ವಿಜಯಪುರ : ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಭರ ಕುರಿತು ಅವಮಾನಕರ ಮಾತನಾಡಿದ್ದಾರೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶ್ರೀ ಶಿವಾನಂದ ಪಾಟೀಲ ಅವರು ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಜಂಟಿ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಸಚಿವರು, ನಗರದ ಜನತೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳದೆ ಸಮಾಜದಲ್ಲಿ ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಜಿಲ್ಲೆಯ ಜನತೆ ಸಚಿವ : ಯತ್ನಾಳ ಅವರನ್ನು ಶಾಸಕ, ಸಂಸದ, ಕೇಂದ್ರ ಸಚಿವರನ್ನಾಗಿ ಮಾಡಿದೆ. ದೇವರು ಎಲ್ಲವನ್ನೂ ಕೊಟ್ಟರೂ ಇವರು ಹಾಳು ಮಾಡಿಕೊಂಡಿದ್ದಾರೆ. ಇಂಥ ವರ್ತನೆಯ ಕಾರಣಕ್ಕೆ ಅವರ ಪಕ್ಷದಿಂದಲೂ ಹೊರ ಹಾಕಿಸಿಕೊಂಡರೂ ಬುದ್ದ ಬಂದಿಲ್ಲ. ಸಮಾಜ ಒಡೆಯುವ ಮನಸ್ಥಿತಿಯ ಹೇಳಿಕೆ ನೀಡುತ್ತಿರುವ ಯತ್ನಾಳಗೆ ಈ ಬೃಹತ್ ಹೋರಾಟದ ಮೂಲಕ ಈ ವೇದಿಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಇನ್ನಾದರೂ ಮನುಷ್ಯತ್ವ ಇರಿಸಿಕೊಂಡು ಬದಲಾವಣೆಗೆ ದೇವರು ಬುದ್ದಿ ಕೊಡಲಿ ಎಂದರು.
ಆಕಾಶಕ್ಕೆ ಉಗಿದರೆ ಆತನ ಮುಖಕ್ಕೇ ಬೀಳುತ್ತದೆ ಎಂಬ ಪರಿಜ್ಞಾನ ಇಲ್ಲದ ವ್ಯಕ್ತಿ ಎಂದು ಶಾಸಕ ಯತ್ನಾಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವರು,ಒಮ್ಮೆ ಆತನ ವಿರುದ್ದ ಸ್ಪರ್ಧೆ ಮಾಡಿ ಬುದ್ಧಿ ಕಲಿಸುವ ಇಚ್ಛೆ ಇದೆ ಎಂದರು.
ಯತ್ನಾಳ ವರ್ತನೆ ಸಹಿಸದೇ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಇಡೀ ರಾಜ್ಯದ ಜನರು ಯತ್ನಾಳಗೆ ಪಾಠ ಕಲಿಸಬೇಕಿದೆ. ಯಾವುದೇ ಪಕ್ಷದ ವ್ಯಕ್ತಿ ಇದ್ದತೂ ಯತ್ನಾಳ ರೀತಿ ಮಾತನಾಡಬಾರದು.
ಭಾರತ ನಮ್ಮ ಮನೆ ನಮ್ಮನ್ನು ಕೆಡಿಸೋಕೆ ಜಾತಿ ವಿಷ ಬೀಜ ಬಿತ್ತುತ್ತಾರೆ, ಇಂಥ ವ್ಯಕ್ತಿಗಳ ಕುರಿತು ಎಚ್ಚತವಾಗಿರಬೇಕು. ಪೆಹೆಲ್ಗಾಮ್ ಘಟನೆಯನ್ನು ಖಂಡಿಸಿದ ಸಚಿವರು, ಜನರೆಲ್ಲರೂ ದೇಶದ ಪರವಾಗಿದ್ದಾರೆ. ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ನಮ್ಮೆಲ್ಲರ ಬೆಂಬಲ ಇದೆ ಎಂದರು.
ಮುಸ್ಲಿಂ ಧರ್ಮಗುರು ತನ್ವೀರ ಪೀರಾ, ಮನಗೂಳಿ ವಿರಕ್ತ ಮಠದ ವಿರತೀಶಾನಂದ ಶ್ರೀಗಳು, ಜೈನಾಪುರದ ಸಿದ್ಧಲಿಂಗ ಶ್ರೀಗಳು, ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕಧೊಂಡ, ಅಶೋಕ ಮನಗೂಳಿ, ವಿಜಯಾನಂದ ಕಾಶಪ್ಪನವರ, ಸುನಿಲಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment