Sunday, April 26, 2026

ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ ಯಶಸ್ವಿ : ಅನಿಲ ಹೊಸಮನಿ 30 ಲಕ್ಷ ರೂ.ಗಳಿಗೂ ಮಿಕ್ಕಿ ಪುಸ್ತಕದ ವ್ಯಾಪಾರ-ವಹಿವಾಟು

 

 ವಿಜಯಪುರ : ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಯುವಕರಿಗೆ ಹೊತ್ತಿಗೆಯ ಬಗ್ಗೆ ಒಲವು ಮೂಡಿಸಿ ಅವರಲ್ಲಿ ಬುದ್ಧ-ಬಸವ-ಬಾಬಾಸಾಹೇಬರ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಥಮ ಪ್ರಯತ್ನವಾಗಿ ಮೇ ಸಾಹಿತ್ಯ ಬಳಗದಿಂದ ಸಂಘಟಿಸಲಾಗಿದ್ದ ಪುಸ್ತಕ ಮೇಳ ಯಶಸ್ವಿಯಾಗಿದ್ದು, 30 ಲಕ್ಷ ರೂ. ಮಿಕ್ಕಿ ವಹಿವಾಟು ನಡೆದಿದೆ, ಜನರು ಪುಸ್ತಕದ ಬಗ್ಗೆ ಒಲವು ಕಡಿಮೆಯಾಗಿಲ್ಲ ಎನ್ನುವುದು ಇದಕ್ಕೆ ಮತ್ತೊಮ್ಮೆ ಸಾಕ್ಷೀಕರಿಸಿದೆ, ಈ ಮೇಳವನ್ನು ಮುಂದಿನ ವರ್ಷವೂ ಅತ್ಯಂತ ಅಚ್ಚುಕಟ್ಟುತನಿಂದ ಆಯೋಜಿಸಲಾಗುವುದು ಎಂದು ಮೇ ಸಾಹಿತ್ಯ ಬಳಗದ ಅನಿಲ ಹೊಸಮನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಮೇ ಸಾಹಿತ್ಯ ಬಳಗ ಸಂಘಟಿಸಿದ ಪುಸ್ತಕ ಮೇಳ ಯಶಸ್ವಿಯಾಗಿದೆ, ಬುದ್ಧ, ಬಸವ ಹಾಗೂ ಬಾಬಾಸಾಹೇಬರ ತತ್ವ ಚಿಂತನೆ, ಆಶಯಗಳ ಆಧರಿಸಿ ಸಮಾಜ ಇನ್ನೂ ನಿರ್ಮಾಣವಾಗಿಲ್ಲ, ಈ ಮಹನೀಯರ ಸಮ ಸಮಾಜದ ಕನಸು ನನಸಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ, ಈ ಪ್ರಯತ್ನದ ಭಾಗವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಯುವಜನರಿಗೆ ಪುಸ್ತಕಕದ ಕಡೆಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಈ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು. ಪುಸ್ತಕ ಮೇಳದಲ್ಲಿ ಲಡಾಯಿ, ಸ್ವಪ್ನಾ ಬುಕ್ ಹೌಸ್, ನವ ಕರ್ನಾಟಕ, ಆರ್ ಎಸ್ ಬುಕ್ ವರ್ಲ್ಡ್ ಸೇರಿ 35 ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು ಎಂದರು.

ವಿಜಯಪುರದಲ್ಲಿ ಪುಸ್ತಕ ಖರೀದಿ ಆಗುವುದಿಲ್ಲ ಎಂಬ ಮನೋಭಾವ ಹೊಂದಿದ್ದ ಪ್ರಕಾಶಕರಿಗೆ ಮೇಳದಲ್ಲಿ ಭಾಗವಹಿಸಿದ ಮೇಲೆ ಅವರ ಅಭಿಪ್ರಾಯ ಹಾಗೂ ಮನೋಭಾವ ಬದಲಾಗಿದ್ದು, ಪುಸ್ತಕ ಪ್ರೇಮಿಗಳು ಆಸಕ್ತಿಯಿಂದ ಪುಸ್ತಕ ಖರೀದಿ ಮಾಡಿರುವುದು ಅನೇಕ ಪ್ರಕಾಶಕರಿಗೆ ಸಂತೋಷ ತಂದಿದೆ, ಹಲವು ಪ್ರಕಾಶರಿಗೆ ತಲಾ 5 ಲಕ್ಷ ರೂ.ಗಳಿಗೂ ಮಿಕ್ಕಿ ಪುಸ್ತಕದ ವ್ಯಾಪಾರ-ವಹಿವಾಟು ನಡೆದಿರುವುದು ಜನತೆ ಪುಸ್ತಕದ ಬಗ್ಗೆ ಹೊಂದಿರುವ ಒಲವಿಗೆ ಸಾಕ್ಷಿ ಎಂದರು.

ಸಾಮಾನ್ಯ ಬಡ ಕುಟುಂಬದಿAದ ಬಂದವರೇ ಸಂಘಟಿಸಿದ ಈ ಪುಸ್ತಕ ಮೇಳಕ್ಕೆ ಅನೇಕರು ಉದಾರವಾದ ಸಹಾಯ ಹಸ್ತ ಚಾಚಿದ್ದಾರೆ, ಅವರಿಗೆ ಮೇಳ ಚಿರ ಋಣಿಯಾಗಿದೆ, ಅನೇಕ ಸ್ವಯಂ ಪ್ರೇರಿತವಾಗಿ ಶ್ರಮಿಸಿದ ದೊಡ್ಡ ಪಡೆಯೇ ಇದೆ ಎಂದರು. ಅವರಿವರೆನ್ನದೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೇ ಸಾಹಿತ್ಯ ಬಳಗದ ಪ್ರಮುಖರಾದ ಚೆನ್ನು ಕಟ್ಟಿಮನಿ, ಯಮನಪ್ಪ ಗುಣಕಿ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ,ಸಾಯಬಣ್ಣ ಹಳ್ಳಿ, ಸೋಮಲಿಂಗ ರಣದೇವಿ, ಲಿಂಗರಾಜ ಬೀದರಕುಂದಿ ಇದ್ದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Tuesday, April 21, 2026

ಸರಕಾರಿ ಮೆಡಿಕಲ್ ಕಾಲೇಜ್ ಹೋರಾಟಗಾರ್ತಿ ಗೀತಾಗೆ ಪಿ ಎಚ್ ಡಿ ಪದವಿ


ವಿಜಯಪುರ:  ವಿಜಯಪುರ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟಗಾರ್ತಿ ಹಾಗೂ ವಿಜಯಪುರ ನಿವಾಸಿ ಗೀತಾ ಎಚ್ ಅವರಿಗೆ ಪಿ ಎಚ್ ಡಿ ಪದವಿ ಲಭಿಸಿದೆ.

ಗೀತಾ ಹೆಚ್ ಅವರು ಮಹಿಳಾ ಅಧ್ಯಯನ ವಿಭಾಗದ , ಪ್ರೋ ಹೇಮಲತಾ ಹೆಚ್ ಎಮ್ ಅವರ ಮಾರ್ಗದರ್ಶನದಲ್ಲಿ "ವಿಜಯಪುರ ಜಿಲ್ಲೆಯ ಆಶಾ ಕಾರ್ಯಕರ್ತೆಯರ ಕುರಿತು ಒಂದು ಅಧ್ಯಯನ" ಎಂಬ ವಿಷಯದಲ್ಲಿ ಸಂಶೋಧನೆಯನ್ನು ಮಂಡಿಸಿದ್ದ ಪ್ರಬಂಧಕ್ಕೆ  ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯವು ಪದವಿ ನೀಡಿದೆ.
ಮಂಗಳವಾರ ವಿಜಯಪುರ ನಗರ ಹೊರವಲಯದ ತೊರವಿಯಲ್ಲಿ ಹಮ್ಮಿಕೊಂಡ  17ನೇ ಘಟಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ  ಗೆಲ್ಹೋಟ್ ಅವರು ಪಿ ಎಚ್ ಡಿ ಪ್ರಧಾನ ಮಾಡಿದರು.
ಡಾಕ್ಟರೇಟ್ ಪದವಿ ಪಡೆದಿರುವ ಗೀತಾ ಎಚ್. ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಮಹಿಳಾ ವಿವಿಯಲ್ಲಿ ಓದುವ ವಿದ್ಯಾರ್ಥಿನಿಯರು ಅಧ್ಯಯನ ಮಾಡುವಾಗಲೇ ಒಂದಷ್ಟು ದುಡ್ಡು ಸಂಪಾದಿಸುವ ಅವಕಾಶಗಳ ಸೃಷ್ಟಿ : ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ

 ವಿಜಯಪುರ: ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ “ಓದುತ್ತಿರುವಾಗಲೇ ಗಳಿಕೆ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಅವರು ಘೋಷಿಸಿದರು.

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ೧೭ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಯ ಪ್ರಗತಿ ವರದಿ ಮಂಡಿಸಿದ ಅವರು, ಕೌಶಲ್ಯ ಮಹಿಳಾ ತಂತ್ರಜ್ಞಾನ ಪಾರ್ಕ್ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ  ಮಹಿಳೆಯರಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು.

ವಿದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಾರಕ್ಕೆ ೨೦ ಗಂಟೆಗಳ ಕಾಲ ಪಾರ್ಟ್ ಟೈಂ ಕೆಲಸ ಮಾಡುವ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿದೆ. ಅದೇ ಮಾದರಿಯಲ್ಲಿ ಮಹಿಳಾ ವಿವಿಯಲ್ಲಿ ಓದುವ ವಿದ್ಯಾರ್ಥಿನಿಯರು ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಂ ಕೆಲಸ ಮಾಡುವ ಮೂಲಕ ವಿವಿಧ ಕೌಶಲಗಳನ್ನು ಕಲಿಯುವುದರ ಜತೆಗೆ ವಿವಿಧ ಕೋರ್ಸ್ಗಳಲ್ಲಿ ಅಧ್ಯಯನ ಮಾಡುವಾಗಲೇ ಒಂದಷ್ಟು ದುಡ್ಡು ಸಂಪಾದಿಸುವ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರ ಪಾಲಕರ ಆರ್ಥಿಕ ಹೊರೆ ಒಂದಷ್ಟು ಕಡಿಮೆ ಮಾಡಬಹುದಾಗಿದೆ ಎಂದು ವಿವರಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕುಲಪತಿಗಳ ಸಮಾವೇಶದಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ದೂರಶಿಕ್ಷಣ ಪುನರಾಂಭಿಸುವ ಬಗೆಗೆ ವಿಸ್ತೃತ ಚರ್ಚೆಗಳನ್ನು ನಡೆಸಿದ್ದು ಈ ಸಂಬAಧ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣದ ಅಭಿವೃದ್ಧಿಯಲ್ಲಿ ಮೂಲಸೌಕರ್ಯದ ಮಹತ್ವವನ್ನು ಅರಿತು, ನಮ್ಮ ವಿಶ್ವವಿದ್ಯಾಲಯವು ಕ್ಯಾಂಪಸ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡಿದೆ. ೨೦೨೫-೨೬ ನೇ ಶೈಕ್ಷಣಿಕ ವರ್ಷದಲ್ಲಿ ದಶಮಾನೋತ್ಸವದ ಮೊದಲ ಮಹಡಿಯಲ್ಲಿ  ರೂ. ೩.೭೩ ಕೋಟಿ ಅನುದಾನದಲ್ಲಿ  ಸ್ನಾತಕ  ಕೋರ್ಸುಗಳನ್ನು ನಡೆಸುವ  ಸಲುವಾಗಿ ತರಗತಿ  ಕೊಠಡಿಗಳನ್ನು  ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಪಿಮ್_ಉಷಾ   ಯೋಜನೆಯಡಿ  ೯.೦೭ ಕೋಟಿ ಮೊತ್ತದ ಅನುದಾನದಲ್ಲಿ “ಮಹಿಳಾ ಕ್ಷೇಮಾಭಿವೃದ್ಧಿ ಕೇಂದ್ರ” ಹಾಗೂ  ಮಹಿಳಾ ಶೌಚಾಲಯಗಳ ನವೀಕರಣ ಕಟ್ಟಡ  ನಿರ್ಮಾಣದ  ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.  

ವಿವಿಯ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ನಾಲ್ಕು ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿ ನಿಲಯಗಳು ಇವೆ. ಇದಲ್ಲದೆ, ಸ್ನಾತಕ ವಿದ್ಯಾರ್ಥಿನಿಯರಿಗಾಗಿ ಎರಡು ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರಿಗೆ ೫೦೦ ಲೀಟರ್ ಸಾಮರ್ಥ್ಯದ ಆರ್.ಒ. ನೀರು ಶುದ್ಧೀಕರಣ ಯಂತ್ರ, ಗೀಸರ್‌ಗಳು, ಸೌರ ಹೀಟರ್‌ಗಳು, ಸೌರ ದೀಪಗಳು ಮತ್ತು ವಸತಿ ನಿಲಯಗಳ ಸುತ್ತಲೂ ಸೌರ ರಸ್ತೆ ದೀಪಗಳಂತಹ ಸೌಲಭ್ಯಗಳನ್ನು ಒದಗಿಸುತ್ತದೆ. ವಿದ್ಯಾರ್ಥಿನಿಯರ ಭದ್ರತೆಯನ್ನು ಖಚಿತಪಡಿಸಲು ೨೪ ಗಂಟೆಗಳ ಭದ್ರತಾ ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿನಿಯರ ಕಲ್ಯಾಣಕ್ಕಾಗಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ನರ್ಸ್ ನೇಮಕವಾಗಿದ್ದು, ಆರೋಗ್ಯ ಕೇಂದ್ರದಲ್ಲಿ ೨೪x೭ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿದೆ ಎಂದೂ ಕುಲಪತಿಗಳು ವಿವರಿಸಿದರು.

ವೇದಿಕೆಯ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಅತಿಥಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಶ್ರೀಮತಿ ಆಶಾದೇವಿ ಜಗದೀಶ ಗುಡಗುಂಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



Monday, April 20, 2026

ಬುದ್ಧ ಬಸವ ಭೀಮರ ತತ್ವ ದೇಶ ಆಳಿದರೆ ಅಸ್ಪೃಶ್ಯತೆ ನಿವಾರಣೆ ಸಾಧ್ಯ : ಡಾ. ಹೇಮಂತ ಭೂತ್ನಾಳ

ಶರಣ ಅಲ್ಲಮಪ್ರಭು ಶರಣ ಸಿದ್ದರಾಮೇಶ್ವರ ವೇದಿಕೆ

ವಿಜಯಪುರ : ಇವನಾರವ ಇವನಾರವ ಎಂದರೆ ಜಾತಿ ಇವ ಇವ ನಮ್ಮವ, ನಮ್ಮವ ಎಂದರೆ ಧರ್ಮ, ಪ್ರಧಾನಿ ಬಸವಣ್ಣವರಿಂದ ಎರಡು ಸಲ ಶರಣಾರ್ಥಿ ಪಡೆದ ಹರಳಯ್ಯ -ಕಲ್ಯಾಣಮ್ಮ ಮಾಡಿದ ತಮ್ಮ ಚರ್ಮದ ಚಮ್ಮಾವುಗೆಯಲ್ಲಿ ಕಲ್ಯಾಣ ಕ್ರಾಂತಿ ಬೀಜ ಅಡಗಿತ್ತು ದೇಶದಲ್ಲಿ 3600 ಜಾತಿಗಳಿವೆ ಪ್ರತಿ ಜಾತಿ ತನಗಿಂತ ಕೆಳಗ ಒಂದು ಜಾತಿ ಇರಬೇಕಂತ ಬಯಸುತ್ತದೆ, ಒಂದು ಜಾತಿ ಇನ್ನೊಂದು ಜಾತಿಯ ಪಕ್ಕ ಕೂರೂದಿಲ್ಲ ಈ ದೇಶದಲ್ಲಿ ಒಂದು ಜಾತಿ ಇನ್ನೊಂದು ಜಾತಿಯನ್ನು ಅಸ್ಪೃಶ್ಯತೆಯಿಂದ ಕಾಣುತ್ತಿದೆ ಇಡಿ ದೇಶ ಅಸ್ಪೃಶ್ಯತೆಯಿಂದ ಬಳಲುತ್ತಿದೆ ಬುದ್ಧ, ಬಸವ ಭೀಮರ ತತ್ವಗಳು ಈ ದೇಶವನ್ನು ಆಳಿದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದು ಕಾಲೇಜ್ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಡಾ ಹೇಮಂತ ಭೂತನಾಳ ಹೇಳಿದರು,
ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮAದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದ ಅಂಗವಾಗಿ ಎರಡನೇ ದಿನ ಕಲ್ಯಾಣ ಕ್ರಾಂತಿ ನೆನಪು ರಾಷ್ಟ್ರೀಯ ಬಹು ಭಾಷಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಈ ಸಂದರ್ಭ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಕಲಬುರಗಿಯ ಹಿರಿಯ ಸಾಹಿತಿ ಡಾ ಶ್ರೀಶೈಲ ನಾಗರಾಳ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಅಂಧಕಾರದಲ್ಲಿ ಮುಳುಗಿದ ಸಮಾಜದಲ್ಲಿ ಬಸವಣ್ಣ ಮತ್ತು ಶರಣರು ಹಚ್ಚಿದ ವಚನ ಸಾಹಿತ್ಯ ಜ್ಯೋತಿ ಹಚ್ಚಿದ್ದಾರೆ, ವಚನ ಸಾಹಿತ್ಯವೇ ಕನ್ನಡ ನೆಲದ ಮೊದಲ ಸಾಹಿತ್ಯದ ಫಸಲಾಗಿದೆ, ಶರಣರ ವಚನ ಸಾಹಿತ್ಯ ಪ್ರತಿಭಟನೆಯ ರೂಪವಾಗಿದೆ, ವಚನಗಳು ಬದುಕಿನ ಶೋಧ ಮಾಡುತ್ತವೆ, ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಬಸವಣ್ಣನ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ರಚನೆಯಾದದ್ದು ವಚನ ಸಾಹಿತ್ಯ ಎಂದರು.
ಶರಣರು ಮೆಟ್ಟಿದ ಕಲ್ಯಾಣ ನಾಡು ಭೂ ಕೈಲಾಸವಾಗಿತ್ತು ಜಗತ್ತಿನ ವಿವಿಧ ಭಾಗದ ಜನ ವಚನ ಚಳುವಳಿ ಪ್ರಭಾವಕ್ಕೆ ಒಳಪಟ್ಟು ಕಲ್ಯಾಣಕ್ಕೆ ಬಂದರು, ಕಾವ್ಯ ಏನು ಮಾಡಬಲ್ಲದು ಎಂಬುದಕ್ಕೆ ಉತ್ತರ ವಚನಗಳಲ್ಲಿಯೇ ಇದೆ ಎಂದರು.

ಕವಿಗೋಷ್ಠಿ ಆಶಯ ನುಡಿ ಆಡಿ ಪ್ರೊ ಬಸವರಾಜ ಜಾಲವಾದಿ ಅವರು ಮಾತನಾಡಿ, 21ನೇ ಶತಮಾನದಲ್ಲಿ ಬಸವಣ್ಣನ ಅರ್ಥ ಶಾಸ್ತ್ರವನ್ನು ನಾವೆಲ್ಲ ಅಪ್ಪಿಕೊಳ್ಳಬೇಕು, ಒಪ್ಪಿಕೊಳ್ಳಬೇಕು ಕಾಯಕ ಮಾಡಿದ ಸಂಪಾದನೆಯನ್ನು ಸಮಾಜಕ್ಕೆ ಸದುಪಯೋಗಪಡಿಸಬೇಕು ಎಂದು ಹೇಳಿದ ಬಸವಾದಿ ಶರಣರ ತತ್ವ ಎಲ್ಲರು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಯೋಜಕ ಶಂಕರ ಬೈಚಬಾಳ ಮಾತನಾಡಿ ಕನ್ನಡದ ಕವಿಗಳ ಸಂದೇಶ ಬೇರೆ ಭಾಷೆಗೆ ತಲುಪಿಸುವ ಉದ್ದೇಶದಿಂದ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.
ಕವಿಗೋಷ್ಠಿಯಲ್ಲಿ ಕನ್ನಡಲ್ಲಿ ಕಲಾವತಿ ಬೈಚಬಾಳ, ಬಸರಾಜ ಗವಿಮಠ, ಶೇಷರಾವ ಮಾನೆ, ಪರಶುರಾಮ ಶಿವಶರಣ, ಶಿವಪುತ್ರ ಅಜಮನಿ, ಕೆ ಎಸ್ ಬಾಗೇವಾಡಿ, ಇಂಗ್ಲಿಷ್‌ನಲ್ಲಿ ಬಸಮ್ಮ ಬಾಗೋಜಿ, ಅನು ಮುಲ್ಲಾ, ಎಸ್.ಬಿ. ಕಮತಿ, ಹಿಂದಿಯಲ್ಲಿ ಶಿವಣ್ಣ ಹದಿಮೂರ, ಸಂಸ್ಕೃತದಲ್ಲಿ ಗೀತಾ ಸನದಿ, ಕೊಂಕಣಿಯಲ್ಲಿ ಪ್ರಶಾಂತ ದೈವಜ್ಞ, ತೆಲಗುದಲ್ಲಿ ಡಿ. ಜೋಸೆಫ್, ಉರ್ದುದಲ್ಲಿ ಎಂ.ಎA.ಕಲಾಸಿ, ಡಾ. ಅಮೀರುದ್ದೀನ ಖಾಜಿ, ಲಂಬಾಣಿಯಲ್ಲಿ ವಸಂತ ಚವ್ಹಾಣ ಕವನ ವಾಚಿಸಿದರು.


ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿನ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


ವೇದಿಕೆಯಲ್ಲಿ ವಿದ್ಯಾವತಿ ಅಂಕಲಗಿ, ದಾನಮ್ಮ ಮಹಾಜನ, ಲಕ್ಷ್ಮೀ ಹೊಸಮನಿ, ಸುಭಾಸ ಕನ್ನೂರ, ಘನಶ್ಯಾಮ ತೋಸ್ನಿವಾಲಾ, ಮಹಾದೇವಿ ತೆಲಗಿ, ರಾಜಶೇಖರ ಉಮರಾಣಿ, ದಾನೇಶ ಅವಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಭುಗೌಡ ಪಾಟೀಲ, ಕೆ.ಎಫ್. ಅಂಕಲಗಿ, ಮಹಾದೇವಿ ಗೋಕಾಕ, ವ್ಹಿ.ಸಿ. ನಾಗಠಾಣ, ಅಡಿವೆಪ್ಪ ಸಾಲಗಲ್ಲ, ಅನಿಲ ಹೊಸಮನಿ, ಭಾರತಿ ಪಾಟೀಲ, ಶಾಂತವೀರ ಥಾಲಬಾವಡಿ, ಲಾಯಪ್ಪ ಇಂಗಳೆ, ಕಲ್ಲು ಶಿವಶರಣ, ಶರಣು ಕಿರಣಗಿ, ಬಸನಗೌಡ ಹರನಾಳ, ವ್ಹಿ.ಡಿ.ಐಹೊಳ್ಳಿ, ಜಂಬುನಾಥ ಕಂಚ್ಯಾಣಿ, ಸುಧಾರಾಣಿ ಬಿರಾದಾರ, ಸಂಗೀತಾ ಪೂಜಾರಿ, ಅನುಪ್ರಿಯಾ ಬಿರಾದಾರ, ಶಿವಾನಂದ ಸಾಂಗೋಲಿ, ಚೆನ್ನು ಕಟ್ಟಿಮನಿ, ತಿಪ್ಪಣ್ಣ ದೊಡಮನಿ, ಯಮನಪ್ಪ ಗುಣಕಿ, ಶ್ರೀನಾಥ ಪೂಜಾರಿ, ಸುಭಾಸ ಯಾದವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Sunday, April 19, 2026

ಪಾಲಿ ಭಾಷೆ ಪರೀಕ್ಷೆ: ಮಲ್ಲಿಕಾರ್ಜುನ ಕೆಳಗಡೆ ವಿಶೇಷ ಸಾಧನೆ

ವಿಜಯಪುರ: ನಗರದ ಕನಕದಾಸ ಬಡಾವಣೆ ನಿವಾಸಿ, ವಾರ್ತಾ ಇಲಾಖೆ ವಿಶ್ರಾಂತ ಉನ್ನತ ಅಧಿಕಾರಿ ಮಲ್ಲಿಕಾರ್ಜುನ ಕೆಳಗಡೆ ಅವರು ತಮ್ಮ 75 ನೇ ಇಳಿವಯಸ್ಸಿನಲ್ಲೂ ಪಾಲಿ ಭಾಷೆ ಪರೀಕ್ಷೆಯಲ್ಲಿ ವಿಶೇಷ ಸಾಧನೆ ತೋರಿದ್ದಾರೆ.

ಪಾಲಿ ಭಾಷೆ ಕಲಿಯುವ ಆಸಕ್ತಿಯಿಂದ ಕಲಬುರಗಿಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪಾಲಿ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ, ಒಂದು ವರ್ಷದ ಡಿಪ್ಲೋಮಾ ಪಾಲಿ ಕೋರ್ಸ್ ಅಧ್ಯಯನ ಮಾಡಿ, ಪರೀಕ್ಷೆ ಬರೆದು ಅತ್ಯುತ್ತಮ ಸ್ಥಾನ (500 ಕ್ಕೆ 403 ಅಂಕ) ಪಡೆದಿದ್ದು, ಕರ್ನಾಟಕ ಸಂಸ್ಕೃತಿ ವಿಶ್ವ ವಿದ್ಯಾಲಯ ಪ್ರಮಾಣ ಪತ್ರ ನೀಡಿದೆ.

ಮಲ್ಲಿಕಾರ್ಜುನ ಕೆಳಗಡೆ ಅವರ ವಿಶೇಷ ಸಾಧನೆಗೆ ಸ್ನೇಹಿತರ ಬಳಗ, ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ :  9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



ಬಸವಣ್ಣನ ಆರ‍್ಶ ಎಲ್ಲರಿಗೂ ಮಾಧರಿ- ಸುಭಾಸ ಯಾದವಾಡ


ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ
ವಿಜಯಪುರ: ಆಧುನಿಕ ಎಲ್ಲ ಕವಿಗಳಿಗೆ ಬಸವಣ್ಣ ಆವರಿಸಿದ್ದಾನೆ.ಬಸವಣ್ಣನ ಸಮ ಸಮಾಜದ ಆರ‍್ಶ ಎಲ್ಲರಿಗೂ ಇಂದಿಗೂ ಮಾದರಿಯಾಗಿದ್ದಾವೆ ಎಂದು ಹಿರಿಯ ಕವಿ ಸುಭಾಸ ಯಾದವಾಡ ಹೇಳಿದರು.
ಅವರು ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ಕನ್ನಡ ಕಾವ್ಯಲೋಕದಲ್ಲಿ ಬಸವಣ್ಣನ ಪ್ರಭಾವ ಅತೀವ ಗಾಢವಾಗಿದೆ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರಿದ ಬಸವಣ್ಣನ ವಚನಗಳು ಇಂದಿಗೂ ಎಲ್ಲ ಕವಿಗಳಿಗೆ ಪ್ರೇರಣೆಯಾಗಿವೆ. ವರ್ಣಭೇದ, ಜಾತಿ ಅಸಮಾನತೆ, ಅಂಧಶ್ರದ್ಧೆಗಳ ವಿರುದ್ಧ ಬಸವಣ್ಣ ಹೋರಾಡಿದ ರೀತಿ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆಯೆಂದು ಹೇಳಿದರು. ದುಡಿಮೆ ಮತ್ತು ಸತ್ಯನಿಷ್ಠ ಜೀವನದ ಮಹತ್ವವನ್ನು ಪ್ರತಿಪಾದಿಸುತ್ತದೆ. ಆಧುನಿಕ ಕವಿಗಳು ತಮ್ಮ ಕಾವ್ಯಗಳಲ್ಲಿ ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾನತೆ ಮತ್ತು ಸಹಿಷ್ಣುತೆ ಎಂಬ ಮೌಲ್ಯಗಳು ಇಂದಿನ ಜಗತ್ತಿನಲ್ಲಿ ಅತ್ಯಂತ ಅಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ಬಸವಣ್ಣನ ಆದರ್ಶಗಳು ಮಾದರಿಯಾಗಿವೆ  ಎಂದರು.  .ಸಾಹಿತಿ ಶೇಷರಾವ ಮಾನೆ ಅವರು ಮಾತನಾಡಿ ಕವಿಗಳಲ್ಲಿ ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಕಾಣುತ್ತಿವೆ, ಕನ್ನಡದಲ್ಲಿ ಮೊದಲ ಬಾರಿಗೆ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯದ ಮಾದರಿ ಪುರುಷ ಎಂದರು.
ಸವಿತಾ ಬಿ ಎನ್

ಕವಿಗೋಷ್ಠಿಯಲ್ಲಿ ಸವಿತಾ ಬಿ ಎನ್, ಶಿವಬಾಳಮ್ಮ ಕೊಂಡಗೂಳಿ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ದೀಪಕ ಶಿಂಧೆ, ಮಯೂರ ಸಜ್ಜನ, ಲಕ್ಷ್ಮಿ ಗೋಡೆಕರ, ಭರತಕುಮಾರ ಎಚ್ ಟಿ, ಅನುಪ್ರಿಯಾ ಬಿರಾದಾರ, ಸುನೀತಾ ಮೋರೆ, ಕಾವೇರಿ ಹೊಸಮನಿ, ವಿದ್ಯಾಶ್ರೀ ಪೂಜಾರಿ, ಯಲ್ಲಾಲಿಂಗ ಜಮಾದಾರ, ಸುಧಾರಾಣಿ ಬಿರಾದಾರ, ಶಿವಾಜಿ ಮೋರೆ, ಮುರುಗೇಶ ಸಂಗಮ, ಬಿ.ಎಸ್. ಪೂಜಾರಿ, ಚೇತನ ಹಿರೇಕುರುಬರ., ಬೋರಮ್ಮ ಬೇನೂರ, ಮಲ್ಲಿಕರ‍್ಜುನ ಹಡಪದ, ಮಹಾದೇವಿ ಪಾಟೀಲ, ಚಂದ್ರಶೇಖರ,ಅಕ್ಷಯ ಬಲತಿ, ಸುರೇಖಾ ಜಾಲವಾದಿ, ಡಾ. ವನಜಾಕ್ಷಿ ಬಡಿಗೇರ, ದಾನಮ್ಮ ಹೂಗಾರ , ಶಿವರಾಜ ಬಡಿಗೇರ, ತೇಜಸ್ವಿನಿ ಚಾಂದಕವಟೆ,ಅರುಣಕುಮಾರ ರಾಜಮಾನೆ, ರೇಣುಕಾ ಬಿಸನಾಳ, ಗೀತಾ ದೊಡಮನಿ, ಮಂಜುಳಾ ಜಾಲವಾದಿ, ಸುನಂದಾ ಕೋರಿ, ರುಕ್ಷಿಣಿ ಅಗಸರ, ರತ್ನಾ ಬೊಮ್ಮನಹಳ್ಳಿ, ಸುಜ್ಞಾನಿ ಪಾಟೀಲ,ಸಂತೋಷ ಎಸ್.ಎನ್,ವಿದ್ಯಾಶ್ರೀ ರಾಠೋಡ ಸೇರಿದಂತೆ 41 ಜನ ಕವಿಗಳು ಕವಿತೆ ವಾಚಿಸಿದರು.
ಶಿವಬಾಳಮ್ಮ ಕೊಂಡಗೂಳಿ

ವೇದಿಕೆಯಲ್ಲಿ ನಂದಾ ತಿಕೋಟಿ, ರಾಜಶೇಖರ ಉಮರಾಣಿ, ವಿಜಯಕುಮಾರ ಘಾಟಗೆ ಬಸವರಾಜ ಜಾಲವಾದಿ ಕುಮಾರಗೌಡ ಹರನಾಳ ದಾನೇಶ ಅವಟಿ, ಉಪಸ್ಥಿತರಿದ್ದರು.
ಕರ‍್ಯಕ್ರಮದಲ್ಲಿ ಪ್ರಭುಗೌಡ ಪಾಟೀಲ ವಿ ಸಿ ನಾಗಠಾಣ,ಜಂಬನಾಥ ಕಂಚಾಣಿ ಡಾ ವಿ ಡಿ ಐಹೊಳ್ಳಿ, ಭಾರತಿ ಪಾಟೀಲ ಮಹಾದೇವಿ ಗೋಕಾಕ, ಶರಣಗೌಡ ಪಾಟೀಲ ದಾನೇಶ ಅವಟಿ, ಸವಿತಾ ಶಹಾಪುರ, ಶ್ರೀಧರ ಕನ್ನೂರ, ಶರಣು ಕಾಟಕರ,ಶರಣು ಕಿರಣಗಿ, ಚಂದ್ರಶೇಖರ ಹೊಸಮನಿ, ತನ್ಮಯ ಚಂದಕಾವಟೆ ಸೇರಿ ಹಲವರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಬಸವ ಜಯಂತಿಯಲ್ಲಿ ಮಕ್ಕಳಿಂದ ವಚನ ಕಂಠಪಾಠ

ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ
ವಿಜಯಪುರ: ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದಲ್ಲಿ ಪುಟಾಣಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಂದ  ವಚನ ಕಂಠಪಾಠ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಲಕ್ಷ್ಮಿ ಮೋರೆ, ಡಾ ನೀಲಕಂಠ ಹಳ್ಳಿ, ಶರಣಗೌಡ ಪಾಟೀಲ ಉಪಸ್ಥಿತರಿದ್ದರು.
ಚೇತನ ವಜ್ರಮಟ್ಟಿ, ಸೌಜನ್ಯ ಕೃಪಾಸಿಂಧು ಜಾಲವಾದಿ,ಸೃಜನ ಕವಡಿಮಟ್ಟಿ, ಸಾಮ್ರಾಟ ಲಿಂಗದಹಳ್ಳಿ,ಓಂಕಾರ ವೀರಣ್ಣವರ,ಯುಕ್ತಿ ಮಾಡಗಿ ಆವಂತಿಕಾ ಹೆಗಡಿಹಾಳ,ವಿದ್ಯಾ ಹಳಕಟ್ಟಿ,ಸಾಕ್ಷಿ ಮಟ್ಯಾಳ,ಸಂಜನಾ ಭೋವಿ, ವಚನಾ ತಳೆವಾಡಿ,ಕೃತಿಕಾ, ಶೋಭಾರಾಣಿ ಕನ್ನೂರ ವಚನ ಕಂಠಪಾಠದಲ್ಲಿ ಭಾಗವಹಿಸಿ ಬಸವಾದಿ ಶರಣರ ವಚನಗಳನ್ನು ಹೇಳಿದರು.
ಇದೆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೆ ಪ್ರಮಾಣ ಪತ್ರ  ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಲಕ್ಷ್ಮಿ ಮೋರೆ, ಡಾ ನೀಲಕಂಠ ಹಳ್ಳಿ, ಶರಣಗೌಡ ಪಾಟೀಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ  ಎಸ್ ಎಚ್ ನಾಡಗೌಡ, ಮ ಗು ಯಾದವಾಡ, ಪ್ರಭುಗೌಡ ಪಾಟೀಲ ಬಸನಗೌಡ ಹರನಾಳ ಬಸವರಾಜ ಜಾಲವಾದಿ ಶಂಕರ ಬೈಚಬಾಳ,ಸವಿತಾ ಬಿ ಎನ್ ಶೇಷರಾವ ಮಾನೆ,ಚಂದ್ರಶೇಖರ ಗಂಟೆಪ್ಪಗೋಳ ರವಿಕುಮಾರ ಬಿರಾದಾರ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಶರಣು ಕಿರಣಗಿ ದಾನೇಶ ಅವಟಿ ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ ವೈ ಎಚ್ ಲಂಬು ಬಸನಗೌಡ ಹರನಾಳ, ಜಂಬುನಾಥ ಕಂಚಾಣಿ, ಮಹಾದೇವಿ ಗೋಕಾಕ, ಭಾರತಿ ಭುಯ್ಯಾರ ಶಶಿಕಲಾ ಕೊಟಗಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಜಾತಿ ವರ್ಗ ರಹಿತ ಅನುಭವ ಮಂಟಪ ಕಟ್ಟಿದ್ದು ಬಸವಣ್ಣನ ತಾಕತ್ತು -ಅನುಷಾ ಹಿರೇಮಠ



ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ

ವಿಜಯಪುರ : ಸಮಾಜದ ಎಲ್ಲ ವರ್ಗದವರನ್ನು ಬಸವಣ್ಣ ಎತ್ತಿ ಹಿಡಿದು ಅಪ್ಪಿಕೊಂಡಿದ್ದ, ಬಸವಣ್ಣನ ಸಮಾಜ ಜಾತಿ ವರ್ಗ ವರ್ಣ ರಹಿತವಾಗಿತ್ತು, ಬಸವಣ್ಣ ಕಟ್ಟಿದ ವಿಶ್ವದ ಮೊದಲ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ದೇಶ-ವಿದೇಶದ ಶರಣ ಶರಣೆಯರು ಇದ್ದರು ಇದು ಬಸವಣ್ಣನ ಅನುಭಾವದ ತಾಕತ್ತು ಎಂದು ವಚನ ಗಾಯಕಿ ಕುಮಾರಿ ಅನುಷಾ ಕರಿಬಸವಯ್ಯ ಹಿರೇಮಠ ಹೇಳಿದರು.
ಅವರು ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಸಮಾಜದದಲ್ಲಿ ಗಂಡು-ಹೆಣ್ಣು ಜಾತಿ, ವರ್ಗ ಭೇದ ಇರಬಾರದು ಎಂದು ಬಸವಣ್ಣ ಬಯಸಿದ್ದರು ಬಸವಣ್ಣನವರ ಚಿಂತನೆಗಳನ್ನು ಎಲ್ಲರು ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ ನಾನು ಭಕ್ತ ಎಂದು ಹೇಳಿದ ಬಸವಣ್ಣ ಎಲ್ಲರಿಗಿಂತ ದೊಡ್ಡವರಾಗಿದ್ದಾರೆ.ಬಸವಣ್ಣ ಎಲ್ಲರನ್ನು ಪ್ರೀತಿಸಿದರು ಅವರ ಭಾವಕ್ಕೆ ಬೆಲೆ ಕಟ್ಟಲಾಗದು, ಬಸವಣ್ಣ ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿ ಪುರುಷರಾಗಿದ್ದಾರೆ ಅವರ ವಚನ ಇಂದು ಸಮಾಜವನ್ನು ಮುನ್ನಡೆಸುತ್ತಿವೆ ಸಮಾಜದ ಮೈಲಿಗೆ ಕಳೆಯುತ್ತಿವೆ ಎಂದರು.
ಕಾರ್ಯಕ್ರಮದದಲ್ಲಿ ಚಿಂತಕ  ಜೆ ಎಸ್ ಪಾಟೀಲ ಮುಖ್ಯ ಉಪನ್ಯಾಸ ನೀಡಿದರು, ವೀರಶೈವ ಮಹಾಸಭಾ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿದರು.
ಉತ್ಸವ ಸಮಿತಿ ಅಧ್ಯಕ್ಷ ವಹಿಸಿ ಘನಶಾಮ ತೋಸ್ನಿವಾಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಬಸವಲಿಂಗ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ ಬಸನಗೌಡ ಹರನಾಳ, ಜಂಬುನಾಥ ಕಂಚಾಣಿ, ಸಂಗನಬಸಪ್ಪ ಸಜ್ಜನ, ಡಾ ರವಿಕುಮಾರ ಬಿರಾದಾರ ಮಹಾದೇವಿ ಗೋಕಾಕ, ಭಾರತಿ ಭುಯ್ಯಾರ ಶಶಿಕಲಾ ಕೊಟಗಿ, ತ್ರಿವೇಣಿ ಬುರ್ಲಿ, ಸುಧಾರಾಣಿ ಬಿರಾದಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್ ಎಚ್ ನಾಡಗೌಡ, ಮ ಗು ಯಾದವಾಡ, ಪ್ರಭುಗೌಡ ಪಾಟೀಲ ಬಸನಗೌಡ ಹರನಾಳ ಬಸವರಾಜ ಜಾಲವಾದಿ ಶಂಕರ ಬೈಚಬಾಳ, ಸವಿತಾ ಬಿ ಎನ್ ಶೇಷರಾವ ಮಾನೆ,ಚಂದ್ರಶೇಖರ ಗಂಟೆಪ್ಪಗೋಳ ರವಿಕುಮಾರ ಬಿರಾದಾರ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಶರಣು ಕಿರಣಗಿ ದಾನೇಶ ಅವಟಿ ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ ವೈ ಎಚ್ ಲಂಬು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.





ಬಸವ ಜಯಂತಿ ಅಂಗವಾಗಿ ಮಹಿಳೆಯರಿಂದ ಬೈಕ್ ರ್ಯಾಲಿ


ವಿಜಯಪುರ :ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಕಾರ್ಯಕ್ರಮ ಅಂಗವಾಗಿ

ಬೆಳಿಗ್ಗೆ 9.00 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದವರೆಗೆ ಮಹಿಳೆಯರಿಂದ ಬೈಕ್ ರ್ಯಾಲಿ ಜರುಗಿತು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷೆ ಮಹಾದೇವಿ ಗೋಕಾಕ ಉಪಾಧ್ಯಕ್ಷೆ ಶಶಿಕಲಾ ಕೊಟಗಿ ಅವರು ರ್ಯಾಲಿಗೆ ಚಾಲನೆ ನೀಡಿದರು.

ಬೈಕ್ ರ್ಯಾಲಿಯಲ್ಲಿ ಭಾರತಿ ನಾವಿ, ಪ್ರತಿಭಾ ಪಾಟೀಲ, ಶೀಲಾ ಆರ್. ಬಿರಾದಾರ, ಶ್ವೇತಾ ಹರನಾಳ, ವಿದ್ಯಾವತಿ ಅಂಕಲಗಿ, ಭಾರತಿ ಪಾಟೀಲ,  ಶಾರದ ಕೊಪ್ಪ, ಸಂಗೀತಾ ಪೂಜಾರಿ,ಸುಮಾ ಅಂಗಡಿ, ಶ್ರೀದೇವಿ ಪಾಟೀಲ,ಸ್ವೇತಾ ಅಕ್ಕಲಕೋಟ, ಅನುಸೂಯಾ ಬಿರಾದಾರ, ಶಿವಲೀಲಾ ಮನಗೊಂಡ, ಸುಮಾ ದುದಗಿ ರಾಜೇಶ್ವರಿ ಮನಗೂಳಿ, ಅಕ್ಕಮ್ಮ ಮಠ ನೀತಾ ಸೂಳಿಭಾವಿ, ಸ್ನೇಹಾ ಬಿರಾದಾರ, ಶಕುಂತಲಾ ಬಗಲಿ ಮಂಗಲಾ ಡೊಮ್ಮನಾಳ ಅನಿತಾ ಕುಮಶಿ, ಶೈಲಾ ಬಸವಪ್ರಭು., ತ್ರಿವೇಣಿ ಬುರ್ಲಿ, ಜಯಶ್ರೀ ಲದ್ವಾ, ಅಶ್ವಿನಿ ಮಾನೆ, ಪೂರ್ಣಿಮಾ ಯಾದವಾಡ, ಸುನಿತಾ ಬಿರಾದಾರ, ರೇಖಾ ಬಿರಾದಾರ, ಐಶ್ವರ್ಯ ಬಿರಾದಾರ ಸೇರಿ ನೂರಾರು ಮಹಿಳೆಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿ ಸಿ ನಾಗಠಾಣ,ಎಸ್ ಎಚ್ ನಾಡಗೌಡ, ಜೆ ಎಸ್ ಪಾಟೀಲ,ಮ ಗು ಯಾದವಾಡ, ಪ್ರಭುಗೌಡ ಪಾಟೀಲ ಬಸನಗೌಡ ಹರನಾಳ ಚಂದ್ರಶೇಖರ ಗಂಟೆಪ್ಪಗೋಳ ರವಿಕುಮಾರ ಬಿರಾದಾರ, ಶರಣು ಕಿರಣಗಿ ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ದಾನೇಶ ಅವಟಿ ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ ವೈ ಎಚ್ ಲಂಬು ಉಪಸ್ಥಿತರಿದ್ದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Monday, April 13, 2026

ಪದ್ಮಶ್ರೀ ಕಾಕಾ ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು -ನ್ಯಾಯವಾದಿ ಕೆ ಎಫ್ ಅಂಕಲಗಿ

ವಿಜಯಪುರ :  ಪದ್ಮಶ್ರೀ ಕಾಕಾ ಕಾರ್ಖಾನೀಸ್ ಅವರನ್ನು ನೋಡಿದರೆ ಗಾಂಧೀಜಿ ಅವರನ್ನು ನೋಡಿದಂತೆ ಆಗುತ್ತಿತ್ತು ಅವರು ಶೋಷಿತರ ಮಕ್ಕಳಿಗೆ ಶಿಕ್ಷಣ ಕೊಡಲು ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ನ್ಯಾಯವಾದಿ ಕೆ ಎಫ್ ಅಂಕಲಗಿ ಅವರು ಹೇಳಿದರು.  

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಅಂಗವಾಗಿ 4ನೇ ದಿನ ಕಾಕಾ ಕಾರಖಾನೀಸ್ ಬೋರ್ಡಿಂಗ್ ನಲ್ಲಿದ್ದು ವಿದ್ಯಾರ್ಜನೆ ಮಾಡಿದವರು, ಅವರ ಕುಟುಂಬಸ್ಥರಿಂದ ಕಾಕಾ ಕಾರಖಾನೀಸ್ ಸ್ಕೂಲ್‌ ನಿಂದ ಪುಸ್ತಕ ಮೇಳ ಸ್ಥಳದವರೆಗೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಕಾಕಾ ಅವರ ಶತಮಾನೋತ್ಸವ ಆಚರಿಸಿದ ಸಂದರ್ಭದಲ್ಲಿ ಉಳಿದ ದೇಣಿಗೆಯ ಹಣದಲ್ಲಿ ಕನ್ಯಾ ಮಂದಿರ ಜಗದಲ್ಲಿ ಅವರ ಸ್ಮಾರಕ ಪ್ರೌಢ ಶಾಲೆ ನಿರ್ಮಿಸಿದ್ದು ಅತ್ಯಂತ ಮಹತ್ವದ ಕೆಲಸವಾಗಿದೆ ಅವರು ಹೇಳಿದರು.


ಮೆರವಣಿಗೆಯುದ್ಧಕ್ಕೂ ದಲಿತ ಮತ್ತು ಮಹಿಳೆಯರಿಗೆ ಶಿಕ್ಷಕಣ ನೀಡಿದ ಕಾಕಾ ಅವರಿಗೆ ಜಯಘೋಷ ಮೊಳಗಿದವು .
ಈ ಸಂದರ್ಭದಲ್ಲಿ ಬಿ ಆರ್ ಬನಸೋಡೆ, ರಾಜಶೇಖರ ಯಡಹಳ್ಳಿ, ವಿದ್ಯಾವತಿ ಅಂಕಲಗಿ, ವೈ.ಎಚ್. ಲಂಬು, ಮಿಲನಕುಮಾರ ನಾಮದಾರ, ಮಲ್ಲಿಕಾರ್ಜುನ ಕೆಂಗನಾಳ, ಸುರೇಶ ಸಿಂಧೂರ, ಶಂಕರ ಚಲವಾದಿ, ರಾಜೇಶ ತೊರವಿ, ಸವಿತಾ ವಗ್ಗರ, ಈಶ್ವರ ಅವಧಿ, ಸಾಬು ಚಲವಾದಿ, ಸುಲೋಚನಾ ಮಾಮಾದಾಪುರ, ನಾಗರಾಜ ಲಂಬು, ಕೆ ಎಂ ಕೂಡಲಗಿ, ಅನಿಲ ಹೊಸಮನಿ, ಬಸವರಾಜ ಸೂಳಿಬಾವಿ, ವೈ ಎಸ್ ಗುಣಕಿ, ಸೋಮು ರಣದೇವಿ, ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ, ಪರಶುರಾಮ ಶಿವಶರಣ, ನೀಲಾಂಬಿಕಾ ಬಿರಾದಾರ, ಶಾರದಾ ಹೊಸಮನಿ, ಸವಿತಾ ವಾಘಮೋರೆ,ಸಂಘರ್ಷ ಹೊಸಮನಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್ ಟಿ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಶರಣು ಕಿರಣಗಿ, ಬಸವರಾಜ ಕಾಂಬಳೆ ಸೇರಿದಂತೆ ಪದ್ಮಶ್ರೀ ಕಾಕಾ ಕಾರ್ಖಾನೀಸ್ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಮತ್ತು ಅವರ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು  ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Sunday, April 12, 2026

ಬುದ್ಧ ಬಸವ ಅಂಬೇಡ್ಕರ್ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುವ ಸಮಾಜ ಸುಧಾರಕರು -ಮಹೇಶ ಪೋದಾರ

ವಿಜಯಪುರ : ಬುದ್ಧ ಬಸವ ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತ ದೇಶದ ಸಮಾಜ ಸುಧಾರಕರಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶರಾದ ಮಹೇಶ ಪೋದಾರ ಹೇಳಿದರು.

ವಿಜಯಪುರ :ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಅಂಗವಾಗಿ ಬಸವೇಶ್ವರ ವೃತ್ತದಿಂದ ವೇದಿಕೆ ವರೆಗೆ ನಡೆದ ಮೆರವಣಿಗೆಗೆ ಚಾಲನೆ ಕೊಟ್ಟು ಮಾತನಾಡಿದರು.


ಮೆರವಣಿಗೆ ನೇತೃತ್ವ ವಹಿಸಿ ವಿದ್ಯಾರಣಿ ತುಂಗಳ ಅವರು ಮಾತನಾಡಿ ಮಹಿಳೆಯರು ಇಂದು ಅರಿವಿಲ್ಲದೆ ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಡಾ ಬಿ ಆರ್ ಅಂಬೇಡ್ಕರ್ ಅವರು ಕಾರಣವಾಗಿದ್ದರೆ  ನಾವು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ ಎಂದು ಹೇಳಿದರು.
ಜಾಥಾಕ್ಕೆ ಚಾಲನೆ ನೀಡಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಗು ಯಾದವಾಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿ ಬುದ್ದ ಬಸವ ಅಂಬೇಡ್ಕರ್ ಹೆಸರಲ್ಲಿ ಪುಸ್ತಕ ಮೇಳ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾದುದು.
ಮೆರವಣಿಗೆಯುದ್ಧಕ್ಕೂ ಬುದ್ದ ಬಸವ ಅಂಬೇಡ್ಕರ್ ಹಾಗೂ ಬಸವಾದಿ ಶರಣರಿಗೆ ಜಯಘೋಷ ಮೊಳಗಿದವು.
ಮೆರವಣಿಗೆಯಲ್ಲಿ ಚಂದ್ರಶೇಖರ  ಗಂಟೆಪ್ಪಗೋಳ, ನಾಗರಾಜ ಲಂಬು, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ, ಸುರೇಶ ಬಿಜಾಪುರ, ಜಗದೇವ ಸೂರ್ಯವಂಶಿ, ಬಸನಗೌಡ ಹರನಾಳ ,ದಾನೇಶ ಅವಟಿ, ಜೆ ಎಸ್ ಪಾಟೀಲ, ನೀಲಾಂಬಿಕಾ ಬಿರಾದಾರ , ಪ್ರಭುಗೌಡ ಪಾಟೀಲ, ಸಂಘರ್ಷ ಹೊಸಮನಿ , ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ,  ಶರಣು ಕಿರಣಗಿ, ಅಕ್ಷಯ ಅಜಮನಿ, ಗೌಡಪ್ಪ ಬಡಿಗೇರ ಸೇರಿ ನೂರಾರು ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಬಸವಣ್ಣ ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿಯಾಗಿದ್ದಾರೆ : ಡಾ ಎಚ್ ಎಸ್ ಅನುಪಮಾ


(ಹರ್ಡೇಕರ ಮಂಜಪ್ಪ, ಡಾ ಫ.ಗು ಹಳಕಟ್ಟಿ, ಕುಮಾರ ಕಕ್ಕಯ್ಯ ಪೋಳ ವೇದಿಕೆ) ವಿಜಯಪುರ : ಶರಣ ಸಂಕುಲ ಅಂದರೆ ಜಾತಿ ವರ್ಣ ರಹಿತವಾಗಿ ಎಲ್ಲರನ್ನು ಒಳಗೊಳ್ಳುವಿಕೆಯಾಗಿದೆ ನುಡಿಯಲ್ಲಿ ಒಂದಾಗಿರುವ ಬಸವಾದಿ ಶರಣರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ ಜಗತ್ತಿನಲ್ಲಿ ಕಾಯಕದ ಹೆಸರಲ್ಲಿ ಇರುವ ಏಕೈಕ ಧರ್ಮವೆಂದರೆ ಶರಣ ಧರ್ಮ, ಬಸವಣ್ಣ ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿಯಾಗಿದ್ದಾರೆ, ಸಮಾಜಕ್ಕೆ ಇಂದು ಬಸವಾದಿ ಶರಣರ ಸಮಾಜಕ್ಕೆ ಅನಿವಾರ್ಯವಾಗಿದೆ ಹಿರಿಯ ಸಾಹಿತಿ ಡಾ. ಎಚ್.ಎಸ್. ಅನುಪಮಾ ಅವರು ಹೇಳಿದರು.

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಮೂರನೇ ದಿನದ ಮೊದಲ ಗೋಷ್ಠಿ ಬಸವಾನುಯಾಯಿಗಳ ಸಮಾವೇಶದಲ್ಲಿ ಮುಖ್ಯ ಉಪನ್ಯಾಸ ನೀಡಿ ಮಾತನಾಡಿದರು.
ವಚನ ಪಿತಾಮಹ ಫ ಗು ಹಳಕಟ್ಟಿ ತಮ್ಮ ಮನೆ ಮಾರಿ ಬಸವಾದಿ ಶರಣರ ವಚನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡಿ ಶರಣ ಸಾಹಿತ್ಯವನ್ನು ನಮಗೆ ಕೊಟ್ಟಿದ್ದಾರೆ ಅವರ ತ್ಯಾಗ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದರು.
ಆಧುನಿಕ ಸಾಹಿತ್ಯದಲ್ಲಿ ಕುಮಾರ ಕಕ್ಕಯ್ಯ ಪೋಳ ಕಾವ್ಯ ನಾಮದಲ್ಲಿ ಸಾಹಿತ್ಯ ರಚನೆ ಮಾಡಿ ಸಮಾಜದ ಅಂಕುಡೊಂಕು ತಿದ್ದಿದ ಬಿ ಎಸ್  ಪೋಳ ನಮಗೆ ಮಾದರಿಯಾಗಿದ್ದಾರೆ ಶರಣರ ಮಾರ್ಗದಲ್ಲಿ ನಾವು ಸಾಗಬೇಕಾದರೆ ಮೊದಲು ಪ್ರತಿಯೊಬ್ಬರೂ ತಮ್ಮ ಜಾತಿ ವರ್ಗವನ್ನು ಮರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯ ಸಾಹಿತಿ ಜೆ ಎಸ್ ಪಾಟೀಲ ಅವರು ಮಾತನಾಡಿ ಕರ್ನಾಟಕದಲ್ಲಿ ಬ್ರಾಹ್ಮಣೇತರ ಚಳುವಳಿ ನೇತೃತ್ವ ವಹಿಸಿಕೊಂಡವರು ಡಾ ಫ.ಗು ಹಳಕಟ್ಟಿಯವರು ಅದನ್ನು ನಮ್ಮ ಇತಿಹಾಸಕಾರರು ಮರೆತ್ತಿದ್ದಾರೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ ಸಿ ನಾಗಠಾಣ ಅವರು ಮಾತನಾಡಿ ಅಂಬೇಡ್ಕರ್ ಅವರು ಸಾಕಷ್ಟು ಅಧ್ಯಯನ ಮಾಡಿ ಭಾರತದಲ್ಲಿ ಜನ್ಮ ತಳೆದ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ, ಬುದ್ಧ ಬಸವ ಅಂಬೇಡ್ಕರ್ ಸಮಾನತೆಗಾಗಿ  ಹೋರಾಟ ಮಾಡಿದ್ದಾರೆ ಮೂರು ಜನ ದಾರ್ಶನಿಕರು  ಮಾನವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಬಸವಣ್ಣನ ಕಾಯಕ ತತ್ವ ಅಳವಡಿಸಿಕೊಂಡರೆ ದೇಶಕ್ಕೆ ಕಾಡುತ್ತಿರು ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿದರು.
ಭಾರತೀಯ ಬೌದ್ದ ಮಹಾಸಭಾದ ಕಾರ್ಯದರ್ಶಿ ಬಸವರಾಜ ಹೋಳ್ಕರ್ ಅವರು ಮಾತನಾಡಿ
ಸಮಾಜದಲ್ಲಿನ ಅಸಮಾನತೆ ಅಂಧಕಾರ ಅಳಸಿ ಹಾಕಲು ಇಂದು ಪುಸ್ತಕ ಮೇಳಗಳ ಅವಶ್ಯಕತೆಯಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ ಅವರು ಮಾತನಾಡಿ ಅಂಬೇಡ್ಕರ್ ಮತ್ತು ಫ. ಗು ಹಳಕಟ್ಟಿ ಅವರು ಬಸವಣ್ಣನಷ್ಟೇ ಕೆಲಸ ಮಾಡಿದ್ದಾರೆ, ಅವರ ಹೆಸರಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಪ್ರತಿಯೊಬ್ಬರು ಪುಸ್ತಕ ಖರೀದಿ ಮಾಡುವ ಮೂಲಕ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಮಾತನಾಡಿದರು
ಚಂದ್ರಶೇಖರ ಗಂಟೆಪ್ಪಗೋಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಕುಡಿಸಿಕೊಂಡು ಮೇ ಸಾಹಿತ್ಯ ಬಳಗದವರು ಪುಸ್ತಕ ಮೇಳ ವೈಚಾರಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು  ಔಚಿತ್ಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ನಾಗರಾಜ ಲಂಬು, ಜಗದೇವ ಸೂರ್ಯವಂಶಿ, ಅಭಿಷೇಕ ಚಕ್ರವರ್ತಿ, ದಾನೇಶ ಅವಟಿ, ಜಂಬುನಾಥ ಕಂಚ್ಯಾಣಿ, ಮಿಲನಕುಮಾರ ನಾಮದಾರ, ಪ್ರಭುಗೌಡ ಪಾಟೀಲ ಇದ್ದರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ, ವೈ ಎಸ್ ಗುಣಕಿ, ಸಂಘರ್ಷ ಹೊಸಮನಿ, ಸುರೇಶ ಬಿಜಾಪುರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶಿವು ಕಟ್ಟಿಮನಿ, ಬೋಗೇಶ ಸೋಲಾಪುರ, ಅಪ್ಪಸಾಹೇಬ ಯರನಾಳ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, April 11, 2026

ಮನಸೂರೆಗೊಂಡ ಪಾವಾ ಗಾಯನ | ಬುದ್ದ, ಬಸವ, ಅಂಬೇಡ್ಕರ್ ಗೆ ನಮನ | ಅಕ್ಷರೋತ್ಸವದಲ್ಲಿ ಮೊಳಗಿದ ಪ್ರಬುದ್ಧ ನಾದ !



ಮೇ ಸಾಹಿತ್ಯ ಮೇಳ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಬೃಹತ್ ಪುಸ್ತಕ ಮೇಳದ ಎರಡನೇ ದಿನ ಶನಿವಾರ, ಸಾಹಿತ್ಯ ಮತ್ತು ಸಂಗೀತದ ಸೌಂದರ್ಯ ಸಂಗಮವಾಗಿ ಸ್ಮರಣೀಯ ಸಂಜೆಯಾಗಿ ಅರಳಿತು. ಅಕ್ಷರಗಳ ಅಂಗಳದಲ್ಲಿ ಅರಳಿದ ಈ ಅಕ್ಷರೋತ್ಸವ, ಪುಸ್ತಕಗಳ ಪರಿಮಳದಿಂದ ಮನಮಿಡಿಯುವ ಮಹೋತ್ಸವವಾಗಿ ಮಿಂಚಿತು.

ಪ್ರತಿ ಪುಸ್ತಕಗಳ ಪುಟದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಅವರ ಅಪ್ಪಟ ಮಾನವೀಯ ಮೌಲ್ಯಗಳ ಝೇಂಕಾರದ ಮಧ್ಯೆ, ಏಕಾಏಕಿ ಕೇಳಿಬಂತು ತಥಾಗತ ಬುದ್ಧನ ಶಾಂತಿಯ ಶುದ್ಧ ನಾದ. ಆ ನಾದವು ಕೇವಲ ಶಬ್ದವಲ್ಲ; ಅದು ಮನಸ್ಸಿನ ಮೌನವನ್ನು ಮಿಡಿದ ಮಧುರ ಮಂತ್ರ, ಚಿತ್ತದ ಚಂಚಲತೆಯನ್ನು ಶಮನಗೊಳಿಸಿದ ಶಾಂತಿಯ ಸಂದೇಶ.


ಶಬ್ದಗಳ ಸಾಗರದಲ್ಲಿ ಸಾಗುತ್ತಿದ್ದ ಸಭಿಕರ ಮನಗಳಿಗೆ, ಸಪ್ತಸ್ವರಗಳ ಸೌಂದರ್ಯ ಸವರಿದವರು ಖ್ಯಾತ ಸಂಗೀತಗಾರ ಪಾವಾ. ಅವರ ಸ್ವರಗಳು ಸರಳವಾಗಿದ್ದರೂ ಸಾರ್ಥಕ, ಮೃದುವಾಗಿದ್ದರೂ ಮೌಲ್ಯಮಯ, ಗಂಭೀರವಾಗಿದ್ದರೂ ಗಾಢಾರ್ಥಪೂರ್ಣ. ಶಬ್ದ ಮತ್ತು ಸ್ವರಗಳ ಸಮ್ಮಿಲನದಲ್ಲಿ, ಸಾಹಿತ್ಯ ಮತ್ತು ಸಂಗೀತದ ಸಂಯೋಜನೆಯಲ್ಲಿ, ಅವರು ಮೂಡಿಸಿದ ಮಧುರತೆ ಮೇಳದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

ವಿಜಯಪುರದ ಈ ಪುಣ್ಯ ನೆಲದ ಮುಸ್ಸಸಂಜೆಯಲ್ಲಿ, ಪಾವಾ ಮತ್ತು ಅವರ ತಂಡದವರಿಂದ ಹರಿದ ಸಂಗೀತ ಲಹರಿ, ‘ಜಾಗತಿಕ ಶಾಂತಿ ಚಿಂತನೆ’ಯ ಸಂದೇಶವನ್ನು ಸಾರಿತು. ಸ್ವರಗಳ ಸಾಗರದಲ್ಲಿ ತೇಲಿದ ಪ್ರತಿಯೊಂದು ರಾಗವೂ ಶಾಂತಿಯ ಶ್ಲೋಕ, ಪ್ರತಿಯೊಂದು ಲಯವೂ ಮಾನವೀಯತೆಯ ಮೌಲ್ಯ. ಮನಸ್ಸಿನ ಮಡುಗಟ್ಟಿದ ಮಬ್ಬುಗಳನ್ನು ತೆರೆದ ಆ ಸಂಗೀತ, ಹೃದಯಗಳಲ್ಲಿ ಹಿತದ ಹೂಗಳನ್ನು ಅರಳಿಸಿತು.

ಧ್ಯಾನಸ್ಥ ಸ್ಥಿತಿಯಲ್ಲಿ ತೇಲಿದ ಸಭಿಕರು, ಅಕ್ಷರ ಲೋಕದ ಸೊಬಗನ್ನು ಸ್ವರಗಳ ಮೂಲಕ ಸವಿದರು. ಓದಿನ ಓಜಸ್ಸು, ಸಂಗೀತದ ಸೌಂದರ್ಯ, ಚಿಂತನೆಯ ಚೈತನ್ಯ—ಈ ಮೂರುಗಳ ಸಂಗಮದಲ್ಲಿ ಮೂಡಿದ ಆ ಅನುಭವ, ಆನಂದದ ಅಮೃತವಾಯಿತು. ಶಬ್ದಗಳ ಸರಪಣಿಯಲ್ಲಿ ಸಾಗಿದವರ ಮನಸ್ಸು, ಸ್ವರಗಳ ಸರಸಿಯಲ್ಲಿ ಸ್ನಾನಮಾಡಿದಂತೆ ಶಾಂತವಾಯಿತು.

ಬುದ್ಧನ ಶಾಂತಿಯ ಸಂದೇಶವು ಮೃದುವಾದ ಮಳೆಬಿಲ್ಲಿನಂತೆ ಮನಗಳನ್ನು ಮುದಗೊಳಿಸಿದರೆ, ಅಂಬೇಡ್ಕರರ ಆದರ್ಶಗಳು ಅಗ್ನಿಯಂತೆ ಆತ್ಮವಿಶ್ವಾಸವನ್ನು ಉಜ್ವಲಗೊಳಿಸಿತು. ಸಮಾನತೆ, ಸಹಾನುಭೂತಿ, ಸೌಹಾರ್ದತೆ—ಈ ಮೌಲ್ಯಗಳು ಸಂಗೀತದ ಮೂಲಕ ಮತ್ತೊಮ್ಮೆ ಜೀವಂತವಾದವು. ಆಲೋಚನೆಗಳ ಅಂಗಳದಲ್ಲಿ ಅರಳಿದ ಆ ಆದರ್ಶಗಳು, ಜೀವನದ ದಿಕ್ಕು ತೋರಿದ ದೀಪಗಳಾದವು.

ಪುಸ್ತಕಗಳ ನಡುವೆ ಮೂಡಿದ ಈ ಸಂಗೀತ ಸಂಜೆಯು, ಶಬ್ದ-ಸ್ವರಗಳ ಶ್ರೇಷ್ಠ ಸಂಭ್ರಮವಾಗಿ ಉಳಿಯಿತು. ಸಾಹಿತ್ಯದ ಸಾಲುಗಳಲ್ಲಿ ಸತ್ಯದ ಸೌಂದರ್ಯ ಕಂಡರೆ, ಸಂಗೀತದ ಸ್ವರಗಳಲ್ಲಿ ಶಾಂತಿಯ ಸಾರ್ಥಕತೆ ಕಂಡುಬಂತು. ಈ ಸಂಜೆಯು ಕೇವಲ ಕಾರ್ಯಕ್ರಮವಲ್ಲ; ಅದು ಚಿಂತನೆಯ ಚರಿತ್ರೆ, ಸಂಸ್ಕೃತಿಯ ಸಮ್ಮೇಳನ, ಮಾನವೀಯತೆಯ ಮಹೋತ್ಸವ.

ಮೇ ಸಾಹಿತ್ಯ ಮೇಳದ ಈ ಮಧುರ ಕ್ಷಣಗಳು, ಮನಸ್ಸಿನ ಮಿಡಿತಗಳಲ್ಲಿ ಮುದ್ರಿತವಾಗಿ ಉಳಿಯುವವು. ಪುಸ್ತಕಗಳ ಪ್ರಪಂಚದಲ್ಲಿ ಪಯಣಿಸುತ್ತಾ, ಸಂಗೀತದ ಮೃದುವಾದ ಮಂತ್ರವನ್ನು ಅನುಭವಿಸಿದ ಈ ಅನುಭವ, ಜೀವನದ ಜಾತ್ರೆಯಲ್ಲಿ ಜ್ಯೋತಿಯಂತೆ ಜಗಮಗಿಸುವುದು. ವಿಜಯಪುರದ ಈ ವೈಭವಮಯ ಮೇಳ, ಶಬ್ದ ಮತ್ತು ಸ್ವರಗಳ ಸಂಯೋಜನೆಯಲ್ಲಿ ಶಾಂತಿಯ ಸಂದೇಶವನ್ನು ಸಾರಿದ ಸಾರ್ಥಕ ಸಂಭ್ರಮವಾಗಿ ಸದಾಕಾಲ ಸ್ಮರಣೀಯವಾಗಿರಲಿದೆ.

ವಿಶೇಷ ವರದಿ: ಕಲ್ಲಪ್ಪ ಶಿವಶರಣ 7204279187

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಬುದ್ಧ ಬಸವ ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು : ಪ ಗು ಸಿದ್ದಾಪುರ


ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ

ವಿಜಯಪುರ : ಯಾವುದೊ ಶತಮಾನದಲ್ಲಿ ಆಗಿ ಹೋದ ಬುದ್ಧ ಬಸವ ಅಂಬೇಡ್ಕರ್ ಅವರನ್ನು ನಾವು ಇವತ್ತಿಗೂ ನೆನೆಯುತ್ತಿವೆ ಅಂದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದು ಹಿರಿಯ ಸಾಹಿತಿ ಪ ಗು ಸಿದ್ದಾಪುರ ಅವರು ಹೇಳಿದರು
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
                                  

ಅತಿಥಿ ಸ್ಥಾನವಹಿಸಿ ಹಿರಿಯ ಸಾಹಿತಿ ಸುಭಾಸ ಯಾದವಾಡ ಅವರುಮಾತನಾಡಿ ಕಡಿಮೆ ಶಬ್ದ ಬಳಸಿ ಹೆಚ್ಚು ಹೇಳುವ ಕಲೆ ಕವಿಗೆ ಮತ್ತು ಕವಿತೆಗೆ ಇದೆ ಎಂದು ಹಿರಿಯ ಸಾಹಿತಿ ಸುಭಾಸ ಯಾದವಾಡ ಅವರು ಹೇಳಿದರು.
ಡಾ ಮಲ್ಲಿಕಾರ್ಜುನ ಮೇತ್ರಿ ಅವರು ಆಶಯನುಡಿ ಮಾತನಾಡಿ ಇಡಿ ಜಗತ್ತಿನ ದಾರ್ಶನಿಕರ ಮೊದಲ ಸಾಲಿನಲ್ಲಿ ನಿಲ್ಲುವ ಬುದ್ಧ ಬಸವ ಅಂಬೇಡ್ಕರ್ ಅವರ ಹೆಸರಲ್ಲಿ ಪುಸ್ತಕ ಮೇಳ ಹಮ್ಮಿಕೊಳ್ಳುವ ಮೂಲಕ ಮತ್ತೆ ಮತ್ತೆ ಅವರನ್ನು ನೆನೆಯುತ್ತೇವೆ ಅದು ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವುದಾಗಿದೆ ಎಂದರು
ಕವಿಗಳಲ್ಲಿ ಇಂದು ಪ್ರಗತಿಪರ ನೆಲೆ ಕಳೆದುಕೊಳ್ಳುತ್ತಿದೆ ನಮ್ಮ ಮನೋಶಕ್ತಿ ಹೆಚ್ಚಿಸುವ ಶಕ್ತಿ ಕಾವ್ಯಕ್ಕಿದೆ ಕಾವ್ಯ ಕಟ್ಟುವುದು ಕುಶಲಕರ್ಮಿ ಕೆಲಸವಾಗಿದೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಡಾ ಮೈನುದ್ದಿನ್ ರೇವಡಿಗಾರ, ಚಂದ್ರಶೇಖರ ಸಿಂಗಾಡಿ, ಮುದ್ದಣ್ಣ ಭೀಮನಗರ, ಶಿವಾಜಿ ಮೋರೆ ಸಮೀರ ಹಾದಿಮನಿ ಕವನ ವಾಚಿಸಿದರು.
ಕವಿಗೋಷ್ಠಿಗೂ ಮೊದಲು ಎರಡನೇ ದಿನದ ನಾಲ್ಕನೇ ಗೋಷ್ಠಿ ನನ್ನ ನೆಚ್ಚಿನ ಪುಸ್ತಕ ವಿದ್ಯಾರ್ಥಿಗಳ ಮಾತು ಸಂವಾದದಲ್ಲಿ ಸುಷ್ಮಾ ಪವಾರ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ, ಪವಿತ್ರಾ ಕುಂಬಾರ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ  ಸುಕನ್ಯಾ ಹತ್ತಿ ಅವರು ಹೋರಾಟದ ಹಾದಿಗೆ ಹಣತೆ ಹಿಡಿದವರು ಕೃತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ರಾಮ ಬಿರಾದಾರ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಸೋಮು ರಣದೇವಿ, ಬಿ ಆರ್ ಬನಸೋಡೆ  ರಾಜೇಶ ಚಲವಾದಿ  ಉಪಸ್ಥಿತರಿದ್ದರು.



ಬರಹಗಾರ ಸಮಾನತೆ ತತ್ವದಲ್ಲಿ ಕೆಲಸ ಮಾಡಬೇಕು- ಸನತಕುಮಾರ ಬೆಳಗಲಿ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ

ವಿಜಯಪುರ : ಪತ್ರಕರ್ತ ಮತ್ತು ಬರಹಗಾರನಿಗೆ ಸಾಮಾಜಿಕ ಕಳಕಳಿ ಇರಬೇಕು ಸಮಾಜದ ಏರು ಪೇರುಗಳನ್ನು  ಗುರುತಿಸಿ ಸಮಾನತೆ  ತತ್ವದಲ್ಲಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಿರಿಯ ಪತ್ರಕರ್ ಸನತಕುಮಾರ ಬೆಳಗಲಿ ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಮೂರನೇ ಗೋಷ್ಠಿ ಲೇಖಕರೊಂದಿಗೆ ಸಂವಾದ ವಿಷಯ ಮಂಡನೆ ಅವರು ಮಾತನಾಡಿದರು.
ಕರ್ನಾಟಕದಲ್ಲಿ ವೈಚಾರಿಕ ಚಳುವಳಿ ಮತ್ತು ವೈಚಾರಿಕ ಲೇಖಕರಿಗೆ ಅನ್ಯಾಯ ಮಾಡಿದ ಘಟನೆಗಳು ಹಿಂದೆ ನಡೆದಿವೆ ಅಂತಹ ಸಂದರ್ಭದಲ್ಲಿ ಲೇಖಕ ತುಂಬಾ ಜಾಗರುಕತೆಯಿಂದ ವರ್ತಿಸಬೇಕು ಎಂದರು.
ಸಂವಾದದಲ್ಲಿ ಸಾಹಿತಿ ಡಾ ಶಿವಗಂಗಾ ರುಮ್ಮಾ ಅವರು ಮಾತನಾಡಿ  ಬರಗಾಲ ಬಿದ್ದಾಗ ಬಾಲ್ಕಿ ಪಟ್ಟದ ದೇವರು ದಲಿತರಿಗೆ ದಾಸೋಹ ಮಾಡಿದ್ದನ್ನು ವಿರೋಧಿಸಿ ಗ್ರಾಮದವರು ವಿರೋಧ ಮಾಡಿ ಬಹಿಷ್ಕಾರ ಹಾಕಿದ್ದರು ಅಂತಹ ವಾತಾವರಣದಲ್ಲಿ ಬೆಳೆದ ನಾನು ಬಸವಣ್ಣ ಮತ್ತು ಕಾರ್ಲಮಾರ್ಕ್ಸ್ ರ ಕುರಿತು ವಿರೋಧದ ಮಧ್ಯೆ ಪಿ ಎಚ್ ಡಿ ಪ್ರಬಂಧ ಮಂಡಿಸಿದ್ದು ನನ್ನ ಜೀವನದಲ್ಲಿ ಏನನ್ನು ಅಳವಡಿಸಿಕೊಳ್ಳಬೇಕು ಏನನ್ನು ಅಳವಡಿಸಿಕೊಳ್ಳಬಾರದು ಎಂಬ ದಾರಿ ತೋರಿತು ಎಂದು ಹೇಳಿದರು.
ಪ್ರಭುತ್ವವನ್ನು ವಿರೋಧಿಸುವ ಲೇಖಕರ ಸಂಖ್ಯೆ ವಿರಳವಾಗುತ್ತಿದೆ. ರಾಜಕಾರಣಿಗಳಂತೆ ಲೇಖಕರು ಕೂಡಾ ಸ್ಥಿತ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆ ಪ್ರಭುತ್ವದ ವಿರುದ್ಧ ಸಾಮಾಜಿಕ ಬದ್ಧತೆ ಕಾಪಾಡಿಕೊಳ್ಳಬೇಕಿದೆ ಎಂದರು.
ಬಸವಣ್ಣನಿಗೆ ಯಾರಾದರೂ ವಿರೋಧಿಗಳಿದ್ದರೆ ಅದು ಲಿಂಗಾಯತರಲ್ಲಿಯೇ ಇದ್ದಾರೆ ಎಂದರು.


ಸಂವಾದದಲ್ಲಿ ಬಾಗಲಕೋಟ ವಿಶ್ವವಿದ್ಯಾಲಯದ ಕುಲಸಚಿವ ಡಾ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ ಲೇಖಕನಾದವನಿಗೆ ಧರ್ಮ ಮತ್ತು ಜಾತಿ ಮುಖ್ಯವಾದರೆ ಸಮಾಜ ವಿಘಟನೆಯಾಗುತ್ತದೆ. ಮೌಢ್ಯ ಬಿತ್ತುವ ಸಾಹಿತಿ ಸಮಾಜಕ್ಕೆ ಹೊರೆಯಾಗುತ್ತಾನೆ ಲೇಖಕನಾದವನಿಗೆ ವಾಸ್ತವಿಕ ಪ್ರಜ್ಞೆ ಇರಬೇಕು ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ಎಂಬುದು ಆರ್ಥಿಕವಾಗಿ ಹಿಂದುಳಿದವರಿಗೆ ಅಲ್ಲ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗೆ ಒಳಗಾದವರಿಗೆ ಇರುವಂತಹದು ಅದನ್ನು ಇಂದು ವ್ಯಾಖ್ಯಾನ ಮಾಡುವ ಪರಿ ಬದಲಾವಣೆ ಆಗಬೇಕು ಎಂದರು.
 ಬಸವರಾಜ ಹೂಗಾರ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಅಪ್ಪಾಸಾಹೇಬ ಯರನಾಳ ಸುರೇಶ ಜೀಬಿ ಲಕ್ಷ್ಮಣ ಹಂದ್ರಾಳ ದೊಡ್ಡಣ್ಣ ಬಜಂತ್ರಿ, ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿ -ಸಂಗಮೇಶ ಮೆಣಸಿನಕಾಯಿ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ ವಿಜಯಪುರ : ಲಿಂಗಾಯತ ಧರ್ಮದ ಚರ್ಚೆ ನಡೆದಾಗ ಮಠದ ಸ್ವಾಮೀಜಿಗಳನ್ನು ಕ್ರಿಶ್ಚಿಯನ್ ಚರ್ಚ್ ಗಳಿಗೆ ಪಾದ್ರಿಗಳನ್ನು ವರ್ಗಾವಣೆ ಮಾಡಿದಂತೆ ವರ್ಗಾವಣೆ ಮಾಡಬೇಕು ಎಂದು ಬರೆದೆ ಅದು ಸಾಕಷ್ಟು ಚರ್ಚೆಯಾಯಿತು ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಹೇಳಿದರು.

ಇತ್ತೀಚಿಗೆ ಕರ್ನಾಟಕದಲ್ಲಿ ಕೆಲವು ಸ್ವಾಮೀಜಿಗಳು ತಮ್ಮ ಖಾಸಗಿ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಜೊತೆಗೆ ಪೊಲೀಸ್ ಪ್ರಕರಣ ಕೂಡಾ ದಾಖಲಾಗಿದೆ ನಮ್ಮ ಪತ್ರಕರ್ತರು ಪ್ರಕರಣ ದಾಖಲಾದ ಬಗ್ಗೆ ಸುದ್ದಿ ಮಾಡಲು ನಮ್ಮ ಪತ್ರಕರ್ತರು ಹಿಂಜರಿಯುತ್ತಿದ್ದಾರೆ ಇದು ನಮ್ಮ ಪತ್ರಕರ್ತರು ಎತ್ತ ಸಾಗುತ್ತಿದ್ದಾರೆ ಎಂಬುದು ತೋರಿಸುತ್ತದೆ ಎಂದರು.

ಪತ್ರಕರ್ತರು ಗಣಿಗಾರಿಕೆ ವಿರುದ್ಧ ಪುಟಗಟ್ಟಲೆ ಬರೆಯುತ್ತೇವೆ ಆದರೆ ಗಣಿಗಾರಿಕೆ ಕಾರ್ಮಿಕರ ಬಗ್ಗೆಯು ನಾವು ವರದಿ ಮಾಡಬೇಕು ಏಕೆಂದರೆ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಪರಿಸರ ಬಗ್ಗೆ ಕಾಳಜಿ ತೋರುವ ನಾವು ಕಾರ್ಮಿಕರಿಗೆ ಆಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಎರಡನೇ ಗೋಷ್ಠಿ ಸಾಮಾಜಿಕ ಬದ್ಧತೆ ಪತ್ರಕರ್ತನಾಗಿ ನನ್ನ ಅನುಭವಗಳು ಕುರಿತು ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.
                                     
ಸಂವಾದದಲ್ಲಿ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರು ಮಾತನಾಡಿ ಪತ್ರಕರ್ತನಾದವವನು ಪೂರಕ ಮಾಹಿತಿ ಸಂಗ್ರಹ ಮಾಡಿ ನಿಖರವಾಗಿ ಸುದ್ದಿ ಪ್ರಸಾರ ಮಾಡಬೇಕು ಸುದ್ದಿಗಳು ಸಮಾಜದ ಅಂಕು-ಡೊAಕು ತಿದ್ದುವಂತಿರಬೇಕು ಎಂದರು.
ಸAವಾದದಲ್ಲಿ ಪತ್ರಕರ್ತ ಸುನೀಲ ಗೋಡೆನ್ನವರ ಮಾತನಾಡಿ ದೃಶ್ಯ ಮಾಧ್ಯಮದ ಪತ್ರಕರ್ತರು ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುಗಳನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಬೇಕು ಇದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಪತ್ರಕರ್ತ ಚಂದ್ರಶೇಖರ ಹೊಸಮನಿ ಅವರು ಮಾತನಾಡಿ ಪತ್ರಕರ್ತ ಸುದ್ದಿ ಪ್ರಸಾರ ಮಾಡುವಾಗ ನೇರ ನಿಷ್ಠುರ ನಿರ್ಭಯತೆ ಹೊಂದಿರಬೇಕು ಎಂದರು.
ಹಿರಿಯ ಪತ್ರಕರ್ತ ರಾಜು ಕೊಂಡಗೂಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಬೋಗೇಶ ಸೋಲಾಪುರ ಅರವಿಂದ ಲಂಬು ಸಂಗಮೇಶ ಚೂರಿ ರವಿ ಕಿತ್ತೂರ ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ,ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾತ್ರಯಿದೆ - ಡಾ ಎಚ್ ಟಿ ಪೋತೆ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ ವಿಜಯಪುರ : ಮಹಾತ್ಮಾ ಜ್ಯೋತಿಬಾ ಫುಲೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಶೈಕ್ಷಣಿಕ ಕ್ರಾಂತಿ ಮಾಡಿದವರು ಹನ್ನೆರಡನೆ ಶತಮಾನದಲ್ಲಿ ಅಪ್ಪನು ಮಾದರ ಚೆನ್ನಯ್ಯ, ಬಪ್ಪನು ಡೋಹರ ಕಕ್ಕಯ್ಯ ಎನ್ನುವ ಮೂಲಕ ಒಂಬತ್ತು ನೂರು ರ‍್ಷಗಳ ಹಿಂದೆ ಬಸವಣ್ಣ, ಎರಡು ಸಾವಿರ ರ‍್ಷಗಳ ಹಿಂದೆ ಬುದ್ಧ, ನಾಲ್ಕು ನೂರು ರ‍್ಷಗಳ ಹಿಂದೆ ಸಮಾಜದಲ್ಲಿ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರು, ಅದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೊಳಿಸಿದರು ಇಂತಹ ಬುದ್ದ, ಬಸವ,ಕಬೀರ,ಫುಲೆ ಮತ್ತು ಅಂಬೇಡ್ಕರ್ ಜಗತ್ತಿಗೆ ಮಾದರಿ ಎಂದು ಕಲಬುರಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನರ‍್ದೇಶಕರಾದ ಡಾ ಎಚ್ ಟಿ ಪೋತೆ ಅವರು ಹೇಳಿದರು.

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಮೊದಲ ಗೋಷ್ಠಿ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಕರ‍್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಲ್ಲವನ್ನು ಪಡೆದುಕೊಂಡ ಜನ ಅವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಜ್ಯೋತಿಬಾ ಫುಲೆ ಅವರ ಶಾಲೆಯಲ್ಲಿ ಕಲಿತ ಮುಕ್ತಾ ಎಂಬ ದಲಿತ ಲೇಖಕಿ ಅವತ್ತೆ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ್ದಾರೆ ಭಾರತ ಇವತ್ತು ವಿವಿಧ ಸಂಸ್ಕೃತಿ ಹೆಸರಲ್ಲಿ ಒಡೆದು ಹೋಗುತ್ತಿದೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನಕ್ಕೆ ಮಾತ್ರಯಿದೆ ಮಹಾತ್ಮರು ಯಾವುದೇ ಒಂದು ಸಮಾಜಕ್ಕೆ ಸೇರಿದವರಲ್ಲ ಅವರು ದೇಶದ ಎಲ್ಲ ಜನರಿಗೆ ಸೇರಿದವರು ಎಂದು ಹೇಳಿದರು.

ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನರ‍್ದೇಶಕರಾದ ಬಸವರಾಜ ಹೂಗಾರ ಅವರು ಮಾತನಾಡಿ, ಜಾತಿಯ ಸಮಸ್ಯೆಗಳು ಬಗೆಹರಿಸುವುದು ಹೇಗೆ ಮತ್ತು ನಮ್ಮ ಹುಟ್ಟಿನ ಮೂಲ ಸಮಾಜದಲ್ಲಿ ಎಲ್ಲರಿಗೂ ಕಾಡುವ ಎರಡು ಪ್ರಶ್ನೆಗಳಾಗಿವೆ ನಾವು ಪಡೆಯುವ ಶಿಕ್ಷಣ ನಮ್ಮ ಮೌಢ್ಯ ಕಳೆಯುತ್ತದೆ ಎಂದು ಎಂಬುದು ತಪ್ಪು ಇವತ್ತಿನ ಶಿಕ್ಷಣ ಎತ್ತ ಸಾಗಿದೆ ಎಂದು ನಾವು ಚಿಂತಿಸಬೇಕಿದೆ ಮಕ್ಕಳಿಗೆ ಬುದ್ಧ ಬಸವ ಅಂಬೇಡ್ಕರ್ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕಿದೆ ಆಗ ಮಾತ್ರ ನಮ್ಮ ಮಕ್ಕಳು ನವ ಸಮಾಜ ನರ‍್ಮಾಣ ಮಾಡಲು ಸಾಧ್ಯವಿದೆ ಅಂಬೇಡ್ಕರ್ ಹಚ್ಚಿದ ಸಮಾನತೆ ದೀಪವನ್ನು ಆರದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದವರು ಈ ದೇಶದ ಕೆಳ ಸಮುದಾಯದ ಜನ ಎಂದು ಹೇಳಿದ ಅವರು ಪ್ರತಿಯೊಬ್ಬರೂ ಪುಸ್ತಕ ಮೇಳದಲ್ಲಿ ಭಾಗವಹಿಸಿ ಪುಸ್ತಕ ಖರೀದಿಸಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಉಪಸ್ಥಿತಿ ವಹಿಸಿ ಮುಖಂಡ ಸುರೇಶ ಘೊಣಸಗಿ ಅವರು ಮಾತನಾಡಿ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ವಿಜಯಪುರದಲ್ಲಿ ಐತಿಹಾಸಿಕ ಪುಸ್ತಕ ಮೇಳ ಹಮ್ಮಿಕೊಂಡಿರುವುದು ಮಾದರಿ ಕರ‍್ಯವಾಗಿದೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ವಿದ್ಯರ‍್ಥಿಗಳಿಗೆ ಭೋದನೆ ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ತೆಗೆದುಕೊಳ್ಳಬೇಕು ದೇಶ ಸಂಕಷ್ಟದ ದಾರಿಯಲ್ಲಿದೆ ತಳ ಸಮುದಾಯದ ಜನ ಶಿಕ್ಷಣಕ್ಕೆ ಒತ್ತುಕೊಟ್ಟು ಶಿಕ್ಷಣವಂತರಾದರೆ ಮಾತ್ರ ಸಮ ಸಮಾಜ ನರ‍್ಮಾಣ ಸಾಧ್ಯ ಎಂದು ಹೇಳಿದರು.

ಬಂಜಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ ಎಲ್ ಚವ್ಹಾಣ ಅವರು ಮಾತನಾಡಿ, ಪುಸ್ತಕ ಮೇಳವು ಸಮಾಜದಲ್ಲಿ ಒಮ್ಮತ ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲರು ಕೂಡಿಕೊಂಡು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ ಎಚ್ ನಾಡಗಿರಿ ಅವರು ಮಾತನಾಡಿ ಶಿಕ್ಷಕ ವೃತ್ತಿ ಸಮಾಜದಲ್ಲಿ ಬಹಳಷ್ಟು ಜವಾಬ್ದಾರಿ ಹೊಂದಿರುವ ಹುದ್ದೆಯಾಗಿದೆ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ಪುಸ್ತಕ ಮೇಳದಲ್ಲಿ ಶಿಕ್ಷಕ ದಂಪತಿಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದು ಸ್ವಾಗತರ‍್ಹ ಎಂದರು.

ಕರ‍್ಯಕ್ರಮದಲ್ಲಿ ಶಿಕ್ಷಕ ದಂಪತಿಗಳ ಜಾಥಾದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

 ಕರ‍್ಯಕ್ರಮದಲ್ಲಿ ಚಿದಾನಂದ ಕಾಂಬಳೆ, ಸುರೇಖಾ ರಜಪೂತ, ಸಿದ್ದಪ್ಪ ಹೊಸಮನಿ ಬಿರಾದಾರ, ಸತ್ಯಪ್ಪ ಚಲವಾದಿ, ಸುರೇಶ ಗೊಣಸಗಿ, ಕೆ.ಎಂ. ಕೂಡಲಗಿ, ಸಿದ್ದನಗೌಡ ಪಾಟೀಲ, ಬಸವರಾಜ ತಾಳಿಕೋಟಿ, ಶಬ್ಬಿರ ಕಾಗಜಕೋಟಿ, ಸಾಹೇಬಗೌಡ ಪಾಟೀಲ, ಚಂದ್ರಕಾಂತ ಸಿಂಗೆ, ರವಿ ಕಿತ್ತೂರ, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ, ಚಂದ್ರಶೇಖರ ಹೊಸಮನಿ, ಸಂರ‍್ಷ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಶಿಕ್ಷಕ ದಂಪತಿಗಳಿಂದ ಜಾಥಾ ವಿಜಯಪುರ ಬುದ್ಧ ಬಸವ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ

ವಿಜಯಪುರ :  ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಅಂಗವಾಗಿ ನಗರದ ಸಾವಿತ್ರಿಬಾಯಿ ಫುಲೆ ಮಾರ್ಗದಿಂದ  ಪುಸ್ತಕ ಮೇಳದ ಸ್ಥಳದ ವರೆಗೆ ಶಿಕ್ಷಕ ದಂಪತಿಗಳ ಜಾಥಾ ಜರುಗಿತು.


ಶಿಕ್ಷಕ ದಂಪತಿಗಳ ಜಾಥಾಕ್ಕೆ  ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ ಎಚ್ ನಾಡಗಿರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ, ಹೊನಮಲ್ಲಗೌಡ ಸಾರವಾಡ, ಎಸ್  ಎಂ ಡೋಣಿ, ಆಶಾ ಕಟ್ಟಿಮನಿ, ನೀಲಾಂಬಿಕಾ ಬಿರಾದಾರ, ರಶ್ಮಿ ಗುಣಕಿ ವಿಜಯಶ್ರೀ ಬಿಜಾಪುರ, ಹಣಮಂತ ಮಮದಾಪುರ, ಸಲೀಂ ಕಲಾದಗಿ ಚಾಲನೆ ನೀಡಿದರು.

ಜಾಥಾದಲ್ಲಿ ಬುದ್ಧ ಬಸವ, ಬಾಬಾಸಾಹೇಬ ಅಂಬೇಡ್ಕರ್ ಮತ್ತು ದೇಶದ ಮೊದಲ ಶಿಕ್ಷಕ ದಂಪತಿಗಳಾದ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಗಳಿಗೆ ಜಯಘೋಷ ಮೊಳಗಿದವು.
ಶಿಕ್ಷಕ ದಂಪತಿಗಳ  ಜಾಥಾದಲ್ಲಿ ದ್ರೌಪತಿ ನಾಗರಾಜ ಹೊನಸೂರೆ, ಶೋಭಾ ಮಲ್ಲಿಕಾರ್ಜುನ ಕನ್ನೂರ, ಸಾವಿತ್ರಿ ದೇವರಾಜ ಶೃಂಗೇರಿ, ಸಾವಿತ್ರಿ ಗಣಪತಿ ಚವ್ಹಾಣ, ರೇಣುಕಾ ಶಿವಪ್ಪ ಚಲವಾದಿ, ಜಯಶ್ರೀ ಸಿದ್ರಾಮಪ್ಪ ತದ್ದೇವಾಡಿ, ನೇತ್ರಾವತಿ ವಿಶ್ವನಾಥ ಮೇತ್ರಿ, ಶಿಲ್ಪಶ್ರೀ ನಿಜು ಮೇಲಿನಕೇರಿ, ವೈಶಾಲಿ ವಿಜಯಾನಂದ ಮುದ್ದೇಬಿಹಾಳ, ವಿಜಯಲಕ್ಷ್ಮಿ  ಜಗದೀಶ ಹುಲ್ಯಾಳ, ಎಲ್ ಟಿ ಕೊಣ್ಣೂರ ಎಸ್ ಎ ಬಿರಾದಾರ, ಎಸ್ ಎಸ್ ಕುಲಕರ್ಣಿ ಕೆ ಎಚ್ ಪೂಜಾರಿ ಶಿಕ್ಷಕ ದಂಪತಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಘೊಣಸಗಿ, ಚೆನ್ನು ಕಟ್ಟಿಮನಿ, ಸುರೇಶ ಬಿಜಾಪುರ, ವೈ ಎಸ್ ಗುಣಕಿ, ವೈ ಎಚ್ ಲಂಬು ದೊಡ್ಡಣ್ಣ ಭಜಂತ್ರಿ, ಅನಿಲ ಇಕ್ಕಡೆ , ಚಂದ್ರಶೇಖರ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಗುರುರಾಜ ಹಂದ್ರಾಳ, ಶರಣು ಕಿರಣಗಿ, ಸಂಘರ್ಷ ಹೊಸಮನಿ,  ಸೇರಿ ನೂರಾರು ಜನ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Friday, April 10, 2026

ಬಸವ ನಾಡಿನಲ್ಲಿ ನಿಂತು ಅಂಬೇಡ್ಕರ್ ಜಯಂತಿಯನ್ನು ಪುಸ್ತಕ ಮೇಳದ ಮೂಲಕ ಹಮ್ಮಿಕೊಂಡಿರುವುದು ದೇಶಕ್ಕೆ ಗುಣಾತ್ಮಕ ಸಂದೇಶ ನೀಡುತ್ತಿದೆ : ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ ಎಂ ಜಾನಕಿ


 ಪ್ರೊ ಎ ಎಸ್ ಹಿಪ್ಪರಗಿ, ಈಶ್ವರಚಂದ್ರ ಚಿಂತಾಮಣಿ, ಕಾ ಹು ಬಿಜಾಪುರ ವೇದಿಕೆ 
ವಿಜಯಪುರ:  ಬಸವ ನಾಡಿನಲ್ಲಿ ನಿಂತು ಅಂಬೇಡ್ಕರ್ ಜಯಂತಿಯನ್ನು ಪುಸ್ತಕ ಮೇಳದ ಮೂಲಕ ಹಮ್ಮಿಕೊಂಡಿರುವುದು ದೇಶಕ್ಕೆ ಗುಣಾತ್ಮಕ ಸಂದೇಶ ನೀಡುತ್ತಿದೆ ಎಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಕೆ ಎಂ ಜಾನಕಿ ಅವರು ಹೇಳಿದರು. 

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಾದರೆ ಸರ್ವರೂ ಸಾಮಾಜಿಕ ಬದ್ಧತೆ ಅಳವಡಿಸಿಕೊಳ್ಳಬೇಕು ಎಲ್ಲರು ಇಂತಹ ಪುಸ್ತಕ ಮೇಳದಲ್ಲಿ ಭಾಗವಹಿಸುವ ಮೂಲಕ ಎಲ್ಲರು ತಮ್ಮ ಜ್ಞಾನದ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಪುಸ್ತಕ ಮೇಳದ ದಿಕ್ಸೂಚಿ ಭಾಷಣ ಮಾಡಿ ಮುಂಬೈನ ದಲಿತ ಪ್ಯಾಂಥ ರ್ಸ್ ಸಂಸ್ಥಾಪಕ ಜೆ ವಿ ಪವಾರ ಅವರು ಮಾತನಾಡಿ
ಬುದ್ಧ, ಬಸವ ಬಾಬಾಸಾಹೇಬ ಪುಸ್ತಕ ಮೇಳವು ಇಂದಿನ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಹಮ್ಮಿಕೊಂಡಿರುವುದು ಒಂದು ಐತಿಹಾಸಿಕ ಸಂಗತಿಯಾಗಿದೆ 
ಅಂಬೇಡ್ಕರ್ ಅವರು ಪುಸ್ತಕಗಳ ಒಡನಾಟಿಯಾಗಿದ್ದರು ಅವರು ತಮ್ಮ ಇಡಿ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದಾರೆ ಅಂತಹ ಮಹಾನ್ ವ್ಯಕ್ತಿ ಜಯಂತಿ ಮತ್ತು ಜ್ಯೋತಿಬಾ ಪುಲೆ ಅವರ 200ನೇ ಜಯಂತಿ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದ ಅವರು ಬಾಬಾಸಾಹೇಬರ ಪತ್ನಿ ರಾಮಬಾಯಿ ಅವರ ಜೀವನ ಅವರ ಸಾಮಾಜಿಕ ಕೊಡುಗೆ ಬಗ್ಗೆ ಅಧ್ಯಯನ ಮಾಡುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಡಿ ಎಸ್ ಎಸ್ ನ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಅವರು ಮಾತನಾಡಿ
ಪುಸ್ತಕಗಳನ್ನು ಜನರ ಬಳಿಗೆ ಹೋಗಬೇಕು ಜನರಿಗೆ ಕೊಳ್ಳುವ ಶಕ್ತಿ ಬರಬೇಕು ಎಂಬ ದೃಷ್ಟಿಕೋನದಲ್ಲಿ ಬುದ್ಧ, ಬಸವ ಬಾಬಾಸಾಹೇಬರ ಪುಸ್ತಕ ಮೇಳವನ್ನು ಬಸವರಾಜ ಸೂಳಿಬಾವಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ಸಾಂದರ್ಭಿಕ ಸೂಕ್ತವಾಗಿದೆ ಎಂದು ಹೇಳಿದ ಅವರು
ಬಾಬಾಸಾಹೇಬರ ಜನ್ಮದಿನದ ಸಂದರ್ಭದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಂಡಿರುವುದು ದೇಶಕ್ಕೆ ವೈಚಾರಿಕತೆಯ ಸಂದೇಶ ಕೊಡುತ್ತಿದೆ ಎಂದು ಹೇಳಿದ ಅವರು ಅಂಬೇಡ್ಕರ್ ಅವರ ಜೀವನ ಪುಸ್ತಕಗಳಿಂದ ರುಪುಗೊಂಡಿದೆ, ಇತಿಹಾಸದಲ್ಲಿ ಪ್ರಭುತ್ವಕ್ಕೆ ಪುಸ್ತಕಗಳ ಭಯ ಕಾಡುತ್ತಿದೆ. ಅದು ಇವತ್ತಿನ ವಿಷಯವಲ್ಲ ಬಸವಾದಿ ಶರಣರ ಕಾಲದಿಂದಲೂ ಪ್ರಭುತ್ವವು ಪುಸ್ತಕಗಳ ವೈಚಾರಿಕತೆಗೆ ಅಂಜುತ್ತಿದೆ ಎಂದರು.
ಪ್ರಕಾಶಕರ ಸಂಫದ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ ಅವರು ಮಾತನಾಡಿ ಅಂಬೇಡ್ಕರ್ ಅವರು ಪ್ರೀತಿಸುವ ಪುಸ್ತಕಗಳ ಮೇಳ ಹಮ್ಮಿಕೊಳ್ಳುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಿರುವುದು ಅಭಿನಂದನಾರ್ಹವಾದುದು ಎಂದು ಹೇಳಿದ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೇಖಕರ ಮತ್ತು ಪ್ರಕಾಶಕರ ಪುಸ್ತಕ ಖರೀದಿಸಲು ಹಿಂದೇಟು ಹಾಕುತ್ತಿದೆ. ಇದರಿಂದ ಲೇಖಕರು ಮತ್ತು ಪ್ರಕಾಶರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಕೂಡಲೇ ಸರಕಾರ ಪುಸ್ತಕ ಖರೀದಿ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನಿಲ ಹೊಸಮನಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ ಅರುಣಕುಮಾರ ಇಂಗಳೆ, ಹಾಸಿಂಪೀರ ವಾಲಿಕಾರ, ಆರತಿ ಶಹಾಪುರ, ಸುಭಾಸ ಬೆಳ್ಳುಳ್ಳಿ, ಶ್ರೀನಿವಾಸ ಜಾಲವಾದಿ ಹೇಮಂತ ಭೂತನಾಳ, ಸುರೇಶ ಗೆಜ್ಜಿ, ಹೇಮಂತ ಭೂತನಾಳ, ಸಿದ್ದರಾಮ ಉಪ್ಪಿನ ಅಡಿವೆಪ್ಪ ಸಾಲಗಲ್ಲ ಬಸವರಾಜ ಸೂಳಿಬಾವಿ ಉಪಸ್ಥಿತರಿದ್ದರು.

ಸುರೇಶ ಬಿಜಾಪುರ ನಿರೂಪಿಸಿದರು, ಸಂಜು ಕಂಬಾಗಿ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Tuesday, April 7, 2026

ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

 ವಿಜಯಪುರ: ನಗರದ ಶಂಕರ್ ಲಿಂಗ ಗುಡಿ ಹತ್ತಿರವಿರುವ ಡಿ ದೇವರಾಜ್ ಅರಸು ಮ್ಯಾಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ, ವಿದ್ಯಾರ್ಥಿಗಳು   ನಡೆಸಿದರು.

ಕುಡಿಯುವ ನೀರು, ಸ್ನಾನದ ನೀರು, ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು, ದಿನ ಪತ್ರಿಕೆಗಳು, ಪ್ಲೇಟು, ಹಾಸಿಗೆ ಹೊದಿಕೆಗಳು ಕೊಡದಿರುವುದನ್ನು ಖಂಡಿಸಿ, ವಸತಿ ನಿಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕು ವಿಸ್ತರಣಾಧಿಕಾರಿಗಳಾದ ಆರ್ ಎಸ್ ಬೈರೋಡಗಿ ಮಾತನಾಡಿ, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೊಡಿದರು.

ಮುಖಂಡರಾದ ಗೌಡಪ್ಪ ಬಡಿಗೇರ, ಸುಭಾಶ್ಚಂದ್ರ ಹೋನ್ನಕಂಠಿ, ಮಂಜುನಾಥ್ ಕವಳೆ, ಕಿರಣ್ ಬಿರಾದಾರ, ನಿಲಯ ಪಾಲಕರಾದ ಎಸ್ ಎಸ್ ಕಬಾಡೆ, ಪೊಲೀಸ್ ರಕ್ಷಣಾ ಸಿಬ್ಬಂದಿಗಳು ಹಾಜರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Monday, April 6, 2026

07-04-2026 EE DIVASA KANNADA DAILY NEWS PAPER

ಐದು ದಿನ ಬೃಹತ್ ಐತಿಹಾಸಿಕ ಪುಸ್ತಕ ಮೇಳ : ಸೂಳಿಭಾವಿ

ವಿಜಯಪುರ: ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಏ.10 ರಿಂದ ಐದು ದಿನಗಳ ಕಾಲ ಬುದ್ಧ, ಬಸವ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳವನ್ನು ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗುತಿದ್ದು, ಈ ಮೇಳದ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಲಡಾಯಿ ಪ್ರಕಾಶನದ ಮುಖ್ಯಸ್ಥ, ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಈ ಮೇಳ ಏರ್ಪಡಿಸಿದ್ದು, ಸ್ವರಚಿತ ಪುಸ್ತಕಗಳಗಳೊಂದಿಗೆ ಸಾಹಿತಿಗಳ ಜಾಥಾ ಅಪೂರ್ವ ರೀತಿಯಲ್ಲಿ ನಡೆಯಲಿದ್ದು, ಸಾಹಿತಿಗಳೇ ಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಏ.10 ರಂದು ಮಧ್ಯಾಹ್ನ 12 ಕ್ಕೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಖರ ಪುಸ್ತಕ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅಧ್ಯಕ್ಷತೆ ವಹಿಸಲಿದ್ದಾರೆ, ಮುಂಬೈನ ಖ್ಯಾತ ಲೇಖಕ ಜಿ.ವಿ. ಪವಾರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಮಧ್ಯಾಹ್ನ 3 ಕ್ಕೆ ಸಾಮಾಜಿಕ ಬದ್ಧತೆ - ಪತ್ರಕರ್ತನಾಗಿ ಅನುಭವಗಳು ಎಂಬ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಚಂದ್ರಕಾAತ ವಡ್ಡು ವಿಚಾರ ಮಂಡಿಸಲಿದ್ದು, ಹಿರಿಯ ಪತ್ರಕರ್ತ ರಫೀ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು. 

ಏ.11 ರಂದು ಶಿಕ್ಷಕ ದಂಪತಿಗಳ ಮೆರವಣಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಈ ಮೆರವಣಿಗೆ ನಡೆಯಲಿದೆ, ಮಧ್ಯಾಹ್ನ 12 ಕ್ಕೆ ಖ್ಯಾತ ಚಿಂತಕಿ ಡಾ.ಮೀನಾಕ್ಷಿ ಬಾಳಿ ದಿಕ್ಸೂಚಿ ಭಾಷಣ ಮಂಡಲಿಸದ್ದಾರೆ. ಸಂಜೆ 4 ಕ್ಕೆ ಲೇಖಕರೊಂದಿಗೆ ಸಂವಾದ ನಡೆಯಲಿದೆ, ಸಂಜೆ 6 ಕ್ಕೆ ಕವಿಗೋಷ್ಠಿ ನಡೆಯಲಿದೆ ಎಂದರು.

ಏ.12 ರಂದು ಬಸವಾದಿ ಶರಣರ ವಚನಗಳ ಪವಿತ್ರ ಕಟ್ಟುಗಳ ಮೆರವಣಿಗೆ ನಡೆಯಲಿದೆ, ನಂತರ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ.ಎಚ್. ಅನುಪಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ, ನಂತರ ಮುದ್ರಣ ಗುಮ್ಮಟ ಎಂಬ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ, ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಏ.13 ರಂದು ಕಾಕಾ ಕಾರಖಾನೀಸರ ಸ್ಮರಣೆ ನಡೆಯಲಿದ್ದು, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಉಪನ್ಯಾಸ ಮಂಡಿಸಲಿದ್ದಾರೆ ಎಂದರು.

ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಅರ್. ಅಂಬೇಡ್ಕರ್ ಜಯಂತ್ಯುತ್ಸವ ನಡೆಯಲಿದ್ದು, ಖ್ಯಾತ ಚಿಂತಕ ಶಿವಸುಂದರ ಪ್ರಧಾನ ಭಾಷಣ ಮಂಡಿಸಲಿದ್ದಾರೆ ಎಂದರು.

ಮುಖAಡರಾದ ರಾಜಶೇಖರ ಯಡಹಳ್ಳಿ, ಅನಿಲ್ ಹೊಸಮನಿ, ಡಾ.ದೊಡ್ಡಣ್ಣ ಭಜಂತ್ರಿ, ಚೆನ್ನು ಕಟ್ಟಿಮನಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

06-04-2026 EE DIVASA KANNADA DAILY NEWS PAPER

ಪೊಲೀಸ್ ದೂರು ಪ್ರಾಧಿಕಾರಕ್ಕೆ ಪ್ರತಿ ಜಿಲ್ಲೆಯಿಂದ ನಾಗರಿಕ ಸಮಾಜದಿಂದ ಕನಿಷ್ಟ 5 ಜನ ಸದಸ್ಯರ ನೇಮಕ ಮಾಡಿಕೊಳ್ಳಲು ಆಗ್ರಹ


ಈ ದಿವಸ ವಾರ್ತೆ

ವಿಜಯಪುರ : ಪೊಲೀಸ್ ದೂರು ಪ್ರಾಧಿಕಾರದ ಜಿಲ್ಲಾ ಸಮಿತಿಗೆ ಕನಿಷ್ಟ 5 ಜನ ಸದಸ್ಯರ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ ಆರ್. ಮಹಾದೇವ ಅವರ ಕಚೇರಿ ತೆರಳಿ ಪೊಲೀಸ್ ದೂರು ಪ್ರಾಧಿಕಾರ ಆಯ್ಕೆ ನಿಯೋಗದ ಸದಸ್ಯರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಕಾಸೌಧದ ಹಮ್ಮಿಕೊಂಡ ಸಭೆಯನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ನಾಗರಿಕ ಸಮಾಜಕ್ಕೆ ನ್ಯಾಯಸಿಗಬೇಕಾದರೆ ಒಬ್ಬರನ್ನೆ ತೆಗೆದುಕೊಂಡರೆ ನೊಂದವರಿಗೆ ನ್ಯಾಯ ಸಿಗುವುದು ದೂರದ ಮಾತಾಗಿದೆ. ಆದ್ದರಿಂದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 5 ಜನ ನಾಗರಿಕ ಸಮಾಜವನ್ನು ತೆಗೆದುಕೊಳ್ಳಬೇಕು ಮಾನ್ಯ ಮುಖ್ಯಮಂತ್ರಿಗಳಿಗೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಸಭೆ ಮೂಲಕ ಒತ್ತಾಯಿಸಿದರು. 


ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಪರಶುರಾಮ ಶಿವಶರಣ ಮಾತನಾಡಿ, ರಾಜ್ಯದಲ್ಲಿ ತುಳಿತಕ್ಕೆ ಒಳಗಾದ ಶೋಷಿತ, ದಲಿತ ಹಿಂದುಳಿದ, ಅಲ್ಪಸಂಖ್ಯಾರಿಗೆ, ಧ್ವನಿ ಇಲ್ಲದವರಿಗೆ ನ್ಯಾಯ ಸಿಗಬೇಕಾದರೆ ಕನಿಷ್ಠ 5 ಜನರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಿಗಳಿಗೆ ನಾಗರೀಕ ಸೇವಾ ಸಮಾಜದಿಂದ ಅರ್ಹ ಸದಸ್ಯರನ್ನು ಸಂದರ್ಶನ ಮಾಡಿರುವುದು ಸ್ವಾಗತಾರ್ಹ. ಆದರೆ ಪೊಲೀಸ್ ದೂರು ಪ್ರಾಧಿಕಾರದ ಸಮಿತಿಗೆ ಜಿಲ್ಲಾ ವಾರು ನಾಗರಿಕ ಸಮಾಜದಿಂದ ಕೇವಲ ಓರ್ವ ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದು ಸಮಂಜಸ ಅಲ್ಲ. ಆದ್ದರಿಂದ ಪ್ರತಿ ಜಿಲ್ಲೆಯಿಂದ ಜಿಲ್ಳಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕನಿಷ್ಠ 5 ಜನರನ್ನು ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ, ಪೊಲೀಸ್ ಇಲಾಖೆ ಸಿಬ್ಬಂಧಿ ಅಧಿಕಾರಿಗಳಿಂದ ದೌರ್ಜನ್ಯಕ್ಕೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡುವುದು ದೂರದ ಮಾತು. 

ಈ ಸಂದರ್ಭದಲ್ಲಿ ಹರಿಕೃಷ್ಣ ರಾವ, ಬಸರಾಜ ಮೈಸೂರು, ಸಬಿ ಐ.ಆರ್., ಎಂ. ಮಹದೇವಸಾಬ, ದೀಪಕ ಟಿ, ನಾಗರಾಜ ಆರ್., ಮಂಜು ಟಿ, ಶ್ರೇಯಶ ಕುಮಾರ, ಎಸ್. ಮಲ್ಲೇಶಪ್ಪ ಸೇರಿದಂತೆ ರಾಜ್ಯದ ಎಲ್ಲ 70 ಜನ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.