Thursday, February 20, 2025
ಪ್ರಪ್ರಥಮ ವೈದ್ಯಸಂಗಮ : ಫೆ.22 ಕ್ಕೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ
ವಿಜಯಪುರ : ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ 31ನೇ ರಾಜ್ಯಮಟ್ಟದ ಸಮ್ಮೇಳನವನ್ನು ಈ ಬಾರಿ ಶರಣ ನಾಡು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 22 ಮತ್ತು 23 ಎರಡು ದಿನಗಳ ಕಾಲ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಎಂ.ತಾಳಿಕೋಟಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 30 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲು ಕೇಂದ್ರ ಸಮಿತಿ ಸಮ್ಮತಿಸಿದೆ. ರಾಜ್ಯದ ಯಾವುದೇ ವೈದ್ಯಾಧಿಕಾರಿಗೆ ತೊಂದರೆಯಾದರೆ ಅವರ ಬೆನ್ನಿಗೆ ನಿಂತು ಸಹಕಾರ ನೀಡಿ ಸಮಸ್ಯೆ ಬಗೆಹರಿಸುವ ಹಾಗೂ ವೈದ್ಯಾಧಿಕಾರಿಗಳ ಹಿತಪರ ಸಂಘಟನಾತ್ಮಕವಾಗಿ ಧ್ವನಿಯಾಗಲು ಸಂಘ ರಚಿಸಿಕೊಂಡಿದ್ದೇವೆ ಎಂದರು.
ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೊಂದು ಜಿಲ್ಲೆ ಆಯ್ಕೆ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನ ನಡೆಸಲಾಗುವುದು. ಕಳೆದ 2022 ರ ರಾಜ್ಯ ಸಮ್ಮೇಳನ ತುಮಕೂರಿನಲ್ಲಿ ಹಾಗೂ 2018 ರ ಸಮ್ಮೇಳನ ದಾವಣಗೆರೆಯಲ್ಲಿ ಅಗಿತ್ತು. ಕೋವಿಡ್ ಹಿನ್ನೆಲೆ ನಾಲ್ಕು ವರ್ಷ ಸಮ್ಮೇಳನ ಮಾಡಿರಲಿಲ್ಲ. ಈ ಬಾರಿ ವಿಜಯಪುರದಲ್ಲಿ ಹಮ್ಮಿಕೊಂಡಿರುವ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನಕ್ಕೆ ಆರೋಗ್ಯ ಸಚಿವ ದಿನೇಶ ಗುಂಡುರಾವ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಸಂಸದರು, ಎಲ್ಲಾ ಶಾಸಕರು, ಆರೋಗ್ಯ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದರು.
ಫೆ. 22 ಶನಿವಾರ ಬೆಳಿಗ್ಗೆ ಸಮ್ಮೇಳನ ಉದ್ಘಾಟನೆ ನಡೆಯಲಿದೆ. ನಂತರ ಇತ್ತಿಚಿನ ವೈದ್ಯಕೀಯ ಬೆಳವಣಿಗೆಗಳು, ವಿಚಾರಗಳ ಬಗ್ಗೆ ತಜ್ಞ ವೈದ್ಯರುಗಳಿಂದ ಎರಡೂ ದಿನ ಒಟ್ಟು 12 ವೈದ್ಯಕೀಯ ಶಿಕ್ಷಣ ಕಾರ್ಯಾಗಾರಗಳು ಜರುಗಲಿವೆ. ಫೆ.23 ರಂದು ರಂಗಮಂದಿರ ಎದುರಿನ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಮ್ಮ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 2027 ನೇ ಸಾಲಿನ ಎರಡು ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದೆ. 2022 ರ ತುಮಕೂರ ಚುನಾವಣೆಯಲ್ಲಿ ನೇಮಕವಾದ ಡಾ.ರವಿಂದ್ರನಾಥ್ ಮೇಟಿಯವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಡಾ. ತಾಳಿಕೋಟಿ ತಿಳಿಸಿದರು.
ಡಿಹೆಚ್ಓ ಡಾ.ಸಂಪತ್ ಗುಣಾರಿ ಮಾತನಾಡಿ, ಪ್ರಥಮ ಬಾರಿಗೆ ವಿಜಯಪುರದಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನಕ್ಕೆ ರಾಜ್ಯಾದ್ಯಂತ ಕನಿಷ್ಠ ಮೂರು ಸಾವಿರ ವೈದ್ಯಾಧಿಕಾರಿಗಳು ಕುಟುಂಬ ಸಮೇತರಾಗಿ ಈ ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧಕ ವೈದ್ಯರುಗಳಿಗೆ ಒಂದು ವೈದ್ಯರತ್ನ, 2 ವೈದ್ಯವಿಭೂಷಣ ಹಾಗೂ ಪ್ರತಿ ಜಿಲ್ಲೆಗೊಂದರಂತೆ ವೈದ್ಯಶ್ರೀ ಪ್ರಶಸ್ತಿಗಳನ್ನು ನೀಡಲಾಗುವುದು. ಜೊತೆಗೆ ಉತ್ತಮ ಅಧ್ಯಕ್ಷ, ಉತ್ತಮ ಕಾರ್ಯದರ್ಶಿ ಹಾಗೂ ಉತ್ತಮ ಶಾಖೆ ಪ್ರಶಸ್ತಿಗಳನ್ನು ಸಹ ನೀಡಿ ಪ್ರೋತ್ಸಾಹಿಸಲಾಗುವುದು. ಈ ಎಲ್ಲಾ ಪ್ರಶಸ್ತಿಗಳಿಗಾಗಿ ಕೇಂದ್ರ ಸಮಿತಿಯ ಸಾಧಕ ವೈದ್ಯರನ್ನು ಗುರುತಿಸಿ ಪ್ರಶಸ್ತಿಗೆ ನೇಮಕ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರಗಳಲ್ಲಿ ನಮ್ಮ ವೈದ್ಯಾಧಿಕಾರಿಗಳ ಸಮಸ್ಯೆಗಳಿಗೆ ಪರಿಹಾರಾತ್ಮಕ ಚಿಂತನೆಗಳ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾಧಾರಿತ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ಬಗ್ಗೆಯೂ ಚಿಂತನೆಗಳು ನಡೆಯುತ್ತವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ತಿಳಿಸಿದರು.
ಈ ವೇಳೆ ವೈದ್ಯಾಧಿಕಾರಿಗಳ ಸಮ್ಮೇಳನ ಸಮಿತಿಯ ಛೇರ್ಮನ್, ಡಿಹೆಚ್ಓ ಡಾ.ಸಂಪತ್ ಗುಣಾರಿ, ಸಹ ಛೆರ್ಮನ್ ಡಾ.ಶಿವಾನಂದ ಮಾಸ್ತಿಹೊಳಿ, ಖಜಾಂಜಿ ಡಾ. ಸಂತೋಷ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಡಾ.ಕೇಸರಸಿಂಗ್ ಗುಂಡಬಾವಡಿ, ಡಿಟಿಓ ಡಾ.ಮಲ್ಲನಗೌಡ ಬಿರಾದಾರ, ಸಂಘಟನಾ ಕಾರ್ಯದರ್ಶಿ ಡಾ.ಕೃಷ್ಣಕುಮಾರ ಜಾಧವ, ಪದಾಧಿಕಾರಿ ಡಾ.ಅನಿಲ ರಾಠೋಡ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Subscribe to:
Comments (Atom)
