ಪರಮೇಶ್ವರ ಮಹಾರಾಜರು, ಕಾಸಪ್ಪ ಧರಿಗೊಂಡ ಪೂಜಾರಿ ಸೇರಿದಂತೆ ಸಾನಿಧ್ಯವನ್ನು ಗೋಪಾಲ ಮಹಾರಾಜರು, ಸೋಮಲಿಂಗ ಮಹಾಸ್ವಾಮಿಗಳು, ಯೋಗೇಶ್ವರಿ ಮಾತಾಜಿಯವರು ಸೇರಿದಂತೆ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಹಲವು ಪೂಜ್ಯರುಗಳು ಆಗಮಿಸಲಿದ್ದಾರೆ.

ರಾಷ್ಟದಲ್ಲಿ ಸಮಾಜದ ನೀತಿ ಏಕ ರೂಪ ತರಲು ಧರ್ಮ ಮಹಾಸಭೆ ಹುಟ್ಟು ಆಗ್ತಿದೆ. ಮರಿಯಮ್ಮದೇವಿ ನಂದುಲಾಲ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಈ ಒಂದು ಸಮಾರಂಭದಲ್ಲಿ ಕುಂಭಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗೋಪಾಲ ಮಹಾರಾಜರು ,  ಈ ಸಂದರ್ಭದಲ್ಲಿ  ಗೋಪಾಲ ಮಹಾರಾಜರು ಮಾತನಾಡಿ,  ಮತಾಂತರವನ್ನು ಸೇರಿದಂತೆ ತಾಂಡಾ ಜನರ ಅರಿವು ಏಳ್ಗೆಗೋಸ್ಕರ ಸಂತರ ನಡೆ ತಾಂಡಾ ಕಡೆ ಎನ್ನುವ ಸದುದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಇದು ಪ್ರತಿಯೊಬ್ಬರಿಗಾಗಿ ಆಯೋಜಿಸಲಾಗಿದೆ ಎಂದರು. ಬಂಜಾರ ಸಮಾಜ ಮುಖಂಡರಾದ ಡಿ.ಎಲ್. ಚವ್ಹಾಣ ಮಾತನಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ಶಂಕರ ಚವ್ಹಾಣ, ಮಹೇಂದ್ರ ನಾಯಕ, ಸುರೇಶ ಬಿಜಾಪುರ ಇದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ

 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.


No comments:

Post a Comment