Saturday, April 11, 2026

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾತ್ರಯಿದೆ - ಡಾ ಎಚ್ ಟಿ ಪೋತೆ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ ವಿಜಯಪುರ : ಮಹಾತ್ಮಾ ಜ್ಯೋತಿಬಾ ಫುಲೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಶೈಕ್ಷಣಿಕ ಕ್ರಾಂತಿ ಮಾಡಿದವರು ಹನ್ನೆರಡನೆ ಶತಮಾನದಲ್ಲಿ ಅಪ್ಪನು ಮಾದರ ಚೆನ್ನಯ್ಯ, ಬಪ್ಪನು ಡೋಹರ ಕಕ್ಕಯ್ಯ ಎನ್ನುವ ಮೂಲಕ ಒಂಬತ್ತು ನೂರು ರ‍್ಷಗಳ ಹಿಂದೆ ಬಸವಣ್ಣ, ಎರಡು ಸಾವಿರ ರ‍್ಷಗಳ ಹಿಂದೆ ಬುದ್ಧ, ನಾಲ್ಕು ನೂರು ರ‍್ಷಗಳ ಹಿಂದೆ ಸಮಾಜದಲ್ಲಿ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರು, ಅದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೊಳಿಸಿದರು ಇಂತಹ ಬುದ್ದ, ಬಸವ,ಕಬೀರ,ಫುಲೆ ಮತ್ತು ಅಂಬೇಡ್ಕರ್ ಜಗತ್ತಿಗೆ ಮಾದರಿ ಎಂದು ಕಲಬುರಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನರ‍್ದೇಶಕರಾದ ಡಾ ಎಚ್ ಟಿ ಪೋತೆ ಅವರು ಹೇಳಿದರು.

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಮೊದಲ ಗೋಷ್ಠಿ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಕರ‍್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಲ್ಲವನ್ನು ಪಡೆದುಕೊಂಡ ಜನ ಅವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಜ್ಯೋತಿಬಾ ಫುಲೆ ಅವರ ಶಾಲೆಯಲ್ಲಿ ಕಲಿತ ಮುಕ್ತಾ ಎಂಬ ದಲಿತ ಲೇಖಕಿ ಅವತ್ತೆ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ್ದಾರೆ ಭಾರತ ಇವತ್ತು ವಿವಿಧ ಸಂಸ್ಕೃತಿ ಹೆಸರಲ್ಲಿ ಒಡೆದು ಹೋಗುತ್ತಿದೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನಕ್ಕೆ ಮಾತ್ರಯಿದೆ ಮಹಾತ್ಮರು ಯಾವುದೇ ಒಂದು ಸಮಾಜಕ್ಕೆ ಸೇರಿದವರಲ್ಲ ಅವರು ದೇಶದ ಎಲ್ಲ ಜನರಿಗೆ ಸೇರಿದವರು ಎಂದು ಹೇಳಿದರು.

ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನರ‍್ದೇಶಕರಾದ ಬಸವರಾಜ ಹೂಗಾರ ಅವರು ಮಾತನಾಡಿ, ಜಾತಿಯ ಸಮಸ್ಯೆಗಳು ಬಗೆಹರಿಸುವುದು ಹೇಗೆ ಮತ್ತು ನಮ್ಮ ಹುಟ್ಟಿನ ಮೂಲ ಸಮಾಜದಲ್ಲಿ ಎಲ್ಲರಿಗೂ ಕಾಡುವ ಎರಡು ಪ್ರಶ್ನೆಗಳಾಗಿವೆ ನಾವು ಪಡೆಯುವ ಶಿಕ್ಷಣ ನಮ್ಮ ಮೌಢ್ಯ ಕಳೆಯುತ್ತದೆ ಎಂದು ಎಂಬುದು ತಪ್ಪು ಇವತ್ತಿನ ಶಿಕ್ಷಣ ಎತ್ತ ಸಾಗಿದೆ ಎಂದು ನಾವು ಚಿಂತಿಸಬೇಕಿದೆ ಮಕ್ಕಳಿಗೆ ಬುದ್ಧ ಬಸವ ಅಂಬೇಡ್ಕರ್ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕಿದೆ ಆಗ ಮಾತ್ರ ನಮ್ಮ ಮಕ್ಕಳು ನವ ಸಮಾಜ ನರ‍್ಮಾಣ ಮಾಡಲು ಸಾಧ್ಯವಿದೆ ಅಂಬೇಡ್ಕರ್ ಹಚ್ಚಿದ ಸಮಾನತೆ ದೀಪವನ್ನು ಆರದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದವರು ಈ ದೇಶದ ಕೆಳ ಸಮುದಾಯದ ಜನ ಎಂದು ಹೇಳಿದ ಅವರು ಪ್ರತಿಯೊಬ್ಬರೂ ಪುಸ್ತಕ ಮೇಳದಲ್ಲಿ ಭಾಗವಹಿಸಿ ಪುಸ್ತಕ ಖರೀದಿಸಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಉಪಸ್ಥಿತಿ ವಹಿಸಿ ಮುಖಂಡ ಸುರೇಶ ಘೊಣಸಗಿ ಅವರು ಮಾತನಾಡಿ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ವಿಜಯಪುರದಲ್ಲಿ ಐತಿಹಾಸಿಕ ಪುಸ್ತಕ ಮೇಳ ಹಮ್ಮಿಕೊಂಡಿರುವುದು ಮಾದರಿ ಕರ‍್ಯವಾಗಿದೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ವಿದ್ಯರ‍್ಥಿಗಳಿಗೆ ಭೋದನೆ ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ತೆಗೆದುಕೊಳ್ಳಬೇಕು ದೇಶ ಸಂಕಷ್ಟದ ದಾರಿಯಲ್ಲಿದೆ ತಳ ಸಮುದಾಯದ ಜನ ಶಿಕ್ಷಣಕ್ಕೆ ಒತ್ತುಕೊಟ್ಟು ಶಿಕ್ಷಣವಂತರಾದರೆ ಮಾತ್ರ ಸಮ ಸಮಾಜ ನರ‍್ಮಾಣ ಸಾಧ್ಯ ಎಂದು ಹೇಳಿದರು.

ಬಂಜಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ ಎಲ್ ಚವ್ಹಾಣ ಅವರು ಮಾತನಾಡಿ, ಪುಸ್ತಕ ಮೇಳವು ಸಮಾಜದಲ್ಲಿ ಒಮ್ಮತ ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲರು ಕೂಡಿಕೊಂಡು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ ಎಚ್ ನಾಡಗಿರಿ ಅವರು ಮಾತನಾಡಿ ಶಿಕ್ಷಕ ವೃತ್ತಿ ಸಮಾಜದಲ್ಲಿ ಬಹಳಷ್ಟು ಜವಾಬ್ದಾರಿ ಹೊಂದಿರುವ ಹುದ್ದೆಯಾಗಿದೆ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ಪುಸ್ತಕ ಮೇಳದಲ್ಲಿ ಶಿಕ್ಷಕ ದಂಪತಿಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದು ಸ್ವಾಗತರ‍್ಹ ಎಂದರು.

ಕರ‍್ಯಕ್ರಮದಲ್ಲಿ ಶಿಕ್ಷಕ ದಂಪತಿಗಳ ಜಾಥಾದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

 ಕರ‍್ಯಕ್ರಮದಲ್ಲಿ ಚಿದಾನಂದ ಕಾಂಬಳೆ, ಸುರೇಖಾ ರಜಪೂತ, ಸಿದ್ದಪ್ಪ ಹೊಸಮನಿ ಬಿರಾದಾರ, ಸತ್ಯಪ್ಪ ಚಲವಾದಿ, ಸುರೇಶ ಗೊಣಸಗಿ, ಕೆ.ಎಂ. ಕೂಡಲಗಿ, ಸಿದ್ದನಗೌಡ ಪಾಟೀಲ, ಬಸವರಾಜ ತಾಳಿಕೋಟಿ, ಶಬ್ಬಿರ ಕಾಗಜಕೋಟಿ, ಸಾಹೇಬಗೌಡ ಪಾಟೀಲ, ಚಂದ್ರಕಾಂತ ಸಿಂಗೆ, ರವಿ ಕಿತ್ತೂರ, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ, ಚಂದ್ರಶೇಖರ ಹೊಸಮನಿ, ಸಂರ‍್ಷ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment