Wednesday, May 27, 2020

ವಿಜಯಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 5 ಪಾಸಿಟಿವ್ ರೋಗಿಗಳ ಸಾವು : ಸೋಂಕು 79ಕ್ಕೆ ಏರಿಕೆ: ಡಿ.ಸಿ. ವೈ.ಎಸ್.ಪಾಟೀಲ್
 ಈ ದಿವಸ ವಾರ್ತೆ
ವಿಜಯಪುರ  : ತೀವ್ರ ಶ್ವಾಸಕೋಶ ತೊಂದರೆಯಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ 82 ವರ್ಷದ ವಯೋವೃದ್ಧ ರೋಗಿ ಸಂಖ್ಯೆ : 2011 ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. 

ಈ ರೋಗಿಯು ತೀವ್ರ ಶ್ವಾಸಕೋಶ ತೊಂದರೆ, ಹೃದಯ ಸಂಬಂಧಿತ ಕಾಯಿಲೆ, ಧೀರ್ಘಕಾಲಿನ ಸಕ್ಕರೆ ಕಾಯಿಲೆ, ಮತ್ತು ಕಾಲಿಗೆ ಹುಣ್ಣಾಗಿದ್ದರಿಂದ ಮೈ ಎಲ್ಲಾ ನಂಜೇರಿತ್ತು. ಅದರಂತೆ ನಿಮೋನಿಯಾದಿಂದಲೂ ಬಳಲುತ್ತಿದ್ದ ಅವರು ತಾತ್ಕಾಲಿಕ ಎರಡೂ ಮೂತ್ರಕೋಶಗಳು ವಿಫಲ ಕಾರಣಗಳಿಂದ ತಜ್ಞ ವೈದ್ಯರ ನಿರಂತರ ಪ್ರಯತ್ನ ಫಲಕಾರಿಯಾಗದೇ ರೋಗಿಯ ಸಾವಾಗಿದ್ದು, ಶಿಷ್ಟಾಚಾರದಂತೆ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ಇಂದು ಸಂಜೆಯ ಆರೋಗ್ಯ ಇಲಾಖೆಯ ವರದಿಯಂತೆ 16 ವರ್ಷದ ಬಾಲಕಿ ರೋಗಿ ಸಂಖ್ಯೆ 2411 ಇವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಹಾರಾಷ್ಟ್ರ ಸಂಪರ್ಕದಿಂದ ದೃಢಪಟ್ಟಿದೆ. ಈವರೆಗೆ ಒಟ್ಟು ಜಿಲ್ಲೆಯಲ್ಲಿ 79 ಜನರು ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇವರಲ್ಲಿ ಈಗಾಗಲೇ 48 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 26 ಜನರು ಕೋವಿಡ್ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ಒಟ್ಟು 5 ಜನ ಕೋವಿಡ್ ಪಾಸಿಟಿವ್ ರೋಗಿಗಳು ಮೃತಪಟ್ಟಿದ್ದಾರೆಂದು ಅವರು ತಿಳಿಸಿದ್ದಾರೆ.

No comments:

Post a Comment