ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ವಿಜಯಪುರ : ೧೦೬ ವರ್ಷಗಳ ಇತಿಹಾಸವುಳ್ಳ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೈತರಿಗೆ ಆರ್ಥಿಕ ಬಲ ತುಂಬುವ ಜೊತೆಗೆ ಲಾಭಾಂಶ ಗಳಿಸುವ ಮೂಲಕ ದಾಪುಗಾಲು ಇರಿಸುತ್ತಿದ್ದು, ಈ ಎಲ್ಲ ಸಾಧನೆಗಳ ಜೊತೆಗೆ ರಾಷ್ಟçಮಟ್ಟದ ಟಾಪ್ ೩೦ಯಲ್ಲಿ ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವಾನಂದ ಪಾಟೀಲ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊAಡ ಅವರು, ರಾಷ್ಟçದಲ್ಲಿ ೩೫೧ ಕೇಂದ್ರ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು ಆ ಪೈಕಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ವಿವಿಧ ವಿಭಾಗಗಳಲ್ಲಿ ಟಾಪ್ ೩೦ ರಲ್ಲಿ ಸ್ಥಾನ ಪಡೆದುಕೊಂಡಿದೆ. ಠೇವಣಿ ವಿಭಾಗದಲ್ಲಿ ರಾಷ್ಟçಮಟ್ಟದಲ್ಲಿ ೨೭ ನೇ ಸ್ಥಾನ ಪಡೆದರೆ, ರಾಜ್ಯ ಮಟ್ಟದಲ್ಲಿ ನಾಲ್ಕನೇಯ ಸ್ಥಾನ, ಸಾಲ ಹಾಗೂ ಸಾಲ ಬಾಕಿ ವಸೂಲಾತಿಯಲ್ಲಿ ರಾಷ್ಟçಮಟ್ಟದಲ್ಲಿ ೨೭ ನೇ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ೫ ನೇ ಸ್ಥಾನ, ಒಟ್ಟು ವ್ಯವಹಾರ ವಿಭಾಗದಲ್ಲಿ ರಾಷ್ಟçಮಟ್ಟದಲ್ಲಿ ೨೧ ನೇ ಹಾಗೂ ರಾಜ್ಯದಲ್ಲಿ ೪ ನೇ ಸ್ಥಾನ ಹಾಗೂ ದುಡಿಯುವ ಬಂಡವಾಳ ಹೊಂದಿರುವ ವಿಭಾಗದಲ್ಲಿ ರಾಷ್ಟçಮಟ್ಟದಲ್ಲಿ ೨೮ ಹಾಗೂ ರಾಜ್ಯಮಟ್ಟದಲ್ಲಿ ನಾಲ್ಕನೇಯ ಸ್ಥಾನ ಪಡೆದುಕೊಂಡಿದೆ ಎಂದರು.
ಕೋ-ಆಪರೇಟಿವ್-ತರಬೇತಿಗೆ ಕಾರ್ಪೋರೇಟ್ ಟಚ್:
ಉತ್ತರ ಕರ್ನಾಟಕದಲ್ಲಿಯೇ ಸಹಕಾರ ಸಂಘಗಳ ಸಿಇಓ ಹಾಗೂ ವಲಯದಲ್ಲಿ ತೊಡಗಿಸಿಕೊಂಡವರಿಗೆ ಅತ್ಯಾಧುನಿಕ ರೀತಿಯ ತರಬೇತಿ ನೀಡುವ ಮಹತ್ವದ ಯೋಜನೆಯನ್ನು ವಿಜಯಪುರ ಜಿಲ್ಲಾ ಕೇಂದ್ರ ಡಿಸಿಸಿ ಬ್ಯಾಂಕ್ ಮುಂದಾಗಿದ್ದು, ೮೦ ಕೋಟಿ ರೂ. ಒಟ್ಟು ಯೋಜನಾ ವೆಚ್ಚದಲ್ಲಿ ಅತ್ಯಾಧುನಿಕ ಕಾರ್ಪೋರೇಟ್ ಶೈಲಿಯ ತರಬೇತಿ ಕೇಂದ್ರ ಕಾರ್ಯಾರಂಭಕ್ಕೆ ಮುಂದಾಗಿರುವ ವಿಷಯವನ್ನು ಸಚಿವ ಶಿವಾನಂದ ಪಾಟೀಲ ಪ್ರಕಟಿಸಿದರು.
ಪಿಪಿಪಿ ಮೂಲಕ ಉದ್ದೇಶಿತ ಕಟ್ಟಡದ ಕಾರ್ಯವೈಖರಿ, ಸ್ವರೂಪವನ್ನು ಪ್ರದರ್ಶಿಸಿದ ಅವರು, ಕಾರ್ಪೋರೇಟ್ ಮಾದರಿಯಲ್ಲಿ ಅತ್ಯಾಧುನಿಕ ವರ್ಕ್ ಸ್ಟೇಷನ್, ೨೫೦೦ ಸಾವಿರಕ್ಕೂ ಹೆಚ್ಚು ಜನರಿಗೆ ಏಕಕಾಲಕ್ಕೆ ತರಬೇತಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ದೊಡ್ಡ ಯೋಜನೆಯನ್ನು ರೂಪಿಸಲಾಗಿದ್ದು, ಉತ್ತರ ಕರ್ನಾಟದಲ್ಲಿಯೇ ಈ ತರಬೇತಿ ಕೇಂದ್ರ ಪ್ರಥಮ ಹಾಗೂ ಏಕೈಕವಾಗಲಿದೆ ಎಂದರು.
ತೋಟದ ಮನೆ ನಿರ್ಮಾಣಕ್ಕೆ ರಾಜ್ಯದಲ್ಲಿಯೇ ಹೊಸ ಸಾಲ ವ್ಯವಸ್ಥೆ:
ರೈತರು ತೋಟದ ಮನೆ ನಿರ್ಮಾಣಕ್ಕೆ ಸಾಲ ನೀಡುವ ವ್ಯವಸ್ಥೆಯನ್ನು ವಿಜಯಪುರ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ರೈತರು ಸ್ವಂತ ಕೃಷಿ ಭೂಮಿಯಲ್ಲಿ ತಓಟದ ಮನೆ ನಿರ್ಮಿಸಿಕೊಳ್ಳಲು ಶೇ.೧೦ ರಷ್ಟು ಬಡ್ಡಿದರದಲ್ಲಿ ೨೦ ಲಕ್ಷ ರೂ.ವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಈ ಸಾಲ ಪಡೆದುಕೊಳ್ಳಲು ಎನ್.ಎ. ಸರ್ಟಿಫಿಕೇಟ್ ಬೇಕಾಗಿಲ್ಲ, ರೈತರು ತಮ್ಮ ಜಮೀನುಗಳಲ್ಲಿಯೇ ವಾಸ್ತವ್ಯ ಮಾಡುವುದರಿಂದ ಕೃಷಿಗೆ ಹೆಚ್ಚಿನ ಸಮಯ ಕೊಡಲು ಅನುಕೂಲವಾಗುತ್ತದೆ, ಹೀಗಾಗಿಯೇ ರಾಜ್ಯದಲ್ಲಿಯೇ ಈ ರೀತಿ ಸಾಲ ಕೊಡುವ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೆ ತರಲಾಗಿದೆ ಎಂದರು.
27 ವರ್ಷಗಳಿಂದ ಅಧ್ಯಕ್ಷ ಹೊಸ ದಾಖಲೆ:
ಈ ಎಲ್ಲ ದಾಖಲೆಗಳ ಜೊತೆಗೆ ಸಹಕಾರಿ ರಂಗದ ದಿಗ್ಗಜ ಪಿ.ಎಂ. ನಾಡಗೌಡರು ೨೫ ವರ್ಷ ೦೯ ತಿಂಗಳು ಕಾಲ ಡಿಸಿಸಿ ಬ್ಯಾಂಕ್ ಕರ್ಣಧಾರತ್ವವನ್ನು ವಹಿಸಿದ್ದರೆ, ಈಗ ೨೭ ವರ್ಷಗಳ ಕಾಲ ಅಧ್ಯಕ್ಷರಾಗಿರುವ ಶಿವಾನಂದ ಪಾಟೀಲರು ಹೊಸ ದಾಖಲೆ ಬರೆದಿದ್ದಾರೆ.
ರಾಜ್ಯದಲ್ಲಿಯೇ ಗರಿಷ್ಠ ಕೃಷಿ ಸಾಲ ನೀಡಿದ ಪ್ರಥಮ ಮೂರು ಬ್ಯಾಂಕುಗಳಲ್ಲಿಯೂ ವಿಡಿಸಿಸಿ ಸ್ಥಾನ ಪಡೆದಿದ್ದು, ೨೦೦೮ ಕೋಟಿ ರೂ. ಕೃಷಿ ಸಾಲ ನೀಡುವ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಕೃಷಿ ಸಾಲ ನೀಡಿದ ಮೂರನೇಯ ಬ್ಯಾಂಕ ಪಟ್ಟಿಯಲ್ಲಿದೆ.
ವಿಡಿಸಿಸಿ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ೨೫.೧೮ ಕೋಟಿ ರೂ. ನಿವ್ವಳ ಲಾಭ:
ವಿಜಯಪುರ : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ರ್ಥಿಕ ರ್ಷದಲ್ಲಿ ೨೫.೧೮ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ, ಸಕ್ಕರ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಟಕಟ್ಟೆ ಸಚಿವ ರಾದ ಶಿವಾನಂದ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ರ್ಷ ಬ್ಯಾಂಕು ಗಳಿಸಿರುವ ನಿವ್ವಳ ಲಾಭದ ಪ್ರಮಾಣ ಬ್ಯಾಂಕಿನ ಇತಿಹಾಸದಲ್ಲಿಯೇ ಗರಿಷ್ಠವಾಗಿದ್ದು, ವಾಸ್ತವವಾಗಿ ಬ್ಯಾಂಕು ೩೩.೭೧ ಕೋಟಿ ರೂ. ಲಾಭ ಗಳಿಸಿದ್ದು, ಅದರಲ್ಲಿ ೮.೫೩ ಕೋಟಿ ರೂ. ತೆರಿಗೆ ಪಾವತಿ ಮಾಡುವ ಮೂಲಕ ೨೫.೧೮ ಕೋಟಿ ರೂ. ನಿವ್ವಳ ಲಾಭಗಳಿಸಿದಂತಾಗಿದೆ ಎಂದರು.
ಪ್ರಸಕ್ತ ರ್ಥಿಕ ರ್ಷದ ಮರ್ಚ್ ಮಾಸಾಂತ್ಯದ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಬ್ಯಾಂಕು ೧೮೫.೪೦ ಕೋಟಿ ರೂ. ಷೇರು, ೪೧೨.೩೬ ಕೋಟಿ ರೂ. ನಿಧಿಗಳು, ೩೮೧೪.೧೬ ಕೋಟಿ ರೂ. ಠೇವು, ೪೯೦೧ ಕೋಟಿ ರೂ. ದುಡಿಯುವ ಬಂಡವಾಳ, ೧೬೮ ಕೋಟಿ ರೂ. ಸಾಲದ ಬಾಕಿ ಹೊಂದಿದೆ ಎಂದು ವಿವರಿಸಿದರು.
ಸ್ವಂತ ಬಂಡವಾಳ ಪ್ರಮಾಣದಲ್ಲಿಯೂ ಏರಿಕೆಯಾಗಿದ್ದು, ಕಳೆದ ರ್ಷ ೫೪೦ ಕೋಟಿ ರೂ. ಇದ್ದ ಸ್ವಂತ ಬಂಡವಾಳ ಪ್ರಸಕ್ತ ರ್ಷದಲ್ಲಿ ೫೯೮ ಕೋಟಿ ರೂ.ಗೆ ಏರಿಕೆಯಾಗಿದ್ದು, ಠೇವಣಿ ಪ್ರಮಾಣ ೩೪೯೫ ಕೋಟಿ ರೂ.ಗಳಿಂದ ೩೮೧೪ ಕೋಟಿ ರೂ.ಗಳಷ್ಟು ಏರಿಕೆ, ದುಡಿಯುವ ಬಂಡವಾಳ ಪ್ರಮಾಣ ೪೭೦೧ ಕೋಟಿ ರೂ.ಗಳಿಂದ ೪೯೦೨ ಕೋಟಿ ರೂ ಅಂದರೆ ೨೦೧ ಕೋಟಿ ರೂ. ಏರಿಕೆಯಾಗಿರುವ ವಿಷಯವನ್ನು ಸಚಿವ ಶಿವಾನಂದ ಪಾಟೀಲ ಹಂಚಿಕೊಂಡರು. ಕೃಷಿ ಚಟುವಟಿಕೆಗಳಿಗಾಗಿ ೧೮೬೪ ಕೋಟಿ ರೂ. ಕೃಷಿಯೇತರ ಸಾಲವಾಗಿ ೧೧೦೬ ಕೋಟಿ ರೂ. ಸೇರಿದಂತೆ ಒಟ್ಟು ೨೯೭೦ ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ವಹಿವಾಟು ಪ್ರಮಾಣದಲ್ಲಿ ದಾಖಲೆ ಏರಿಕೆ:
೧೨೩೩ ಕೋಟಿ ರೂ,.ಗಳ ಹೆಚ್ಚುವರಿ ಸಂಪನ್ಮೂಲವನ್ನು ಶಾಸನಬದ್ಧ ಹಾಗೂ ಇತರ ಬ್ಯಾಂಕುಗಳಲ್ಲಿ ಲಾಭದಾಯಕವಾಗಿ ಹೂಡಿಕೆ ಮಾಡಲಾಗಿದೆ, ಕಳೆದ ರ್ಷ ೬೬೦೭ ಕೋಟಿ ರೂ. ವಹಿವಾಟು ನಡೆಸಿದ್ದು ಬ್ಯಾಂಕು ಈ ರ್ಷ ೭೦೯೫ ಕೋಟಿ ರೂ. ವಹಿವಾಟು ನಡೆಸಿದ್ದು, ವಹಿವಾಟು ಪ್ರಮಾಣದಲ್ಲಿ ೪೮೮ ಕೋಟಿ ರೂ. ಏರಿಕೆಯಾಗಿದೆ ಎಂದರು.
ಶಿವಾನಂದ ಪಾಟೀಲರ ಅವಧಿಯಲ್ಲಿ ೨೩೩ ಕೋಟಿ ರೂ.ಲಾಭ:
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಶಿವಾನಂದ ಪಾಟೀಲರು ಅಧಿಕಾರ ಸ್ವೀಕರಿಸಿದ ಅವಧಿಯಿಂದ ಇಲ್ಲಿಯವರೆಗೂ ಬ್ಯಾಂಕು ಲಾಭದತ್ತ ಮುನ್ನಡೆಯುತ್ತಿದೆ, ಇದಕ್ಕೆ ಎಲ್ಲ ರೈತ ಬಂಧುಗಳು, ಆಡಳಿತ ಮಂಡಳಿ, ಸಿಬ್ಬಂದಿಯ ಸಹಕಾರವೇ ಕಾರಣ ಎಂದ ಅವರು ಬ್ಯಾಂಕಿನ ಒಟ್ಟು ಲಾಭಕ್ಕೆ ನನ್ನ ಅವಧಿಯಲ್ಲಿ ಆಗಿರುವ ಲಾಭದ ಪ್ರಮಾಣ ಶೇ. ೯೭.೪೪ ರಷ್ಟು ಸೇರಿದೆ ಎಂದು ಸಂತಸ ಹಂಚಿಕೊಂಡರು.
೧೯೯೭ ರಿಂದ ಇಲ್ಲಿಯವರೆಗೆ ವಿಭಜನೆ ಪರ್ವದಲ್ಲಿ ೩೩.೨೬ ಕೋಟಿ ರೂ. ಲಾಭ ಗಳಿಸಿದ್ದರೆ ವಿಭಜನೆ ನಂತರ ೨೦೦೩ ರಿಂದ ೨೦೨೫ ರವರೆಗೆ ಒಟ್ಟು ೨೦೦.೪೨ ಕೋಟಿ ರೂ. ಸೇರಿದಂತೆ ಒಟ್ಟು ೨೩೩.೬೮ ಕೋಟಿ ರೂ. ಲಾಭ ಗಳಿಸಿದೆ.
ಪುರ್ಧನಕ್ಕಾಗಿ ಕೇಂದ್ರಕ್ಕೆ ಒತ್ತಾಯಿಸಿ:
ಡಿಸಿಸಿ ಬ್ಯಾಂಕುಗಳು ಷೆಡ್ಯೂಲ್ಡ್ ಬ್ಯಾಂಕ್ ಆಗಲು ಎಲ್ಲ ರ್ಹತೆ ಹೊಂದಿವೆ, ಆದರೆ ಆರ್ಬಿಐ ನಿಯಮಾವಳಿಗಳ ಪ್ರಕಾರ ಷೆಡ್ಯೂಲ್ಡ್ ಬ್ಯಾಂಕ್ ಆಗಲು ಇನ್ನೂ ಸಮಯ ಬೇಕು, ಏಕೆಂದರೆ ಈ ಎಲ್ಲ ಬ್ಯಾಂಕುಗಳು ರೈತರಿಗೆ ಸಾಲ ನೀಡುತ್ತವೆ ಲಾಭದ ದೃಷ್ಟಿಯಿಂದ ಈ ಸಂಸ್ಥೆಗಳು ಸಾಲ ನೀಡುವುದಿಲ್ಲ, ಹೀಗಾಗಿ ಲಾಭಾಂಶ ಕಡಿಮೆ ಆಗುವುದರಿಂದ ಷೆಡ್ಯೂಲ್ಡ್ ಬ್ಯಾಂಕ್ ಆಗುವುದು ಕಷ್ಟ ಸಾಧ್ಯ ಎಂದು ಸಚಿವ ಶಿವಾನಂದ ಪಾಟೀಲ ವಿಶ್ಲೇಷಿಸಿದರು.
ಈ ಹಿಂದೆ ನಬಾರ್ಡ್ ಪುರ್ಧನ ಡಿಸಿಸಿ ಬ್ಯಾಂಕುಗಳ ಮೂಲಕ ರೈತರಿಗೂ ವರದಾನವಾಗಿತ್ತು, ಈ ಹಿಂದೆ ನಬರ್ಡ್ ಶೇ.೬೦ ರಷ್ಟು ಪುರ್ಧನ ನೀಡುತ್ತಿತ್ತು, ಈ ಪ್ರಮಾಣ ಶೇ.೫೦, ನಂತರ ಶೇ.೪೦ ಕ್ಕೆ ಇಳಿಕೆಯಾಗಿ ಈಗ ಕೇವಲ ಶೇ.೧೩ ಕ್ಕೆ ಸೀಮಿತಗೊಂಡಿದೆ, ಹೀಗಾಗಿ ಈ ಪುರ್ಧನ ಪ್ರಮಾಣ ಏರಿಕೆಗಾಗಿ ರಾಜ್ಯದ ಎಲ್ಲ ಸಂಸದರು ಕೇಂದ್ರ ರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಈ ಸಂರ್ಭದಲ್ಲಿ ಅವರಿಗೆ ಮನವಿ ಮಾಡಿಕೊಳ್ಳುವೆ ಎಂದರು.
ಡಿಸಿಸಿ ಬ್ಯಾಂಕ್ ನರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಸುರೇಶ ಬಿರಾದಾರ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ಆಡಳಿತ ಮಂಡಳಿ ಸಲಹೆಗಾರ ಜೆ. ಕೋಟ್ರೇಶಿ, ಸಿಇಓ ಎಸ್.ಎ. ಢವಳಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.