ಈ ದಿವಸ ವಾರ್ತೆ
ವಿಜಯಪುರ : ಶ್ರೀ ಸಂಗಮೇಶ ಮಹಾಲಿಂಗಪೂರ ವಿಜಯಪುರ ಮಾನ್ಯ ತಹಶೀಲದಾರ ಸಾಹೇಬರಿಗೆ ಹಳೆ ಪ್ರವಾಸಿ ಮಂದಿರ ಮುಂದೆ ಬಿಕ್ಷಾಟನೆಗೆ ಕುಳಿತಿರುವ ಬಗ್ಗೆ ತಿಳಿಸಿದರು. ಹಾಗೂ ಅವರಿಗೆ ಯಾರು ಕುಟುಂಬಸ್ಥರು ಇರುವುದಿಲ್ಲವೆಂದು ತಿಳಿಸಿದರು. ಸದರಿ ವಿಷಯ ತಿಳಿದ ತಕ್ಷಣ ತಮ್ಮ ಅಧೀನ ಸಿಬ್ಬಂದಿಗಳಾದ ಮಾಜೀದ ಇನಾಮದಾರ, ಉಪತಹಶೀಲದಾರ ವಿಜಯಪುರ ಮತ್ತು ವಾಸೀಮ ಶೇಖ, ಕಂದಾಯ ನಿರೀಕ್ಷಕರು ವಿಜಯಪುರ ಹಾಗೂ ಡಿ.ಸಿ.ವೀರಕರ, ಗ್ರಾಮ ಆಡಳಿತ ಅಧಿಕಾರಿ ಮಹಲಬಾಗಾಯತ ವಿಜಯಪುರ ಇವರೊಂದಿಗೆ ಸ್ಥಳಕ್ಕೆ ಧಾವಿಸಿ ಅಜ್ಜಿಯ ದಾಖಲೆಗಳನ್ನು ಪರಿಶೀಲಿಸಿ ಕೇವಲ ಒಂದು ಘಂಟೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ರೂ 1200/- ಗಳ ಸಂಧ್ಯಾ ಸುರಕ್ಷಾ ಪಿಂಚಣಿ ಮಂಜೂರಾತಿ ಆದೇಶ ಪ್ರತಿಯನ್ನು ಶ್ರೀ ವಿಜಯಪುರ ಗೇಡ್-2 ಇವರು ವಿತರಿಸಿದರು. ಆಯ್. ಹೆಚ್. ತುಂಬಗಿ, ತಹಶೀಲದಾರ ವಿಜಯಪುರ ಗ್ರೇಡ್ -2 ವಿತರಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.