Tuesday, July 30, 2024

'ನಮ್ಮೂರು ನಮ್ಮ ಶಾಲೆ' ಚಿತ್ರಕಲಾ ಸ್ಪರ್ಧೆ



ವಿಜಯಪುರ : ವಿಜಯಪುರದ ಡ್ರೀಮ್ಸ್ ಕಮ್ಸ್ ಟ್ರು ವತಿಯಿಂದ ವಿಜಯಪುರದ ಗಾಂಧೀವೃತ್ತದ ಬಳಿ ಇರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಂ.೬ ರಲ್ಲಿ `ನಮ್ಮೂರು ನಮ್ಮ ಶಾಲೆ' ಎಂಬ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಮಕ್ಕಳು ಉತ್ಸಾಹದಿಂದ ವಿಜಯಪುರದ ಐತಿಹಾಸಿಕ ಸ್ಮಾರಕಗಳ ಹಾಗೂ ತಮ್ಮ ಶಾಲೆಯ ಮಹತ್ವವನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ರೂವಾರಿ ಹಾಗೂ ಡ್ರೀಮ್ಸ್ ಕಮ್ಸ್ ಟ್ರು ಸಂಸ್ಥೆಯ ಅಧ್ಯಕ್ಷ ಸರ್ಫರಾಜ್ ಮಿರ್ದೇ ಮಾತನಾಡಿ, ಮಕ್ಕಳು ಪ್ರತಿಭೆಯ ಆಗರ, ಪ್ರತಿಯೊಬ್ಬ ಮಗುವಿನಲ್ಲಿಯೂ ಪ್ರತಿಭೆ ಅಡಕವಾಗಿದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದಕ್ಕಾಗಿ ಡ್ರೀಮ್ ಕಮ್ಸ್ ಟ್ರು ಅನೇಕ ಸಾಮಾಜಿಕ ಕಾರ್ಯಕ್ರಮ, ಸ್ಪರ್ಧಾ ಚಟುವಟಿಕೆಗಳನ್ನು ಆಯೋಜಿಸುತ್ತಿದೆ, ನಾವು ಇರುವ ಸ್ಥಳದ ಬಗ್ಗೆ, ನಾವು ಕಲಿಯುತ್ತಿರುವ ಶಾಲೆಯ ಬಗ್ಗೆ ಮಕ್ಕಳು ಸಮಗ್ರ ಜ್ಞಾನ ಹೊಂದಬೇಕಾಗಿರುವುದು ಅಗತ್ಯವಾಗಿದೆ, ಹೀಗಾಗಿ ಚಿತ್ರಕಲೆಯ ಮೂಲಕ ಅವರಲ್ಲಿ ಈ ಜ್ಞಾನ ಬಿತ್ತುವುದಕ್ಕಾಗಿ ಈ ವಿಶಿಷ್ಠ ಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ, ಮುಂಬರುವ ದಿನಗಳಲ್ಲಿಯೂ ನಮ್ಮ ಶ್ರೇಷ್ಠ ಸಂವಿಧಾನದ ಮಹತ್ವ ಸಾರುವ ಚರ್ಚಾಗೋಷ್ಠಿ, ಯುವಕರಲ್ಲಿ ಕ್ರೀಡಾ ಜಾಗೃತಿಗಾಗಿ ಪಂದ್ಯಾವಳಿಗಳ ಆಯೋಜನೆಗೆ ಸಂಸ್ಥೆ ಕಾರ್ಯಯೋಜನೆ ರೂಪಿಸಿದೆ, ಜನರ ಸೇವೆ ನಮ್ಮ ಸಂಸ್ಥೆಯ ಗುರಿ, ವಿದ್ಯಾರ್ಥಿಗಳ ಪ್ರಗತಿ ನಮ್ಮ ಧ್ಯೇಯ, ಯುವಕರ ಸಬಲೀಕರಣ ನಮ್ಮ ಸಂಸ್ಥೆಯ ಉಸಿರಾಗಿದೆ ಎಂದರು.

ಡ್ರೀಮ್ಸ್ ಕಮ್ಸ್ ಟ್ರು ಉಪಾಧ್ಯಕ್ಷ ವಸೀಮ್ ಜಂಬಗಿ, ಕಾರ್ಯದರ್ಶಿ ಝಿಯಾ ಪಠಾಣ, ಬಿಆರ್‌ಪಿ ಮುನೀರ್ ಗುರಡ್ಡಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಪಾಲ್ಗೊಂಡಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.