Thursday, November 7, 2024

14 ನೇ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳನ..!

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಅಖಿಲ ಭಾರತ ಶೈಕ್ಷಣಿಕ ಅಂದೋಲನ ಅಡಿಯಲ್ಲಿ 14 ನೇ ರಾಷ್ಟ್ರೀಯ ಸಮಾವೇಶವನ್ನ ನವೆಂಬರ್ 08, 09 ಮತ್ತು 10 ರಂದು ವಿಜಯಪುರ ನಗರದ ಹೆಸರಾಂತ ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಸಿಕ್ಯಾಬ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಆವರಣದಲ್ಲಿ ಎಐಇಎಮ್ ಹಾಗೂ ಸಿಕ್ಯಾಬ್ ಸಂಸ್ಥೆಯ ಸಹಯೋಗದೊಂದಿಗೆ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳನಕ್ಕೆ ಅತ್ಮೀಯ ಸಹೋದರ ಸಹೋದರಿಯರನ್ನು ಸ್ವಾಗತಿಸಲಾಗುತ್ತದೆ.

ಸಮಾವೇಶದ ಉದ್ದೇಶ ಸರ್ವರನ್ನೊಳಗೊಂಡ ಉತ್ತಮ ಗುಣಮಟ್ಟದ ಶಿಕ್ಷಣ, ತಾಂತ್ರಿಕ ಮತ್ತು ಅಂತರ್ಗತ ಶಿಕ್ಷಣ ಬಗ್ಗೆ ವಿಚಾರ ಗೋಷ್ಠಿಗಳು ನಡೆಯಲಿವೆ.

ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಪಾಂಡಿತ್ಯಪೂರ್ಣ ಉಪನ್ಯಾಸಗಳು, ಭಾಷಣಗಳು, ತಾಂತ್ರಿಕ ವಿಷಯಗಳ ಗೋಷ್ಠಿಗಳು, ಮಾತ್ರವಲ್ಲದೆ ಯುವ ಮನಸ್ಸುಗಳನ್ನು ಉನ್ನತೀಕರಿಸುವ ಮತ್ತು ಪ್ರೇರೇಪಿಸುವಂತಹ ವಿಶೇಷ ತಜ್ಞರು, ಚಿಂತನಕಾರರು ದೇಶದ, ವಿದೇಶದ ವಿವಿಧ ವಿಶ್ವ ವಿದ್ಯಾಲಯದ ಕುಲಪತಿಗಳು, ನಿವೃತ್ತ ಪ್ರಾಧ್ಯಾಪಕರು, ಸಮುದಾಯದ ನಾಯಕರು, ಸಂಸದರು, ಸಮಾಜ ಸೇವಕರು, ಶಿಕ್ಷಣ ತಜ್ಞರು ಉಪನ್ಯಾಸಗಳನ್ನು ಒಳಗೊಂಡಿದೆ.

ಮೊದಲ ದಿನ 8 ರಂದು ಮಧ್ಯಾಹ್ನ 3 ಗಂಟೆಗೆ ವಿಜಯಪುರ ಸಂಸದರಾದ ರಮೇಶ್ ಜಿಗಜಿಣಗಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸವರು. ಉದ್ಘಾಟನಾ ಭಾಷಣವನ್ನು ಅಖಿಲ ಭಾರತ ಶೈಕ್ಷಣಿಕ ಸಂಘಟನೆ ಹಾಗೂ ರಾಜ್ಯ ಸಭೆಯ ಸದಸ್ಯರಾದ ಡಾ. ಫೌಜೀಯಾ ಖಾನ್ ಮಾಡುವರು. ಕಾರ್ಯಕ್ರಮದ ಪ್ರಾಸ್ತಾವಿಕ ಮಾತಗಳನ್ನು ಎಐಇಎಂ ಅಧ್ಯಕ್ಷರಾದ ಪ್ರೋ, ಸ್ವಾಜಾ ಶಾಹಿದ್ ಮಾಡಲಿದ್ದು ದಿಕ್ಕೂಚಿ ಭಾಷಣವನ್ನು ಜೋಧಪುರ ಮೌಲಾನಾ ಆಜಾದ್ ವಿಶ್ವವಿದ್ಯಾನಿಲಯದ ಹಿಂದಿನ ಕುಲಪತಿಗಳಾದ ಪದ್ಮಶ್ರೀ ಪ್ರೋ. ಅಕ್ತರ್ ಉಲ್ ವಾಸೆ ನೀಡುವರು. ಗೌರವ ಅತಿಥಿಗಳಾಗಿ ಬಾಗಲಕೋಟ ಶಿರೂರಿನ ಪ್ರಕೃತಿ ಚಿಕಿತ್ಸಾ ಆಶ್ರಯ ಪೂಜ್ಯ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕ ಡಾ. ಮಕ್ಸುಲ್ ಬಾಗವಾನ್, ನಿವೃತ್ತ ಐಪಿಎಸ್ ಅಧಿಕಾರಿ ನಿಸ್ಸಾರ ಅಹಮದ್ ಹಿರಿಯ, ಪತ್ರಕರ್ತ ರಫಿ ಭಂಡಾರಿ ಆಗಮಿಸುವರು.

ಸಂಜೆ 7 ಗಂಟೆಗೆ ಉತ್ತರ ಪ್ರದೇಶದ ಖೈರಾನಾ ಅಲ್ ಖುರಾನ್ ಅಕಾಡೆಮಿಯ ಮುತ್ತಿ ಶಮಿ ಹಾಗೂ ಅವರ ತಂಡದವರಿಂದ '21ನೇ ಶತಮಾನಕ್ಕೆ ಖುರಾನ್ 'ಎಂಬ ರೂಪಕ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪಂ. ಮಧ್ವಾಚಾರ್ಯ ಮೊಖಾಶಿ ಭಾಗವಹಿಸಲಿದ್ದು ಸಲೀಮ್ ಜಾಗಿರದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ದಿನಾಂಕ 9 ರಂದು ಎರಡನೆಯ ದಿನ ಮುಂಜಾನೆ 9 ಗಂಟೆಗೆ ಸಿಕ್ಯಾಬ್ ತಾಂತ್ರಿಕ ಹಾಗೂ ಇಂಜಿನಿಯರಿಂಗ್ ಮಹಾವಿದ್ಯಾಲಯದ ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು ಇದರಲ್ಲಿ ಮಾಜಿ ಶಾಸಕ ಅರುಣ್ ಶಹಾಪೂರ ಮುಖ್ಯ ಅತಿಥಿಯಾಗಿ, ಅಧ್ಯಕ್ಷತೆಯನ್ನ ಡಾ. ಅವಾಬ್ ಫಕಿಹ್, ವಿಶೇಷ ಉಪನ್ಯಾಸಕರಾಗಿ ಅಮೇರಿಕಾದ ಝಾಯಿನ್ ಪೀರಜಾದೆ ಪ್ರಾಧ್ಯಾಪಕರಾದ ಹಾಗೂ ಪ್ರಾಚಾರ್ಯರಾದ ಅಬ್ಬಾಸ್ ಅಲಿ, ಬೆಂಗಳೂರು ಪಾಲ್ಕನ್ ಗ್ರುಪನ ಅಬ್ದುಸ್ ಸುಭಾನ್ ಉಪನ್ಯಾಸಗಳನ್ನು ನೀಡಲಿದ್ದಾರೆ.

ಮಧ್ಯಾಹ್ನ 2-30 ಕ್ಕೆ ನಡೆಯುವ 'ದಬ್ಬನಿನ ಮಧ್ಯ ಯುಗ ರಾಜಕೀಯ ಇತಿಹಾಸ ಹಾಗೂ ಶೈಕ್ಷಣಿಕ ವ್ಯವಸ್ಥೆ' ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಸಮಾಜದ ಧುರೀಣ ಅಬ್ದುಲ್ ಹಮೀದ್ ಮುಶ್ರಫ್, ಅಧ್ಯಕ್ಷರಾಗಿ ಪ್ರೋ. ವಾಜೀದ್ ಪೀರಾ, ವಿಶೇಷ ಹಾಗೂ ಉಪನ್ಯಾಸಕರಾಗಿ ನಾಡೋಜ ಡಾ. ಎಚ್ ಜಿ ದಡ್ಡಿ, ಇತಿಹಾಸ, ಪ್ರಾಧ್ಯಾಪಕ ಡಾ. ಅಬ್ದುಲ್ ಗನಿ ಇಮಾರತವಾಲೆ ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಗೆ ಭಾರತೀಯ ಶಿಕ್ಷಣಕ್ಕೆ ಮುಸ್ಲಿಮರ ಕೊಡುಗೆ ಎಂಬ ಗೋಷ್ಠಿಯಲ್ಲಿ ಕಲಬುರ್ಗಿಯ ಕೆಬಿಎನ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಮುಖ್ಯ ಅತಿಥಿಯಾಗಿ ಸಯ್ಯದ್ ಹೈದರ್ ಪಾಷಾ ಗೌರವ ಅತಿಥಿಯಾಗಿ ಸಮಾಜ ಧುರೀಣ ನಜೀಬ್ ಬಕ್ಷಿ ಅಧ್ಯಕ್ಷರಾಗಿ, ಉಪನ್ಯಾಸಕರಾಗಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ , ಜಾಪ್ರಿ, ಅಲ್ ಅಮೀನ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಮಹಿಬೂಬ್ ಕಲಬುರ್ಗಿ, ನಿವೃತ್ತ ಪ್ರಾಚಾರ್ಯರಾದ ಡಾ. ರೋಷನ್ ಆರಾ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ನಂತರ 5 ಗಂಟೆಯ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ದೆಹಲಿಯ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಮಜೀದ್ ಅಹ್ಮದ್ ತಾಳಿಕೋಟಿ, ಜಮಾತೆ ಇಸ್ಲಾಂ ಹಿಂದಿ ಕೇಂದ್ರೀಯ ಶಿಕ್ಷಣ ಮಂಡಳಿಯ ತನ್ನೀರ್ ಅಹ್ಮದ್ ಶಿಕ್ಷಣ ಕ್ಷೇತ್ರಕ್ಕೆ ಬಸವಣ್ಣನವರ ವಚನಗಳ ಕೊಡುಗೆ ಕುರಿತು ಬಿ ಎಲ್ ಡಿ ಇ ಸಂಸ್ಥೆಯ ಡಾ. ಮಹಾಂತೇಶ ಬಿರಾದಾರ ಮಾತನಾಡಲಿದ್ದಾರೆ.

ಸಂಜೆ 7-30ಕ್ಕೆ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಮುಂಬೈಯ ರಾಷ್ಟ್ರೀಯ ಶೈಕ್ಷಣಿಕ ಸಂಘಟನೆಯ ಮುಬಾರಕ್ ಕಾಪಾಡಿ ಭಾಗವಹಿಸಲಿದ್ದಾರೆ.

ರವಿವಾರ ಮೂರನೆಯ ದಿನ ಮುಂಜಾನೆ 9:00 ಗಂಟೆಗೆ 'ವಿಶ್ವ ಪಾರಂಪರಿಕ ನಗರವಾಗಿ ವಿಜಯಪುರ ಹಾಗೂ ನಗರ ನಿರ್ವಹಣೆ ಹಾಗೂ ಅಭಿವೃದ್ಧಿಯಲ್ಲಿ ನಾಗರಿಕರ ಪಾತ್ರ' ವಿಷಯಗಳ ಕುರಿತ ವಿಶೇಷ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಹಿರಿಯ ಅಯುಕ್ತ ಹಾಗೂ ಐ ಎ ಎಸ್ ಅಧಿಕಾರಿ ಡಾ. ಎಸ್ ಎಂ ಜಾಮದರ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ್ ಡಂಬಳ ವಹಿಸಲಿದ್ದು ಹೊಸ ದೆಹಲಿಯ ವಾಸ್ತು ತಜ್ಞ ಮಧುಸೂದನ್ ಚಂಡಕ್, ಡಾ. ಎಂ. ಬಿ. ಮುಲ್ಲಾ ಐತಿಹಾಸಿಕ ವಿಜಯಪುರ ನಗರದ ಕೇಂದ್ರ ಭಾಗದ ಪುನರುಜ್ಜಿವನ ಕುರಿತು ಉಪನ್ಯಾಸ ನೀಡಲಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ, ಪ್ರೊ. ಇರ್ಷಾದ್ ಪುಣೇಕರ, ಪ್ರೊ. ರುಕ್ಸಾನಾ ಅಲಗೂರ್, ಪೀಟ‌ರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ್ ಅತಿಥಿ ಉಪನ್ಯಾಸಗಳನ್ನು ನೀಡಲಿದ್ದಾರೆ.

ಅಂದು 11 ಗಂಟೆಗೆ ಮುಂಬೈನ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಝಡ್. ಎ. ಪುಣೇಕರ್ ಮುಖ್ಯ ಅತಿಥಿಯಾಗಿ ಶಿಕ್ಷಣದ ಪ್ರವರ್ಧನೆಯಲ್ಲಿ ನಾಗರಿಕ ಸಮಾಜದ ಪಾತ್ರ ಎಂಬ ಗೋಷ್ಠಿಯಲ್ಲಿ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಸಹಕಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್. ಎಸ್. ಬಿಳಗಿಪೀರ್ ವಹಿಸಲಿದ್ದಾರೆ.

ಬೀದರಿನ ಶಾಹಿನ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಾ. ಅಬ್ದುಲ್ ಖದಿರ್, ಹೈದರಾಬಾದಿನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಡಾ. ಮುಸ್ತಾಕ್ ಅಹಮದ್ ಪಟೇಲ್, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜಶೇಖರ್ ವಿ.ಎನ್. ಉಪನ್ಯಾಸಗಳನ್ನು ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ 'ಮದರಸ ಶಿಕ್ಷಣ ಒಂದು ಸಮಾಂತರ ಶಿಕ್ಷಣ ವ್ಯವಸ್ಥೆ' ಕುರಿತು ನಡೆಯುವ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯಾ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ ದೆಹಲಿಯ ಅಧ್ಯಕ್ಷರಾದ ಸಿರಾಜುದ್ದೀನ್ ಖುರೇಶಿ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಸಿಂದಗಿ ಬೈತುಲ್ ಉಲೂಮ್ ಉಪಪ್ರಾಚಾರ್ಯ ಮೌಲಾನಾ ಮಹಮ್ಮದ್ ಅಯೂಬ್ ಮೋಹಿದ್ದಿನ್ ನಧವಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕರಾಗಿ ಪಶ್ಚಿಮ ಬಂಗಾಳದ ಮಹಮ್ಮದ್ ನಸ್ರುದ್ದಿನ್, ಹೊಸ ದೆಹಲಿಯ ಪ್ರೊ. ಯಾಹ್ಯಾ ಅಂಜುಮ್‌, ನಗರದ ಮೌಲಾನಾ ಶಕೀಲ್ ಮುಲ್ಲಾ ಮಾತನಾಡಲಿದ್ದಾರೆ.

ನಂತರ 3 ಗಂಟೆಗೆ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಬಿ. ಕೆ. ತುಳಸಿಮಾಲಾ ಮುಖ್ಯ ಅತಿಥಿಯಾಗಿ, ಅಧ್ಯಕ್ಷರಾದ ಮುಂಬಯಿನ ಇಕ್ರಾ ಪ್ರತಿಷ್ಠಾನದ ಶ್ರೀ ಮತಿ ಉಜ್ಞಾ ನಾಹಿದ್ ಉಪನ್ಯಾಸಕರಾಗಿ ಶ್ರೀ ಮತಿ ಸಂಯುಕ್ತ ಪಾಟೀಲ, ಡಾ. ಹಲೀಮಾ ಸಾದಿಯಾ, ಡಾ. ಹಾಹಿರಾ ಪರವೀನ್ ಮಾತನಾಡಲಿದ್ದಾರೆ.

ಸಂಜೆ 5 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಮ್. ಜಾಮದಾರ ಆಗಮಿಸಲಿದ್ದು ಸಮಾರೋಪ ಸಮಾರಂಭ ಭಾಷಣವನ್ನು ಅಖಿಲ ಭಾರತ ಶೈಕ್ಷಣಿಕ ಅಂದೋಲನದ ಡಾ. ಸ್ವಾಜಾ, ಎಮ್ ಶಾಹಿದ್ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ನಗರದ ಆರ್ಕಾಟ್ ದರ್ಗಾದ ಪೀಠಾಧಿಪತಿ ಡಾ. ಸೈಯದ್ ತಖವಿ ಪೀರಾ ಹುಸೇನ್‌ ಬರಲಿದ್ದು, ಅಧ್ಯಕ್ಷತೆಯನ್ನು ಕೇರಳ ಎಂಇಎಸ್ ಅಧ್ಯಕ್ಷರಾದ ಫಜಲ್ ಗಪೂರ ವಹಿಸಲಿದ್ದಾರೆ.

ನಂಜೆ 7 ಗಂಟೆಗೆ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಮೂರು ದಿನಗಳ ಕಾರ್ಯಕ್ರಮದಲ್ಲಿ ಪುಸ್ತಕ ಮೇಳ, ಆಹಾರ ಮೇಳ, ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳು ನಡೆಯಲಿವೆ. ಎಂದು ಸಿಕ್ಯಾಬ್ ತಾಂತ್ರಿಕ ಹಾಗೂ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಸೈಯದ್ ಅಬ್ಬಾಸ್ ಅಲಿ, ಸಿಕ್ಯಾಬ್ ಎ ಆರ್.ಎಸ್ ಇನಾಮಾದಾರ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಚ್.ಕೆ. ಯಡಹಳ್ಳಿ, ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ.ಎ.ಎಸ್.ಖಾದ್ರಿ, ಡಾ. ಮಹಮ್ಮದ್ ನಮಿಯುದ್ದಿನ್, ಡಾ. ಎಸ್. ಎಚ್. ಕಾಖಂಡಕ್ಕಿ, ಡಾ. ನಿಯಾಮತುಲ್ಲಾ ಪಟೇಲ್, ಪ್ರೋ ನಚಿನ್ ಪಾಂಡೆ, ನಿವೃತ್ತ ಪ್ರಾಚಾರ್ಯ ಎನ್ ಎಸ್ ಭೂಸನೂರ, ಪ್ರಾಚಾರ್ಯ ಪ್ರೋ. ಸೈಯದ್ ಸಮಿರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮಹಿಳಾ ವಿವಿ: ಗ್ರಾಫಿಕ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗ್ರಾಫಿಕ್ ಡಿಸೈನಿಂಗ್ ಕೋರ್ಸ್ಗೆ ಪ್ರವೇಶ ಪಡೆದುಕೊಳ್ಳಲು ನವೆಂಬರ್ 15ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಆಸಕ್ತ ವಿದ್ಯಾರ್ಥಿನಿಯರು ನೇರವಾಗಿ ವಿಭಾಗದ ಮುಖ್ಯಸ್ಥರನ್ನು ಭೇಟಿ ಮಾಡಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಆರು ತಿಂಗಳ ಈ ಕೋರ್ಸ್ಗೆ ಪ್ರವೇಶ ಪಡೆದುಕೊಳ್ಳಲು ಪಿಯುಸಿ ಪಾಸಾಗಿರಬೇಕು. ಆರು ತಿಂಗಳ ಈ ಕೋರ್ಸ್ನಲ್ಲಿ ವಿದ್ಯಾರ್ಥಿನಿಯರಿಗೆ ಗ್ರಾಫಿಕ್ ವಿನ್ಯಾಸ ಮತ್ತು ವಿನ್ಯಾಸದ ಅಂಶಗಳ ಬಗ್ಗೆ ತರಬೇತಿ ನೀಡಲಾಗುವುದು. ಅಲ್ಲದೇ ವಿವಿಧ ಗ್ರಾಫಿಕ್ ವಿನ್ಯಾಸದ ಸಾಫ್ಟ್ವೇರ್‌ಗಳನ್ನು ಪರಿಚಯಿಸುವುದು ಮತ್ತು ವೈವಿಧ್ಯಮಯ ಮುದ್ರಣ ವಿನ್ಯಾಸಗಳನ್ನು ರಚಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುವುದು ಹಾಗೂ ವಿಭಾಗದಲ್ಲಿ ಲಭ್ಯವಿರುವ ಮಾಧ್ಯಮ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಈ ಕೋರ್ಸ್ನ ಉದ್ದೇಶವಾಗಿದೆ.

ಈ ಸರ್ಟಿಫಿಕೇಟ್ ಕೋರ್ಸ್ನಲ್ಲಿ ವಿದ್ಯಾರ್ಥಿನಿಯರಿಗೆ ಗ್ರಾಫಿಕ್ಸ್ ವಿನ್ಯಾಸದ ಮೂಲ ತತ್ವಗಳು, ಗ್ರಾಫಿಕ್ಸ್ ವಿನ್ಯಾಸ ಮಾಡಲು ಅಗತ್ಯವಿರುವ ಕಂಪ್ಯೂಟರ್ ಜ್ಞಾನ, ಗ್ರಾಫಿಕ್ಸ್ ವಿನ್ಯಾಸಕ್ಕೆ ಬಳಸುವ ಸಾಫ್ಟ್ವೇರ್‌ಗಳ ಪರಿಚಯ, ಗ್ರಾಫಿಕ್ಸ್ ವಿನ್ಯಾಸದ ಪ್ರಕ್ರಿಯೆ, ತಂತ್ರಗಳು, ಬಣ್ಣಗಳ ಬಳಕೆ, ಅಕ್ಷರ ವಿನ್ಯಾಸ, ಚಿತ್ರ ಸಂಯೋಜನೆ, ಮೊದಲಾದ ಅಗತ್ಯ ವಿಷಯಗಳನ್ನು ಕಲಿಸಲಾಗುವುದು. ಈ ಕೋರ್ಸ್ ಪ್ರಾಯೋಗಿಕ ತರಗತಿಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಈ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದವರಿಗೆ ಮುದ್ರಣ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9482248372 ಅಥವಾ 9844681398 ಸಂಪರ್ಕಿಸಬಹುದಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

08-11-2024 EE DIVASA KANNADA DAILY NEWS PAPER