ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಚಿತ್ರ "ಮಸಣದ ಹೂವು" ಪ್ರಿಯಕರನಿಗಾಗಿ ಹುಡುಕಿ, ಹುಡುಕಿ ಕರಾವಳಿ ಪ್ರದೇಶದ ಹುಡುಗಿಯೊಬ್ಬಳು ವೇಶ್ಯಾವಾಟಿಕೆ ನಡೆಸುವ ಬಲೆಗೆ ಸಿಲುಕುತ್ತಾಳೆ. ತೀವ್ರ ಪ್ರತಿಭಟಿಸುತ್ತಾಳಾದರೂ ಮೂರು ದಿನ ಊಟ ತಿಂಡಿ ನೀರು ಕೊಡದ ಘರವಾಲಿ ನಾಲ್ಕನೇ ದಿನಕ್ಕೆಊಟದ ತಟ್ಟೆ ತಂದು ಮುಂದೆ ಇಟ್ಟಾಗ ಸಾರು ಇದೆಯೋ ಇಲ್ಲವೋ ಅಂತಾನೂ ನೋಡದೆ ನಾಯಕಿ ಗಬಗಬನೆ ತಿನ್ನುತ್ತಾಳೆ.! ಹಸಿವು ಎಂತಹ ಕೆಲಸವನ್ನಾದರೂ ಮಾಡಿಸುತ್ತದೆ ಅಂತಾಳೆ ಆ ಘರವಾಲಿ..!
ಪುರುಷ ಶಾರೀರಿಕವಾಗಿ ಬಲಶಾಲಿ ಮಾತೃತ್ವ ಶಕ್ತಿಯನ್ನು ಪಡೆದಂತಹ ಸ್ತ್ರೀ ವಿಶಿಷ್ಟ ಶಕ್ತಿ ಸ್ವರೂಪಿಣಿ ಇವೆರಡು ಭೇದ ಬಿಟ್ಟರೆ ಸ್ತ್ರೀ ಮತ್ತು ಪುರುಷರಲ್ಲಿ ಹೇಳಿಕೊಳ್ಳುವಂಥ ಭೇದಗಳು ಇಲ್ಲ ಆದರೆ,
ಗ್ರೀಕ್ ದಾರ್ಶನಿಕ ಪ್ಲೇಟೋ "ದೇವರು ನನ್ನನ್ನು ಗುಲಾಮನನ್ನಾಗಿ ಮಾಡದೆ ಸ್ವತಂತ್ರ ಪ್ರಜೆಯನ್ನಾಗಿ ಸೃಷ್ಟಿಸಿದ್ದಕ್ಕೆ ಮತ್ತು ಎರಡನೆಯದಾಗಿ ನನ್ನನ್ನು ಸ್ತ್ರೀಯನ್ನಾಗಿ ಮಾಡದೇ ಪುರುಷನನ್ನಾಗಿಮಾಡಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುವೆನು" ಎಂದಿದ್ದ. ಆದರೂ ಕೂಡ ಸ್ತ್ರೀಯರು ಸ್ತ್ರೀಯರಾಗಿರುವುದು ಕೇವಲ ಗುಣಗಳ ಕೊರತೆಯಿಂದಾಗಿ ಎಂದು ಹೇಳಿದ. ಅಲ್ಲದೆ ಸ್ತ್ರೀಯರು ಪ್ರಕೃತಿ ಸಹಜ ದೋಷ,ದುರ್ಬಲತೆಗೆ ಒಳಗಾದವರು ಎಂದು ತಿಳಿಸಿದ್ದ.
ಸ್ತ್ರೀಯರಿಗೆ ಉನ್ನತ ಮಟ್ಟದ ಅಥವಾ ಉತ್ತಮ ಸ್ಥಾನ ನೀಡಿರುವುದರ ಹೊರತಾಗಿಯೂ ಅವರನ್ನು ಪುರುಷರಿಗಿಂತ ಕೀಳಾಗಿ ಕಂಡಿರುವುದಕ್ಕೆ ನಮ್ಮ ಪವಿತ್ರ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳು ಇವೆ.
ಉದಾಹರಣೆಯಾಗಿ ನೋಡಬಹುದಾದರೆ ಧರ್ಮಕ್ಕೆ ಪೂರಕವಾಗಿದೆ ಅಥವಾ ವಿರುದ್ಧವಾಗಿದೆ ಎಂಬ ಗೊಡವೆಗೆ ಹೋಗದೆ ತನ್ನ ಗಂಡ ಹೇಳಿದಂತೆ ಪತ್ನಿಯಾದವಳು ನಡೆದುಕೊಳ್ಳಬೇಕು ಎಂಬ ಮಾಹಿತಿ ವೇದಗಳಲ್ಲಿದೆ. ಇನ್ನು ಸ್ತ್ರೀಯರು ಎಂದಿಗೂ ಸ್ನೇಹಿತರಲ್ಲ ಅಥವಾ ಶತ್ರುಗಳಲ್ಲ ಅವರು ಯಾವಾಗಲೂ ಹೊಸ ಪುರುಷರತ್ತಲೇ ಹೆಜ್ಜೆ ಇಟ್ಟಿರುತ್ತಾರೆ ಎಂಬ ಮಾತು ದೇವೀ ಭಾಗವತದಲ್ಲಿ ಬರುತ್ತೆ. ಒಳ್ಳೆಯ ಕುಟುಂಬದಿಂದ ಬಂದಿದ್ದು ಸುಂದರಿಯರಾಗಿದ್ದು ವಿವಾಹವಾಗಿದ್ದರೂ ಅವಕಾಶ ಸಿಕ್ಕಿದೆ ಎಂದರೆ ನೈತಿಕತೆಯನ್ನು ಉಲ್ಲಂಘಿಸಲು ಸ್ತ್ರೀಯರು ಹಿಂತೆಗೆಯುವವರಲ್ಲ ಎಂಬ ಉಲ್ಲೇಖ ಮಹಾಭಾರತದ ಅನುಶಾಷನ ಪರ್ವದಲ್ಲಿದೆ ಮತ್ತು ವೈಶಿಷ್ಟರು ಸ್ತ್ರೀಯರನ್ನು ಸುಳ್ಳಿನ ಪ್ರತಿ ಮೂರ್ತಿಗಳಿದ್ದಂತೆ ಎಂದು ಪರಿಗಣಿಸಿದ್ದರೆ ಶುಕ್ರ ಮತ್ತು ಚಾಣಕ್ಯರ ಪ್ರಕಾರ ಸ್ತ್ರೀಯರು ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸಲು ಅರ್ಹರಲ್ಲ ಹಿಂದೂ ನೀತಿ ಸಂಹಿತೆಯ ಪ್ರವರ್ತಿ ಕರೆಸಿಕೊಂಡಿರುವ ಮಹರ್ಷಿ ಮನುವಿನ ಅಭಿಪ್ರಾಯದಂತೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಾದವರಲ್ಲ ಸ್ತ್ರೀಯರ ಅನರ್ಹತೆಗಳನ್ನು ಕುರಿತು ವ್ಯಕ್ತಪಡಿಸಲಾರದ ಅಭಿಪ್ರಾಯಗಳಿದ್ದು ಈ ಪಟ್ಟಿಯನ್ನು ಇನ್ನೂ ಉದ್ದವಾಗಿ ಬೆಳೆಸುವುದು ಸೂಕ್ತವಲ್ಲ ಎಂದೆನಿಸುತ್ತದೆ.! ಆದರೆ ಯಾವಾಗ ಸ್ವತಂತ್ರ ಭಾರತದ ಸಂವಿಧಾನವು 1950 ಜನವರಿ 26 ರಂದು ರಿಂದ ಜಾರಿಗೊಂಡಿತೋ ಆ ನಂತರ ಕಾನೂನಾತ್ಮಕವಾಗಿ ಸ್ತ್ರೀಯರು ಎಲ್ಲಾ ವಿಷಯಗಳಲ್ಲೂ ಪುರುಷರಿಗೆ ಸಮಾನರಾಗಿದ್ದಾರೆ ಸಂವಿಧಾನದ 14 ಮತ್ತು 15ನೇ ಕಲಂಗಳು ಸಮಾನತೆ ಹಕ್ಕನ್ನು ದೇಶದ ಎಲ್ಲಾ ಪ್ರಜೆಗಳಿಗೆ ಯಾವುದೇ ಬಗೆಯ ವರ್ಗಭೇದ, ಜಾತಿಭೇದ, ಮತಭೇದ, ಪಕ್ಷಭೇದ, ಲಿಂಗವೇದವಿಲ್ಲದಂತೆ ಸಮಾನವಾಗಿಯೇ ನೀಡುತ್ತದೆ. ಹಲವಾರು ಶತಮಾನಗಳ ಅವಧಿಯುದ್ಧಕ್ಕೂ ಸ್ತ್ರೀಯರನ್ನು ಶಾಸ್ತ್ರಗಳ, ಕಾನೂನಿನ ದೃಷ್ಟಿಯಿಂದ ಎರಡನೇ ಪ್ರಜೆಗಳನ್ನಾಗಿ ನೋಡುತ್ತಿದ್ದ ಆಚರಣೆಗೆ ಈಗ ಶಾಶ್ವತವಾದ ತೆರೆಯೊಂದನ್ನುದನ್ನು ಎಳೆದಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.!
ಇದೇ ಮಾರ್ಚ್ 8ನೇ ತಾರೀಕು 1857ರಲ್ಲಿ ಅಮೆರಿಕಾದ ಸೇತು ಸಂಸ್ಥಾನದ ಬಟ್ಟೆ ಗಿರಣಿಯ ಮಹಿಳಾ ಕಾರ್ಮಿಕರು ದಿನದ ದುಡಿಮೆಯ ಅವಧಿಯನ್ನು 16 ಗಂಟೆಯಿಂದ ತಪ್ಪಿಸಬೇಕೆಂದು ಬೀದಿಯಲ್ಲಿ ಮೆರವಣಿಗೆ ಮಾಡಿ ಮಹಿಳಾ ಶೋಷಣೆ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡು ಮಾರ್ಚ್ 8 ರಂದು ಎಲ್ಲಡೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇನ್ನು 1917ರ ಮಾರ್ಚ್ 8ರಂದು ರಷ್ಯಾದ ಮಹಿಳೆಯರು ಲೆನಿನ್ ನ ನೇತೃತ್ವದ ಕ್ರಾಂತಿಯಲ್ಲಿ ಭಾಗಿಗಳಾಗಲಿ ಬೀದಿಗಳಿದಿದ್ದರು 8.3 1943 ರಂದು ಇಟಲಿಯಲ್ಲಿ ಅಲ್ಲಿನ ಸರ್ವಾಧಿಕಾರಿ, ಮುಸಲೋನಿಯ ವಿರುದ್ಧ ಇಟಲಿಯ ಮಹಿಳೆಯರು ಭಾರತದ ಮಟ್ಟಿಗೆ ಹೇಳುವುದಿದ್ದರೆ 1917 ರಲ್ಲಿ ಹೋಂ ರೂಲ್ ಚಳುವಳಿಯ ಆದಿಸ್ ಮಾತ್ರೆ ಅನುವಿ ಸೆಂಟರ್ ಅನ್ನು ಬಂಧಿಸಿದಾಗ ಭಾರತೀಯ ಮಹಿಳೆಯರು ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ಮಾಡಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ತಮ್ಮ ನಾಯಕಿಯ ಬಿಡುಗಡೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.
1994 ರಲ್ಲಿ ಕೇಂದ್ರ ಗ್ರಹ ಖಾತೆಯ ಕ್ರೈಂ ರೆಕಾರ್ಡ್ ಬ್ಯೂರೋ ಸಂಸ್ಥೆಯು ಪ್ರಕಟಿಸಿದ ವರದಿಯ ಉಲ್ಲೇಖದಲ್ಲಿರುವಂತೆ
ಪ್ರತಿ 6 ನಿಮಿಷಕ್ಕೊಮ್ಮೆ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ.
ಪ್ರತಿ 44 ನಿಮಿಷಕ್ಕೆ ಸ್ತ್ರೀಯೋರ್ವಳ ಅಪಹರಣವಾಗುತ್ತಿದೆ.
ಪ್ರತಿ 47 ನಿಮಿಷಕ್ಕೆ ಸ್ತ್ರೀಯೋರ್ವಳ ಮಾನಭಂಗವಾಗುತ್ತಿದೆ.
ಪ್ರತಿದಿನ ಕನಿಷ್ಠ 17 ವರದಕ್ಷಿಣಾ ಸಾವುಗಳಾಗುತ್ತಿವೆ.
ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ದೌರ್ಜನಗಳು ಎರಡು ಪಟ್ಟು ಹೆಚ್ಚಿವೆ
ಕಳೆದ ಎರಡು ದಶಕಗಳಲ್ಲಿ ಅತ್ಯಾಚಾರದ ಪ್ರಕಾರಗಳು ಶೇ 400 ರಷ್ಟು ಹೆಚ್ಚಿವೆ.
ಅಂದರೆ 1974 ರಲ್ಲಿ 2962 ರಷ್ಟಿದ್ದ ಪ್ರಕರಣಗಳು 1993ರಲ್ಲಿ 11,117 ಕ್ಕೆ ಹೆಚ್ಚಿದೆ.
ಸ್ತ್ರೀಯರ ಅಪಹರಣದ ಹಾಗೂ ಒತ್ತೆಯಿರಿಸಿಕೊಳ್ಳುವ ಪ್ರಕರಣಗಳು 1974- 93 ರ ನಡುವೆ ಶೇಕಡ 30ರಷ್ಟು ಹೆಚ್ಚಿವೆ ; ಅಂದರೆ 9,980 ರಿಂದ [1974 ]11759 ಕ್ಕೆ 11,759ಕ್ಕೆ [1994] ಏರಿದೆ ;
1993 ರ ಒಂದೇ ವರ್ಷ ಸ್ತ್ರೀಯರ ವಿರುದ್ಧದ ದೌರ್ಜನ್ಯಗಳು 82,818 ಪ್ರಕರಣಗಳು ದಾಖಲಾಗಿದ್ದವು.
ಮಹಾಭಾರತದ ಉಪಕಥೆಗಳಲ್ಲಿ ಬರುವ ಮಾಧವಿ ಎಂಬ ರಾಜಕುಮಾರಿಗೆ ಮುಳು ವಾಗಿದ್ದ ಅವಳ ಸೌಂದರ್ಯ ಅದರಿಂದಾಗಿಯೇ ಅವಳ ಒಂದು ನೂರು ಹಸುಗಳಿಂದ ಐದು ಸಾವಿರ ಹಸುಗಳಿಗಾಗಿ ಅನೇಕ ರಾಜ ಮಹಾರಾಜರುಗಳಿಗೆ ಮಾರಾಟವಾದ ಪ್ರಸಂಗದ ಉಲ್ಲೇಖವಿದೆ .!
ಜೂನ್ ಆಫ್ ಆರ್ಕೆ ಎಂಬ ಹುಡುಗಿಯನ್ನು 13ನೇ ಶತಮಾನದಲ್ಲಿ ಜೀವಂತ ಸುಟ್ಟು 800 ವರ್ಷಗಳ ನಂತರ ಅವಳನ್ನು ಸಂತಳು ಎಂದು ಚರ್ಚ್ ಘೋಷಿಸಿದನ್ನು ಆಂಗ್ಲ ನಾಟಕಕಾರ ಬರ್ನಾಡ್ ಶಾ ವಿಡಂಬಿಸಿದ್ದಾನೆ.!
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೇಳಿದಂತೆ ನಾವು ಮಾಡಬೇಕಾದದ್ದು ಏನೆಂದರೆ ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದೊಂದಿಗೆ ತೃಪ್ತರಾಗಬಾರದು . ನಾವು ಗಳಿಸಿರುವ ರಾಜಕೀಯ ಪ್ರಜಾಪ್ರಭುತ್ವದ ಮೂಲಕ ಸಾಮಾಜಿಕ ಪ್ರಜಾಪ್ರಭುತ್ವವನ್ನು ಪಡೆಯಬೇಕು ರಾಜಕೀಯ ಪ್ರಜಾಪ್ರಭುತ್ವದ ತಳಹರಿಯಾಗಿ ಸಾಮಾಜಿಕ ಪ್ರಜಾಪ್ರಭುತ್ವವು ಇರದಿದ್ದಲ್ಲಿ ರಾಜಕೀಯ ಪ್ರಜಾಪ್ರಭುತ್ವವು ಹೆಚ್ಚು ಕಾಲ ಉಳಿಯುವುದಿಲ್ಲ ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಸ್ವಾತಂತ್ರ್ಯ, ಸಮಾನತೆ ಸಹೋದರತೆಯನ್ನು ಜೀವನದ ನಿಯಮಗಳನ್ನಾಗಿ ಸ್ವೀಕರಿಸಿ ಪಾಲಿಸುವ ಜೀವನ ಮಾರ್ಗವೇ ಸಾಮಾಜಿಕ ಪ್ರಜಾಪ್ರಭುತ್ವವಾಗಿದೆ.
ಸ್ವತಂತ್ರ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನ ಬಹಳಷ್ಟು ಸುಧಾರಿಸಿದೆ ಸ್ತ್ರೀಯರು ಇಂದು ಸಮಾನತೆಯತ್ರ ಸಾಗಿದ್ದಾರೆ.
ಲಿಂಗ ತಾರತಮ್ಯವಿಲ್ಲದೆ ನೀಡಲಾದ ಸಾಂವಿಧಾನಿಕ ಸಮಾನತೆ.
ನಮ್ಮ ಹೆಮ್ಮೆಯ ಸಂವಿಧಾನ ಯಾವ ಲಿಂಗ ತಾರತಮ್ಯವನ್ನು ಮಾಡದೆ ಸ್ತ್ರೀಯರಿಗೂ ಕೂಡ ಪುರುಷರಷ್ಟೇ ಸರಿ ಸಮಾನವಾದ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳು ವಿಚಾರ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಧಾರ್ಮಿಕ ವೈವಾಹಿಕ ರಾಜಕೀಯ ಸಾಂಸ್ಕೃತಿಕ ಶೈಕ್ಷಣಿಕ ಸ್ವಾತಂತ್ರ್ಯ ಹೀಗೆ ಎಲ್ಲಾ ಬಗೆ ಸ್ವಾತಂತ್ರ್ಯವನ್ನು ನೀಡುವುದು ಮಾತ್ರವಲ್ಲದೆ ಸಮಾನತೆ ಮತ್ತು ಸಮಾನ ಅವಕಾಶಗಳ ಹಕ್ಕು ಶೋಷಣೆ ವಿರುದ್ಧದ ಹಕ್ಕು ಮತ್ತು ಸಮಸ್ಯೆ ಸಂಕಷ್ಟಗಳಿಗೆ ಸಾಂವಿಧಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ಹಕ್ಕುಗಳನ್ನು ಅದು ನೀಡುವುದು ವೈಸ್ಕ ಮತದಾನದ ಹಕ್ಕನ್ನು ಸ್ತ್ರೀಯರಿಗೂ ನೀಡಿದ್ದು ಅವರನ್ನು ಯಾವುದೇ ದೃಷ್ಟಿಯಿಂದ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗಿಲ್ಲ.
ಸಾಮಾಜಿಕ ಶಾಸನಗಳು.[ Social Legislations ]
ಬ್ರಿಟಿಷರ ಕಾಲದಲ್ಲಿ ಸ್ತ್ರೀಯರ ಹಿತ ದೃಷ್ಟಿಯಿಂದ ಕೆಲವು ಸಾಮಾಜಿಕ ಶಾಸನಗಳನ್ನ ಕೈಗೊಳ್ಳಲಾಗಿದ್ದನ್ನು ತಿದ್ದುಪಡಿ ಮಾಡಿ ಜೊತೆಗೆ ಅದೇ ಉದ್ದೇಶದಿಂದ ಸ್ವಾತಂತ್ರ್ಯ ಬಂದ ಮೇಲೂ ಸಹ ಅನೇಕ ಹೊಸ ಶಾಸನಗಳನ್ನು ಕೈಗೊಳ್ಳಲಾಗಿದೆ ಅವುಗಳು ಈ ಕೆಳಗಿನಂತಿವೆ.
1] ವಿಶೇಷ ವಿವಾಹ ಕಾಯ್ದೆ [Special Marriage Act of 1954]
ಈ ಕಾಯ್ದೆಯು ವೈಭವಿಕ ವಿಚಾರಗಳಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಸ್ತ್ರೀಯರಿಗೂ ಸಹಿತ ನೀಡಿದೆ ಅಂತರ ಜಾತಿಯ ವಿವಾಹ ಪ್ರೇಮ ವಿವಾಹ ಹಾಗೂ ವಿವಾಹದ ನೋಂದಣಿ ಇತ್ಯಾದಿಗಳಿಗೆ ಅವಕಾಶವೀಯುತ್ತದೆ.
2] ಹಿಂದೂ ವಿವಾಹ ಕಾಯ್ದೆ [The Hindu Marraiage Act of 1955] :
ಸ್ತ್ರೀ ಪುರುಷ ಸಮಾನತೆಗೆ ಈ ಶಾಸನವು ಪೂರಕವಾಗಿ ನಿಂತುಕೊಂಡಿದೆ ಬಹು ಪತಿತ್ವ ಬಹುಪತ್ನಿತ್ವ ದ್ವಿಪತ್ನಿತ್ವ ಮತ್ತು ಬಾಲ್ಯ ವಿವಾಹದ ಆಚರಣೆಗಳನ್ನು ಇದು ನಿಷೇಧಿಸುತ್ತದೆ ಹಾಗೂ ಸ್ತ್ರೀಯರಿಗೆ ವಿಚ್ಛೇದದ ಹಾಗೂ ಪುನರ್ವಿವಾಹದ ಹಕ್ಕನ್ನು ನೀಡುತ್ತದೆ.
3]ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ.[ The Hindu Adoption and Maintenance Act of 1956]:
ಗಂಡನಿಂದ ನಿರಾಕರಣೆಗೊಂಡ, ಅಥವಾ ಪರಿತಕ್ಳಾದ ಹೆಂಡತಿಗೆ ಆತನಿಂದ ಜೀವನ ಅಂಶ ಪಡೆಯುವ ಹಕ್ಕನ್ನು ಹಾಗೂ ದತ್ತು ಮಕ್ಕಳನ್ನು ಪಡೆಯುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ.
4] ಹಿಂದೂ ಉತ್ತರಾಧಿಕಾರಿ ಕಾಯ್ದೆ [The Hindu Sussession Act 1956]:
ಈ ಕಾಯ್ದೆಯು ಪಿತ್ರಾರ್ಜಿತ ಆಸ್ತಿಯಲ್ಲಿ ಸ್ತ್ರೀಯರಿಗೂ ಸಹ ಉತ್ತರಾಧಿಕಾರದ ಹಕ್ಕನ್ನು ನೀಡುತ್ತದೆ.
5] ಕನ್ನೆಯರ ಮತ್ತು ಮಹಿಳೆಯರ ನೈತಿಕ ವ್ಯವಹಾರ ಪ್ರತಿಬಂದಕ ಕಾಯ್ದೆ [ The Supperession of Immoral Traffic of women and Girls' Avt of 1956] ಹೆಣ್ಣು ಮಕ್ಕಳ ಅಪಹರಣ ಮತ್ತು ವೇಶ್ಯಾವೃತ್ತಿಗೆ ಅವರನ್ನು ತಳ್ಳುವುದನ್ನು ತಡೆಗಟ್ಟಲು ಈ ಕಾನೂನಿನ ಮೂಲಕ ಕೈಗೊಳ್ಳಲಾಗಿದೆ.
6] ವರದಕ್ಷಿಣೆ ನಿಷೇಧ ಕಾಯ್ದೆ [The Dowry ಪ್ರೊಹಿಬಿಷನ್ Act of 1961] : ಸ್ತ್ರೀಯರ ಶೋಷಣೆಗೆ ಕಾರಣವಾದ ವರದಕ್ಷಿಣ ಕುಡುಕನ್ನು ಹತ್ತಿಕ್ಕಲು ಈ ಕಾಯ್ದೆಯಂತೆ ನಿಷೇಧಿಸಲಾಗಿದೆ.
*7] ವೈದ್ಯಕೀಯ ಗರ್ಭ ನಿವಾರಣಾ ಕಾಯ್ದೆ[ Medical Termination of Pergnance Act of 1971]
ಭ್ರೂಣ ಹತ್ಯೆಯನ್ನು ತಡೆಗಟ್ಟಲು ಈ ಕಾನೂನನ್ನು ಜಾರಿಗೆ ತರಲಾಗಿದೆ.
*8] ಕುಟುಂಬ ನ್ಯಾಯಾಲಯ ಕಾಯ್ದೆ [ The Family Court Act ಆ 1984 ]
*ಯಾವುದ ತೆರನಾದ ಕೌಟುಂಬಿಕ ವಿಚಾರಗಳಲ್ಲಿ, ವಿವಾದಗಳಲ್ಲಿಸ್ತ್ರೀಯರಿಗೆ ನ್ಯಾಯವೊದಗಿಸಲು ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ
9] ಸಮಾನ ವೇತನ ಕಾಯ್ದೆ[ The equal Remuneration Act ಆ 1976 ]:
ಗಂಡು-ಹೆಣ್ಣು ಯಾವ ಭೇದಭಾವವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನವೆಂಬ ತತ್ವವನ್ನು ಈ ಕಾಯ್ದೆಯಲ್ಲಿ ಅಳವಡಿಸಲಾಗಿದೆ.
10] ಪ್ರಸೂತಿ ಸೌಲಭ್ಯ ಕಾಯ್ದೆ [ The Meternity Benefit Act ಆ 1961 ]
ಹೆರಿಗೆ ಸಂಬಂಧವಾಗಿ ಸಂಬಳ ಸಹಿತ ರಜೆ ಪಡೆಯುವ ಸೌಲಭ್ಯವನ್ನು ದುಡಿಯುವ ವಿವಾಹಿತ ಮಹಿಳೆಯರಿಗೆ ಅನುಷ್ಠಾನಗೊಳಿಸಲಾಗಿದೆ.
11] ಕಾರ್ಖಾನೆ {ತಿದ್ದುಪಡಿ} ಕಾಯ್ದೆ [ The Factories {Amendment} Act of 1976]
ಹಲವಾರು ಅನುಕೂಲತೆಗಳ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸಹಿತ ಸ್ತ್ರೀಯರಿಗಾಗಿ ಪ್ರತ್ಯೇಕ ಶೌಚಗ್ರಹಗಳನ್ನು, ಕೊಠಡಿಗಳನ್ನು ನಿರ್ಮಿಸುವುದು ಸೇರಿದಂತೆ ತಾಯಂದಿರ ದುಡಿಮೆಯ ಅವಧಿಯಲ್ಲಿ {ಅವರ ಸಂಖ್ಯೆ 30 ನ್ನು ಮೀರಿದ್ದರೆ} ಅವರ ಮಕ್ಕಳ ಸಂರಕ್ಷಣೆಗೂ ವ್ಯವಸ್ಥೆ ಮಾಡಬೇಕೆಂದು ಈ ಕಾನೂನು ಹೇಳುತ್ತದೆ.
ಪ್ರೊ; ಬಸವರಾಜ ಜಾಲವಾದಿ ಸರಕಾರಿ ಕಾಲೇಜು, ಕೂಡಗಿ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment