Friday, October 3, 2025

04-10-2025 EE DIVASA KANNADA DAILY NEWS PAPER

ಸಚಿವ ಶಿವಾನಂದ ಪಾಟೀಲರಿಂದ ಬನ್ನಿ ವಿನಿಮಯ

ವಿಜಯಪುರ :  ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಶುಕ್ರವಾರ ವಿಜಯಪುರ ನಗರದ ತೋಟದ ಮನೆಯಲ್ಲಿ  ಸಾರ್ವಜನಿಕ ಬನ್ನಿ ವಿನಿಮಯ ಆಚರಿಸಿದರು.

ನಗರದ ಜಮಖಂಡಿ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ತಮ್ಮ ತವರು ಕ್ಷೇತ್ರ ಬಸವನಬಾಗೇವಾಡಿ ಮಾತ್ರವಲ್ಲದೆ ವಿಜಯಪುರ, ಬಾಗಲಕೋಟೆ, ಹಾವೇರಿ ಜಿಲ್ಲೆಯಿಂದ ಆಗಮಿಸಿದ್ದ ಜನಸ್ತೋಮದ ಮಧ್ಯೆ ಬನ್ನಿ ವಿನಿಮಯ ಮಾಡಿಕೊಂಡು  ವೈರತ್ವ ಮರೆತು ಬನ್ನಿ ತಗೊಂಡ ಬಂಗಾರದಂಗ ಇರೋಣ ಎಂಬ ಸಂದೇಶ ಸಾರಿದರು.
ಶುಕ್ರವಾರ ಬೆಳಿಗ್ಗೆಯಿಂದಲೇ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ತೋಟದ ಮನೆಯ ಆವರಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮ, ವಿವಿಧ ಮಠಾಧೀಶರು, ಮಾಜಿ ಸಚಿವರು, ಹಾಲಿ ಶಾಸಕರು, ರಾಜಕೀಯ ಗಣ್ಯರು, ಮುಖಂಡರು, ರೈತರು, ಸಾರ್ವಜನಿಕರು, ಯುವಕರು, ಮಹಿಳೆಯರು, ಬೆಂಬಲಿಗರು, ಅಭಿಮಾನಿಗಳು, ಸೇರಿದಂತೆ ಸುಮಾರು ಅರ್ಧ ಲಕ್ಷಕ್ಕೂ ಮಿಕ್ಕಿದ ಜನರು ಆಗಮಿಸಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ತಮಗೆ ಪ್ರೀತಿಯಿಂದ ದಸರಾ ಶುಭಾಶಯ ಕೋರಿದ ಸಾರ್ವಜನಿಕರಿಗೆ ಸಚಿವರೂ ಕೂಡ ಬನ್ನಿ ನೀಡಿ ವಿಜಯ ದಶಮಿ ಹಬ್ಬದ ಶುಭಾಶಯ ಕೋರಿದರು.
ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ವಿಡಿಸಿಸಿ ಬ್ಯಾಂಕ್ ನಿರ್ದೇಶಕಿತಾಗಿರುವ ಪುತ್ರು ಸಂಯುಕ್ತ ಪಾಟೀಲ, ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿರುವ ಪುತ್ರ ಸತ್ಯಜೀತ ಪಾಟೀಲ ಅವರೂ ಉಪಸ್ಥಿತರಿದ್ದು ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರ ಸೇರಿದಂತೆ ವಿಜಯಪುರ, ಹಾವೇರಿ, ಬಾಗಲಕೋಟೆ ಜಿಲ್ಲೆಯಿಂದಲೂ ಪಕ್ಷಾತೀತವಾಗಿ ಆಗಮಿಸಿದ್ದ ಜನರು ಸಚಿವ ಶಿವಾನಂದ ಪಾಟೀಲ ಅವರ ಅಭಿಮಾನಿಗಳು, ಕಾಂಗ್ರೆಸ ಮುಖಂಡರು, ಕಾರ್ಯಕರ್ತರು ಸಚಿವರೊಂದಿಗೆ ಬನ್ನಿ ವಿನಿಮಶುಭಾಶಯ ಕೋರಿದರು. 
ಬನ್ನಿ ವಿನಿಮಯ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಜನರಿಗೆ ಬೆಳಿಗ್ಗೆಯಿಂದಲೇ ಉಪಹಾರ, ಮಧ್ಯಾಹ್ನ ಗೋದಿ ಹುಗ್ಗಿ ಸೇರಿದಂತೆ ವಿವಿಧ ಖಾದ್ಯಗಳ ಊಟೋಪಚಾರದ ವ್ಯವಸ್ಥೆ ನಡೆದಿತ್ತು.
ಮತ್ತೊಂದೆಡೆ, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ವಿರೇಶ ವಾಲಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದಿತ್ತು.


ರಾಜ್ಯದಲ್ಲಿ ಹಲವೆಡೆ ಅತೀವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ, ನಾಡದೇವಿ ಚಾಮುಂಡೇಶ್ವರಿ ನಾಡಿನಾದ್ಯಂತ ರೈತರಿಗೆ, ನಾಡಿನ ಜನತೆಗೆ ನೆಮ್ಮದಿ ಸುಖ ಶಾಂತಿ ಸಮೃದ್ದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶಿವಾನಂದ ಪಾಟೀಲ
ಸಚಿವರು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ.

ಸ್ವಚ್ಛತೆಯು ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಸಮಾಜದ ಉನ್ನತಿ ಮತ್ತು ಸಮೃದ್ಧಿಗೆ ಅಗತ್ಯವಾದ ಜವಾಬ್ದಾರಿ : ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ

 ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್. ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾತ್ಮಾ ಗಾಂಧಿಜಿಯವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಚಾಲನೆ ನೀಡಿದರು.

 ವಿಜಯಪುರ: ಸ್ವಚ್ಛತೆಯು ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಸಮಾಜದ ಉನ್ನತಿ ಮತ್ತು ಸಮೃದ್ಧಿಗೆ ಅಗತ್ಯವಾದ ಜವಾಬ್ದಾರಿ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್. ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ  ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಚ್ಛತೆಯು ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದ್ದು, ಇದು ರೋಗಾಣುಗಳು ಮತ್ತು ಸೋಂಕುಗಳ ಹರಡುವಿಕೆಯನ್ನು ತಡೆಯುವುದರೊಂದಿಗೆ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಹಕಾರಿ ಆಗುತ್ತದೆ. ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತು ಆಹಾರದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ವ್ಯಕ್ತಿಗೂ ಸಮಾಜಕ್ಕೂ ಸಮಾನವಾಗಿ ಪ್ರಯೋಜನಕಾರಿ ಎಂದರು.

ಈ ಕಾರ್ಯಕ್ರಮದಲ್ಲಿ ಪ್ರೊ.ಪಿ.ಜಿ.ತಡಸದ, ಪ್ರೊ.ಸಕ್ಪಾಲ್ ಹೂವಣ್ಣ, ಪ್ರೊ.ಮಹೇಶ ಚಿಂತಾಮಣಿ, ಪ್ರೊ.ಅಶೋಕಕುಮಾರ ಸುರಪುರ, ಪ್ರೊ.ಜ್ಯೋತಿ ಉಪಾಧ್ಯಾಯ, ಪ್ರೊ. ಹಣಮಂತಯ್ಯ ಪೂಜಾರಿ, ಪ್ರೊ.ರಾಜು ಬಾಗಲಕೋಟ, ಪ್ರೊ. ರಾಜಕುಮಾರ ಮಾಲಿಪಾಟೀಲ, ಪ್ರೊ. ನಾರಾಯಣ ಪವಾರ, ಪ್ರೊ. ನಾಮದೇವ ಗೌಡ, ಡಾ. ಜಾಯ್ ಹೊಸಕೇರಿ, ಡಾ.ಅಮರನಾಥ ಪ್ರಜಾಪತಿ, ಡಾ.ಗುಲಾಬ್ ರಾಠೋಡ, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು, ಸಂಶೋಧನಾ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು ಹಾಗೂ ಎನ್.ಎಸ್.ಎಸ್ ಸ್ವಯಂಸೇವಕಿಯರು ಭಾಗವಹಿಸಿ ವಿಶ್ವವಿದ್ಯಾನಿಲಯದ ಆವರಣವನ್ನು ಸ್ವಚ್ಛಗೊಳಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.