Thursday, July 27, 2023
ನಾಳೆ ( ಜು.28) ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ; ಜಿಲ್ಲಾಧಿಕಾರಿ ಟಿ.ಭೂಬಾಲನ ಆದೇಶ
ಈ ದಿವಸ ವಾರ್ತೆ
ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು,ಸರ್ಕಾರಿ ಹಾಗೂ ಖಾಸಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ಶುಕ್ರವಾರ (ಜುಲೈ-28) ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.
ಎಂದಿನಂತೆ ತರಗತಿ ನಡೆಯಲಿವೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸಕಲಾ ಕಲಾ ವಲ್ಲಭ ಪ್ರಕಾಶ ಕುಂಬಾರ ಸಾವು
ಈ ದಿವಸ ವಾರ್ತೆ
ವಿಜಯಪುರ: ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಜಿಲ್ಲೆಯ ಕನ್ನಡಪರ ಹೋರಾಟಗಾರ ಪ್ರಕಾಶ ಕುಂಬಾರ ದಾರುಣ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ನಾಗಠಾಣ ಬಳಿ ಗುರುವಾರ ನಡೆದಿದೆ.
ಇಲ್ಲಿನ ಸೊಲ್ಲಾಪುರ ರಸ್ತೆಯ ಶಾಂತಿ ನಗರದ ನಿವಾಸಿ ಪ್ರಕಾಶ ಕುಂಬಾರ (56) ಮೃತಪಟ್ಟ ದುರ್ದೈವಿ.
ಪ್ರಕಾಶ ಕುಂಬಾರ ಈತ ಕನ್ನಡಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಜಿಲ್ಲೆ ಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ್ದರು. ನಗರ ಹೃದಯ ಭಾಗವಾದ ಗಾಂಧಿ ವೃತ್ತದಲ್ಲಿರುವ ಶತಮಾನ ಕಂಡ ಐತಿಹಾಸಿಕ ಕನ್ನಡ ಬಾಲಕಿಯರ ಶಾಲೆ ನಂ. 1 ರ ಉಳುವಿಕೆಗಾಗಿ, ತಮ್ಮ ಹೋರಾಟದ ಮೂಲಕ ಶ್ರಮಿಸಿದ್ದರು. ಅದರಂತೆ ವಿಜಯಪುರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ, ಪ್ರಕಾಶ ಕುಂಬಾರ ಅವರು ಕದಂಬ ಕಿಡಿ ಪತ್ರಿಕೆಯ ಸಂಪಾದಕರಾಗಿದ್ದರು.
ಅದರಂತೆ ಪ್ರಗತಿ ಪರ ಚಿಂತಕರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ- ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹೋರಾಟಗಾರ ಪ್ರಕಾಶ ಕುಂಬಾರ ಅಗಲಿಕೆಗೆ ಶಿವಶರಣ ಗ್ರಾಫಿಕ್ಸ್ & ಸುಶಾಂತ ಪ್ರಿಂಟರ್ಸ್ ವಿಜಯಪುರ ಹಾಗೂ ವಿವಿಧ ಸಂಘಟನೆ ಮುಖಂಡರು, ಗಣ್ಯರು, ಗೆಳೆಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.