Wednesday, January 8, 2025

09-01-2025 EE DIVASA KANNADA DAILY NEWS PAPER

ಚಿತ್ರನಟಿ ತಾರಾ ಸೇರಿ ಮೂವರಿಗೆ ಗೌರವ ಡಾಕ್ಟರೇಟ್


ವಿಜಯಪುರ: ಖ್ಯಾತ ಚಿತ್ರನಟಿ, ಸಮಾಜಸೇವಕಿ ತಾರಾ ಅನುರಾಧ, ಲೇಖಕಿ, ಹೋರಾಟಗಾರ್ತಿ ಡಾ. ಮೀನಾಕ್ಷಿ ಬಾಳಿ ಹಾಗೂ ಉದ್ಯಾನ ಮೇಲ್ವಿಚಾರಕಿ ವೇದರಾಣಿ ದಾಸನೂರ ಸೇರಿದಂತೆ ಮೂವರು ಸಾಧಕರಿಗೆ ಇಲ್ಲಿನ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.

ಜ.9 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಿದ್ದಾರೆ.


ಖ್ಯಾತ ಚಿತ್ರನಟಿ ತಾರಾ:

ಚಿತ್ರರಂಗ, ಸಾಮಾಜಿಕ ಸೇವೆ, ರಾಜಕೀಯ ಹೀಗೆ ಹಲವು ರಂಗಗಳಲ್ಲಿ ತಾರಾ ಅನುರಾಧ ಪ್ರಸಿದ್ಧ ಹೆಸರು. ನಟನೆ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ತಾರಾ ಅವರು 12 ವರ್ಷದೊಳಗಿನ ಮಕ್ಕಳಿಗಾಗಿ ಅನಾಥಾಶ್ರಮವನ್ನು ಆರಂಭಿಸಿದ್ದಾರೆ. ವಿಧಾನ ಪರಿಷತ್ ಸದಸ್ಯೆಯಾಗಿಯೂ ನಾಮನಿರ್ದೇಶನಗೊಂಡಿದ್ದರು.

1984ರಲ್ಲಿ ತಮಿಳು ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಅವರು 1986ರ ತುಳಸಿದಳ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿAದ ಅವರು ಅನೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕ್ರಮ (1991), ಮುಂಜಾನೆಯ ಮಂಜು (1993), ಕಾನೂರು ಹೆಗ್ಗಡತಿ (1999), ಮುನ್ನುಡಿ (2000), ಮತದಾನ (2001), ಹಸೀನಾ (2005), ಸೈನೈಡ್ (2006), ಈ ಬಂಧನ (2007) ಮತ್ತು ಉಳಿದವರು ಕಂಡAತೆ (2014) ಅವರ ಗಮನಾರ್ಹ ಅಭಿನಯಕ್ಕಾಗಿ ಹಲವಾರು ಫಿಲ್ಮಫೇರ್ ಮತ್ತು ರಾಜ್ಯ ಪ್ರಶಸ್ತಿಗಳು ಒಲಿದು ಬಂದಿವೆ.

ಲೇಖಕಿ, ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿ:

ಸಾಹಿತ್ಯ, ಹೋರಾಟವನ್ನು ಬದುಕಾಗಿಸಿಕೊಂಡಿರುವ ಡಾ.ಮೀನಾಕ್ಷಿ ಬಾಳಿ ಅಪರೂಪದ ಲೇಖಕಿ, ಚಿಂತಕಿ. 1962 ಜೂನ್ 22ರಂದು ಕಲಬುರಗಿಯ ದೇವಲ ಗಾಣಗಾಪುರದಲ್ಲಿ ಜನಿಸಿದ ಡಾ. ಮೀನಾಕ್ಷಿ ಬಾಳಿ ಅವರು ಐದನೆಯ ತರಗತಿ ಓದುವ ಹಂತದಲ್ಲಿದ್ದಾಗಲೇ ಕಡಕೋಳ ಮಡಿವಾಳಪ್ಪನವರ ತತ್ವಚಿಂತನೆಯ ಕಡೆಗೆ ಆಕರ್ಷಿತರಾದರು.

ಕಲಬುರಗಿ ವಿಶ್ವವಿದ್ಯಾಲಯದ ಎಂ.ಎ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಪ್ರೊ.ಲಠ್ಠೆ ಅವರ ಮಾರ್ಗದರ್ಶನದಲ್ಲಿ ಕಡಕೋಳ ಮಡಿವಾಳ್ಳಪ್ಪನವರ ತತ್ವಪದಗಳ ಕುರಿತು ಸಂಶೋಧನ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದುಕೊಂಡರು.

ಇವರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವವನ್ನು ಈ ನೆಲದ ಹೆಣ್ಣುಮಕ್ಕಳ ಹಕ್ಕುಗಳ ಹೋರಾಟಕ್ಕೆ ಮೀಸಲಾಗಿರಿಸುವುದರ ಜೊತೆಗೆ ಅದಕ್ಕೆ ಅಗತ್ಯವಾದ ತಾತ್ವಿಕತೆಯನ್ನು ವಚನ, ತತ್ವಪದಗಳು ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳಿAದ ಒದಗಿಸಿಕೊಂಡರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮ್ಮ ಬದುಕಿನ ಆದರ್ಶವನ್ನಾಗಿಸಿಕೊಂಡಿರುವ ಅವರದ್ದು ಸತ್ಯನಿಷ್ಠ ಮತ್ತು ನಿಷ್ಠುರ ನಿಲುವು. ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿದೆ.

ಉದ್ಯಾನ ವೇಲ್ವಿಚಾರಕಿ ವೇದರಾಣಿ ದಾಸನೂರ:

ಹಾವೇರಿಯ ಪ್ರಸಿದ್ಧ ಉತ್ಸವ ರಾಕ್ ಗಾರ್ಡನ್ ಸಂರಕ್ಷಿಸಿ, ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವವರು ವೇದರಾಣಿ ದಾಸನೂರ.

ಕಲ್ಲುಗಳಿಗೂ ಜೀವಸೆಲೆ ತುಂಬುವ ಮೇರು ಪ್ರತಿಭೆ ಡಾ.ಬಿ.ಟಿ. ಸೊಲಬಕ್ಕನವರ ಅವರ ಪುತ್ರಿಯಾಗಿರುವ ವೇದರಾಣಿ ಈ ಬಾರಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಪ್ರಕಾಶ ದಾಸನೂರ ಅವರ ಪತ್ನಿಯಾಗಿರುವ ವೇದರಾಣಿ 2009ರಲ್ಲಿ ಪ್ರಾರಂಭವಾದ ಉತ್ಸವ್ ರಾಕ್ ಗಾರ್ಡನ್ ಅನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ.

ಪ್ರತಿ ವರ್ಷ ಅವರು ಉದ್ಯಾನದಲ್ಲಿ ಸಾಮಾಜಿಕ-ಸಾಂಸ್ಕçತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅವರ ಹುರುಪಿನ ಮತ್ತು ದೃಢವಾದ ಪ್ರಯತ್ನಗಳಿಂದಾಗಿ ಉದ್ಯಾನವು ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಖ್ಯಾತಿಯನ್ನು ಗಳಿಸಿದೆ. ನಿರುದ್ಯೋಗಿಗಳು ಮತ್ತು ಉದಯೋನ್ಮುಖ ಮತ್ತು ಯುವ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದ್ದಾರೆ. ಅವರ ಸಮರ್ಥ ನಾಯಕತ್ವದಲ್ಲಿ ಉತ್ಸವ್ ರಾಕ್ ಗಾರ್ಡನ್ ಎಂಟು ವಿಶ್ವದಾಖಲೆಗಳನ್ನು ಮತ್ತು 2021 ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.