ವಿಜಯಪುರ: ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಸಂಗಣ್ಣ ಅಜ್ಜನವರು ನಿರ್ಮಿಸಿದ ಬ್ರಹ್ಮಾನಂದ ಆಶ್ರಮದ ವೀರಭದ್ರೇಶ್ವರ, ಕಾಳಿಕಾದೇವಿ ಹಾಗೂ ಬಸವೇಶ್ವರ ದೇವಸ್ಥಾನದ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಎ. 30ರ ವರೆಗೆ ನಡೆಯಲಿದೆ. ನಿತ್ಯ ಸಂಜೆ 7ಕ್ಕೆ ಮಾದೇವ ಶಾಸ್ತ್ರಿಗಳಿಂದ ಶ್ರೀಗುರು ವಚನದಿಂದ ಅಧಿಕ ಸುಧೆಯುಂಟೆ ಪ್ರವಚನ ನಡೆಯಲಿದ್ದು, ನಂತರ ಪ್ರಸಾದ ವಿತರಣೆ ಜರುಗಲಿದೆ. ಏ. 29 ರಂದು ಸಂಗಣ್ಣಜ್ಜ ಮತ್ತು ಶಾರದಾ ಅವರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದಂಗವಾಗಿ ಮರು ವಿವಾಹ ಕಾರ್ಯಕ್ರಮ ನಡೆಯಲಿದೆ. ಹಿರೇಆಸಂಗಿಯ ಅಭಿನವ ಅಖಂಡೇಶ್ವರ ಮುತ್ಯಾನವರು ಅಧ್ಯಕ್ಷತೆ ವಹಿಸುವರು. ಬಾಡಗಿ ಹಿರೇಮಠದ ಬುಕ್ಕಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾಡಗಿಯ ಶಿವಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಕಾಖಂಡಕಿಯ ಕಾಶಿನಾಥ ಗುರುಗಳು ಹಾಗೂ ಆಹೇರಿ-ಶಿವಣಗಿ ಯಲ್ಲಾಲಿಂಗ ಆಶ್ರಮದ ಸಂಜು ಮಹಾರಾಜರು ಉಪಸ್ಥಿತಿ ಮತ್ತು ಸ್ಥಳೀಯ ಚಂದ್ರಶೇಖರಯ್ಯ ಮಠಪತಿ ಹಾಗೂ ಎಸ್.ಡಿ. ಕುಮಾನಿ ಜ್ಯೋತಿ ಬೆಳಗಿಸಲಿದ್ದಾರೆ. ಏ. 30 ರಂದು ಬೆಳಗ್ಗೆ 6ಕ್ಕೆ ರುದ್ರಾಭಿಷೇಕ, 8ಕ್ಕೆ ಕುಂಭಮೇಳ, ಪಲ್ಲಕ್ಕಿ ಉತ್ಸವ, ಗೋ ಪೂಜೆ, ಎತ್ತುಗಳ ಮೆರವಣಿಗೆ ಪುರವಂತರ ಸೇವೆಯೊಂದಿಗೆ ಗಂಗಸ್ಥಳ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಆಶ್ರಮಕ್ಕೆ ಬರಲಿದೆ. ಮಧ್ಯಾಹ್ನ 2ಕ್ಕೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ಪ್ರವಚನ, ಆಶೀರ್ವಚನ ಹಾಗೂ ಮಹಾಮಂಗಳಾರತಿ ಮತ್ತು ರಾತ್ರಿ 10ಕ್ಕೆ ಭಜನೆ ನಡೆಯಲಿದೆ ಎಂದು ಆಶ್ರಮದ ಸಮಿತಿ ಪ್ರಕಟಣೆ ತಿಳಿಸಿದೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
.jpg)

