ವಿಜಯಪುರ: ಜಿಲ್ಲೆಯ ಹಿರಿಯ ಹೋರಾಟಗಾರ, ಕಮ್ಯುನಿಷ್ಟ ಮುಖಂಡ ಭೀಮಶಿ ಕಲಾದಗಿ (87) ಸೋಮವಾರ ರಾತ್ರಿ 9.40 ಗಂಟೆಗೆ ವಿಧಿವಶರಾಗಿದ್ದಾರೆ.
ತಮ್ಮ ಜನಪರ ಹೋರಾಟಗಳಿಂದ ನಾಡಿನಾದ್ಯಂತ ಹೆಸರಾಗಿದ್ದ ಭೀಮಶಿ ಕಲಾದಗಿಯವರು ಬರಗಾಲ ಭೀಮಶಿಯೆಂದೆ ಪ್ರಸಿದ್ಧ ಪಡೆದಿದ್ದರು. ಜಿಲ್ಲೆಯ ಮುಳವಾಡ ಏತನೀರಾವರಿ ಸೇರಿದಂತೆ ಜಿಲ್ಲೆಯ ಸಮಗ್ರ ನೀರಾವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ ಅಲ್ಲದೆ ಅನ್ಯಾಯ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಜೀವನವಿಡಿ ಹೋರಾಟ ಮಾಡಿದವರು. ಅವರ ಅಗಲಿಕೆಯಿಂದ ಹಿರಿಯ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ.
ತಮ್ಮ ನೇರ ನಡೆ- ನುಡಿ, ಹೋರಾಟದಿಂದ ಆಳುವ ವರ್ಗ ಹಾಗೂ ಸರ್ಕಾರಗಳನ್ನು ಬಡಿದೆಬ್ಬಿಸುತ್ತಿದ್ದರು. ಇಂತಹ ಹಿರಿಯ ಹೋರಾಟ ಚೇತನ ಇಹಲೋಕ ತ್ಯಜಿಸಿದಕ್ಕೆ ಜಿಲ್ಲೆಯ ಜನಪ್ರತಿನಿಧಿ, ಮುಖಂಡರು ಹಾಗೂ ಅವರ ಅಭಿಮಾನಿ ವರ್ಗ ಕಂಬನಿ ಮಿಡಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment