Sunday, June 29, 2025
ದೇಶದಲ್ಲೇ ಕರ್ನಾಟಕದ ಸರ್ಕಾರಿ ಶಾಲೆ ಫಸ್ಟ್ : ಸಚಿವ ಶಿವಾನಂದ
ಬಸವನಬಾಗೇವಾಡಿ : ಉತ್ತರ ಪ್ರದೇಶ ಹಲವು ಪ್ರಧಾನ ಮಂತ್ರಿಗಳನ್ನು ನೀಡಿದರೂ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಹಿಂದಿದೆ. ಆದರೆ ದೇಶದ 31 ರಾಜ್ಯಗಳಲ್ಲೇ ಕನರ್ಾಟಕ ರಾಜ್ಯ ಸಕರ್ಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, 1.4 ಕೋಟಿ ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.
ಶನಿವಾರ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಹಿರಿಯರು ಶೈಕ್ಷಣಿಕ ಸೌಲಭ್ಯಗಳ ಮಾತಿರಲಿ ಕನಿಷ್ಟ ಶಾಲೆಯೇ ಇಲ್ಲದೇ ಅಕ್ಷರ ಜ್ಞಾನ ವಂಚಿತರಾದರು. ಅವರು ಕನಸೂ ಕಾಣದ ರೀತಿಯಲ್ಲಿ ಇದೀಗ ನಮ್ಮ ಸಕರ್ಾರ ಕಡಿಮೆ ಜನಸಂಖ್ಯೆ ಇರುವ ತಾಂಡಾಗಳಲ್ಲೂ ಶೈಕ್ಷಣಿಕ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಬದ್ಧತೆ ತೋರುತ್ತಿದೆ ಎಂದರು.
ಕನರ್ಾಟಕ ರಾಜ್ಯದಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆ ಹಣದಲ್ಲಿ ಶೇ.18 ರಷ್ಟು ಅನುದಾನವನ್ನು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಸಕರ್ಾರಗಳು, ಮುಖ್ಯಮಂತ್ರಿಗಳು ತಮ್ಮ ತಮ್ಮ ಕಾಲಾವಧಿಯಲ್ಲಿ ಒಬ್ಬರು ಶಾಲಾ ಕಟ್ಟಡಕ್ಕೂ, ಮತ್ತೊಬ್ಬರು ಶಿಕ್ಷಕರ ನೇಮಕಕ್ಕೂ, ಬಸ್ ಪಾಸ್, ಸೈಕಲ್, ಬಿದಿಯೂಟ, ಹಾಲು, ಮೊಟ್ಟೆ, ಬೂಟು, ಸಾಕ್ಸು, ಉಚಿತ ವಸತಿ-ಆಹಾರ ಸಹಿತ ವಿದ್ಯಾಥರ್ಿ ನಿಲಯಗಳು ಹೀಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದು ವಿವರಿಸಿದರು.
ಹೀಗಾಗಿ ಸಮಾಜದಲ್ಲಿ ಎಲ್ಲ ತಾಯಂದಿರು, ವಿಶೇಷವಾಗಿ ತಾಂಡಾಗಳ ಜನರು ತಾವು ಗುಳೆ ಹೋದರೂ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಸಕರ್ಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಹೋಗಿ. ಸಕರ್ಾರಿ ಶಾಲೆಯಲ್ಲೇ ಓದಿದ ಎಪಿಜೆ ಅಬ್ದುಲ್ ಕಲಾಂ ಎಂಬ ಬಾಲಕ ಭಾರತದ ರಾಷ್ಟ್ರಪತಿ ಸ್ಥಾನಕ್ಕೇರಿದ್ದು, ಶೈಕ್ಷಣಿಕ ಪ್ರತಿಭೆಯಿಂದ ಎಂಬುದನ್ನು ಮರೆಯಬೇಡಿ ಎಂದು ಕಿವಿ ಮಾತು ಹೇಳಿದರು.
ಶಿಕ್ಷಣ ಪಡೆದ ಓರ್ವ ಸುಕ್ಷಿತ ತಾಯಿ ಸಾವಿರ ಶಿಕ್ಷಕರಿಗೆ ಸಮ. ಹೀಗಾಗಿ ಮಹಿಳೆಯರ ಶಿಕ್ಷಣಕ್ಕೂ ಆದ್ಯತೆ ನೀಡಿ, ಉತ್ತಮ ಸಮಾಜ ನಿಮರ್ಾಣಕ್ಕೆ ಗಮನ ಕೊಡುವಂತೆ ಸಲಹೆ ನೀಡಿದ ಸಚಿವರು, ನಿಮ್ಮ ಮಕ್ಕಳಲ್ಲಿರುವ ಪ್ರತಿಭೆ ಶೈಕ್ಷಣಿಕ ಸೌಲಭ್ಯದ ಮೂಲಕ ಸಮಾಜದಲ್ಲಿ ಸಾಧನೆಗೆ ವೇದಿಕೆ ನಿಮರ್ಿಸಲಿದೆ ಎಂದು ವಿಶ್ಲೇಷಿಸಿದರು.
ಕಂದಾಯ ಗ್ರಾಮಗಳ ಸೃಷ್ಟಿಯ ಮೂಲಕ ನಮ್ಮ ಸಕರ್ಾರ ಗೈರಾಣ, ಗಾಂಠಾಣಾ, ಅನಧಿಕೃತ ಕಟ್ಟಡಗಳನ್ನು ಸಕ್ರಮ ಗೊಳಿಸುವ ಮೂಲಕ ಒಕ್ಕಲೇಳುವ ಭೀತಿಯಿಂದ ಮುಕ್ತಿ ಕೊಡಿಸಿರುವುದು ನಮ್ಮ ಸಕರ್ಾರ ಬಡವರ ಪರ ಇರುವ ಬದ್ಧತೆ ತೋರಿದೆ ಎಂದು ವಿವರಿಸಿದರು.
ಸಚಿವ ಶಿವಾನಂದ ಪಾಟೀಲ ಅವರು ಇಂಗಳೇಶ್ವರ ತಾಂಡಾದಲ್ಲಿ ಸಕರ್ಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಲ್ಲಿ ನಿಮರ್ಾಣ ಗೊಂಡಿರುವ ಕೋಠಡಿ ಲೋಕಾರ್ಪಣೆ ಹಾಗೂ ಎಸ್ಸಿಪಿ ಯೋಜನೆಯಲ್ಲಿ ನೂತನ ಕೋಠಡಿ ನಿಮರ್ಾಣಕ್ಕೆ ಭೂಮಿ ಪೂಜೆ, ಕೃಷ್ಣಾಪುರ ಪುನರ್ವಸತಿ ಕೇಂದ್ರಕ್ಕೆ ಜಲಜೀವನ ಮಿಷನ್ ಯೋಜನೆ ಕಾಮಗಾರಿ, ಬಸವನಬಾಗೇವಾಡಿ-ಇಂಗಳೇಶ್ವರ ರಸ್ತೆ ಸುಧಾರಣೆ, ವಿಜಯಪುರ- ಉಕ್ಕಲಿ- ದಿಂಡವಾರ- ಸಾಸನೂರ- ಬಳಗಾನೂರ- ನಾಲತವಾಡ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ರಾಜ್ಯದಲ್ಲಿ ಕರ್ಮ-ಧರ್ಮದ ಸಂಯೋಗದಿಂದ ಅಸ್ತಿತ್ವಕ್ಕೆ ಬಂದಿರುವ ನಮ್ಮ ಸಕರ್ಾರ ತಾಂಡಾ, ಹಾಡಿಗಳಂಥ ನೆಲೆಯಲ್ಲಿ ಸೂರು ಕಟ್ಟಿಕೊಂಡಿದ್ದ ಜನರಿಗೆ ಸೂರಿನ ಗ್ಯಾರಂಟಿ ನೀಡಿದ್ದಾರೆ. ದೇವರಾಜ ಅರಸು ಅವರು ಉಳುವವನೇ ಭೂಮಿ ಒಡೆಯ ಎಂಬ ಯೋಜನೆ ಜಾರಿಗೆ ತಂದಿದ್ದರು. ಕಾಗೋಡು ತಿಮ್ಮಪ್ಪ ಅವರು ಕಂಡಿದ್ದ ತಾಂಡಾ, ಹಾಡಿಗಳಲ್ಲಿ ಮನೆ ಕಟ್ಟಿಕೊಂಡಿದ್ದ ಜನರ ಸೂರುಗಳನ್ನು ಸಕ್ರಮ ಗೊಳಿಸಲು ನಮ್ಮ ಸಕರ್ಾರ ಕಂದಾಯ ಗ್ರಾಮಗಳಾಗಿಸಿ ನಿಮ್ಮಗಳ ನೆಲೆಗಳನ್ನು ಭದ್ರಪಡಿಸಿದ್ದಾರೆ ಎಂದು ವಿವರಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
.jpg)