Saturday, April 9, 2022

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ: ಫ.ಗು‌.ಸಿದ್ಧಾಪುರ



ಈ ದಿವಸ ವಾರ್ತೆ

ವಿಜಯಪುರ: ಇಂದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಖ್ಯಾತ ಮಕ್ಕಳ ಸಾಹಿತಿ ಫ.ಗು.ಸಿದ್ದಾಪುರ ಹೇಳಿದರು.

ತಾಲೂಕಿನ ಮುಳವಾಡದ ಶಿವರಾಯ ಪ್ರಾಥಮಿಕ ಶಾಲೆ ಯಲ್ಲಿ ಈಚೆಗೆ ನಡೆದ ಶಾಲೆಯ 9ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ಓದಿನಲ್ಲಿ ಹೆಚ್ಚು ಅಂಕ ಪಡೆದು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಜನನಿ ಜನ್ಮಭೂಮಿ, ಗುರುಹಿರಿ ಯರ ಋಣ ತೀರಿಸುವ ಸದ್ಭಾವನೆ ಹೊಂದಿದರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಾಧಕರಿಗೆ ಶಿವರಾಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿಗೌಡ ಬಿರಾದಾರ (ವೈದ್ಯಕೀಯ)ಕಲ್ಲನಗೌಡ ಬಿರಾದಾರ(ದೇಶ ಸೇವೆ) ಎಸ್. ಆರ್.ಭೂಸರಡ್ಡಿ(ಶಿಕ್ಷಣ) ಚನ್ನಪ್ಪ ಧೂಳಗೊಂಡ( ಕೃಷಿ ಫ. ಗು.ಸಿದ್ದಾಪುರ (ಸಾಹಿತ್ಯ) ಇವರೆಲ್ಲರೂ ಪ್ರಶಸ್ತಿಗೆ ಭಾಜನರಾದವರು. ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಸಾನ್ನಿಧ್ಯ ವನ್ನು ಸದಾನಂದ ಮಹಾರಾಜರು, ಸಿದ್ಧರಾಮೇಶ್ವರ ಮಹಾರಾಜರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಯುಕ್ತಾ ಪಾಟೀಲ, ತಾನಾಜಿ ನಾಗರಾಳ, ಚಂದ್ರಪ್ಪ ಆಸಂಗಿ, ಮಲ್ಲು ಆಸಂಗಿ, ಚಂದ್ರು ಚಿಣಣೇಕರ, ಡಾ.ಎಸ್‌.ಎಂ.ಕೆಂಗನಾಳ, ಚನ್ನಪ್ಪಗೌಡ ಬಿರಾದಾರ ಉಪಸ್ಥಿತರಿದ್ದರು. ಸಂತೋಷ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ರಮೇಶ ಮೇತ್ರಿ ವಂದಿಸಿದರು.

No comments:

Post a Comment