ವಿಜಯಪುರ: ಈ ಬಿರು ಬೇಸಿಗೆಯಲ್ಲಿ ಸೂರ್ಯನ ತಾಪಮಾನಕ್ಕೆ ಬೆವರು ಹರಿಯುತ್ತಿದೆ. ಬಾಯಾರಿಕೆ ಕೂಡಾ ಸಾಮಾನ್ಯವಾಗಿದೆ. ವಿಜಯಪುರ ನಗರದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಶ್ರೀ ತುಳಸಿಗಿರೀಶ ಫೌಂಡೇಶನ್ ಮತ್ತು ಶ್ರೀ ಶಿವಾನಂದ ಕೇಲೂರ್ ಅಧ್ಯಕ್ಷರು ಶ್ರೀ ಅಸೋಸಿಯೇಷನ್ ಅವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ನಗರದ ಪ್ರಮುಖ ಸ್ಥಳಗಳಾದ ಬಂಜಾರ ಕ್ರಾಸ್, ಗೋದಾವರಿ ಸರ್ಕಲ್, ಅಂಬೇಡ್ಕರ್ ಸರ್ಕಲ್ , ಜಡ್.ಪಿ. ಕ್ರಾಸ್ ಹಾಗೂ ಗೋಡಬೋಳೆ ಮಾಲಾದಲ್ಲಿ ಕುಡಿಯುವ ನೀರಿನ ಅರವಟಿಗೆಗಳನ್ನು ಅಳವಡಿಸಿದ್ದಾರೆ.
ಅರವಟಿಗೆಗಳನ್ನು ಅಳವಡಿಸಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಶ್ರೀ ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷರಾದ ಡಾ.ಬಾಬುರಾಜೇಂದ್ರ ನಾಯಿಕ ಮಾತನಾಡಿ ಬೇಸಿಗೆಗಾಲದಲ್ಲಿ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು, ಹೆಚ್ಚು ನೀರಿನ ಅಂಶ ಇರುವ ತರಕಾರಿ ಹಣ್ಣು ತಿನ್ನಬೇಕು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇವತ್ತು ಈ ನೀರಿನ ಅರವಟಿಗೆಗಳನ್ನು ಅಳವಡಿಸಿದ್ದೇವೆ ಮತ್ತು ಅವುಗಳನ್ನು ನಿರ್ವಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿ.ಪಿ.ಐಗಳಾದ ಆನಂದ ಠಕ್ಕಣ್ಣವರ ಅರವಟಿ ಸ್ಥಾಪಿಸಿದ್ದನ್ನು ಶ್ಲಾಘಿಸಿ ಜನರು ನೀರಿನ ಮಹತ್ವ ಅರಿತು ಉಪಯೋಗಿಸಬೇಕು ಎಂದರು.ಇದೆ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರಾದ ಅಪ್ಪು ರಾಠೋಡ್, ಸಂಜು ಪವಾರ, ನಿವೃತ್ತ ಪಿ.ಡಬ್ಲೂ.ಡಿ ಇಂಜಿನಿಯರ್ ನಾಮದೇವ ರಾಠೋಡ್, ರವಿ ರಾಠೋಡ್, ರಾಕೇಶ ರಜಪೂತ, ಸುನೀಲ್ ರಾಠೋಡ್, ಅನಿಲ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment