ಪಟ್ಟಣದಿಂದ ಶಾಂತವೀರ್ ವೃತ್ತದಿಂದ ತೆಹಸೀಲ್ದಾರ್ ಕಚೇರಿವರೆಗೆ ತಲುಪಿ ತಹಸೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಸರ್ಕಾರದ ಮಟ್ಟದಲ್ಲಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕೆಂದು ಹುನ್ನಾರ ನಡೆದಿದೆ. ಜಿಲ್ಲೆಯಲ್ಲಿ ಶಾಸಕರೊಬ್ಬರು ಬಂಡವಾಳ ಹೂಡುವುದಾಗಿ ಹೇಳಿದ್ದು, ಇದು ಸರಿಯಲ್ಲ. ಬೇಕಿದ್ದರೆ ಅವರೇ ಮತ್ತೊಂದು ಖಾಸಗಿ ಕಾಲೇಜು ಸ್ಥಾಪಿಸಿಕೊಳ್ಳಲಿ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ತುಂಬಾ ಸರಿಯಾಗಿ ನಡೆದಿದೆ. ಅಲ್ಲಿ ಸುಮಾರು 153 ಏಕರೆಗಳಷ್ಟು ಜಾಗವೂ ಕೂಡ ಇದೆ. ಸರ್ಕಾರ ಅಲ್ಲಿಯೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಇದು ಬಡವರ ಪಾಲಿಗೆ ಆಶಾಕಿರಣವಾಗಲಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ಆಗ್ರಹಿಸಿದರು.
ಬಿ.ಭಗವಾನ್ ರೆಡ್ಡಿ ಮಾತನಾಡುತ್ತಾ 153 ಎಕರೆ ಜಮೀನು ಹೊಂದಿರುವ ಏಕೈಕ ಜಿಲ್ಲೆ ವಿಜಯಪುರ ಆಗಿದ್ದು ಬಡವರ ಮತ್ತು ಹಿಂದುಳಿದ ಮಕ್ಕಳು ಕಲಿಯಲು ಸರ್ಕಾರ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಹೇಳಿದರು. ಜಮಖಂಡಿ ವಿಜಯಪುರ ರಾಜ್ಯ ಹೆದ್ದಾರಿ ತಡೆದು ಶಾಂತವೀರ ಸರ್ಕಲ್ ನಿಂದ ತಹಶಿಲ್ದಾರರ ಕಛೇರಿಯವರೆಗೆ ರ್ಯಾಲಿಯನ್ನು ಮಾಡಲಾಯಿತು. ಮಲ್ಲು ಕನ್ನೂರ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಮಾತನಾಡುತ್ತಾ ಮೆಡಿಕಲ್ ಕಾಲೇಜು ಆಗಲೇಬೆಕು ಇಲ್ಲವಾದರೆ ಬಬಲೇಶ್ವರ ತಾಲ್ಲೂಕು ಬಂದ ಮಾಡುವುದಾಗಿ ಕರೆ ನೀಡಿದರು. ಮಲ್ಲಿಕಾರ್ಜುನ ಬಟಗಿ ಯವರು ಮಾತನಾಡುತ್ತಾ ಬಿಜಾಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಲೇಬೇಕು ಎಂದು ಶಾಸಕರಲ್ಲಿ ವಿನಂತಿ ಮಾಡಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಮಂತ್ರಿಗಳು ಇದನ್ನು ಅರ್ಥ ಮಾಡಿಕೊಂಡು ಕಾಲೇಜು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಲಾಯಿತು.
ಹೋರಾಟ ಸಮಿತಿಯ ಲಕ್ಷ್ಮಣ ಹಂದ್ರಾಳ ರವರು ಮಾತನಾಡುತ್ತಾ ಬಡ ಮಕ್ಕಳು ಓದಲು ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಉಚಿತ ಶಿಕ್ಷಣ ಪಡೆಯಲು ಎಲ್ಲರಿಗೂ ಸಹಾಯವಾಗುತ್ತದೆ. ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದು ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿರಬೇಕು ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಫಾತಿಮಾ ಮಕಂದಾರ್, ಗಂಗಾ ಪೂಜಾರಿ, ಮಹಾದೇವಿ ಮಾದರ, ನಿಂಗವ್ವ ಗಾದಿವಡರ, ಲಕ್ಷ್ಮಿ ಕವಟಗಿ, ಭಾಗಮ್ಮ ಗೆನ್ನರ, ಸುಜಾತಾ ಚಲಿಬೆಳಿ, ಸುನಂದಾ ಕನಮಡಿ, ಹೋರಾಟ ಸಮಿತಿಯ ಸದಸ್ಯರಾದ ಲಕ್ಷ್ಮಣ್ ಹಂದ್ರಾಳ, ಭಗವಾನ್ ರೆಡ್ಡಿ, ಅಕ್ರಮ ಮಾಶಾಲ್ಕರ್, ಲಕ್ಷ್ಮಣ್ ಕಂಬಾಗಿ, ಮಲ್ಲಿಕಾರ್ಜುನ ಬಟಗಿ, ಲಲಿತಾ ಬಿಜ್ಜರಗಿ, ಕೆವಿನ್, ಜಗದೇವ ಸೂರ್ಯವಂಶಿ, ರೈತ ಮುಖಂಡರಾದ ಮಲ್ಲು ಕನ್ನೂರ್, ಬೀರಪ್ಪ ಸೊಡ್ಡಿ, ಈರಣ್ಣ ಶಿರಮಗೊಂಡ, ಬಸವರಾಜ್ ರೆಡ್ಡಿ, ಸುರೇಶ್ ಅರಸೂರು, ರಾಜಶೇಖರ್ ರೆಡ್ಡಿ, ಸಿದ್ರಾಮ್ ಹಲ್ಲೂರ್, ರುದ್ರಪ್ಪ ಗೋಲಸಂಗಿ, ಆಮ್ ಆದ್ಮಿ ಪಕ್ಷದ ಬಾಬು ಬಿಜಾಪುರ, ಪೀರಸಾಭ್ ವಾಲಿಕಾರ್, ಮೀರಾಸಾಬ್ ತೊದಲಬಾಗಿ, ಅಬ್ದುಲ್ ಗೋರಿ, ಮಹಿಳಾ ಸಂಘದ ಜಯಾ ಪಿಳ್ಳೈ, ಸುನಿತಾ ಮೋರೆ, ಜೀವನ್ ಜ್ಯೋತಿ ದೇವದಾಸಿ ಸಂಘದ ಚಂದಾಬಾಯಿ ಮಾದರ, ಹೀನಾ ನದಾಫ್, ಮಹಿಳಾ ಒಕ್ಕೂಟದ ಶ್ರೀದೇವಿ ಡೆಂಗಿ, ಪಡೆವ್ವಾ ಮಾದರ, ಶೋಭಾ ಹರಿಜನ, ಸುಜಾತಾ ಏಳಿಬಲ್ಲಿ, ಮಾನಸಾ ಏಳಬಲ್ಲಿ, ಅಬ್ದುಲ್ ಕಲಾಂ ಸಂಸ್ಥೆಯ ರಜಿಯಾ ಮೊಮಿನ್ ಮತ್ತಿರರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು
