ವಿಜಯಪುರ : ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣದಲ್ಲಿ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ ಹೆಸರು ಕೈಬಿಟ್ಟು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಸಣ್ಣತನ ತೋರಿದ್ದಾರೆ ಎಂದು ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪಟ್ಟಣದಲ್ಲಿ ಕರೆದ ಸಾಹಿತಿಗಳ ಸಭೆಯಲ್ಲಿ ವಾಲಿಕಾರ ನಡೆಯನ್ನು ಖಂಡಿಸಿದ್ದಾರೆ. ರಾಜ್ಯವೇ ತಿರುಗಿ ನೋಡುವಂತೆ ತಾಲೂಕಾ 5 ನೇ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ ಕಾಮರಾಜ ಬಿರಾದಾರ ಅವರ ಹೆಸರನ್ನು ಕೈಬಿಡುವ ಮೂಲಕ ಜಿಲ್ಲಾಧ್ಯಕ್ಷ ಸ್ವಜನ ಪಕ್ಷಪಾತ ಮೆರೆದಿದ್ದಾರೆ. ಜಿಲ್ಲಾ ಸಮ್ಮೇಳನದಲ್ಲಿ ತಾಲೂಕಿನ ಸಾಹಿತಿಗಳು ಮತ್ತು ಸಂಘಟಕರ ಹೆಸರುಗಳನ್ನು ಪರಿಗಣಿಸುವಲ್ಲೂ ತಾಲೂಕಾ ಅಧ್ಯಕ್ಷರ ಶಿಪಾರಸ್ಸುಗಳನ್ನು ಪಡೆಯದೇ ತಮ್ಮ ಇಷ್ಟದಂತೆ ವರ್ತಿಸಿ ತಾಲೂಕಿನ ಸಾಹಿತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಅಶೋಕಮಣಿ, ಅಬ್ದುಲ್ ರೆಹಮಾನ ನಾಯ್ಕೋಡಿ, ಐ.ಬಿ.ಹಿರೇಮಠ, ರುದ್ರೇಶ ಕಿತ್ತೂರ, ಎಂ.ಬಿ.ಗುಡಗುAಟಿ, ಸಿದ್ದನಗೌಡ ಬಿಜ್ಜೂರ, ಹುಸೇನಮುಲ್ಲಾ ಕಾಳಗಿ, ಸಂಗಮೇಶ ಶಿವಣಗಿ, ಬಸವರಾಜ ನಾಲತವಾಡ, ವೈ.ಎಚ್.ವಿಜಯಕರ, ಜಹಾಂಗೀರ ಮುಲ್ಲಾ, ಸಿದ್ದಣ್ಣ ಹಡಲಗೇರಿ, ಶಿವಪುತ್ರ ಅಜಮನಿ ಮುಂತಾದವರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
