Friday, March 7, 2025

ಆಧುನಿಕ ಭಾರತದಲ್ಲಿ ಮಹಿಳೆ

 ಮನೆ ಮನೆಯಲಿ ದೀಪ ಮುಡಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ?

ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ 

ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ..

ಕನ್ನಡದಖ್ಯಾತ ಸಾಹಿತಿಡಾ ಶಿವರುದ್ರಪ್ಪನವರ ಈ ಸಾಲು ಸಾರ್ಥಕನೆನ್ನಿಸುತ್ತದೆ. ಹೌದು ಸ್ತ್ರೀ ಕನಸು ಹೌದು, ವಾಸ್ತವವೂ ಹೌದು. ಸ್ತ್ರೀಗೂ ಪ್ರಕೃತಿಗೂ ಅವಿನಾಬವ ಸಂಬಂಧವಿದೆ. ಈಕೆ ಭೂಮಿಯಾಗಿ ಮಿಗಿಲಾಗಿ ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹೀಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ.

ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದಏಕಾಂಗಿಯಾಗಿ ನಡೆದಾಗ ಮಾತ್ರ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಾತು ಮಹಾತ್ಮಾಗಾಂಧೀಜಿಯವರ ಹೇಳಿಕೆ ಪ್ರಸ್ತುತವೆನ್ನಿಸುತ್ತದೆ.ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿನ ಕಾಲಕ್ಕಿಂತಲೂ ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ. ಕೇವಲ ಭೋಗದ ವಸ್ತುವಾಗಿದ್ದ ಈ ಸ್ತ್ರೀ  ಕ್ರಮೇಣಅಡುಗೆ ಮನೆಗೇ ಮೀಸಲಾಗಿ ತನ್ನ ಸರ್ವಸ್ವವನ್ನೇಲ್ಲ ನಾಲ್ಕು ಗೋಡೆಗಳ ಮಧ್ಯೆಯೇ  ಜೀವಿಸುತ್ತಿದ್ದವಳು ಇಂದುಆಕಾಶದಲ್ಲಿ ಹಾರಾಡುತ್ತಿದ್ದಾಳೆ, ಗಡಿಯಲ್ಲಿ ಶತೃಗಳ ಜೊತೆ ಹೋರಾಡುತ್ತಾ ಯಾವ ಪುರುಷನಿಗೂ ಕಡಿಮೆಯಿಲ್ಲದಂತೆಜೀವನ ಸಾಗಿಸುತ್ತಿದ್ದಾಳೆ ಈ ಸ್ತ್ರೀ.


ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ.ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಸ್ರ್ತೀಗೆ ಅವಳದೇ ಆದಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹು ದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ, ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿಎರಡು ಮಾತಿಲ್ಲ. ಮಹಿಳೆಯರ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯರು ಹಿಂದಿನಿಂದಲೂ ಅಬಲೆಯಂದೇ ಕಡೆಗಣಿಸಲಾಗುತ್ತಿತ್ತು.

ಒಂದುಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆಎಂದಾದರೆಖಂಡಿತವಾಗಿ ಅವಳಲ್ಲಿ ಅಗಾದವಾದ ಶಕ್ತಿ ಇದೆಎಂದರ್ಥ. ಮಾತೃಶಕ್ತಿ ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸಾಂತ್ವಾನ ಗುಣಗಳು ಆಕೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ. ನಮ್ಮದೇಶದಲ್ಲಿ ಕೌಟುಂಬಿಕ ಪದ್ದತಿ, ಸಂಸ್ಕøತಿ, ಸಂಸ್ಕಾರಗಳು ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು ಕಟ್ಟುಪಾಡುಗಳು ಹಾಕಲಾಗುತ್ತದೆ. ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡಬೇಕಾಗುತ್ತದೆ. ಒಂದುಗ್ರಾಮೀಣ ಮಹಿಳೆ ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ  ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತುಅನುಭವಿಸಲು ಇಚ್ಛಿಸುವ ಮನೋಭಾವದಲ್ಲಿಇಬ್ಬರಿಗೂ ವ್ಯತ್ಯಾಸವಿದೆ.

ಮಹಿಳೆ ಇಂದು ಇಷ್ಟು ಯಶಸ್ವಿಯಾಗಲು ಮುಖ್ಯಕಾರಣ ಶಿಕ್ಷಣ.ಇಂದಿನ ಶಿಕ್ಷಣದಲ್ಲಿ ಮಹಿಳೆ ಕುರಿತುತನ್ನ ಸ್ವಂತ ಬಲದಿಂದ ಬದುಕು ವಂತವಳಾಗಿದ್ದಾಳೆ. ಭಾರತೀಯ ರಾಜಕಾರಣದಲ್ಲಿ  ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವಿ ರಾಜಕಾರಣಿಯಾಗಿಇವರು ಹತ್ತು ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ರಾಷ್ಟ್ರವನ್ನು  ಆಳಿದ್ದಾರೆ. ಸಂಸತ್ತಿನಲ್ಲಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದಿರಾ ಗಾಂಧಿ ಅವರಿಗಿದೆ. ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತುರಾಜಕೀಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಅವರು ನಿಕಟವಾಗಿರಾಜಕೀಯದ ಒಳಹೊಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆಕಾರಣ.

ಉತ್ತರಪ್ರದೇಶದ ಮುಖ್ಯಮಂತಿ ್ರಯಾಗಿ ಮಾಯಾವತಿ ಯಶಸ್ವಿ ರಾಜಕಾರಣಿ.ಆದರೆಇದಕ್ಕೆಅವರಜಾತಿಅಥವಾ ಮೀಸಲಾತಿ ಮಾತ್ರಕಾರಣವಲ್ಲ. ಅವರು ಪಡೆದಿರುವಉತ್ತಮಶಿಕ್ಷಣವೂ ಕಾರಣ.ಐ. ಎ.ಎಸ್‍ಅಧಿಕಾರಿಯಾಗಬೇಕೆಂದು ಬಯಸಿದ್ದ ಅವರುರಾಜಕೀಯಕ್ಕೆ ಇಳಿದದ್ದೇ ಕಾಕ ತಾಳೀಯ. ಸುಶಿಕ್ಷಿತ ಮಹಿಳಾ ರಾಜಕರಣ Âಗಳು ಮತ್ತು ಇತರ ರಾಜಕಾರಣಿ ಗಳು ಕಾರ್ಯವೈಖರಿಯನ್ನು ಗಮನಿಸಿದಾಗ ಮೀಸಲಾತಿ ಬರಿಯ ಸ್ಥಾನವನ್ನುಗಿಟ್ಟಿಸಲು ಮಾತ್ರ ಸಹಾಯಕವಾಗುತ್ತದೆ ಎಂಬ ಅಂಶ ವೈಧ್ಯವಾಗುತ್ತದೆ.

ಶಿಕ್ಷಣ ಅಂಥ ಬಂದಾಗ ಮೊದಲು ನೆನಪಿಗೆ ಬರುವುದುಮಹಾತ್ಮಾಜ್ಯೋತಿಬಾ ಪುಲೆ ಮತ್ತುತಾಯಿ ಸಾವಿತ್ರಿಬಾಯಿ ಪುಲೆ. ಇವರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು. 1948ರಲ್ಲಿ ಪತಿಜ್ಯೋತಿಬಾ ಪುಲೆಯವರೊಂದಿಗೆ ಸಾವಿತ್ರಿಬಾಯಿ ಪುಲೆ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು.ಸಾವಿತ್ರಿಬಾಯಿ ಪುಲೆ ಮೊತ್ತಮೊದಲ ಮಹಿಳಾ ಶಿಕ್ಷಕಿ. ವಿದ್ಯೆಕೊಟ್ಟ ಸರಸ್ವತಿ, ಮಹಿಳಾ ಶಿಕ್ಷಣದ ಬಗ್ಗೆ ಮೊತ್ತ ಮೊದಲಿಗೆರೂಢಿಗತ, ಸಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೊರೆದು ಶಿಕ್ಷಣ ನೀಡಿದಷ್ಟೇಅಲ್ಲ, ವಿಧವಾ ವಿವಾಹವನ್ನುಎತ್ತಿ ಹಿಡಿಯುತ್ತಾ, ಬಹುಪತ್ನಿತ್ವದ ಬಗ್ಗೆ ಖಂಡಿಸುತ್ತ, ಸಾಮಾಜಿಕ ಅನಿಷ್ಠಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವ ದಲ್ಲಿತಂದ ಧೀಮಂತ ವ್ಯಕ್ತಿತ್ವಜ್ಯೋತಿಬಾ ಪುಲೆ ದಂಪಂತಿಅವರದು. ಮಹಿಳೆಯರ ಕುರಿತು ಸ್ವಾಂತಂತ್ರ ಪೂರ್ವದಲ್ಲಿರೂಢಿಯಲ್ಲಿದ್ದ ಮನುಸ್ಮøತಿಯಲ್ಲಿ ಅನಿಷ್ಟ ಪದ್ದತಿ, ವೈಚಾರಿಕತೆಯಕುರಿತು ಮನು ಎಂಬುವನು ಹೀಗೆ ಹೇಳುತ್ತಾನೆ. ‘ಮಾತ್ರಾಸ್ಪಸ್ತ್ರಾ ಮಹಿತ್ರಾವಾದ ವಿವಕ್ತಸನೋ ಭಧೇತೆ’ ‘ಬಲವಾನಿಂದ್ರಿಯಗ್ರಾಮೊವಿ ದಾಂಸಮಡಿ ಕರ್ಷತಿ’ ಮನುವಿನ ದೃಷ್ಟಿಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಬೇಡವಾಗಿತ್ತು.  ಗುಲಾಮಳಾಗಿಯೇ ಇರಬೇಕು.ಅವಳು ಅಕ್ಷರ ಲೋಕ ಪ್ರವೇಶ ಮಾಡಿದರೆ ಅವಳು ತೃತೀಯಜಗತ್ತಿನಲ್ಲಿ ನಡೆಯುವ ಸಮಾಚಾರ ತಿಳಿದುಕೊಂಡು ಮುಂದುವರೆದರೆ ಸ್ವಂತ ವಿಚಾರ ಮಾಡುವುದನ್ನು ಕಲಿಯುತ್ತಾಳೆ. ಈ ಮಹಿಳಾ ಸಬಲೀಕರಣ ಮನುವಿಗೆ  ಬೇಡವಾಗಿತ್ತು. ಡಾ. ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ ಅವಳ ಉಜ್ವಲ ಭವಿಷ್ಯವನ್ನುಕುರಿತು ಸಂವಿಧಾನಿP Àವಾಗಿ ಚಿಂತಿಸಿದರು. ಅವರಚು ನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದೂಕೋಡ್ ಬಿಲ್‍ನ್ನು ಮಂಡಿಸುವುದರ ಮೂಲಕ ಸ್ವತಂತ್ರ ಭಾರತದ ನಾರಿಯ ಬಂಧನವನ್ನು  ಮುಕ್ತ ಮಾಡಲು ಪ್ರಯತ್ನಿಸಿದರು. ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ. ಬಿ. ಆರ್‍ಅಂಬೇಡ್ಕರಅವರಿಗೆ  ಬಲವಾದ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಹಕ್ಕಿನ ಕುರಿತುಗೌತಮ ಬುದ್ದರ, ಜ್ಯೋತಿಬಾ ಪುಲೆ ಮುಂತಾದ  ಮಹತ್ಮರು ಸಂದರ್ಭಾನುಸಾರವಾಗಿ ಅವರ ವಿಚಾರಗಳ ಕುರಿತುಮಾತನಾಡಿದರು. ಅದರಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು  ಅಧ್ಯಯನ ಮಾಡಿದಡಾ. ಬಿ. ಆರ್‍ಅಂಬೇಡ್ಕರವರು  ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳ ಕುರಿತು ಮಹತ್ವ ಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾಪರ ಚಿಂತನೆಗಳು ಪ್ರಸ್ತುತ ಸಂದರ್ಭದಲ್ಲಿಕ್ರಮೇಣ ಜಾರಿಗೆ ಬರುತ್ತಿರುವುದು  ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವಗೌರವೇಂದೇ  ತಿಳಿದಿಕೊಳ್ಳಬೇಕಾಗುತ್ತದೆ.

-ಯಶಸ್ವಿ ಮಹಿಳೆಯರು :

ಯಶಸ್ವಿ ಮಹಿಳೆಯರು ಅಂಥ ಬಂದಾಗಚಾರಿತ್ರಿಕಪುಟದಲ್ಲಿ ನೋಡಿದರೆ ಹಲವಾರು ಮಹಿಳೆಯರು ಯಶಸ್ಸು ಪಡೆದದ್ದು ತಿಳಿದು ಬರುತ್ತದೆ. ಕೆಳದಿ ಚನ್ನಮ್ಮ, ಕಿತ್ತೂರಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರನ್ನುಉದಾಹರಿಸಬಹುದು. ಇವರುಆಪತ್ಕಾಲದಲ್ಲಿಗದ್ದುಗೆ ಹಿಡಿದು ರಾಜ್ಯಾಡಳಿತ ಸೂತ್ರಗಳನ್ನು  ಅರಿತು ಯಶಸ್ವಿಯಾಗಿ ಆಡಳಿತ ನಡಿಸಿ ಹೆಸರು ವಾಸಿಯಾಗಿದ್ದಾರೆ.

ಆಧುನಿಕಯುಗದಲ್ಲಿ ನೋಡುವುದಾದರೆ ಇಂದಿನ ಸಮಾಜದಲ್ಲಿರಾಜಕೀಯದಲ್ಲಿ, ಶೈಕ್ಷÂಕದಲ್ಲಿ, ಆರ್ಥಿಕವಾಗಿ ಹೆಚ್ಚು ಸಬಲರಾಗಿದ್ದಾರೆ. ರಾಜಕೀಯದಲ್ಲಿಇಂದಿರಾಗಾಂಧಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಎಂಬ ದಾಖಲೆಯೊಂದಿಗೆ ಹೆಣ್ಣು ಸಿಂಹದಂತೆ ಘರ್ಜಿಸಿ ಕೆಲವುಕಾಲ ಮಹಾರಾಣಿಯಾಗಿ ಮೆರೆದರು. ಪ್ರತಿಭಾ ಪಾಟೀಲ್ ಪ್ರಥಮ ಮಹಿಳಾ ಅಧ್ಯಕ್ಷರಾದರು.ಉತ್ತರ ಭಾರತದ ಉಕ್ಕಿನ ಮಹಿಳೆ ಎಂದೇ ಹೆಸರುವಾಸಿಯಾದ ಮಾಯಾವತಿಯವರು 3 ಬಾರಿಮಹಿಳಾ ಮುಖ್ಯಮಂತ್ರಿಯಾಗಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದರು.

ರಾಜಸ್ತಾನದಲ್ಲಿ ವಸುಂಧರ ರಾಜೇಯವರು ದಶಕಗಳಿಗಿಂತಲೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರು. 4,500 ಉದ್ಯೋಗಸ್ಥರಿಗೆಆಶ್ರಯದಾತೆಯಾಗಿರುವ ಬಯೋಕಾನ್‍ನ ಒಡತಿಕಿರಣ ಮಜುಮ್ದಾರ್ ಶಾ ಕೇವಲ 10,000 ರೂಪಾಯಿಯೊಂದಿಗೆ ಏಕಾಂಗಿಯಾಗಿ ಸ್ಥಾಪಿಸಿದ ಸಂಸ್ಥೆ ಇಂದುಜೈವಿಕತಂತ್ರಜ್ಞಾನದಲ್ಲಿ ವಿಶ್ವದಲ್ಲೇ 7ನೇ ಸ್ಥಾನದಲ್ಲಿದೆ.ಇದರ ವಾರ್ಷಿಕಆಧಾಯ 2,405 ಕೋಟಿ.ಬಟ್ಟೆ ತೊಳೆದು, ಅಡುಗೆ ಮಾಡಿಕೊಂಡು, ಮಕ್ಕಳ ಆರೈಕೆ ಮಾಡು ವವರೂ ಕೂಡಆಕಾಶÀದಲ್ಲಿ ಹಾರಾಡಬ ಹುದು ಎಂದು ತೋರಿಸಿಕೊಟ್ಟ ವರು ಕಲ್ಪನಾಚಾವ್ಲಾ, ದಕ್ಷಿಣಐರಣ್ ಲೇಡಿಎಂತಲೆ ಕರಿಸಿಕೊಂಡ ದಿ-ಜಯಲಲಿತಾ ತಮಿಳನಾಡಿನ ಅಮ್ಮನಾಗಿ ಸೂಸೂತ್ರವಾಗಿ ಆಡಳಿತ ನಡೆಸಿ ಸೈ ಎನಿಕೊಂಡರು.

ಮಾಹಿತಿತಂತ್ರಜ್ಞಾನದಲ್ಲಿ ಇನ್ಪೋಸಿಸ್ ಕಂಪನಿ ಬಹುದೊಡ್ಡ ಹೆಸರು. ದೇಶವಿದೇಶಗಳಲ್ಲಿ ತಮ್ಮ ಶಾಖೆಯನ್ನುತರೆದು ಲಕ್ಷಾಂತರಜನರಿಗೆಉದ್ಯೋಗವನ್ನು ನೀಡಿದಲ್ಲದೇ ನಮ್ಮ ಭಾರತದೇಶಕ್ಕೆಕೀರ್ತಿ ಯನ್ನುತಂದರು. ಇಂಥ ಸಂಸ್ಥೆಯನ್ನು ಸ್ಥಾಪಿಸಿದ ಸೂಧಾಮೂರ್ತಿಯವರು ದೇಶದಲ್ಲಿ ಪ್ರಖ್ಯಾತಿಯನ್ನು  ಪಡೆದಿದ್ದಾರೆ. ಹೆಣ್ಣು ಮಕ್ಕಳು ಮನೆಬಿಟ್ಟು ಹೊರಗೆ ಬರಲು ಹೆದರುತ್ತಿದ್ದ ಕಾಲದಲ್ಲಿ ದೇಶದಅತ್ಯುನ್ನತ ಹುದ್ದೆ ಐ.ಪಿ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಥಮ ಮಹಿಳಾ ಪೋಲಿಸ್ ಅಧಿಕಾರಿಯಾಗಿಕಿರಣ್ ಬೇಡಿಯವರು ಇಂದಿನ ಮಕ್ಕಳಿಗೆ ಮಾದರಿಯಾಗಿದ್ದಾರೆ.ಇತಿಹಾಸದ ಪುಟಗಳಲ್ಲಿ ಹಲವಾರು ಮಹಿಳೆಯರು ಸಾಧನೆ ನಮಗೆ ದೊರೆಯುತ್ತದೆ.

ಅದೇರೀತಿಬಲಿಷ್ಠ ಯಶಸ್ವಿ ಮತ್ತುಜಾಗತಿಕವಾಗಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ 10 ಜನ ಭಾರತೀಯ ಮಹಿಳೆಯರು ಕುರಿತು ನೋಡುವುದಾದರೆಈ ಕೆಳಗಿನ ಮಹಿಳೆಯರ ಸಾಧನೆಒಮ್ಮೆ ಮೆಲಕು ಹಕಿದಾಗ ಸಂಪೂರ್ಣ ಮಾಹಿತಿ ನಮಗೆ ದೊರೆಯುತ್ತದೆ.

1. ಅವನಿ ಚೆತುರ್ವೇದಿ :ಭಾರತೀಯ ವಾಯುಪಡೆಯಲ್ಲಿಯುದ್ದ ಪೈಲೆಟ್‍ಆದ  ಮೊದಲ ಮಹಿಳೆಯರಲ್ಲಿ ಒಬ್ಬರು.

2. ಸ್ನೇಹಾದುಬೆ : ಪಾಕಿಸ್ತಾನಿ ಪ್ರಧಾನಿಯವರ ವಿಶ್ವಸಂಸ್ಥೆಯ ಭಾಷಣಕ್ಕೆ ನೀಡಿದತೀಕ್ಷ್ಣ ಪ್ರತಿಕ್ರಿಯೆ

ವೈರಲ್‍ಆದಾಗ ಸ್ನೇಹಾಖ್ಯಾತಿಆದವರು.

- ವಿದೇಶಾಂಗ ಸಚಿವಾಲಯದಲ್ಲಿಅಂಡರ್ ಸೆಕ್ರೆಟರಿಯಾಗಿ ಮತ್ತು ಮ್ಯಾಡ್ರಿಡ್ ನಲ್ಲಿರುವ ಭಾರತೀಯರಾಯಬಾg Àಕಛೇರಿಯಲ್ಲಿ 3ನೇ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.

-ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿ ತಮ್ಮ ಪ್ರಸ್ತುತ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

3.ಕೃತಿಕಾರಂತ : ಪ್ರಸ್ತುತ ಬೆಂಗಳೂರಿನಲ್ಲಿ ವನ್ಯಜೀವಿ ಅಧ್ಯಯನಕೇಂದ್ರದಲ್ಲಿ ಮುಖ್ಯ ಸಂರಕ್ಷಣಾ ವಿಜ್ಞಾನಿ ಮತ್ತು ನಿರ್ದೇಶಕಿಯಾಗಿದ್ದಾರೆ.

-ಡ್ಯೂಕ್ ವಿಶ್ವವಿದ್ಯಾಲಯದ ಮತ್ತುರಾಷ್ಟ್ರೀಯಜೈವಿಕ ವಿಜ್ಞಾನಕೇಂದ್ರದಲ್ಲಿ ಸಹಾಯಕಅಧ್ಯಾಪಕರಾಗಿಕಾರ್ಯನಿರ್ವಹಿಸಿದ್ದಾರೆ.

4.ತುಳಸಿಗೌಡ : ಹಲವು ದಶಕಗಳಿಂದ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು 2020ರಲ್ಲಿ ಮಾತ್ರದೇಶ ಮತ್ತುಜಗತ್ತು ತುಳಸಿಗೌಡ ಅವರನ್ನು ಗಮನಿಸುತ್ತಿದೆ.

-ಸಾಮಾನ್ಯವಾಗಿ ‘ಅರಣ್ಯ ವಿಶ್ವಕೋಸ’ ಎಂದುಕರೆಯಲ್ಪಡುವ ತುಳಸಿ 30000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.

5. ಟೆಸ್ಸಿ ಥಾಮಸ್ : ದಿವಗಂತಡಾ ಎ ಪಿ ಜೆಅಬ್ದುಲ್ ಕಲಾಂ ಅವರುಇವರನ್ನು ಪ್ರಾಜೆಕ್ಟ್‍ಅಗ್ನಿಗಾಗಿ ನೇಮಿಸಿದರು.

- ನಂತರಅಗ್ನಿ 4 ಮತ್ತು 5ನೇ ಕಾರ್ಯಾಚರಣೆಯಲ್ಲಿಯೋಜನಾ ನಿರ್ದೇಶಕರಾದರು.

- 2018ರಲ್ಲಿ ಅವರು ಡಿ ಆರ್ ಡಿ ಓದಏರೋನಾಟಿಕಲ್ ಸಿಸ್ಟ್ಟ್ಟಮ್ಸ್‍ನ ಮಹಾ ನಿರ್ದೇಶರಾದರು.

6. ವಾಣಿ ಕೋಲಾ : ವ್ಯವಹಾರದಲ್ಲಿಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬಳು.

-ಸಿಲಿಕಾನ್ ವ್ಯಾಲಿಯಲ್ಲಿಉನ್ನತ ಸ್ಥಾನಕ್ಕೆ ಏರಿದವರು.

- ಇಂಡೋ- ಯುಎಸ್ ವೆಂಚರ್ ಪಾರ್ಟನಸ್ ಸ್ಥಾಪನೆ.

- ಕಲಾರಿಕ್ಯಾಪಿಟಲ್ ಸ್ಥಾಪಿಸಲು ದಾರಿ ಮಾಡಿಕೊಟ್ಟವರು.

7. ರಿಚಾಕರ್: ಕಳೆದ ಕೆಲವು ವರ್ಷಗಳಲ್ಲಿ ಝಿವಾಮೆ ಮಹಿಳೆಯರ ನಿಕಟ ಉಡುಪುಗಳು ಜಗತ್ತಿನಲ್ಲಿ

ಅತ್ಯಂತಜನಪ್ರಿಯ ಮತ್ತು ಬೇಡಿಕೆಯ ಬ್ರ್ಯಾಂಡ್‍ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

8.ಫಲ್ಗುಣಿ ನಾಂiÀiರ್ : ಫಲ್ಗುಣಿತಮ್ಮ ಬ್ರ್ಯಾಂಡ್ ನೈಕಾಗಿಂದಾಗಿ ಮನೆ ಮಾತಾಗಿದ್ದಾರೆ. -ಅವರುರಾತ್ರೋರಾತ್ರಿ ಸಂಚಲನ ಮೂಡಿಸಿದ ಮತ್ತುದೇಶದಅತ್ಯಂತ ಯಶಸ್ಚಿ ವ್ಯಾಪಾರ ಮಹಿಳೆಯರಲ್ಲಿ ಒಬ್ಬರಾದರು. 9. ಅರುಣಿಮಾ ಸಿನ್ಹಾ: ಪ್ರಬಲ ಮೌಂಟ್‍ಎವರೆಸ್ಟ್‍ಎರಿದ ಮೊದಲ ಅಂಗವಿಕಲ ಮಹಿಳೆ

-2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿಗೌರಿಸಲಾಯಿತು.

- ದೇಶಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. 10. ಗೀತಾ ಗೋಪಿನಾಥ : ಭಾರತೀಯ ಮೂಲದಅಮೆರಿಕನ್ ಗೋಪಿನಾಥ್ ವಿಶ್ವಪ್ರಸಿದ್ದ ಅರ್ಥಶಾಸ್ತ್ರಜ್ಞೆ - ಅಂತರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪವ್ಯವಸ್ಥಾಪಕ ನಿರ್ದೇಶಕಿ ಹಾಗೂ ಐ ಎಂ ಏಫ್ ಮುಖ್ಯಅರ್ಥಶಾಸ್ತ್ರಜ್ಞೆ.

ಶಿಕ್ಷಣ ಮತ್ತು ಸಂಸ್ಕಾರಒಂದಿದ್ದರೆ ಮಹಿಳೆ ಏನ್ ಬೇಕಾದರೂ ಮಾಡಬಹುದುಅಂತ ತೋರಿಸಿ ಕೊಟ್ಟವರೆ ಈ ಮೇಲಿನ ಜನಪ್ರಿಯ ಮಹಿಳೆಯರು.ಇವರೆಲ್ಲರ ಸಾಧನೆ ನೋಡಿದ ಮೇಲೆ ನಾವು ಏನಾದರೂ ಈ ದೇಶಕ್ಕೆಅಥವಾ ನನ್ನ ನಾಡಿಗೆಕೊಡುಗೆ ನೀಡಲೇಬೇಕುಅಂತ ಮನೋಭಾವನೇ ಹುಟ್ಟಬೇಕುಅಂತನೇ ಈ ಲೇಖನವನ್ನು ಪ್ರಸ್ತುತ ಪಡಿಸಿದ್ದೇನೆ.



ಡಾ ಪೂರ್ಣಿಮಾ ಕೆ. ಧಾಮಣ್ಣವರ

ಅತಿಥಿ ಉಪನ್ಯಾಸಕರು

ಕನ್ನಡ ಅಧ್ಯಯನ ವಿಭಾಗ

ರಾಣಿಚನ್ನಮ್ಮ ವಿಶ್ವವಿದ್ಯಾಲಯ

ಡಾ. ಫ. ಗು ಹಳಕಟ್ಟಿ ಸ್ನಾತಕೋತ್ತರ

ಕೇಂದ್ರ ವಿಜಯಪುರ.

ಅಮ್ಮ

ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಪ್ರಕಟಗೊಂಡ ಸಾಹಿತಿ ಹಾಗೂ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರ ವಿರಚಿತ ‘ಕಲ್ಲು ಮನಸ್ಸು’ ಕವನ ಸಂಕಲನ ಕೃತಿಯಲ್ಲಿನ ಕವನ. 


ಅಮ್ಮ ನನ್ನಮ್ಮ

ನನ್ನೀ ಜೀವಕೆ ಬೆಳಕಮ್ಮ

ನನ್ನುಸಿರಿಗೆ ಕಾರಣವೇ ನೀನಮ್ಮ

ನೀ ನಿಲ್ಲದ ಬಾಳು ನನಗೇಕಮ್ಮ...


ನಿನ್ನ ಸಹನೆಗೆ ನಾನು

ಮಾಡುವೆ ಪ್ರಣಾಮ...

ನಿನಗೆ ಯಾರಿಲ್ಲ ಸಮ ಸಮ 

ನಾನಾದೆ ನಿನ್ನ ಮಡಿಲ ಗುಲಾಮ


ನನ್ನನ್ನು ಭೂಮಿಗೆ ತಂದಿರುವ 

ನೀನು ದೇವರಗಿಂತ ಮಿಗಿಲಮ್ಮ

ನಿನ್ನ ಪಾದ ಸ್ಪರ್ಶಕ್ಕೆ

ಭೂಮಿಯೇ ಪಾವನವಮ್ಮ


ನಿಷ್ಕಲ್ಮಶ, ನಿಸ್ವಾರ್ಥ ತ್ಯಾಗ, ಮಮತೆಯ, ಪ್ರೀತಿಗೆ

ಇನ್ನೊಂದು ಹೆಸರೇ ನೀನಮ್ಮ.. ನನ್ನಮ್ಮ

ನೀ ಕೊಟ್ಟ ಜೀವ ಭಿಕ್ಷೆಗೆ 

ನಾ ಏಳು ಜನ್ಮ ಹುಟ್ಟಿ ಬಂದರೂ

ನಿನ್ನ ಋಣ ತೀರಿಸಲಾಗದಮ್ಮ


ನೀ ಹಾಕಿಕೊಟ್ಟ ಮಾರ್ಗದಲ್ಲೆ

ನಡೆಯುತ್ತಿರುವೇನು ನಾನಮ್ಮ

ಹಿಗ್ಗದೆ, ಕುಗ್ಗದೆ, ಆತ್ಮ ವಿಶ್ವಾಸದಿ


ಸಾರ್ಥಿಗಳ ಲೋಕದಿ

ಮುಖವಾಡಗಳ ಮಧ್ಯೆ

ಜೀವಿಸಲು ಸಾಕಾಗಿದೆ ನನಗಮ್ಮ

ನೀನಿದ್ದ ಊರಿಗೆ ನನ್ನನ್ನು ಕರೆದುಕೋ ನನ್ನಮ್ಮ...



ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಹೆಣ್ಣಿನ ವಿಷಯದಲ್ಲಿ ಬದಲಾಗಬೇಕಾಗಿರುವುದು ಕಾನೂನು ಅಲ್ಲ ಜನರ ವಿಕೃತ ಮನಸ್ಥಿತಿ


"ಯತ್ರ ನಾರ್ಯಸ್ತು ಪೂಜ್ಯಂತೆ

ತತ್ರ ರಮಂತೇ ದೇವತಾ"

ಎಲ್ಲಿ ಹೆಣ್ಣು ಗೌರವಿಸಲ್ಪಡುತ್ತಾಳೆ ಅಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಅನಾದಿಕಾಲದಿಂದಲೂ ನಂಬಿರುವ ಸಂಸ್ಕೃತಿ ನಮ್ಮದು.

             ಕಳೆದ ಕೆಲವು ಸಹಸ್ರಮಾನಗಳಲ್ಲಿ ಭಾರತದಲ್ಲಿ ಮಹಿಳೆಯರ ಸ್ಥಾನಮಾನವು ಅನೇಕ ಮಹತ್ತರ ಬದಲಾವಣೆಗಳನ್ನು ಕಂಡಿದೆ. ಹಿಂದೆ ಭಾರತದಲ್ಲಿ ಮಹಿಳೆಯರು ವರದಕ್ಷಿಣೆ, ಬಾಲ್ಯ ವಿವಾಹ,ಲಿಂಗ ಅಸಮಾನತೆ, ಲೈಂಗಿಕ ಕಿರುಕುಳ ಮುಂತಾದ ಅನೇಕ ಸವಾಲಿನ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಈಗ ಮಹಿಳೆಯರು ಪುರುಷರಷ್ಟೇ ಸಮಾನ ರೀತಿಯಲ್ಲಿ ಬದುಕುತ್ತಿದ್ದಾರೆ. ಉನ್ನತವಾದ ಶಿಕ್ಷಣವನ್ನು ಪಡೆದು, ಅಂತರಾಷ್ಟ್ರೀಯ, ಶೈಕ್ಷಣಿಕ ,ಭಾಷಾವಾರು, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ.

"ಹೆಣ್ಣು ಅಬಲೆ ಅಲ್ಲ ಸಬಲೆ"ಎಂದು ಇಡೀ ಜಗತ್ತಿಗೆ ತೋರಿಸುತ್ತಿದ್ದಾರೆ.

          ಇದೆಲ್ಲ ಒಂದು ಕಡೆ ಆದರೆ, ನಮ್ಮ ಭಾರತ ದೇಶವು ಆರ್ಥಿಕತೆ ಮತ್ತು ವಿಜ್ಞಾನದಲ್ಲಿ ಮುಂದುವರೆದರು ಕೂಡ ಮಹಿಳೆಯರ ಸುರಕ್ಷತೆ ಕಾಪಾಡುವಲ್ಲಿ ವಿಶ್ವದ ಮುಂದೆ ಶೂನ್ಯವಾಗಿ ನಿಂತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಮಹಿಳೆಯರು ಮಾತ್ರ ಒಬ್ಬರೇ ನಿರ್ಭಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅವರ ಮೇಲೆ ಆಗುತ್ತಿರುವ ಅತ್ಯಾಚಾರವೇ ಇದಕ್ಕೆ ಕಾರಣ. ಗಾಂಧೀಜಿ ಅವರು ಹೇಳಿದ ಮಾತಿನಂತೆ ಒಂದು ಹೆಣ್ಣು ಮಧ್ಯರಾತ್ರಿಯಲ್ಲಿ ಒಬ್ಬಳೇ ಧೈರ್ಯದಿಂದ ತಿರುಗಾಡಿದಾಗ ಮಾತ್ರ ನಮ್ಮ ದೇಶ ಸ್ವಾತಂತ್ರ್ಯವಾಗುತ್ತದೆ ಎಂದಿದ್ದಾರೆ. 

          ‌ ಆದರೆ ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರ ಮಹಿಳೆಯರಿಗಾಗಿ ಕಾನೂನುಗಳು, ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದರು ಸಹ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಡೆಯಲು ಆಗುತ್ತಿಲ್ಲ 


"ಹಗಲಿನಲ್ಲೋ ಇರುಳಿನಲ್ಲೋ

ಒಂಟಿಯಾಗಿ ನಡೆಯಲು 

ಹೆಣ್ಣು ಎಂದು ಅರಿತ ಕಾಮಿ

ದೇಹ ಬಗೆದು ತಿಂದನು"

    ಇಂತಹ ಕೃತ್ಯದಿಂದಾಗಿ ಅದೆಷ್ಟೋ ಅಸಂಖ್ಯಾತ ಮಹಿಳೆಯರು ಬಲಿಯಾಗಿದ್ದಾರೆ. ಅವರ ಭವಿಷ್ಯವೇ ನಾಶವಾಗಿ ಹೋಗಿದೆ ಇತ್ತೀಚಿಗೆ ಅಂತೂ ಒಂದು ಹೆಣ್ಣು ಮನೆಯಿಂದ ಹೊರ ಬಂದರೆ ಅವಳು ಸುರಕ್ಷಿತವಾಗಿ ಮತ್ತೆ ಮನೆಗೆ ಹೋಗುತ್ತಾಳೆ ಎಂಬ ನಂಬಿಕೆಯೇ ಹೊರಟು ಹೋಗಿ ಭಯದ ವಾತಾವರಣ ಕೂಡಿದೆ. 

 "ಹೆಣ್ಣು ದೇಶದ ಕಣ್ಣು"ಎನ್ನುವ ಈ ಸಮಾಜ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನವನ್ನು ನಿಲ್ಲಿಸುತ್ತಿಲ್ಲ ಜೊತೆಗೆ ಅನ್ಯಾಯಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ದೊರಕುವಂತೆ ಮಾಡುತ್ತಿಲ್ಲ. 


ಕಣ್ಣಲ್ಲವೇ ಹೆಣ್ಣು ಸಂಸಾರಕ್ಕೆ, 

ಚಕ್ರವಲ್ಲವೇ ಹೆಣ್ಣು ಬಾಳ ಬಂಡಿಗೆ 

ಒಲವಲ್ಲವೇ ಹೆಣ್ಣು ಪ್ರೀತಿ ಪ್ರೇಮಕೆ

ಆದರ್ಯಾಕವಳಿಗೆ ಅತ್ಯಾಚಾರದ ಶಿಕ್ಷೆ...?

       ಇನ್ನೊಂದು ಮಾತೇನೆಂದರೆ ಈ ಅತ್ಯಾಚಾರದಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಮನೆಯಿಂದ ಪ್ರಾರಂಭವಾಗುವ ನ್ಯಾಯವನ್ನು ಮಾಡಬೇಕಾಗಿದೆ. ಯಾಕೆಂದರೆ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ, ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂಬುದನ್ನು ಪಾಲಕರು ಕಲಿಸಿಕೊಟ್ಟರೆ ಇಂತಹ ಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರು ನಿಲ್ಲಿಸಲು ಸಾಧ್ಯವಾಗುತ್ತದೆ. 

  ಮಹಿಳೆಯರನ್ನು ದೌರ್ಜನ್ಯ ಮತ್ತು ಕಿರುಕುಳದಿಂದ ರಕ್ಷಿಸುವ ಮೂಲಕ ಮಹಿಳೆಯರ ಉನ್ನತಿ ತಳಮಟ್ಟದಿಂದ ಪ್ರಾರಂಭವಾಗಬೇಕು. 

  ಇನ್ನಾದರೂ ನಮ್ಮ ದೇಶವು ಈ ಅತ್ಯಾಚಾರ, ವರದಕ್ಷಣೆ ಪಿಡುಗು, ಬಾಲ್ಯ ವಿವಾಹಗಳಂತಹ ದೌರ್ಜನ್ಯಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಬೇರೆ ದೇಶಗಳಲ್ಲಿರುವಂತಹ ಕೆಲವು ಕಾನೂನು ನಿಯಮಗಳನ್ನು ನಮ್ಮ ದೇಶದಲ್ಲಿ ಕೂಡ ಜಾರಿಗೆ ತರಬೇಕು. ಅಂದಾಗ ಮಾತ್ರ ಇಂತಹ ಬರ್ಬರ ಕೃತ್ಯಗಳು ನಡೆಯುವುದಿಲ್ಲ. 


ಅತ್ಯಾಚಾರ ಹಿಂಸಾಚಾರ 

ಎಲ್ಲಿ ತನಕ ನಿಲ್ಲದು 

ಹೆಣ್ಣಿನ, 

ಮೊಗದಲ್ಲಿ ನಗುವು

ಅಲ್ಲಿ ತನಕ ಕಾಣದು...!!

 "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು" 

 



ಪ್ರೇಮಾ ಅಶೋಕ ಇಟ್ಟಗಿ 

ಬಿ.ಎ(ಆರನೇ ಸೆಮಿಸ್ಟರ್)  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಮಹಿಳಾ ಸಬಲೀಕರಣ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಚಿತ್ರ "ಮಸಣದ ಹೂವು" ಪ್ರಿಯಕರನಿಗಾಗಿ ಹುಡುಕಿ, ಹುಡುಕಿ ಕರಾವಳಿ ಪ್ರದೇಶದ ಹುಡುಗಿಯೊಬ್ಬಳು ವೇಶ್ಯಾವಾಟಿಕೆ ನಡೆಸುವ ಬಲೆಗೆ ಸಿಲುಕುತ್ತಾಳೆ. ತೀವ್ರ ಪ್ರತಿಭಟಿಸುತ್ತಾಳಾದರೂ ಮೂರು ದಿನ ಊಟ ತಿಂಡಿ ನೀರು ಕೊಡದ ಘರವಾಲಿ ನಾಲ್ಕನೇ ದಿನಕ್ಕೆಊಟದ ತಟ್ಟೆ ತಂದು ಮುಂದೆ ಇಟ್ಟಾಗ ಸಾರು ಇದೆಯೋ ಇಲ್ಲವೋ ಅಂತಾನೂ ನೋಡದೆ ನಾಯಕಿ ಗಬಗಬನೆ ತಿನ್ನುತ್ತಾಳೆ.! ಹಸಿವು ಎಂತಹ ಕೆಲಸವನ್ನಾದರೂ ಮಾಡಿಸುತ್ತದೆ ಅಂತಾಳೆ ಆ ಘರವಾಲಿ..!

ಪುರುಷ ಶಾರೀರಿಕವಾಗಿ ಬಲಶಾಲಿ ಮಾತೃತ್ವ ಶಕ್ತಿಯನ್ನು ಪಡೆದಂತಹ ಸ್ತ್ರೀ ವಿಶಿಷ್ಟ ಶಕ್ತಿ ಸ್ವರೂಪಿಣಿ ಇವೆರಡು ಭೇದ ಬಿಟ್ಟರೆ ಸ್ತ್ರೀ ಮತ್ತು ಪುರುಷರಲ್ಲಿ ಹೇಳಿಕೊಳ್ಳುವಂಥ ಭೇದಗಳು ಇಲ್ಲ ಆದರೆ,

ಗ್ರೀಕ್ ದಾರ್ಶನಿಕ ಪ್ಲೇಟೋ "ದೇವರು ನನ್ನನ್ನು ಗುಲಾಮನನ್ನಾಗಿ ಮಾಡದೆ ಸ್ವತಂತ್ರ ಪ್ರಜೆಯನ್ನಾಗಿ ಸೃಷ್ಟಿಸಿದ್ದಕ್ಕೆ ಮತ್ತು ಎರಡನೆಯದಾಗಿ ನನ್ನನ್ನು ಸ್ತ್ರೀಯನ್ನಾಗಿ ಮಾಡದೇ ಪುರುಷನನ್ನಾಗಿಮಾಡಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುವೆನು" ಎಂದಿದ್ದ. ಆದರೂ ಕೂಡ ಸ್ತ್ರೀಯರು ಸ್ತ್ರೀಯರಾಗಿರುವುದು ಕೇವಲ ಗುಣಗಳ ಕೊರತೆಯಿಂದಾಗಿ ಎಂದು ಹೇಳಿದ. ಅಲ್ಲದೆ ಸ್ತ್ರೀಯರು ಪ್ರಕೃತಿ ಸಹಜ ದೋಷ,ದುರ್ಬಲತೆಗೆ ಒಳಗಾದವರು ಎಂದು ತಿಳಿಸಿದ್ದ.

 ಸ್ತ್ರೀಯರಿಗೆ ಉನ್ನತ ಮಟ್ಟದ ಅಥವಾ ಉತ್ತಮ ಸ್ಥಾನ ನೀಡಿರುವುದರ ಹೊರತಾಗಿಯೂ ಅವರನ್ನು ಪುರುಷರಿಗಿಂತ ಕೀಳಾಗಿ ಕಂಡಿರುವುದಕ್ಕೆ ನಮ್ಮ ಪವಿತ್ರ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳು ಇವೆ.

ಉದಾಹರಣೆಯಾಗಿ ನೋಡಬಹುದಾದರೆ ಧರ್ಮಕ್ಕೆ ಪೂರಕವಾಗಿದೆ ಅಥವಾ ವಿರುದ್ಧವಾಗಿದೆ ಎಂಬ ಗೊಡವೆಗೆ ಹೋಗದೆ ತನ್ನ ಗಂಡ ಹೇಳಿದಂತೆ ಪತ್ನಿಯಾದವಳು ನಡೆದುಕೊಳ್ಳಬೇಕು ಎಂಬ ಮಾಹಿತಿ ವೇದಗಳಲ್ಲಿದೆ. ಇನ್ನು ಸ್ತ್ರೀಯರು ಎಂದಿಗೂ ಸ್ನೇಹಿತರಲ್ಲ ಅಥವಾ ಶತ್ರುಗಳಲ್ಲ ಅವರು ಯಾವಾಗಲೂ ಹೊಸ ಪುರುಷರತ್ತಲೇ ಹೆಜ್ಜೆ ಇಟ್ಟಿರುತ್ತಾರೆ ಎಂಬ ಮಾತು ದೇವೀ ಭಾಗವತದಲ್ಲಿ ಬರುತ್ತೆ. ಒಳ್ಳೆಯ ಕುಟುಂಬದಿಂದ ಬಂದಿದ್ದು ಸುಂದರಿಯರಾಗಿದ್ದು ವಿವಾಹವಾಗಿದ್ದರೂ ಅವಕಾಶ ಸಿಕ್ಕಿದೆ ಎಂದರೆ ನೈತಿಕತೆಯನ್ನು ಉಲ್ಲಂಘಿಸಲು ಸ್ತ್ರೀಯರು ಹಿಂತೆಗೆಯುವವರಲ್ಲ ಎಂಬ ಉಲ್ಲೇಖ ಮಹಾಭಾರತದ ಅನುಶಾಷನ ಪರ್ವದಲ್ಲಿದೆ ಮತ್ತು ವೈಶಿಷ್ಟರು ಸ್ತ್ರೀಯರನ್ನು ಸುಳ್ಳಿನ ಪ್ರತಿ ಮೂರ್ತಿಗಳಿದ್ದಂತೆ ಎಂದು ಪರಿಗಣಿಸಿದ್ದರೆ ಶುಕ್ರ ಮತ್ತು ಚಾಣಕ್ಯರ ಪ್ರಕಾರ ಸ್ತ್ರೀಯರು ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸಲು ಅರ್ಹರಲ್ಲ ಹಿಂದೂ ನೀತಿ ಸಂಹಿತೆಯ ಪ್ರವರ್ತಿ ಕರೆಸಿಕೊಂಡಿರುವ ಮಹರ್ಷಿ ಮನುವಿನ ಅಭಿಪ್ರಾಯದಂತೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಾದವರಲ್ಲ ಸ್ತ್ರೀಯರ ಅನರ್ಹತೆಗಳನ್ನು ಕುರಿತು ವ್ಯಕ್ತಪಡಿಸಲಾರದ ಅಭಿಪ್ರಾಯಗಳಿದ್ದು ಈ ಪಟ್ಟಿಯನ್ನು ಇನ್ನೂ ಉದ್ದವಾಗಿ ಬೆಳೆಸುವುದು ಸೂಕ್ತವಲ್ಲ ಎಂದೆನಿಸುತ್ತದೆ.! ಆದರೆ ಯಾವಾಗ ಸ್ವತಂತ್ರ ಭಾರತದ ಸಂವಿಧಾನವು 1950 ಜನವರಿ 26 ರಂದು ರಿಂದ ಜಾರಿಗೊಂಡಿತೋ ಆ ನಂತರ ಕಾನೂನಾತ್ಮಕವಾಗಿ ಸ್ತ್ರೀಯರು ಎಲ್ಲಾ ವಿಷಯಗಳಲ್ಲೂ ಪುರುಷರಿಗೆ ಸಮಾನರಾಗಿದ್ದಾರೆ ಸಂವಿಧಾನದ 14 ಮತ್ತು 15ನೇ ಕಲಂಗಳು ಸಮಾನತೆ ಹಕ್ಕನ್ನು ದೇಶದ ಎಲ್ಲಾ ಪ್ರಜೆಗಳಿಗೆ ಯಾವುದೇ ಬಗೆಯ ವರ್ಗಭೇದ, ಜಾತಿಭೇದ, ಮತಭೇದ, ಪಕ್ಷಭೇದ, ಲಿಂಗವೇದವಿಲ್ಲದಂತೆ ಸಮಾನವಾಗಿಯೇ ನೀಡುತ್ತದೆ. ಹಲವಾರು ಶತಮಾನಗಳ ಅವಧಿಯುದ್ಧಕ್ಕೂ ಸ್ತ್ರೀಯರನ್ನು ಶಾಸ್ತ್ರಗಳ, ಕಾನೂನಿನ ದೃಷ್ಟಿಯಿಂದ ಎರಡನೇ ಪ್ರಜೆಗಳನ್ನಾಗಿ ನೋಡುತ್ತಿದ್ದ ಆಚರಣೆಗೆ ಈಗ ಶಾಶ್ವತವಾದ ತೆರೆಯೊಂದನ್ನುದನ್ನು ಎಳೆದಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.!

ಇದೇ ಮಾರ್ಚ್ 8ನೇ ತಾರೀಕು 1857ರಲ್ಲಿ ಅಮೆರಿಕಾದ ಸೇತು ಸಂಸ್ಥಾನದ ಬಟ್ಟೆ ಗಿರಣಿಯ ಮಹಿಳಾ ಕಾರ್ಮಿಕರು ದಿನದ ದುಡಿಮೆಯ ಅವಧಿಯನ್ನು 16 ಗಂಟೆಯಿಂದ ತಪ್ಪಿಸಬೇಕೆಂದು ಬೀದಿಯಲ್ಲಿ ಮೆರವಣಿಗೆ ಮಾಡಿ ಮಹಿಳಾ ಶೋಷಣೆ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡು ಮಾರ್ಚ್ 8 ರಂದು ಎಲ್ಲಡೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

 ಇನ್ನು 1917ರ ಮಾರ್ಚ್ 8ರಂದು ರಷ್ಯಾದ ಮಹಿಳೆಯರು ಲೆನಿನ್ ನ ನೇತೃತ್ವದ ಕ್ರಾಂತಿಯಲ್ಲಿ ಭಾಗಿಗಳಾಗಲಿ ಬೀದಿಗಳಿದಿದ್ದರು 8.3 1943 ರಂದು ಇಟಲಿಯಲ್ಲಿ ಅಲ್ಲಿನ ಸರ್ವಾಧಿಕಾರಿ, ಮುಸಲೋನಿಯ ವಿರುದ್ಧ ಇಟಲಿಯ ಮಹಿಳೆಯರು ಭಾರತದ ಮಟ್ಟಿಗೆ ಹೇಳುವುದಿದ್ದರೆ 1917 ರಲ್ಲಿ ಹೋಂ ರೂಲ್ ಚಳುವಳಿಯ ಆದಿಸ್ ಮಾತ್ರೆ ಅನುವಿ ಸೆಂಟರ್ ಅನ್ನು ಬಂಧಿಸಿದಾಗ ಭಾರತೀಯ ಮಹಿಳೆಯರು  ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ಮಾಡಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ತಮ್ಮ ನಾಯಕಿಯ ಬಿಡುಗಡೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.

1994 ರಲ್ಲಿ ಕೇಂದ್ರ ಗ್ರಹ ಖಾತೆಯ ಕ್ರೈಂ ರೆಕಾರ್ಡ್ ಬ್ಯೂರೋ ಸಂಸ್ಥೆಯು ಪ್ರಕಟಿಸಿದ ವರದಿಯ ಉಲ್ಲೇಖದಲ್ಲಿರುವಂತೆ 

 ಪ್ರತಿ 6 ನಿಮಿಷಕ್ಕೊಮ್ಮೆ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. 

 ಪ್ರತಿ 44 ನಿಮಿಷಕ್ಕೆ ಸ್ತ್ರೀಯೋರ್ವಳ ಅಪಹರಣವಾಗುತ್ತಿದೆ.

 ಪ್ರತಿ 47 ನಿಮಿಷಕ್ಕೆ ಸ್ತ್ರೀಯೋರ್ವಳ ಮಾನಭಂಗವಾಗುತ್ತಿದೆ.

 ಪ್ರತಿದಿನ ಕನಿಷ್ಠ 17 ವರದಕ್ಷಿಣಾ ಸಾವುಗಳಾಗುತ್ತಿವೆ. 

 ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ದೌರ್ಜನಗಳು ಎರಡು ಪಟ್ಟು ಹೆಚ್ಚಿವೆ 

ಕಳೆದ ಎರಡು ದಶಕಗಳಲ್ಲಿ ಅತ್ಯಾಚಾರದ ಪ್ರಕಾರಗಳು ಶೇ 400 ರಷ್ಟು ಹೆಚ್ಚಿವೆ.

 ಅಂದರೆ 1974 ರಲ್ಲಿ 2962 ರಷ್ಟಿದ್ದ ಪ್ರಕರಣಗಳು 1993ರಲ್ಲಿ 11,117 ಕ್ಕೆ ಹೆಚ್ಚಿದೆ.

ಸ್ತ್ರೀಯರ ಅಪಹರಣದ ಹಾಗೂ ಒತ್ತೆಯಿರಿಸಿಕೊಳ್ಳುವ ಪ್ರಕರಣಗಳು 1974- 93 ರ ನಡುವೆ ಶೇಕಡ 30ರಷ್ಟು ಹೆಚ್ಚಿವೆ ; ಅಂದರೆ 9,980 ರಿಂದ [1974 ]11759 ಕ್ಕೆ 11,759ಕ್ಕೆ [1994] ಏರಿದೆ ;

1993 ರ ಒಂದೇ ವರ್ಷ ಸ್ತ್ರೀಯರ ವಿರುದ್ಧದ ದೌರ್ಜನ್ಯಗಳು 82,818 ಪ್ರಕರಣಗಳು ದಾಖಲಾಗಿದ್ದವು.

 ಮಹಾಭಾರತದ ಉಪಕಥೆಗಳಲ್ಲಿ ಬರುವ ಮಾಧವಿ ಎಂಬ ರಾಜಕುಮಾರಿಗೆ ಮುಳು ವಾಗಿದ್ದ ಅವಳ ಸೌಂದರ್ಯ ಅದರಿಂದಾಗಿಯೇ ಅವಳ ಒಂದು ನೂರು ಹಸುಗಳಿಂದ ಐದು ಸಾವಿರ ಹಸುಗಳಿಗಾಗಿ ಅನೇಕ ರಾಜ ಮಹಾರಾಜರುಗಳಿಗೆ ಮಾರಾಟವಾದ ಪ್ರಸಂಗದ ಉಲ್ಲೇಖವಿದೆ .!

ಜೂನ್ ಆಫ್ ಆರ್ಕೆ ಎಂಬ ಹುಡುಗಿಯನ್ನು 13ನೇ ಶತಮಾನದಲ್ಲಿ ಜೀವಂತ ಸುಟ್ಟು 800 ವರ್ಷಗಳ ನಂತರ ಅವಳನ್ನು ಸಂತಳು ಎಂದು ಚರ್ಚ್ ಘೋಷಿಸಿದನ್ನು ಆಂಗ್ಲ ನಾಟಕಕಾರ ಬರ್ನಾಡ್ ಶಾ ವಿಡಂಬಿಸಿದ್ದಾನೆ.!

 ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೇಳಿದಂತೆ ನಾವು ಮಾಡಬೇಕಾದದ್ದು ಏನೆಂದರೆ ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದೊಂದಿಗೆ ತೃಪ್ತರಾಗಬಾರದು . ನಾವು ಗಳಿಸಿರುವ ರಾಜಕೀಯ ಪ್ರಜಾಪ್ರಭುತ್ವದ ಮೂಲಕ ಸಾಮಾಜಿಕ ಪ್ರಜಾಪ್ರಭುತ್ವವನ್ನು ಪಡೆಯಬೇಕು ರಾಜಕೀಯ ಪ್ರಜಾಪ್ರಭುತ್ವದ ತಳಹರಿಯಾಗಿ ಸಾಮಾಜಿಕ ಪ್ರಜಾಪ್ರಭುತ್ವವು ಇರದಿದ್ದಲ್ಲಿ ರಾಜಕೀಯ ಪ್ರಜಾಪ್ರಭುತ್ವವು ಹೆಚ್ಚು ಕಾಲ ಉಳಿಯುವುದಿಲ್ಲ ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಸ್ವಾತಂತ್ರ್ಯ, ಸಮಾನತೆ ಸಹೋದರತೆಯನ್ನು ಜೀವನದ ನಿಯಮಗಳನ್ನಾಗಿ ಸ್ವೀಕರಿಸಿ ಪಾಲಿಸುವ ಜೀವನ ಮಾರ್ಗವೇ ಸಾಮಾಜಿಕ ಪ್ರಜಾಪ್ರಭುತ್ವವಾಗಿದೆ.

 ಸ್ವತಂತ್ರ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನ ಬಹಳಷ್ಟು ಸುಧಾರಿಸಿದೆ ಸ್ತ್ರೀಯರು ಇಂದು ಸಮಾನತೆಯತ್ರ ಸಾಗಿದ್ದಾರೆ.

 ಲಿಂಗ ತಾರತಮ್ಯವಿಲ್ಲದೆ ನೀಡಲಾದ ಸಾಂವಿಧಾನಿಕ ಸಮಾನತೆ.

 ನಮ್ಮ ಹೆಮ್ಮೆಯ ಸಂವಿಧಾನ ಯಾವ ಲಿಂಗ ತಾರತಮ್ಯವನ್ನು ಮಾಡದೆ ಸ್ತ್ರೀಯರಿಗೂ ಕೂಡ ಪುರುಷರಷ್ಟೇ ಸರಿ ಸಮಾನವಾದ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳು ವಿಚಾರ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಧಾರ್ಮಿಕ ವೈವಾಹಿಕ ರಾಜಕೀಯ ಸಾಂಸ್ಕೃತಿಕ ಶೈಕ್ಷಣಿಕ ಸ್ವಾತಂತ್ರ್ಯ ಹೀಗೆ ಎಲ್ಲಾ ಬಗೆ ಸ್ವಾತಂತ್ರ್ಯವನ್ನು ನೀಡುವುದು ಮಾತ್ರವಲ್ಲದೆ ಸಮಾನತೆ ಮತ್ತು ಸಮಾನ ಅವಕಾಶಗಳ ಹಕ್ಕು ಶೋಷಣೆ ವಿರುದ್ಧದ ಹಕ್ಕು ಮತ್ತು ಸಮಸ್ಯೆ ಸಂಕಷ್ಟಗಳಿಗೆ ಸಾಂವಿಧಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ಹಕ್ಕುಗಳನ್ನು ಅದು ನೀಡುವುದು ವೈಸ್ಕ ಮತದಾನದ ಹಕ್ಕನ್ನು ಸ್ತ್ರೀಯರಿಗೂ ನೀಡಿದ್ದು ಅವರನ್ನು ಯಾವುದೇ ದೃಷ್ಟಿಯಿಂದ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗಿಲ್ಲ.

 ಸಾಮಾಜಿಕ ಶಾಸನಗಳು.[ Social Legislations ] 

 ಬ್ರಿಟಿಷರ ಕಾಲದಲ್ಲಿ ಸ್ತ್ರೀಯರ ಹಿತ ದೃಷ್ಟಿಯಿಂದ ಕೆಲವು ಸಾಮಾಜಿಕ ಶಾಸನಗಳನ್ನ ಕೈಗೊಳ್ಳಲಾಗಿದ್ದನ್ನು ತಿದ್ದುಪಡಿ ಮಾಡಿ ಜೊತೆಗೆ ಅದೇ ಉದ್ದೇಶದಿಂದ ಸ್ವಾತಂತ್ರ್ಯ ಬಂದ ಮೇಲೂ ಸಹ ಅನೇಕ ಹೊಸ ಶಾಸನಗಳನ್ನು ಕೈಗೊಳ್ಳಲಾಗಿದೆ ಅವುಗಳು  ಈ ಕೆಳಗಿನಂತಿವೆ.

1] ವಿಶೇಷ ವಿವಾಹ ಕಾಯ್ದೆ [Special Marriage Act of 1954]

 ಈ ಕಾಯ್ದೆಯು ವೈಭವಿಕ ವಿಚಾರಗಳಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಸ್ತ್ರೀಯರಿಗೂ ಸಹಿತ ನೀಡಿದೆ ಅಂತರ ಜಾತಿಯ ವಿವಾಹ ಪ್ರೇಮ ವಿವಾಹ ಹಾಗೂ ವಿವಾಹದ ನೋಂದಣಿ ಇತ್ಯಾದಿಗಳಿಗೆ ಅವಕಾಶವೀಯುತ್ತದೆ.

 2] ಹಿಂದೂ ವಿವಾಹ ಕಾಯ್ದೆ [The Hindu Marraiage Act of 1955] :

 ಸ್ತ್ರೀ ಪುರುಷ ಸಮಾನತೆಗೆ ಈ ಶಾಸನವು ಪೂರಕವಾಗಿ ನಿಂತುಕೊಂಡಿದೆ ಬಹು ಪತಿತ್ವ ಬಹುಪತ್ನಿತ್ವ ದ್ವಿಪತ್ನಿತ್ವ ಮತ್ತು ಬಾಲ್ಯ ವಿವಾಹದ ಆಚರಣೆಗಳನ್ನು ಇದು ನಿಷೇಧಿಸುತ್ತದೆ ಹಾಗೂ ಸ್ತ್ರೀಯರಿಗೆ ವಿಚ್ಛೇದದ ಹಾಗೂ ಪುನರ್ವಿವಾಹದ ಹಕ್ಕನ್ನು ನೀಡುತ್ತದೆ.

 3]ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ.[ The Hindu Adoption and Maintenance Act of 1956]:

 ಗಂಡನಿಂದ ನಿರಾಕರಣೆಗೊಂಡ, ಅಥವಾ ಪರಿತಕ್ಳಾದ ಹೆಂಡತಿಗೆ ಆತನಿಂದ ಜೀವನ ಅಂಶ ಪಡೆಯುವ ಹಕ್ಕನ್ನು  ಹಾಗೂ ದತ್ತು ಮಕ್ಕಳನ್ನು ಪಡೆಯುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ.

 4] ಹಿಂದೂ ಉತ್ತರಾಧಿಕಾರಿ ಕಾಯ್ದೆ [The Hindu Sussession Act 1956]:

 ಈ ಕಾಯ್ದೆಯು ಪಿತ್ರಾರ್ಜಿತ ಆಸ್ತಿಯಲ್ಲಿ ಸ್ತ್ರೀಯರಿಗೂ ಸಹ ಉತ್ತರಾಧಿಕಾರದ ಹಕ್ಕನ್ನು ನೀಡುತ್ತದೆ.

  5] ಕನ್ನೆಯರ ಮತ್ತು ಮಹಿಳೆಯರ ನೈತಿಕ ವ್ಯವಹಾರ ಪ್ರತಿಬಂದಕ ಕಾಯ್ದೆ  [ The Supperession of Immoral Traffic of women and Girls' Avt of 1956] ಹೆಣ್ಣು ಮಕ್ಕಳ ಅಪಹರಣ ಮತ್ತು ವೇಶ್ಯಾವೃತ್ತಿಗೆ ಅವರನ್ನು ತಳ್ಳುವುದನ್ನು ತಡೆಗಟ್ಟಲು ಈ ಕಾನೂನಿನ ಮೂಲಕ ಕೈಗೊಳ್ಳಲಾಗಿದೆ.

 6] ವರದಕ್ಷಿಣೆ ನಿಷೇಧ ಕಾಯ್ದೆ [The Dowry ಪ್ರೊಹಿಬಿಷನ್ Act of 1961] : ಸ್ತ್ರೀಯರ ಶೋಷಣೆಗೆ ಕಾರಣವಾದ ವರದಕ್ಷಿಣ ಕುಡುಕನ್ನು ಹತ್ತಿಕ್ಕಲು ಈ ಕಾಯ್ದೆಯಂತೆ ನಿಷೇಧಿಸಲಾಗಿದೆ.

 *7] ವೈದ್ಯಕೀಯ ಗರ್ಭ ನಿವಾರಣಾ ಕಾಯ್ದೆ[ Medical Termination of Pergnance Act of 1971] 

 ಭ್ರೂಣ ಹತ್ಯೆಯನ್ನು ತಡೆಗಟ್ಟಲು ಈ ಕಾನೂನನ್ನು ಜಾರಿಗೆ ತರಲಾಗಿದೆ.

 *8] ಕುಟುಂಬ ನ್ಯಾಯಾಲಯ ಕಾಯ್ದೆ [  The Family Court Act ಆ 1984 ]

*ಯಾವುದ ತೆರನಾದ ಕೌಟುಂಬಿಕ ವಿಚಾರಗಳಲ್ಲಿ, ವಿವಾದಗಳಲ್ಲಿಸ್ತ್ರೀಯರಿಗೆ ನ್ಯಾಯವೊದಗಿಸಲು ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ 

 9] ಸಮಾನ ವೇತನ ಕಾಯ್ದೆ[ The equal Remuneration Act ಆ 1976 ]: 

 ಗಂಡು-ಹೆಣ್ಣು ಯಾವ ಭೇದಭಾವವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನವೆಂಬ ತತ್ವವನ್ನು ಈ ಕಾಯ್ದೆಯಲ್ಲಿ ಅಳವಡಿಸಲಾಗಿದೆ.

 10] ಪ್ರಸೂತಿ ಸೌಲಭ್ಯ ಕಾಯ್ದೆ [ The Meternity Benefit Act ಆ 1961 ] 

 ಹೆರಿಗೆ ಸಂಬಂಧವಾಗಿ ಸಂಬಳ ಸಹಿತ ರಜೆ ಪಡೆಯುವ ಸೌಲಭ್ಯವನ್ನು ದುಡಿಯುವ ವಿವಾಹಿತ ಮಹಿಳೆಯರಿಗೆ ಅನುಷ್ಠಾನಗೊಳಿಸಲಾಗಿದೆ.

 11] ಕಾರ್ಖಾನೆ {ತಿದ್ದುಪಡಿ} ಕಾಯ್ದೆ [ The Factories {Amendment} Act of 1976] 

 ಹಲವಾರು ಅನುಕೂಲತೆಗಳ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸಹಿತ ಸ್ತ್ರೀಯರಿಗಾಗಿ ಪ್ರತ್ಯೇಕ ಶೌಚಗ್ರಹಗಳನ್ನು, ಕೊಠಡಿಗಳನ್ನು ನಿರ್ಮಿಸುವುದು ಸೇರಿದಂತೆ ತಾಯಂದಿರ ದುಡಿಮೆಯ ಅವಧಿಯಲ್ಲಿ {ಅವರ ಸಂಖ್ಯೆ 30 ನ್ನು ಮೀರಿದ್ದರೆ} ಅವರ ಮಕ್ಕಳ ಸಂರಕ್ಷಣೆಗೂ ವ್ಯವಸ್ಥೆ ಮಾಡಬೇಕೆಂದು ಈ ಕಾನೂನು ಹೇಳುತ್ತದೆ.

 ಪ್ರೊ; ಬಸವರಾಜ ಜಾಲವಾದಿ ಸರಕಾರಿ ಕಾಲೇಜು, ಕೂಡಗಿ. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


08-03-2025 EE DIVASA KANNADA DAILY NEWS PAPER