Tuesday, February 10, 2026
ಸಾವು ಗೆದ್ದವನಿಗೆ ಸೀರೆ ಉಡುಗೊರೆ, ಇದು ಧಗೆ.. ಜೀವನದ ಬಗೆ!
ಧಗೆಯಲ್ಲಿ ಬೆಂದ ಜೀವಕ್ಕೆ ಒಂದು ಹನಿ ಕಣ್ಣೀರು, ಅದರೊಂದಿಗೆ ನೀರ ಮಜ್ಜಿಗೆ ಆಸರೆಯಾಗುವ ಹೊತ್ತಿಗೆ ಪ್ರೇಕ್ಷಕನ ಕಣ್ಣಲ್ಲಿ ನೀರು ನಿಲ್ಲದೇ ,ಕೆನ್ನೆಯ ಮೇಲೆ ಇಳಿದು, ನಿಮ್ಮ ಹೃದಯವನ್ನು ಹಸಿಗೊಳಿಸಿರುತ್ತದೆ. ಬಡವನ ಸ್ವಾಭಿಮಾನದ ಬದುಕು ಕತ್ತಲೆಯಲ್ಲಿ ಹುಡುಕಿದಂತೆ ಬೆಳಕು, ಅದು ಸೂರ್ಯನಿಂದಾದರೂ ಸರಿ, ಚಂದ್ರನಿAದಾದರೂ ಸರಿ, ದೀಪದಿಂದಾದರು ಸರಿ, ಉರಿಯುವ ಒಲೆಯಿಂದಾದರೂ ಸರಿ, ಎಲ್ಲಮ್ಮನ ಮುಂದೆ ಹೊಗೆಯಾಡುವ ಅಗರಬತ್ತಿಯಿಂದಾದರೂ ಸರಿ, ಹಿತ್ತಲಿನ ಕತ್ತಲಲ್ಲಿ ಹಾರಾಡುವ ಮಿಂಚು ಹುಳದ ಬಾಲದ ತುದಿಯಿಂದಾದರೂ ಸರಿ, ಬೆಳಕು ಬಂದೀತೆAದು ಚಂದಪ್ಪ ಕಾಯುತ್ತಾನೆ! ಬೆಳಕು ಸಿಗದಿರುವಾಗ ಸಾವಿಗೆ ಹತ್ತಿರವಾಗುತ್ತಾನೆ. ಅಲ್ಲಿ ಅವ್ವನ ಸೀರೆಯ ಸೆರಗಿನಲ್ಲಿ ಬದುಕಿನ ಬೆಳಕು ರೂಪ ರೂಪಾಯಿ ರೂಪದಲ್ಲಿ ನೆಲ ಆವರಿಸುತ್ತದೆ.
ಆಗ ಕಥಾ ನಾಯಕ ಚಂದಪ್ಪ , ಈಶ್ವರನ ಜಡೆಯಿಂದ ಜಾರಿ, ಹುಣ್ಣಿಮೆಯ ಚಂದ್ರ ಮಜ್ಜಿಗೆಯ ಮಡಿಕೆಯಲ್ಲಿ ಬಿದ್ದಂತೆ ಕಂಗೊಳಿಸುವ. ಅದೇ ಹೊತ್ತಿಗೆ ಸಿನಿಮಾ ನೋಡುವ ಪ್ರೇಕ್ಷಕನ ಕಂಗಳಲ್ಲಿ ನೋವಿನ ಕಣ್ಣೀರು ಚಿಮ್ಮಿ ಬರುತ್ತದೆ. ಎದೆಯೊಳಗಿನ ದುಃಖದ ಕಟ್ಟೆಯೊಡೆದು, ಗಂಟಲಕ್ಕೆ ಬಂದು, ಕೊರಳ ಸೆರೆಯಾಗಿ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಇನ್ನೇನು ಬದುಕು ಬದಲಾಯಿತು ಎನ್ನುವಷ್ಟರಲ್ಲಿ ಕಥಾ ನಾಯಕ ಚಂದಪ್ಪನಿಗೆ, ಸಾವು ಗೆದ್ದ ಸಂದರ್ಭ ಸೀರೆಯ ಉಡುಗೊರೆ ನೀಡುತ್ತದೆ. ಅವನು ಚಂದಪ್ಪ, ಚಂದ್ರಿಕೆಯಾಗಿ ಚಿಂದಿಯಾದ ಬದುಕನ್ನು ಚಂದಗೊಳಿಸಿ ಅವ್ವನ ಕಾಯಕದಲ್ಲಿ ಪರಕಾಯ ಪ್ರವೇಶ ಮಾಡುತ್ತಾನೆ.
ಧಗೆ ಎಂಬ ಸೂರ್ಯ ಮಂಕಾಗಿರುತ್ತಾನೆ. ಗಗನ ವಾರಿಧಿಯಲ್ಲಿ ಹೂ ಬಿಟ್ಟು, ಕಾಯಾಗಿ, ಹಣ್ಣಾದ ಕಲ್ಲಂಗಡಿಯAತಿರುತ್ತಾನೆ. ಚಂದಪ್ಪ ಆ ಕಲ್ಲಂಗಡಿ ಹಣ್ಣು ತನ್ನ ಹೃದಯವೇ ಎಂದುಕೊAಡು, ಕಲ್ಲಂಗಡಿಯನ್ನು ದಿಟ್ಟಿಸಿ, “ಎಲಾ ಕಲ್ಲಂಗಡಿ, ಕಲ್ಲಂಗಡಿಯAತಿರುವ ಸೂರ್ಯಾ ನಿನ್ನ ಕೊಯ್ದರೆ ಕೆಂಪು, ತಿಂದರೆ ತಂಪು’’ ಸ್ವಗತದಲ್ಲಿ ರೂಪಕ ಮೂಡುತ್ತಿರುವಾಗಲೇ ಮೂಡಣದ ಮನೆಯಿಂದ ಪಡುವಣದ ಮನೆಗೆ ಸಾಗುವ ದಾರಿಯಲ್ಲಿ ಚಂದಪ್ಪನ ಸಾಕು ತಾಯಿ , ಕಲ್ಲಿಗೆ ಎಡವಿ ಹೆಬ್ಬೆರೆಳು ಒಡೆದುಕೊಂಡಾಗ, ರಕ್ತ ಚಿಮ್ಮಿದ ಹೆಬ್ಬರೆಳು, ಅಕ್ಷರಶಃ ಕಲ್ಲಂಗಡಿ ಹಣ್ಣು ಸೀಳಿದಂತೆ ಭಾಸವಾಗುತ್ತದೆ. ಎಡವಿದ ಹೆಬ್ಬೆರೆಳು, ಅದರಿಂದ ಚಿಮ್ಮುವ ರಕ್ತ, ತಾಯಿ ಮಗನ ಸಂಬAಧ ಅವ್ಯಕ್ತ ಎಂಬುವುದನ್ನು ಪ್ರೇಕ್ಷಕ ಅರಿಯುವಷ್ಟರಲ್ಲಿ ಧಗೆ ಹೆಚ್ಚಾಗಿರುತ್ತದೆ! ಚಿತ್ರದ ಕಥೆ ವೇಗವಾಗಿ ಬಯಲು ಬಿಸಿಲಿನ, ಬದುಕಿನ ಮರೀಚಿಕೆಯನ್ನು, ಬೇಟೆಯಾಡಲು ಚಂದಪ್ಪ ಸಜ್ಜಾಗುತ್ತಾನೆ.
ಧಗೆ ಬಿಸಿಲಿನಂತೆ ಶ್ರೀಮಂತಿಕೆ, ಆ ಕ್ಷಣಕ್ಕೆ ಬಂದಾಗ ಜೂಜು-ಮೋಜು ಚಂದಪ್ಪನನ್ನು ದಾರಿ ತಪ್ಪಿಸುತ್ತದೆ. ಆಜು-ಬಾಜು ಇದ್ದ ಭಟ್ಟಂಗಿಗಳು ಮಂಗ ಮಾಯ, ಹೆಂಡ ಕುಡಿದ ಕೋತಿ, ಮಜ್ಜಿಗೆ ಮಡಿಕೆ ಹಿಡಿದು, ಹೊಸ ಬದುಕು ಸಾಗಿಸುತ್ತೇನೆಂದಾಗ, ಧಗೆ ಸುಮ್ಮನೇ ಬಿಡುವುದಿಲ್ಲ. ಪ್ರೇಮ-ಕಾಮದ ನಶೆ ಇಳಿಯಲಾಗದು, ತಿಳಿಯಲಾಗದು. ಕುಡಿದ ಹೆಂಡದ ನಶೆಗಿಂತ, ಕಂಡವರ ಹೆಂಡತಿಯ ಪಡೆಯುವ ನಶೆ ಇಳಿಯಲಾಗದು.. ತಿಳಿಯಲಾಗದು! ಕಥೆಗೆ ಕಷ್ಟಗಳ ಹೊಟ್ಟೆ ಹರಿದು, ಸುಖ ಹುಡುಕುವ ಶಕ್ತಿಯಿದೆ. ಇದು ನಿರ್ದೇಶಕ ಈಶ್ವರ್ ಕೆರ್ನಳ್ಳಿ, ನಾಯಕ ನಟ ಸಂಗಮೇಶ ಉಪಾಸೆಗೂ ಸಮನಾಗಿ ಹಂಚಿಕೆಯಾಗಿದೆ. ಜೋಗತಿ ಮಂಜಮ್ಮ ಭೂಮಿ ತೂಕದ ಮಡಿಕೆ ಹೊತ್ತು, ಜಲ ರೂಪಿ ಮಾಯೆಯಾಗಿ, ಕೊಡ ಹೊತ್ತು ಕುಣಿಯುವ ಜಗದಂಬೆ ಶಕ್ತಿಯಾಗಿ, ತೆರೆಯ ಮೇಲೆ ರಾರಾಜಿಸಿದರೆ, ಧಗೆಯೆಂಬುದು ಮನುಷ್ಯನ ನೂರಾರು ಅವ್ಯಕ್ತ ಸಹ್ಯಗಳನ್ನು ಸುಟ್ಟು ಹಾಕುತ್ತದೆ. ಅರಿವೆಂಬ ಗುರುವಿಗೆ ಗುಲಾಮನಾದರೆ, ಶಿಷ್ಯ ಗುರುವಿನ ಸರಿಸಮಾನವಾಗುವ ಅಭಿನಯ ಶೃಂಗ ಮುಟ್ಟುವ ಸಂಗಮೇಶ ಉಪಾಸೆ ಅಭಿನಯ ಮನ ಮುಟ್ಟಿ, ಕಲಕುತ್ತದೆ.
ಚಿತ್ರ ಮುಗಿಯುವ ಹೊತ್ತಿಗೆ ಉತ್ತರ ಕರ್ನಾಟಕದ ಬಿಸಿಲ ಬಿಸಿ ಧಗೆಯನ್ನು ಕ್ಯಾಮೆರಾ ಕಣ್ಣಲ್ಲಿ ಕಂಡ, ಛಾಯಾಗ್ರಾಹಕ ಆನಂದ್ ದಿಂಡ್ವರ್ ಅವರ ಶ್ರಮ ಉತ್ತುಂಗಕ್ಕೇರಿದೆ.ನಿರ್ಮಾಪಕರಾದ ದೀಪಾ ಬಿ.ಎಮ್, ಮಂಜುನಾಥ್ ಎಂ.ಸಿ, ಬರಗಾಲದ ಬಯಲಿನಲ್ಲಿ ದಾಸೋಹದ ಗಂಜಿ ತೆರೆದು, ನೀರ ಮಜ್ಜಿಗೆ, ನೀಡಿದ ದಾನಿಗಳಂತೆ ಕಾಣುತ್ತಾರೆ. ಚಿತ್ರಕ್ಕೆ ಹಣ ಸುರಿದಿ, ಮರಳಿ ಲಾಭದ ಲಾಲಸೆಗೆ ಒಳಗಾಗದೇ, ಸಮಾಜಮುಖಿಯಾಗಿ, ಕೆರೆಯ ನೀರನ್ನು ಕೆರೆಗೆ ಚೆಲ್ಲುವುದರ ಜೊತೆ ಮಜ್ಜಿಗೆಯನ್ನೂ ಸುರಿದಿದ್ದಾರೆ. ಕೆರೆಯೆಂಬುದು ಧಗೆಯಲ್ಲಿ ಮಜ್ಜಿಗೆ ಮಡಿಕೆಯಲ್ಲಿ, ಹಸಿ ಬೆಣ್ಣೆ ತುಂಬಿಕೊAಡು, ಬಿಸಿ ಮಜ್ಜಿಗೆ ನೀರಿನೊಂದಿಗೆ ಬಾಯಾರಿದವರ ಒಡಲ ಸೇರುವ ಕಡಲ ನೀರಾಗಿದೆ. ಇಡೀ ಚಿತ್ರದ ಸರ್ವ ತಂತ್ರಜ್ಞರೂ, ತಾಂತ್ರಿಕ ಅಘೋರಿಗಳಂತೆ, ತಮ್ಮ ಕಲಾ ತಪಸ್ಸಿನ ಮೂಲಕ ಚಿತ್ರವನ್ನು ಕಲಾತ್ಮಕವಾಗಿ ರೂಪಿಸಿದ್ದಾರೆ.
ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಜೀವಿಸಿದ್ದಾರೆ. ಸುನೀಲಕುಮಾರ ಸುಧಾಕರ, ನೀತು ಪಾಟೀಲ್, ಪಲ್ಲವಿ ಪಾಟೀಲ್ ಸೇಡಂ, ರಾಮಚಂದ್ರ ಕಾಂಬಳೆ, ಬಾಬುಗೌಡ ಬಿರಾದಾರ, ಪರಶುರಾಮ, ಮುತ್ತು, ಕಪಿಲ್, ಸಚಿನ್, ಬಾಬು ತಡಲಗಿ, ಅಂಬಣ್ಣ ದೇಸಾಯಿ, ಮಲ್ಲಿಕಾರ್ಜುನ ಮೇತ್ರಿ ಇನ್ನೂ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಧಗೆಯೆಂಬುದು ಕೇವಲ ಮನರಂಜನೆ ನೀಡುವ ಚಲನಚಿತ್ರವಲ್ಲ, ಅದು ಸಮಾಜಮುಖಿಯ ತಲ್ಲಣದ, ಮಾನವೀಯ ಸಂವೇದನೆಯ, ಜೀವನ್ಮುಖಿ ಚಿತ್ರವಾಗಿದೆ. ಇದೇ ಕಾರಣಕ್ಕೆ ಚಿತ್ರವನ್ನು 17ನೇ ಬೆಂಗಳೂರು ಅಂತಾರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಅದ್ದೂರಿ ಪ್ರದರ್ಶನ ಕಂಡು ಜನ ಮನ ಗೆದ್ದಿತು. ಸಾಮಾಜಿಕ ಜಾಲತಾಣದಲ್ಲಿ ಧಗೆ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯ ಚಿತ್ರ ಯಾವಾಗ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ,ಎಂದು ತೆರೆದ ಕಣ್ಣಿನಿಂದ ಬೆಳ್ಳೆತೆರೆಯತ್ತ ನೋಡುತ್ತಿದ್ದಾರೆ. ಚಿತ್ರ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೋಡಿ ಆನಂದಿಸಿ. ಧಗೆ ನಿಮ್ಮೊಳಗೆ ಸದಾಯಿದೆ.. ಅದೇ ಎಲ್ಲಾ ಬಗೆಯ ಧಗೆ!
- ಸುನೀಲಕುಮಾರ ಸುಧಾಕರ,ವಿಜಯಪುರ
ಮೊ : 9972918790
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇಂದಿನ ಅಗತ್ಯ : ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ. ಬಿ ಸೋನಾರ್
ವಿಜಯಪುರ: ವೃತ್ತಿಪರ, ತಾಂತ್ರಿಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದಲ್ಲಿ ಮಹಿಳೆಯರ ಪ್ರವೇಶವನ್ನು ವಿಸ್ತರಿಸುವುದು, ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಿಸುವುದು ಹಾಗೂ ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇಂದಿನ ಅಗತ್ಯವೆಂದು ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ. ಬಿ ಸೋನಾರ್ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ಲೇಸ್‌ಮೆಂಟ್ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗು ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ ಪಿಎಂ ಉಷಾ ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಪರಿಷತ್ತಿನ ಅನುದಾನದೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ಮಹಿಳೆಯರಿಗೆ ವೃತ್ತಿಪರ, ತಾಂತ್ರಿಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದಲ್ಲಿ ಪ್ರವೇಶವನ್ನು ಸುಲಭಗೊಳಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ತಾಂತ್ರಿಕ ಹಾಗೂ ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಬೇಡಿಕೆಗೆ ಹೊಂದಿಕೊಳ್ಳುವ ರೀತಿಯಲ್ಲಿ ಪಠ್ಯಕ್ರಮಗಳನ್ನು ಪರಿಷ್ಕರಿಸಬೇಕು, ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ಸೈಬರ್ ಸುರಕ್ಷತೆ, ರೋಬೋಟಿಕ್ಸ್ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿನಿಯರಿಗೆ ನೈಪುಣ್ಯ ಒದಗಿಸುವುದರಿಂದ ಭವಿಷ್ಯದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಜಯಪುರದ ಎಸ್.ಬಿ. ಆರ್ಟ್ಸ್ ಮತ್ತು ಕೆ.ಸಿ.ಪಿ. ಸೈನ್ಸ್ಕಾಲೇಜಿನ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಧರ್ ಜೋಶಿ ಮಾತನಾಡಿ, ಇಂದಿನ ಜಗತ್ತು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಸೈಬರ್ ಸುರಕ್ಷತೆ, ಕ್ಲೌಡ್ ಕಂಪ್ಯೂಟಿAಗ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳು ನಮ್ಮ ಜೀವನಶೈಲಿ ಹಾಗೂ ಉದ್ಯೋಗಕ್ಷೇತ್ರವನ್ನು ವೇಗವಾಗಿ ಬದಲಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಾಂತ್ರಿಕ ಮೂಲಾಧಾರಗಳನ್ನು ಗಟ್ಟಿಗೊಳಿಸಿಕೊಳ್ಳುವುದು ಅತ್ಯಂತ ಅವಶ್ಯಕ, ಎಂದು ಹೇಳಿದರು.
ಕಾರ್ಯಾಗಾರದ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ನೆತ್ರೆಕಾನ್ ಸೊಲ್ಯೂಷನ್ಸ್ನ ಕಾರ್ಪೊರೇಟ್ ತರಬೇತುದಾರ ಪವನ್ ಜಿ ಮಾತನಾಡಿ, ತಾಂತ್ರಿಕ ಜ್ಞಾನವು ಉದ್ಯೋಗಕ್ಕೆ ಪ್ರವೇಶದ್ವಾರವಾಗಿದ್ದರೆ, ಸಾಫ್ಟ್ ಸ್ಕಿಲ್ಸ್ ಯಶಸ್ಸಿನ ಪಥವಾಗಿದೆ. ಇಂದಿನ ಕಾರ್ಪೊರೇಟ್ ಲೋಕದಲ್ಲಿ ಕೇವಲ ತಾಂತ್ರಿಕ ಕೌಶಲ್ಯ ಮಾತ್ರವಲ್ಲ, ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ನಾಯಕತ್ವ ಗುಣಗಳು ಹಾಗೂ ಸಮಯ ನಿರ್ವಹಣೆ ಅತ್ಯಂತ ಮುಖ್ಯ, ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ. ಸಿ. ಎಂ. ಮಠಪತಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ. ಎಂ. ಪಿ. ಬಳಿಗಾರ್, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

