Monday, August 5, 2024

ಅಗಲಿದ ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಅವರಿಗೆ ಸಕಲ ಸರಕಾರಿ ಗೌರವ ಸಲ್ಲಿಸಲು ಒತ್ತಾಯ

 

ವಿಜಯಪುರ ಜಿಲ್ಲೆಯ ಹಿರಿಯ ಹೋರಾಟಗಾರ, ಕಮ್ಯುನಿಷ್ಟ ಮುಖಂಡ ಭೀಮಶಿ ಕಲಾದಗಿ (87) ಸೋಮವಾರ ರಾತ್ರಿ 9.40 ಗಂಟೆಗೆ ವಿಧಿವಶರಾಗಿದ್ದಾರೆ.

ತಮ್ಮ ಜನಪರ ಹೋರಾಟಗಳಿಂದ ನಾಡಿನಾದ್ಯಂತ ಹೆಸರಾಗಿದ್ದ ಭೀಮಶಿ ಕಲಾದಗಿಯವರು ಬರಗಾಲ ಭೀಮಶಿ ಎಂದೇ ಪ್ರಸಿದ್ಧ ಪಡೆದಿದ್ದರು. ಜಿಲ್ಲೆಯಲ್ಲಿ ಮುಳವಾಡ ಏತನೀರಾವರಿ ಸೇರಿದಂತೆ  ಸಮಗ್ರ ನೀರಾವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ ಅಲ್ಲದೆ ಅನ್ಯಾಯ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಜೀವನವಿಡಿ ಹೋರಾಟ ಮಾಡಿದ್ದರು.ಅವರ ಅಗಲಿಕೆಯಿಂದ ಹಿರಿಯ ಹೋರಾಟದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ‌‌‌. 

ತಮ್ಮ ನೇರ ನಡೆ- ನುಡಿಯ ಹೋರಾಟದಿಂದ ಆಳುವ ವರ್ಗ ಹಾಗೂ ಸರ್ಕಾರಗಳನ್ನು ಬಡಿದೆಬ್ಬಿಸುತ್ತಿದ್ದರು‌‌ ಹಿರಿಯ ಚೇತನ ಕಲಾದಗಿ ಅವರು ಹಾಕಿದ ಹೋರಾಟದ ಮಾರ್ಗ ಜಿಲ್ಲೆಯಲ್ಲಿ ಹೋರಾಟವನ್ನು ಮುನ್ನಡೆಸಲಿದೆ.              ಜಿಲ್ಲೆಯಲ್ಲಿ ಜನಪರ ಹೋರಾಟ ಮುನ್ನಡೆಸಿದ ನಾಯಕನಿಗೆ ಆಳುವ ಸರಕಾರಗಳು ಜೀವಿತ ಅವಧಿಯಲ್ಲಿ ಗುರುತಿಸಲಿಲ್ಲ ಅವರ ಹೋರಾಟಗಳು ಜನಪರ ಆಗಿದ್ದು ಬಹುಷಃ ಮುಳುವಾಯಿತೇನೋ?  ಯಾರ್ಯಾರನ್ನೋ ಸನ್ಮಾನಿಸಿ ಗೌರವಿಸುವ ಸರಕಾರ ಕಲಾದಗಿ ಅವರನ್ನು ಯಾಕೆ ಗುರುತಿಸಲಿಲ್ಲ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆಯಾಗಿದೆ .ಸರಕಾರ ಕೊಡುವ ಮಾನ ಸಮ್ಮಾನಗಳಿಗೆ ಜೋತು ಬೀಳದ ನೇರ ನಿಷ್ಟುರ ಧೃಡ ವ್ಯಕ್ತಿತ್ವ ಕಲಾದಗಿ ಅವರದಾಗಿತ್ತು. ಕೊನೆ ಪಕ್ಷ ರಾಜ್ಯ ಸರಕಾರ ಸರಕಾರಿ ಸಕಲ ಗೌರವದೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಿ ಜನಪರ ಹೋರಾಟಗಾರನಿಗೆ ನೈಜ ಗೌರವ ಸಲ್ಲಿಸಬೇಕು ಎಂಬುದು ರಾಜ್ಯದ ಪ್ರತಿಯೊಬ್ಬ ಅವರ ಅಭಿಮಾನಿಯ ಒತ್ತಾಯವಾಗಿದೆ . ಕೂಡಲೇ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಉಸ್ತುವಾರಿ ತೆಗೆದುಕೊಂಡು ರಾಜ್ಯದ ಮೂಲೆ ಮೂಲೆಯಿಂದ ಬರುವ ವಿವಿಧ ಸಂಘಟನೆಗಳ ಮುಖಂಡರು, ರೈತರು, ಕಾರ್ಮಿಕರು ಹಾಗೂ ಪ್ರತಿಯೊಬ್ಬ ಅವರ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಜನಪರ ಹೋರಾಟಗಾರನಿಗೆ ಗೌರವದಿಂದ ಕಳಿಸಿಕೊಡಬೇಕೆಂದು ಕಾಂ. ಭೀಮಶಿ ಕಲಾದಗಿ ಅವರ ಅಭಿಮಾನಿಗಳು ವಿನಂತಿಸಿಕೊಂಡಿದ್ದಾರೆ.



ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ವಿಧಿವಶ

 


ವಿಜಯಪುರ: ಜಿಲ್ಲೆಯ ಹಿರಿಯ ಹೋರಾಟಗಾರ, ಕಮ್ಯುನಿಷ್ಟ ಮುಖಂಡ ಭೀಮಶಿ ಕಲಾದಗಿ (87) ಸೋಮವಾರ ರಾತ್ರಿ 9.40 ಗಂಟೆಗೆ ವಿಧಿವಶರಾಗಿದ್ದಾರೆ.

ತಮ್ಮ ಜನಪರ ಹೋರಾಟಗಳಿಂದ ನಾಡಿನಾದ್ಯಂತ ಹೆಸರಾಗಿದ್ದ ಭೀಮಶಿ ಕಲಾದಗಿಯವರು ಬರಗಾಲ ಭೀಮಶಿಯೆಂದೆ ಪ್ರಸಿದ್ಧ ಪಡೆದಿದ್ದರು. ಜಿಲ್ಲೆಯ ಮುಳವಾಡ ಏತನೀರಾವರಿ ಸೇರಿದಂತೆ ಜಿಲ್ಲೆಯ ಸಮಗ್ರ ನೀರಾವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ ಅಲ್ಲದೆ ಅನ್ಯಾಯ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಜೀವನವಿಡಿ ಹೋರಾಟ ಮಾಡಿದವರು. ಅವರ ಅಗಲಿಕೆಯಿಂದ ಹಿರಿಯ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ‌‌‌. 

ತಮ್ಮ ನೇರ ನಡೆ- ನುಡಿ, ಹೋರಾಟದಿಂದ ಆಳುವ ವರ್ಗ ಹಾಗೂ ಸರ್ಕಾರಗಳನ್ನು ಬಡಿದೆಬ್ಬಿಸುತ್ತಿದ್ದರು‌‌. ಇಂತಹ ಹಿರಿಯ ಹೋರಾಟ ಚೇತನ ಇಹಲೋಕ ತ್ಯಜಿಸಿದಕ್ಕೆ ಜಿಲ್ಲೆಯ ಜನಪ್ರತಿನಿಧಿ, ಮುಖಂಡರು ಹಾಗೂ ಅವರ ಅಭಿಮಾನಿ ವರ್ಗ ಕಂಬನಿ ಮಿಡಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

06-08-2024 EE DIVASA KANNADA DAILY NEWS PAPER

ವಿಜಯಪುರ-ತಾಲೂಕಾ ಶಿಕ್ಷಕರ ಸಂಘದ ತಾಲೂಕಾ ಘಟಕದಿಂದ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ


ವಿಜಯಪುರ : ಶಿಕ್ಷಕರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಗ್ರಾಮೀಣ ಹಾಗೂ ತಿಕೋಟಾ ತಾಲೂಕಾ ಘಟಕದಿಂದ ಇಂದು ವಿಜಯಪುರ ಹಾಗೂ ತಿಕೋಟಾ ತಹಶೀಲ್ದಾರ ಅವರಿಗೆ ಸಲ್ಲಿಸಲಾಯಿತು. 

ಶಿಕ್ಷಕರ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಅನ್ಯಾಯ ಸರಿಪಡಿಸುವ ಕುರಿತಂತೆ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳ ತಹಶೀಲ್ದಾರಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಮನವಿಯಲ್ಲಿ 2017ರವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೆಕು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮಿಕರಿಸಬೇಕು. 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ ಮೂಲತ: 1-7/8ಕ್ಕೆ ನೇಮಕ ಹೊಂದಿದವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯುವAತೆ ಒತ್ತಾಯಿಸಲಾಗಿದೆ. 

 ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ 1 ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ಅರ್ಹ ವಿದ್ಯಾರ್ಹತೆ (ಪದವಿ+ಶಿಕ್ಷಣ ತರಬೇತಿ) ಹೊಂದಿದ 2016ಕ್ಕಿಂತ ಪೂರ್ವದಲ್ಲಿ ನೇಮಕಾತಿ ಆಗಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಠತೆಯ ರಕ್ಷಣೆಯೊಂದಿಗೆ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಶೀಲ್ದಾರ ಅವರ ಮೂಲ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ. 

ಅರ್ಜುನ ಲಮಾಣಿ, ಹಣಮಂತ ಕೊಣದಿ, ಸಿ.ಟಿ.ಜತ್ತಿ, ಅಶೋಕ ಚನ್ನಬಸಪ್ಪಗೋಳ, ಎಂ.ಎಸ್.ಟಕ್ಕಳಕಿ, ಅಶೋಕ ಬೂದಿಹಾಳ, ಡಿ.ಎಸ್.ಮಠ, ಅಶೋಕ ಧಡಕೆ, ಝಡ್.ಆಯ್.ಇಂಡಿಕರ, ಅಶೋಕ ಭಜಂತ್ರಿ ಸಾಬು ಗಗನಮಲಿ, ವೀರಭದ್ರಪ್ಪ ಬಸು ಬೇನೂರ, ವಿಜಯಕುಮಾರ ದೇಸಾಯಿ, ಪ್ರವೀಣ ಪತ್ತಾರ, ಪ್ರಕಾಶ ಕೂಲಂಗಿ, ಕೊರಬು, ರಾಜು ಉಮರಾಣಿ, ಎಂ.ಎನ್.ನಾಯ್ಕ, ಆರ್.ಎಸ್.ಮಸಳಿ, ಸೋಮನಾಥ ಬಾಗಲಕೋಟ, ಪಪ್ಪು ಗಚ್ಚಿನಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

05-08-2024 EE DIVASA KANNADA DAILY NEWS PAPER