Sunday, August 3, 2025
ಗಡಿಕಾಯುವ ವೀರಯೋಧರಿಗಾಗಿ ರಾಖಿ ರವಾನಿಸಿ ದೇಶಪ್ರೇಮ ಮೆರೆದ ಚಿಣ್ಣರು
ವಿಜಯಪುರ : ಶ್ರೀಮತಿ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಘದ ವಿಶೇಷ ಚೇತನ ಮಕ್ಕಳ ಪುನಶ್ಚೇತನ ಕೇಂದ್ರದ ಮಕ್ಕಳು ಹಾಗೂ ಶ್ರೀ ರುಕ್ಮಾಂಗದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿ ವಿಭಿನ್ನವಾದ ರೀತಿಯಲ್ಲಿ ರಾಖಿಯನ್ನು ತಯಾರಿಸಿ ಗಡಿಕಾಯುವ ಯೋಧರಿಗೆ ಕಳುಹಿಸುವ ಮೂಲಕ ದೇಶನಿಷ್ಠೆಯನ್ನು ಮೆರೆದಿದ್ದಾರೆ.
ಮಕ್ಕಳು ತಯಾರಿಸಿದ ರಾಖಿಗಳು ಒಳಗೊಂಡ ಪೆಟ್ಟಿಗೆಯನ್ನು ವೀರಯೋಧರ ವಿಳಾಸಕ್ಕೆ ರವಾನಿಸುವಂತೆ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿ ಆನಂದ ಅವರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭ ಶ್ರೀಮತಿ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಘ, ಸ್ಥಾಪಕರು ಹಾಗೂ ವಿಶೇಷ ಚೇತನ ಮಕ್ಕಳ ಪುನಶ್ಚೇತನ ಕೇಂದ್ರದ ಮುಖ್ಯಸ್ಥರಾದ ಪ್ರಶಾಂತ್ ದೇಶಪಾಂಡೆ ಮಾತನಾಡಿ, ಇಂದು ನಮಗಾಗಿ ಹಗಲಿರುಳು ಎನ್ನದೆ ದೇಶವನ್ನು ಕಾಯುತ್ತಿರುವ ಯೋದÀರಿಂದಲೇ ನಾವುಇಷ್ಟು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಮಾತ್ರವಲ್ಲ ಅವರಿಂದ ದೇಶ ಸುಭದ್ರವಾಗಿರಲು ಸಾಧ್ಯವಾಗಿದೆ. ಅಂತಹ ವೀರ ಯೋಧರಿಗೆ ರಾಖಿಯನ್ನು ಕಳಿಸುತ್ತಿರುವುದು ಬಹಳ ಆನಂದವನ್ನು ತಂದಿದೆ ಎಂದರು.
ಈ ಸಂದರ್ಭ ಮನೋಜ ಗಿರಗಾಂವಿ ಮಾತನಾಡಿ, ಹೆತ್ತ ತಾಯಿ, ಭೂಮಿ ತಾಯಿ ಸ್ವರ್ಗಕ್ಕಿಂತ ದೊಡ್ಡವಳು. ಅಂತಹ ಭಾರತದ ನೆಲ ,ಜಲ ರಕ್ಷಣೆಗಾಗಿ ಸೇವೆಸಲ್ಲಿಸುತ್ತಿರುವ ಯೋಧರ ಕಾರ್ಯ ನಿಜವಾಗಲೂ ಅಭಿನಂದನೀಯ. ಮಕ್ಕಳಲ್ಲಿ ದೇಶಪ್ರೇಮ ಬೆಳಸುವ ನಿಟ್ಟಿನಲ್ಲಿ ಮಕ್ಕಳು ತಾವೇ ತಯಾರಿಸಿ ರಾಖಿಯನ್ನು ಯೋಧರಿಗೆ ಕಳುಹಿಸುತ್ತಿರುವುದು ಹೆಮ್ಮೆಯೆನಿಸುತ್ತಿದೆ ಎಂದರು.
ಈ ಸಂದರ್ಭ ಅಶೋಕ ಹಿರೇಮಠ, ಪ್ರತಿಮಾ ಪೂಜಾರಿ, ಕಸ್ತೂರಿ ಕಾಂಬಳೆ, ಮಂಜುನಾಥ ಕಾಂಬಳೆ, ಸುಪ್ರಿತ್ ಅಲಬನೂರು, ಅಂಬರೀಶ್, ಜ್ಯೋತಿ ತಡ, ರಿಯಾಜ್ ಚಿಗರೊಳ್ಳಿ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
.jpeg)

