ಈ ದಿವಸ ವಾರ್ತೆ
ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ ಮತ್ತು ನೂತನ ಸದಸ್ಯತ್ವಕ್ಕೆ ಜಿಲ್ಲೆಯ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಘಟಕದ ನಿಯಮಾವಳಿಗಳನ್ವಯ ಏ. 21ರ ಸಂಜೆ 4ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಸದಸ್ಯತ್ವ ನವೀಕರಣ ಹಾಗೂ ನೂತನ ಸದಸ್ಯತ್ವಕ್ಕೆ ಮೂರು ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಏ.17ರಂದೇ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ವರೆಗೆ ಅರ್ಜಿ ನಮೂನೆ ವಿತರಿಸಲಾಗುವುದು. ಅರ್ಹ ಪತ್ರಕರ್ತರು ಸ್ವ ಹಸ್ತಾಕ್ಷರದಿಂದ ಭರ್ತಿ ಮಾಡಿದ ಅರ್ಜಿಗಳನ್ನು ನಗರದ ಹಳೆ ತಹಸೀಲ್ದಾರ್ ಕಚೇರಿ ಬಳಿಯಿರುವ ಪತ್ರಕರ್ತರ ಸಂಘದ ಹಳೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಆಯಾ ತಾಲೂಕು ಘಟಕಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರಲ್ಲಿ ಒಬ್ಬರು ಜಿಲ್ಲಾ ಕಚೇರಿಗೆ ಆಗಮಿಸಿ ಅರ್ಜಿ ನಮೂನೆಗಳನ್ನು ಪಡೆದುಕೊಳ್ಳಬೇಕು.
ತಾಲೂಕು ಘಟಕದವರು ತಮ್ಮ ಸಂಘದ ಕಾರ್ಯಕಾರಿ ಸಭೆ ಕರೆದು ಅನುಮೋದಿಸಿದ ಸದಸ್ಯರ ಪಟ್ಟಿ ಮತ್ತು ಅರ್ಜಿಗಳ ಸಮೇತ ಏ.21ರ ಸಂಜೆ 4 ಗಂಟೆಯೊಳಗೆ ಜಿಲ್ಲಾ ಕಚೇರಿಗೆ ಅರ್ಜಿ ಸ್ವೀಕರಿಸಲು ನೇಮಕ ಮಾಡಿರುವ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಜಿಲ್ಲಾ ಘಟಕದ ಖಜಾಂಚಿ ರಾಹುಲ್ ಆಪ್ಟೆ ಹಾಗೂ ನಿಕಟಪೂರ್ವ ಖಜಾಂಚಿ ದೀಪಕ ಶಿಂತ್ರೆ ಅವರಿಗೆ ಸಲ್ಲಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಕರ್ಣಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಡಿ.ಬಿ.ವಡವಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.