Saturday, June 8, 2024

09-06-2024 EE DIVASA KANNADA DAILY NEWS PAPER

ದಿ.15 ರಂದು ಶರಣ ಸಂಕುಲ ನೃತ್ಯ ರೂಪಕ ಕಾರ್ಯಕ್ರಮ

ಈ‌ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ತರಳುಬಾಳು ಜಗದ್ಗುರು 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ “ಶರಣ ಸಂಕುಲ” ನೃತ್ಯರೂಪಕ ಕಾರ್ಯಕ್ರಮ ದಿ.15 ಶನಿವಾರ ಸಂ.6.30ಗಂಟೆಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಜರುಗಲಿದೆ.

ಕಳೆದ 25 ವರ್ಷಗಳಿಂದ ದೇಶದೆಲ್ಲೆಡೆ 12 ನೇ ಶತಮಾನದ ಶಿವಶರಣರ ತತ್ವಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೃತ್ಯ, ಸಂಗೀತ ಮತ್ತು ಅಭಿನಯಗಳ ಮೂಲಕ ಪ್ರದರ್ಶಿಸುವ ‘ಶರಣಸಂಕುಲ’ ಕಾರ್ಯಕ್ರಮ ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ. 

ವಿಜಯಪುರದಲ್ಲಿ ಅನುಭವ ಮಂಟಪದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ವಿಶ್ವಬಂಧು ಮರುಳಸಿದ್ಧರು, ಅಕ್ಕಮಹಾದೇವಿಗೆ ದೀಕ್ಷೆ ಕೊಡುವ ಹರಳಯ್ಯ, ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ ಅವರ ಬದುಕಿನ ಸಾಧನೆಯನ್ನು ‘ಶರಣ ಸಂಕುಲ’ ಕಾರ್ಯಕ್ರಮದ ಮೂಲಕ ಸಾದರಪಡಿಸುತ್ತಿದ್ದಾರೆ. ಅಲ್ಲದೇ, ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ "ಮಲ್ಲ ಕಂಬ" ಹಾಗೂ "ಮಲ್ಲಿ ಹಗ್ಗ" ಸಾಹಸ ಕ್ರೀಡೆಗಳ ಪ್ರದರ್ಶನ ಏರ್ಪಾಡಾಗಿದೆ. 

ಅತ್ಯಂತ ವಿಶೇಷವಾಗಿರುವ ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾಲಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಿರಿಗೆರೆ ತರಳಬಾಳು ಆಶ್ರಮದ ಭಕ್ತರಾಗಿರುವ ಹಣಮಂತ ಚಿಂಚಲಿ ಕೋರಿದ್ದಾರೆ. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಅಗಷ್ಟ್ 16 ಹಾಗೂ 18 ರಂದು ಮೈಸೂರಿನಲ್ಲಿ 2024-25ನೇ ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್

ವಿಜಯಪುರ : 5ನೇ ಯುವ ಜೂನಿಯರ್ ಬಾಲಕ ಬಾಲಕಿಯರ ಹಾಗೂ 51 ನೇ ಪುರುಷ ಮತ್ತು 35 ನೇ ಮಹಿಳೆಯರ ಜ್ಯೂನಿಯರ್ ಮತ್ತು ಸೀನಿಯರ್ ರಾಜ್ಯ ವೇಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ 2024-25 @ ಡಾ. ಎಪಿಜೆ ಅಬ್ದುಲ್ ಕಲಾಮ ಇಂಡೋರ ಸ್ಟೇಡಿಯಮ್ ಮಹಾಜನ ಕಾಲೇಜ ಜಯ ಲಕ್ಷಿö್ಮÃಪುರಂ ಮೈಸೂರಿನಲ್ಲಿ ಅಗಷ್ಟ್ 16 ಹಾಗೂ 18 2024 ರಂದು ಜರುಗಲಿದೆ ಎಂದು ಜಿಲ್ಲಾ ವೇಟ್ ಲಿಪ್ಟಿಂಗ್ ಅಧ್ಯಕ್ಷ ದಾದಾಸಾಹೇಬ ಬಾಗಾಯತ ಹಾಗೂ ಕಾರ್ಯದರ್ಶಿ ಚಂದ್ರಕಾAತ ತಾರನಾಳ ತಿಳಿಸಿದ್ದಾರೆ. 

ವೇಟ್ ಲಿಪ್ಟಿಂಗ್‌ನಲ್ಲಿ ಭಾಗವಹಿಸುವ ಆಸಕ್ತ ಬಾಲಕ- ಬಾಲಕಿಯರು ಹಾಗೂ ಪುರುಷ ಮತ್ತು ಮಹಿಳೆಯರು ಆಗಷ್ಟ್ 1 ರೊಳಗಾಗಿ ಸಂಬAಧಪಟ್ಟ ದಾಖಲಾತಿಗಳನ್ನು ಜನನ ಪ್ರಮಾಣ ಪತ್ರ, ಆಧಾರ ಕಾರ್ಡ್, ಮಾಕ್ಸ್ ಕಾರ್ಡ್ಗಳನ್ನು ತೆಗೆದುಕೊಂಡು ಕಚೇರಿಗೆ ಭೇಟಿ ಕೊಡಬಹುದಾಗಿದೆ. ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನಮಾಹಿತಿಗಾಗಿ ಮೊ: 9108073850 / 9739755435 ಕಾರ್ಯದರ್ಶಿ ಚಂದ್ರಕಾAತ ತಾರನಾಳ ತಿಳಿಸಿದ್ದಾರೆ.