Thursday, November 7, 2024

ಮಹಿಳಾ ವಿವಿ: ಗ್ರಾಫಿಕ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗ್ರಾಫಿಕ್ ಡಿಸೈನಿಂಗ್ ಕೋರ್ಸ್ಗೆ ಪ್ರವೇಶ ಪಡೆದುಕೊಳ್ಳಲು ನವೆಂಬರ್ 15ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಆಸಕ್ತ ವಿದ್ಯಾರ್ಥಿನಿಯರು ನೇರವಾಗಿ ವಿಭಾಗದ ಮುಖ್ಯಸ್ಥರನ್ನು ಭೇಟಿ ಮಾಡಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಆರು ತಿಂಗಳ ಈ ಕೋರ್ಸ್ಗೆ ಪ್ರವೇಶ ಪಡೆದುಕೊಳ್ಳಲು ಪಿಯುಸಿ ಪಾಸಾಗಿರಬೇಕು. ಆರು ತಿಂಗಳ ಈ ಕೋರ್ಸ್ನಲ್ಲಿ ವಿದ್ಯಾರ್ಥಿನಿಯರಿಗೆ ಗ್ರಾಫಿಕ್ ವಿನ್ಯಾಸ ಮತ್ತು ವಿನ್ಯಾಸದ ಅಂಶಗಳ ಬಗ್ಗೆ ತರಬೇತಿ ನೀಡಲಾಗುವುದು. ಅಲ್ಲದೇ ವಿವಿಧ ಗ್ರಾಫಿಕ್ ವಿನ್ಯಾಸದ ಸಾಫ್ಟ್ವೇರ್‌ಗಳನ್ನು ಪರಿಚಯಿಸುವುದು ಮತ್ತು ವೈವಿಧ್ಯಮಯ ಮುದ್ರಣ ವಿನ್ಯಾಸಗಳನ್ನು ರಚಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುವುದು ಹಾಗೂ ವಿಭಾಗದಲ್ಲಿ ಲಭ್ಯವಿರುವ ಮಾಧ್ಯಮ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಈ ಕೋರ್ಸ್ನ ಉದ್ದೇಶವಾಗಿದೆ.

ಈ ಸರ್ಟಿಫಿಕೇಟ್ ಕೋರ್ಸ್ನಲ್ಲಿ ವಿದ್ಯಾರ್ಥಿನಿಯರಿಗೆ ಗ್ರಾಫಿಕ್ಸ್ ವಿನ್ಯಾಸದ ಮೂಲ ತತ್ವಗಳು, ಗ್ರಾಫಿಕ್ಸ್ ವಿನ್ಯಾಸ ಮಾಡಲು ಅಗತ್ಯವಿರುವ ಕಂಪ್ಯೂಟರ್ ಜ್ಞಾನ, ಗ್ರಾಫಿಕ್ಸ್ ವಿನ್ಯಾಸಕ್ಕೆ ಬಳಸುವ ಸಾಫ್ಟ್ವೇರ್‌ಗಳ ಪರಿಚಯ, ಗ್ರಾಫಿಕ್ಸ್ ವಿನ್ಯಾಸದ ಪ್ರಕ್ರಿಯೆ, ತಂತ್ರಗಳು, ಬಣ್ಣಗಳ ಬಳಕೆ, ಅಕ್ಷರ ವಿನ್ಯಾಸ, ಚಿತ್ರ ಸಂಯೋಜನೆ, ಮೊದಲಾದ ಅಗತ್ಯ ವಿಷಯಗಳನ್ನು ಕಲಿಸಲಾಗುವುದು. ಈ ಕೋರ್ಸ್ ಪ್ರಾಯೋಗಿಕ ತರಗತಿಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಈ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದವರಿಗೆ ಮುದ್ರಣ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9482248372 ಅಥವಾ 9844681398 ಸಂಪರ್ಕಿಸಬಹುದಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment