Thursday, April 25, 2024

ಭಕ್ತಿ ಮತ್ತು ಶಕ್ತಿಗೆ ಹುನುಮಂತನೆ ಮೂಲ : ಜಂಬುನಾಥ ಕಂಚ್ಯಾಣಿ

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ಸತ್ಸಂಗದಿಂದ ಮಾತ್ರ ಮನಸ್ಸು ಶುದ್ಧೀಕರಣಗೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು, 

  ನಗರದ ಸಾಯಿ ರೆಸಿಡೆನ್ಸಿ ಬಡವಾಣೆಯ ವೀರಾಂಜನೇಯ ದೇವಸ್ಥಾನದ ಕ್ಷೇಮಾಭಿವೃದ್ಧಿ ಸಮಿತಿಯು  ಹಮ್ಮಿಕೊಂಡ ಹನುಮಾನ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ   ಜಾತ್ರೆ ಮತ್ತು ಮಹಾತ್ಮರ ಜಯಂತ್ಯೋತ್ಸವಗಳ ನೆಪದಲ್ಲಿ ಮನಸ್ಸು ವಿಕಸನಗೊಳ್ಳುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ  ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ರಾಮನ ಬಂಟನಾದ ಹನುಮಂತ ಬಹು ಜನ ಪ್ರಿಯನಾದ ನಾಡ ದೇವತೆ, ಊರ ಹೊರಗಿದ್ದ ಹುನುಮಾನ ದೇವಾಲಗಳು ಇಂದು ಊರಿನ ಮಧ್ಯ ಹಾಗೂ ಜನರ ಹೃದಯದಲ್ಲಿ ಸ್ಥಾಪಿತವಾಗಿವೆ, ನಾವು ಮಾಡುವ ಭಕ್ತಿ ಮನಸ್ಸುಗಳನ್ನು ಬೆಸೆಯುವ ಹಾಗಿರಬೇಕು, ರಾಮ ಮತ್ತು ಸೀತೆಯರನ್ನು ಒಂದುಗೂಡಿಸಿದ ಹುನುಮಂತ ಭಕ್ತಿಗೆ, ಶಕ್ತಿಗೆ, ಯುಕ್ತಿಗೆ, ಜ್ಞಾನಕ್ಕೆ ಮೂಲನಾಗಿರುವನು ಎಂದರು .


ಸಾನಿಧ್ಯ ವಹಿಸಿ ಮಾತನಾಡಿದ ಶಿವ ಬಸವ ಯೋಗಾಶ್ರಮದ ಮಾತೋಶ್ರೀ ದಾನಮ್ಮ ತಾಯಿಯವರು ಮಾತನಾಡಿ ಮಹಾತ್ಮರನ್ನು ನೆನೆಯುವುದೇ ಘನ ಮುಕ್ತಿ ಪದಂ ಎನ್ನುವಂತೆ ಈ ನಾಡಿನಲ್ಲಿ ಜನಿಸಿ ಜನರ ಬದುಕನ್ನು ಹಸನುಗೊಳಿಸಲು ಶ್ರಮಿಸಿದ ಶರಣರನ್ನು ಸತ್ಪುರುಷರನ್ನು ನಾವು ನಿತ್ಯವೂ ನೆನೆಯಬೇಕು, ಹನುಮಾನ ಜಯಂತಿಯ ಮೂಲಕ ನಿಷ್ಠೆಯಿಂದ ಭಕ್ತಿ ಮಾಡುವ ಮನೋಭಾವ ಹೆಚ್ಚಿಸಿಕೊಂಡು ಯಾವತ್ತೂ ಸತ್ಸಂಗದಲ್ಲಿ ಭಾಗಿಯಾಗಿ ನಿಜ ಸುಖವನ್ನು ಅನುಭವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಂಜನೇಯ ದೇವಸ್ಥಾನದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಸ್ ಡಿ ಕೃಷ್ಣಮೂರ್ತಿ  ವಹಿಸಿಕೊಂಡಿದ್ದರು,  ವೇದಿಕೆಯಲ್ಲಿ  ಮಲ್ಲಿಕಾರ್ಜುನ ಗಡಗಿ, ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷರಾದ  ಸುಧಾ ರಾ ಇಂಡಿ, ರಾಣಿ ಕಿತ್ತೂರು ಚೆನ್ನಮ್ಮ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷರಾದ ಗೌರಮ್ಮ ಕುಬಕಡ್ಡಿ  ಅತಿಥಿಗಳಾಗಿ ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ಡಾ. ಸಿ ಕೆ ಹೊಸಮನಿ, ಎಸ್ ಬಿ ಪೂಜಾರ, ಅಮೋಘಸಿದ್ದ ಹಂಜಗಿ ದಂಪತಿಗಳನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾದೇವ ಕಾಮಗೊಂಡ, ಈರಣ್ಣ ನಾಗರಾಳ, ಎಸ್ ಬಿ ಹಳಗುಣಕಿ, ಬೇವೂರು, ಎಸ್ ಟಿ ಕನಕ, ಶಿವಾನಂದ ಯಾಳವಾರ, ಹೆಚ್ ಹೆಚ್ ಭರಡ್ಡಿ, ಶ್ರೀಕಾಂತ್ ಜಮಖಂಡಿ, ಬಿ ಆರ್ ನರಗುಂದ, ಹೆಚ್ ಎಲ್ ಸಂಕ, ರಾಜಶೆಖರ ಇಂಡಿ, ಎಸ್ ಎಸ್ ದುರಗದ, ಚಿದಾನಂದ ಗಡಗಿ, ಸಿದ್ದು ಇಜೇರಿ, ಬಸವರಾಜ ಪವಾರ, ಸುನೀಲ್ ಟಂಕಸಾಲೆ ಸೇರಿದಂತೆ ಹಲವರು ಭಾಗವಹಿಸಿದ್ದರು  ಎಂ ಬಿ ಮಮದಾಪೂರ ಹಾಗೂ ಸಾವಿತ್ರಿಬಾಯಿ ಮುಂಡಾಸ್ ಕಾರ್ಯಕ್ರಮ ನಿರೂಪಿಸಿದರು ಪಂಡಿತರಾವ ಪಾಟೀಲ್  ವಂದಿಸಿದರು 

ಬೆಳಿಗ್ಗೆ ದೇವಸ್ಥಾನದ ಆವರಣದ ವೀರಾಂಜನೇಯ ಸ್ವಾಮಿಯ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನಡೆದವು ನಂತರ ಅತ್ಯಂತ ಸಂಭ್ರಮ ಹಾಗೂ ಭಕ್ತಿ ಭಾವದಿಂದ ಮಹಿಳಾ ಭಕ್ತರು ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಪದಗಳನ್ನು ಹಾಡಿ ನಾಮಕರಣ ಕಾರ್ಯಕ್ರಮವನ್ನು  ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾಡುವ ಮೂಲಕ ಸಂಭ್ರಮಿಸಿದರು, ಮಧ್ಯಾಹ್ನ ಅನ್ನ ಪ್ರಸಾದ ನಡೆಯಿತು ಈ ಕಾರ್ಯಕ್ರಮದಲ್ಲಿ ಸಾಯಿ ರೆಸಿಡೆನ್ಸಿ, ಸದಾಶಿವ ನಗರದ ಹಾಗೂ ಎಕ್ಸಾಟಿಕ್ ಕಾಲೋನಿಗಳ ನೂರಾರು ಜನ ಭಕ್ತರು ಭಾಗವಹಿಸಿ ಹನುಮ ಜಯಂತಿಯನ್ನು ಭಕ್ತಿ ಸಡಗರದಿಂದ ಆಚರಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

26-04-2024 EE DIVASA KANNADA DAILY NEWS PAPER