Wednesday, April 9, 2025
ಹೊರ ಗುತ್ತಿಗೆ ಕಂಪ್ಯೂಟರ್ ಆಫರೇಟರ್ ಅವರನ್ನು ಕೂಡಾ ಕಾಯಂ ನೇಮಕಾತಿ ಮಾಡಲು ಗುರುರಾಜ ಲ. ಹಂದ್ರಾಳ ಆಗ್ರಹ
ವಿಜಯಪುರ : ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರು 2000 ಪೌರ ಕಾರ್ಮಿಕರನ್ನು ಕಾಯಂ ಮಾಡಿದಂತೆ ಮಾನವ ಸಂಪನ್ಮೂಲ ಪೂರೈಸುತ್ತಿರುವ ಏಜೆನ್ಸಿರವರುಗಳ ಹೊರ ಗುತ್ತಿಗೆ ಕಂಪ್ಯೂಟರ್ ಆಫರೇಟರ್ ನೌಕರರನ್ನು ಕೂಡಾ ಕಾಯಂ ಮಾಡಬೇಕೆಂದು ವಿಚಾರವಾದಿ ಗುರುರಾಜ ಲಕ್ಷö್ಮಣ ಹಂದ್ರಾಳ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಏಜೆನ್ಸಿಗಳಿಂದ ಹೊರ ಗುತ್ತಿಗೆ ನೌಕರರಿಗೆ ಮುಕ್ತಿಕೊಡಿಸಲು ಕಾಯಂ ಮಾಡಬೇಕು. ಸಿಎಂ ಸಿದ್ಧರಾಮಯ್ಯನವರು ಬಡವರ ಪರ ಬಹಳಷ್ಟು ಹೊಸ ಯೋಜನೆಗಳನ್ನು ರೂಪಿಸಿ ಬಡವರ ಬಾಳಿಗೆ ಬೆಳಕಾಗಿದ್ದಾರೆ. ಅವರು ಮಾನವೀಯ ಸಂವೇದೆನೆಯುಳ್ಳವರಾಗಿದ್ದಾರೆ. ಅವರಿಂದ ಕರ್ನಾಟಕದಲ್ಲಿ ಬಡವರು ನಿರಾಳರಾಗಿ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಅದರಂತೆ ಎಲ್ಲ ವರ್ಗದವರ ಹಿತ ಕಾಯುವವರು ಯಾರಾದರೂ ಕರ್ನಾಟಕದಲ್ಲಿ ಇದ್ದರೆ ಅದು ಸಿಎಂ ಸಿದ್ಧರಾಮಯ್ಯನವರು!
ಅದರಂತೆ ಮಾನವ ಸಂಪನ್ಮೂಲವನ್ನು ಪೂರೈಸುತ್ತಿರುವ ಏಜೆನ್ಸಿ ರವರುಗಳು 'ಸಿ' ಮತ್ತು 'ಡಿ' ದರ್ಜೆ ನೌಕರರುಗಳಿಗೆ 05 ರಿಂದ 06 ತಿಂಗಳು ವೇತನವನ್ನು ನೀಡುವಲ್ಲಿ ಏಜೆನ್ಸಿಯವರ ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ. ವರ್ಷದವರೆಗೆ ಪಿ.ಎಫ್ ಹಣ ತುಂಬುತ್ತಿಲ್ಲ ಮತ್ತಿತರ ಭತ್ಯೆಗಳನ್ನು ದೊರಕಿಸುತಿಲ್ಲ ಇದರಿಂದ ಕಾರ್ಮಿಕರಿಗೆ ಬಹಳಷ್ಟು ಕಷ್ಟವಾಗುತ್ತಿದೆ. ಸರ್ಕಾರದ ವಿವಿಧ ಇಲಾಖೆ ಮತ್ತು ನಿಗಮಗಳಲ್ಲಿ ಹೊರಗುತ್ತಿಗೆ ಮಾನವ ಸಂಪನ್ಮೂಲ ಒದಗಿಸುವ ಏಜೆನ್ಸಿಗಳ ಮುಖಾಂತರ ಸೇವೆ ಸಲ್ಲಿಸುತ್ತಿರುವ ನೌಕರರುಗಳ ವೇತನವನ್ನು ಏಜೆನ್ಸಿ ಅವರುಗಳ ಮುಖಾಂತರ ನೌಕರರುಗಳಿಗೆ ವಿತರಿಸುತ್ತಿರುವುದನ್ನು ಸರ್ಕಾರ ಗಮನ ಹರಿಸಬೇಕು. ಮಾನವ ಸಂಪನ್ಮೂಲವನ್ನು ಪೂರೈಸುತ್ತಿರುವ ಏಜೆನ್ಸಿ ರವರುಗಳು 'ಸಿ' ಮತ್ತು 'ಡಿ' ದರ್ಜೆ ನೌಕರರುಗಳಿಗೆ ಏಕರೂಪದ ವೇತನವನ್ನು ನೀಡದೆ ಸರ್ಕಾರ ನಿಗದಿಪಡಿಸಿ ನೀಡುವ ವೇತನದಲ್ಲಿ ಏಜೆನ್ಸಿಯವರ ಕಮಿಷನ್ ಪಿ.ಎಫ್ ಮತ್ತಿತರ ಭತ್ಯೆಗಳನ್ನು ಕಡತ ಮಾಡಿಕೊಂಡು ಈ ನೌಕರರುಗಳಿಗೆ ಅಲ್ಪ ಪ್ರಮಾಣದ ವೇತನವನ್ನು ನೀಡುತ್ತಿದ್ದಾರೆ. ಏಜೆನ್ಸಿಗಳಿಂದ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಮುಖಾಂತರ ಪಡೆಯುವ ಬದಲು ಸರ್ಕಾರವೇ ನೇರವಾಗಿ ಸಂಚಿತ ವೇತನದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಯಾವ ಕ್ರಮ ಕೈಗೊಂಡು ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು.
ಮಾನವ ಸಂಪನ್ಮೂಲ ಸೇವೆಯನ್ನು ಒದಗಿಸುತ್ತಿರುವ ಏಜೆನ್ಸಿಯವರು ನೀಡುವ ಅಲ್ಪ ಪ್ರಮಾಣದ ವೇತನದಲ್ಲಿ ಈ ನೌಕರರುಗಳು ಸಂಸಾರ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿರುವುದರಿಂದ ಪ್ರಸ್ತುತ ನೀಡುತ್ತಿರುವ ವೇತನವನ್ನು ಪರಿಷ್ಕರಿಸಿ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡು ಕಾರ್ಮಿಕರಿಗೆ ನೆಲೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
