Saturday, February 21, 2026
ಬಡವರ ಹಾಗೂ ಎಲ್ಲರ ಕಲ್ಯಾಣಕ್ಕೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ವರದಾನ : ಅಪ್ಪಾಜಿ ಸಿ.ಎಸ್. ನಾಡಗೌಡ
ವಿಜಯಪುರ : ಬಡವರು ಮತ್ತು ಹಿಂದುಳಿದ ವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಫಲಪ್ರದವಾಗಿದ್ದು, ಎಲ್ಲ ವರ್ಗದವರಿಗೆ ಆರ್ಥಿಕ ಸಬಲತೆ ತಂದುಕೊಟ್ಟಿವೆ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಜೆರ್ಂಟ್ ನಿಯಮಿತದ ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಕಾರ್ಯಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ 10 ಕೆಜಿ ಉಚಿತ ಅಕ್ಕಿಯಿಂದ ಬಡವರಿಗೆ, ಹಿಂದುಳಿದವರ ಜೀವನ ನೀರ್ವಹಣೆಯೊಂದಿಗೆ ವಿವಿಧ ಗ್ಯಾರಂಟಿ ಯೋಜನೆಯ ಹಣದಿಂದ ನೆಮ್ಮದಿಯ ಬದುಕು ಕಂಡುಕೊಂಡು ಸಂತೋಷದ ಜೀವನ ನಡೆಸುತ್ತಿರುವುದು ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು. ನಮ್ಮ ಸರ್ಕಾರದ ಜಾರಿಗೆ ತಂದಿರುವ ಯೋಜನೆಗಳಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ. ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಜಾರಿಗೊಂಡಿರುವ ಶಕ್ತಿ ಯೋಜನೆಯು ರಾಜ್ಯದ ಹಲವಾರು ಕುಟುಂಬಗಳಿಗೆ ಆರ್ಥಿಕ ನೆಮ್ಮದಿ ನೀಡಿದ್ದು, ಇದರಿಂದ ಮಹಿಳೆಯರಿಗೆ ದೈನಂದಿನ ವರದಾನವಾಗಿ ಪರಿಣಮಿಸಿದೆ ಎಂದು ಹೇಳಿದರು.
ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ವಿದ್ಯುತ್ ಒದಗಿಸಿರುವುದರಿಂದ ಎಲ್ಲ ವರ್ಗದವರಿಗೆ ಅನುಕೂಲವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ ಮಹಿಳೆಗೆ ದೊರೆಯುತ್ತಿರುವ ಹಣದಿಂದ ಮನೆಗಳಲ್ಲಿ ಸಂತೋಷ ಮತ್ತು ಆರ್ಥಿಕ ಭದ್ರತೆ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು.ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕವಾಗಿ ಸದೃಢತೆ ಹೊಂದಲು ಎಲ್ಲರಿಗೂ ಸಹಕಾರಿಯಾಗಿದ್ದು, ಜನವರ ಜೀವನ ಮಟ್ಟ ಹಸನಾಗಲು ಮತ್ತು ಅವರನ್ನು ಮೇಲಕ್ಕೆತ್ತುವ ಕಾರ್ಯ ಮಾಡಿರುವ ನಮ್ಮ ಸರ್ಕಾರ ಇನ್ನೂ ಹತ್ತು ಹಲವಾರು ಯೋಜನೆಗೊಳಿಸಿ ಜನರ ಬದುಕಿಗೆ ಆಸರೆಯಾಗಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅನುμÁ್ಟನ ತಂದ ಪಂಚಾಗ್ಯಾರಂಟಿ ಯೋಜನೆಗಳು 98 ಪ್ರತಿಶತ ಕಾರ್ಯರೂಪಕ್ಕೆ ಬಂದಿದ್ದು ಈ ಮನೆ ಮನೆಗಳಲ್ಲಿ ಹಾಗೂ ಪ್ರತಿಯೊಬ್ಬರಿಗೂ ಈ ಯೋಜನೆಗಳ ಮಾಹಿತಿ ತಲುಪುವಂತಾಗಬೇಕು ಎಂದು ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ ರೇವಣ್ಣ ಹೇಳಿದರು.
ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಯಶಸ್ವಿಯಾಗಿ ಇಲ್ಲಿಯವರೆಗೆ ಶೇ.98 ಅನುಷ್ಟಾನÀಗೊಂಡಿವೆÉ. ಇವೆಲ್ಲ ಅಭಿವೃದ್ಧಿಯ ಸಂಕೇತವಾಗಿವೆ. ಜನÀರ ಬದುಕನ್ನು ಹಸನಗೊಳಿಸಲು ನಮ್ಮ ಉದ್ದೇಶವಾಗಿದೆ. ನಾವು ಎಂದೆಂದೂ ರೈತರು, ಯುವಕರು ಹಾಗೂ ಮಹಿಳೆಯರ ಪರವಾಗಿದ್ದೇವೆ ಇದರಿಂದ ಅಭಿವೃದ್ಧಿ ಪರ್ವ ಕಂಡಿದೆ. ಪಂಚ ಗ್ಯಾರಂಟಿಗಳಿಂದ ಉಳಿತಾಯವಾಗುತ್ತಿರುವ ಹಣ ವಿವಿಧ ಬಗೆಯ ವಸ್ತುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ತೆರಿಗೆ ಕೂಡ ವೃದ್ಧಿಯಾಗಿ ಅದಾಯವೂ ಹೆಚ್ಚಾಗಿದೆ. ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರಗಳನ್ನು ಏರ್ಪಡಿಲಾಗುವುದು. ಮನೆ ಮನೆ ಗ್ಯಾರಂಟಿ ಮನೆ ಮುಂದೆ ರಂಗೋಲಿ ಎನ್ನುವ ಅಭಿಯಾನವನ್ನು ಏರ್ಪಡಿಸಿ ಉತ್ತಮ ರಂಗೋಲಿ ಬಿಡಿಸುವವರಿಗೆ ಬಹುಮಾನ ವಿತರಿಸಲು ಕ್ರಮ ವಹಿಸುವುದಾಗಿ ತಿಳಿಸಿದ ಅವರು, ಪ್ರತಿಯೊಬ್ಬರಿಗೂ ಈ ಯೋಜನೆÀಗಳ ಮಾಹಿತಿ ಒದಗಿಸಬೇಕು ಎಂದು ಅವರು ಹೇಳಿದರು.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಪುμÁ್ಪ ಅಮರನಾಥ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಭರವಸೆಯ ಬದಕನ್ನು ಕಟ್ಟಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ಈ ಯೋಜನೆಗಳು ಮಹಿಳೆಯರಿಗಾಗಿ ಸ್ವಾವಲಂಬನೆಯ ಭಾಗವಾಗಿವೆ. ಮಹಿಳೆಯರು ಅಭಿವೃದ್ಧಿ ಹೊಂದಿದಲ್ಲಿ ದೇಶದ ಅಭಿವೃದ್ಧಿಯಾಗಬಲ್ಲದು. ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕು ಸರ್ವರಿಗೂ ಸಮಬಾಳು ಸಮಪಾಲು ಎಂಬ ಮನೋಭಾವ ಹೊಂದಿರಬೇಕು ಈ ಯೋಜನೆಗಳು ನಮಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿವೆ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷರಾದ ಎಸ್.ಆರ್ ಪಾಟೀಲ (ಬ್ಯಾಡಗಿ) ಮಾತನಾಡಿ, ಈ ವಿಭಾಗ ಮಟ್ಟದಲ್ಲಿ ಈಗಾಗಲೇ 7 ಜಿಲ್ಲೆಗಳಲ್ಲಿಯೂ ಅತ್ಯಂತ ಯಶಸ್ವಿಯಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಗ್ಯಾರಂಟಿ ಯೋಜನೆಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಎಲ್ಲ ವರ್ಗದವರಿಗೂ ತುಂಬಾ ಸಹಕಾರಿಯಾಗಿವೆ.
ಮಹಿಳೆಯರು ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಧಿಸಿ ತೋರಿಸುವ ಶಕ್ತಿ ಮಹಿಳೆಯರಲ್ಲಿದೆ. ಇದಕ್ಕೆ ಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ಧ್ವನಿ ಮಹಿಳಾ ಸಂಘವು ಇದಕ್ಕೊಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮವೂ ಇಂದು ಯಶಸ್ವಿಯಾಗಿ ಜರುಗಿದ್ದು ಶ್ರಮ ವಹಿಸಿದ ಎಲ್ಲರೂಗೂ ಧನ್ಯವಾದ ತಿಳಿಸಿದರು.
ಫಲಾನುಭವಿಗಳಾದ ಶ್ರೀಮತಿ ಪರ್ನಾಜ ಮುತುವಲ್ಲಿ, ಸರುಬಾಯಿ ಹಿರೇಮಠ, ಭುವನೇಶ್ವರಿ ಹಾಗೂ ಶ್ರೀಮತಿ ಶೃತಿ ಝಂಡೆ ಇವರುಗಳು ಈ ಯೋಜನೆಗಳ ಅನುಕೂಲ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ನುಡಿ ನುಡಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಇಲಿಯಾಸ್ ಬೋರಾಮಣಿ ಅವರು, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಜನತೆಗೆ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಲು ಅನುಕೂಲ ಒದಗಿಸಿವೆ ಎಂದು ಹೇಳಿದರು.
ಕರ್ನಾಟಕ ಜಾಗೃತಿ ಸಂಚಾಲಕರಾದ ಡಾ. ವಾಸು ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಮಧ್ಯÀ್ಯವರ್ತಿಗಳಿಲ್ಲದೆ ನೇರವಾಗಿ ಅವರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗುತ್ತಿದೆ.ಶಕ್ತಿ ಯೋಜನೆಯಿಂದ ಸುಮಾರು 49 ರಷ್ಟು ಮಹಿಳೆಯರು ಉದ್ಯೋಗಕ್ಕಾಗಿ ಸಾರಿಗೆ ಬಸ್ಸನ್ನು ಅವಲಂಬಿಸಿದ್ದಾರೆ ಇದರಿಂದ ಅವರ ಆರ್ಥಿಕ ಮಟ್ಟವು ಕೂಡ ಉತ್ತಮವಾಗಿದೆ. ಶೇ 90 ರಷ್ಟು ಜಮೆ ಆದ ತಿಂಗಳಲ್ಲಿ ಖರ್ಚು ಮಾಡಿ ಆ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಕ್ಕಾಗಿ ಹೆಚ್ಚು ಉಪಯೋಗಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಸ್ವಾಗತಿಸಿದರು. ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ನಿರೂಪಿಸಿದರು. ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ವಂದಿಸಿದರು. ಗಾಯನ ಕಾರ್ಯಕ್ರಮವನ್ನು ವಿರೇಶ ವಾಲಿ ಹಾಗೂ ತಂಡ ನಡೆಸಿಕೊಟ್ಟಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ,ಕರ್ನಾಟಕ ರಾಜ್ಯಲಿಂಬೆ ಅಭಿವೃದ್ಧಿ ಮಂಡಳಿ ಆಧ್ಯಕ್ಷರಾದ ಬಿ.ಎಸ್.ಕವಲಗಿ,ಶಾಸಕರಾದ ಅಶೋಕ ಮನಗೂಳಿ,ಸುನೀಲಗೌಡ ಪಾಟೀಲ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷರಾದ ಶಬ್ಬೀರ ಅಹ್ಮದ ಜಾಗೀರದಾರ, ಜಿಲ್ಲಾಧಿಕಾರಿ ಡಾ.ಆನಂದ.ಕೆ,ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
