ನಾಗಠಾಣ ಶಾಸಕರಿಂದ ಆಹಾರ ಕಿಟ್ ವಿತರಣೆ
ವಿಜಯಪುರ : ನಾಗಠಾಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ದೇವಾನಂದ ಫೂ.ಚವ್ಹಾಣ ಅವರಿಂದ ಕ್ಷೇತ್ರ ವ್ಯಾಪ್ತಿಯ ಉತ್ನಾಳ ಎಲ್.ಟಿ.1,ಉತ್ನಾಳ ಎಲ್.ಟಿ 2, ಹೆಗಡಿಹಾಳ, ಮದಬಾವಿ, ಮದಬಾವಿ ಎಲ್.ಟಿ.2, ಕುಮಟಗಿ ತಾಂಡಾ.ಕಗ್ಗೋಡ. ಹಡಗಲಿತಾಂಡಾ 1&,2&3, ಆಹೇರಿತಾಂಡಾ1. ಶಿವಣಗಿ,ಹಾಗೂ ಅಂಕಲಗಿ ಗ್ರಾಮಗಳಲ್ಲಿ ಕೊರೋನಾ ಕೋವಿಡ-19 ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ ಮಾಡಲಾದ ಜನರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ನಂತರ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಆಹಾರ ಧಾನ್ಯಗಳ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶ್ರೀಮತಿ.ಡಾ.ಸುನಿತಾ ದೇವಾನಂದ ಚವ್ಹಾಣ, ವಿಜಯಪುರ ತಹಶೀಲ್ದಾರ್ ಶ್ರೀಮತಿ. ಮೋಹನ ಕುಮಾರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು, ಗ್ರಾಮಗಳ ಪ್ರಮುಖರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.