Thursday, January 2, 2025
ಚೇರ್ ಮೇಲೆ ಕುಳಿತಲ್ಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಈ ದಿವಸ ವಾರ್ತೆ
ವಿಜಯಪುರ: ಚೇರ್ ಮೇಲೆ ಕುಳಿತಲ್ಲೇ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಸಾಹೇಬಗೌಡ ಹೆರಾಣವರ (72) ಕುಳಿತಲ್ಲೆ ಪ್ರಾಣ ಬಿಟ್ಟ ದುರ್ದೈವಿ.
ಸಾಹೇಬಗೌಡ ಹೆರಾಣವರ ಈತ, ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಚಿಕ್ಕ ಅಂಗಡಿ ಹಾಕಿಕೊಂಡು, ತಹಶೀಲ್ದಾರ್ ಕಚೇರಿಗೆ ಬರುವವರ ಅರ್ಜಿ ಫಾರ್ಮ್ ತುಂಬವ ಕೆಲಸ ಮಾಡುತ್ತಿದ್ದ.
ಇಂದು ಬೆಳಗಿನ ಜಾವ ಬಂದು ಅಂಗಡಿ ತಗೆದು ಕುರ್ಚಿ ಮೇಲೆ ಕುಳಿತು ಕೆಲಸಬಆರಂಭಿಸುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಕೃಷ್ಣ-ವಾದಿರಾಜ ಮಠದಲ್ಲಿ ವಿಜೃಂಭಣೆಯ ರಥೋತ್ಸವ
ವಿಜಯಪುರ: ಪ್ರಾತಃ ಸ್ಮರಣೀಯ ಶ್ರೀ ಶ್ರೀ 1008 ಯತಿಕುಲಚಕ್ರವರ್ತಿ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಮಹಾಸಮಾರಾಧನಾ ಪೇಜಾವರಮಠ ಇವರ ಆರಾಧನೋತ್ಸವ ಅಂಗವಾಗಿ ಇಂದು ನಗರದ ಕೃಷ್ಣ - ವಾದಿರಾಜ ಮಠದಲ್ಲಿ ವಿಜೃಂಭಣೆಯ ರಥೋತ್ಸವ ಜರುಗಿತು.
ಪಂಡಿತ ವಾಸುದೇವಚಾರ್ಯ ಮತ್ತು ಶ್ರೀಮಠದ ಗೌರವಧ್ಯಕ್ಷ ಗೋಪಾಲ ನಾಯಕ ಮಂಗಳಾರತಿ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಪಂಡಿತ ಭಾರತೀಯ ರಮಾಣಾಚಾರ್ಯ ಅವರು ಶ್ರೀಗಳ ಕುರಿತು ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಅಧ್ಯಕ್ಷರು ಹಾಗೂ ವೈದ್ಯರಾದ ಕಿರಣ್ ಚುಳಕಿ, ಸಮೀರ ಆಚಾರ್ಯ, ಶ್ರೀ ಮಠದ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ, ಸದಸ್ಯರಾದ ವಿಕಾಸ ಪದಕಿ, ಗೋವಿಂದ ಜೋಶಿ, ವಿಜಯ ಜೋಶಿ, ರಾಕೇಶ್ ಕುಲಕರ್ಣಿ, ಪವನ ಜೋಶಿ, ಅಶೋಕ ರಾವ್, ಕೃಷ್ಣ ಪಾಡಗಾನೂರ, ಅಶೋಕ್ ಪದಕಿ, ವಿ.ಸಿ.ಕುಲಕರ್ಣಿ, ಉಮೇಶ ಕಾರಜೋಳ, ಹರೀಶಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ಮಹಾನಗರ ಪಾಲಿಕೆಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಮಹೇಂದ್ರ ನಾಯಕ, ವಿಷ್ಣು ಜಾಧವ, ಬಿ.ಆರ್.ಕುಲಕರ್ಣಿ, ವಿ.ಬಿ.ಕುಲಕರ್ಣಿ, ವೆಂಕಟೇಶ ಗುಡಿ, ಗೋವಿಂದರಾವ ದೇಶಪಾಂಡೆ ಸೇರಿದಂತೆ ಹಲವಾರು ಭಕ್ತಾದಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಆಗಮಿಸಿ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ತೊಗರಿ ದರ ಹೆಚ್ಚಿಸಲು ಆಗ್ರಹಿಸಿ ತೊಗರಿ ನೆಲಕ್ಕೆ ಹಾಕಿ ರೈತರ ಪ್ರತಿಭಟನೆ
ವಿಜಯಪುರ : ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ದರ ಕಡಿಮೆ ಮಾಡಿ ಪ್ರತಿ ಕ್ವಿಂಟಲ್‌ಗೆ 7550 ರೂಪಾಯಿ ನಿಗದಿ ಮಾಡುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡಲು ಹೊರಟಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರದಂದು ಹೂವಿನ ಹಿಪ್ಪರಗಿಯ ಉಪ ತಹಶೀಲ್ದಾರ ನಾಡ ಕಛೇರಿಯ ಆವರಣದಲ್ಲಿ ತೊಗರಿಯನ್ನು ತೆಗೆದುಕೊಂಡು ನೂರಾರು ರೈತರೊಂದಿಗೆ ನಾಡ ಕಚೇರಿಯ ಆವರಣದಲ್ಲಿ ಚೆಲ್ಲಿ ಸಾಂಕೇತಿಕ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಉಪ ತಹಶೀಲ್ದಾರರು ನಾಡ ಕಚೇರಿ ಹೂವಿನ ಹಿಪ್ಪರಗಿ ಅವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಯಾವುದೇ ಬೆಳೆಯ ಫಸಲನ್ನು ಕೇಂದ್ರ ಸರ್ಕಾರ ಖರೀದಿಸಲು ಮುಂದಾದ ಸಂದರ್ಭದಲ್ಲಿ ಬೆಲೆ ನಿಗದಿಪಡಿಸುವಾಗ ರೈತರೊಂದಿಗೆ ಚರ್ಚಿಸಿ ರೈತರಿಂದ ಸಲಹೆ ಪಡೆದುಕೊಂಡು ದರ ನಿಗದಿಪಡಿಸಬೇಕು. ಬಿತ್ತನೆಯ ಹಂಗಾಮದಲ್ಲಿ ಮೊದಲು ರೈತರು ಭೂಮಿ ಹದಗೊಳಿಸುತ್ತಾರೆ. ಅಲ್ಲಿಂದ ಪ್ರಾರಂಭವಾದ ಕೃಷಿ ಚಟುವಟಿಕೆಗಳ ಖರ್ಚು, ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಬೆಳೆ ಕಟಾವು ಮಾಡುವ ಖರ್ಚು ನಂತರ ಮಾರುಕಟ್ಟೆಗೆ ಸಾಗಿಸುವ ಸಾಗಣೆ ವೆಚ್ಚ ಎಲ್ಲವನ್ನು ಸೇರಿಸಿ ಸರ್ಕಾರ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಇದಾವುದನ್ನು ಗಣನೆಗೆ ತಗೆದುಕೊಳ್ಳದೆ ರೈತರಿಂದ ಮಾಹಿತಿ ಪಡೆಯದೆ ತಮಗೆ ತಿಳಿದಂತೆ ದರ ನಿಗದಿಪಡಿಸುವದು. ಅವೈಜ್ಞಾನಿಕ, ಕೃಷಿಗೆ ತಗಲುವ ಒಟ್ಟು ಖರ್ಚುವೆಚ್ಚಗಳ ಕುರಿತು ರೈತರಿಗೆ ಮಾತ್ರ ಗೊತ್ತಾಗುತ್ತದೆ. ಏಕೆಂದರೆ ಕೃಷಿ ಮಾಡುವವರೆ ರೈತರು ಆದ್ದರಿಂದ ರೈತರೊಂದಿಗೆ ಸಭೆ ನಡೆಸಿ ರೈತರ ಬೇಡಿಕೆಯಂತೆ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಈ ಮೊದಲು ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂಗಳವರೆಗೆ ದರ ಇತ್ತು. ರೈತರು ರಾಶಿ ಮಾಡಲು ಪ್ರಾರಂಭಿಸದಾಗ ಉದ್ದೇಶಪೂರ್ವಕವಾಗಿ ವಿದೇಶದಿಂದ ತೊಗರಿ ಆಮದು ಮಾಡಿಕೊಂಡು ನಮ್ಮ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮೊದಲಿದ್ದ 12 ಸಾವಿರ ದರವನ್ನು 7550 ಕ್ಕೆ ಇಳಿಸಿ ರೈತರನ್ನು ಬೀದಿ ಪಾಲು ಮಾಡಲು ಹೊರಟಿದೆ. ರೈತರ ಬಳಿ ತೊಗರಿ ಇಲ್ಲದ ಸಂದರ್ಭದಲ್ಲಿ ದರ ಹೆಚ್ಚಿಸಿದರೆ ರೈತರಿಗಾಗುವ ಪ್ರಯೋಜನವೇನು. ಇದು ರೈತರನ್ನು ವಂಚಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರ ಅನುಸರಿಸುತ್ತಿದೆ.
3-4 ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ಬರಗಾಲದ ದವಡೆಯಲ್ಲಿ ಸಿಲುಕಿದ ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ತೀರ್ವ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಬದಲು ದೇಶದ ಉದ್ದಿಮೆದಾರರಿಗೆ ಮಣೆ ಹಾಕಲಾಗುತ್ತಿದೆ. ಈ ದೇಶಕ್ಕೆ ಅನ್ನ ಬೆಳೆದುಕೊಡುವ ಅನ್ನದಾತರೆ ಈ ದೇಶಕ್ಕೆ ಮುಖ್ಯ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೆ ತೊಗರಿ ದರವನ್ನು ಮೊದಲಿನ 12 ಸಾವಿರ ರೂಗಳವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಠ್ಠಲ ಬಿರಾದಾರ, ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಗುರುಸಂಗಪ್ಪ ಶಿವಯೋಗಿ, ಮಹೇಶ ಯಡಳ್ಳಿ, ಭಾಗಪ್ಪ ನಾಟಿಕಾರ, ದಾವೂಲಸಾಬ ನಧಾಫ್, ಹಣಮಂತ ಮುರಾಳ, ಗಿರಿಮಲ್ಲಪ್ಪ ದೊಡಮನಿ, ಬಸವರಾಜ ಚೌಧರಿ, ಭೀಮನಗೌಡ ಪಾಟೀಲ, ಲಂಕೇಶ ತಳವಾರ, ಬಂಗೆಪ್ಪ ಸಾಸನೂರ, ನಿಂಗಣ್ಣ ನಾಡಗೌಡ, ಸಿದ್ದು ಮೇಟಿ, ರ‍್ಯಾಬಪ್ಪಗೌಡ ಪುಲೇಶಿ, ರಾಜೇಸಾಬ ವಾಲಿಕಾರ, ಬಂದಗಿಸಾ ಹಳ್ಳೂರ, ಸಿದ್ದಪ್ಪ ಹಳ್ಳೂರ, ಹಣಮಂತ ಸಾಸನೂರ, ಸಾಯಬಣ್ಣ ತಾಳಿಕೋಟಿ, ಗುರುಪಾದಪ್ಪ ಗುಂಡಣ್ಣನವರ, ಸಿದ್ದಪ್ಪ ಗುಂಡಣ್ಣನವರ, ಶಿವಪ್ಪ ಹುನಗುಂದ, ರುದ್ರಪ್ಪ ಕುಂಬಾರ, ಗುರಸಂಗಪ್ಪ ಶಿವಯೋಗಿ, ಲಕ್ಷö್ಮಣ ಚೌಧರಿ, ಶ್ರೀಶೈಲ ಮಾಳೂರ, ಈರಯ್ಯ ಹಿರೇಮಠ, ಶರಣಬಸಪ್ಪ ಹಾದಿಮನಿ, ಗುರಲಿಂಗಪ್ಪ ಪಡಸಲಗಿ, ಈರಣ್ಣ ಬ್ಯಾಕೋಡ, ಪ್ರಕಾಶ ಶಂಕ್ರೆಪ್ಪಗೋಳ, ವೀರಭದ್ರಯ್ಯ ಜಂಗಿನಗಡ್ಡಿ, ಎಸ್.ಎಸ್.ಬೂದಿಹಾಳ, ಅರವಿಂದ ಬ್ಯಾಕೋಡ, ಬಂದಗಿಸಾಬ ಹಳ್ಳೂರ,ರಾಚಪ್ಪ ಕೋರಿ, ಮಹಾಂತೇಶ ಕೋರಿ, ರುದ್ರಪ್ಪ ಹುನಗುಂದ, ಮಲ್ಲಪ್ಪ ಮಾದರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಜೀವನದಲ್ಲಿ ತಾಯಿ-ಗುರು ಋಣ ತೀರಿಸಲು ಸಾಧ್ಯವಿಲ್ಲ-ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆದು ತಾನು ಮಾಡುವ ಕೆಲಸವನ್ನು ಶಿಷ್ಯನಿಂದ ಮಾಡಿಸುವಾತ ಗುರು. ತಾಯಿ ನಮಗೆ ಜನ್ಮ ನೀಡಿದ್ದಾಳೆ ಅವಳು ಜನ್ಮಕೊಟ್ಟ ಮಗನಿಗೆ ಗುರುವಾಗಿ ನಿಲ್ಲುತ್ತಾಳೆ. ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಕೇವಲ ಗುರುವಿನ ಸ್ಥಾನವನ್ನು ತುಂಬಿಲ್ಲ. ಅವರು ತಾಯಿ ಹಾಗೂ ಗುರುವಿನ ಸ್ಥಾನ ಎರಡನ್ನೂ ತುಂಬಿದ್ದಾರೆ. ಕಲ್ಕತ್ತಾ ಸ್ವಾಮಿ ವಿವೇಕಾನಂದರ ಕರ್ಮ ಭೂಮಿ. ಹಾಗೇ ವಿಜಯಪುರ ಶ್ರೀ ಸಿದ್ಧೇಶ್ವರ ಶ್ರೀಗಳ ಕರ್ಮ ಭೂಮಿಯಾಗಿದೆ. ಈ ಭರತ ಭೂಮಿಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ರೂಪದಲ್ಲಿ ಸ್ವಾಮಿ ವಿವೇಕಾನಂದರನ್ನು ನಾವು ಮತ್ತೇ ಕಂಡಿದ್ದೇವೆ ಎಂದರು.
ಸನಾತನ ಧರ್ಮ, ನಾಡಿನ ಸಂಸ್ಕೃತಿ ಹಾಗೂ ವಚನ ಸಾಹಿತ್ಯದ ರಾಯಬಾರಿಯಾಗಿ ನಾವು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ನೋಡಿದ್ದೇವೆ. ಯಾವುದೇ ಬದಲಾವಣೆ ಪ್ರಾರಂಭವಾಗಬೇಕಾದರೆ ಅದು ನನ್ನಿಂದಲೇ ಆಗಲಿ ಎಂದು ಸರ್ವ ಸಂತರಿಗೂ ಮಾದರಿಯಾಗಿ ನಿಂತವರು ಪೂಜ್ಯರು.
ಯಾವುದನ್ನು ಸಮಾಜ ಒಪ್ಪಲ್ಲವೋ, ಅದನ್ನು ಆ ಭಗವಂತ ಕೂಡ ಒಪ್ಪಲು ಸಾಧ್ಯವಿಲ್ಲ. ಅದನ್ನೇ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಗಳು ನಮಗೆಲ್ಲ ತಿಳಿಸಿದ್ದಾರೆ.
ಶರಣರಿಗೆ ಮರಣವೇ ಮಹಾನವಮಿ. ಶ್ರೀ ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿನಲ್ಲಿ ಆನಂದವನ್ನು ಕಂಡವರು. ಬದುಕಿನ ಅವಧಿಯನ್ನೇ ಸ್ವರ್ಗವನ್ನಾಗಿ ಮಾಡಿಕೊಂಡವರು. ಕುಳಿತುಕೋಳ್ಳುವ ಜಾಗ ಮುಖ್ಯವಲ್ಲ. ನಾವು ಏನು ಮಾಡುತ್ತೇವೆ. ನಾವು ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಭಾರತ ಸಂತರು-ಶರಣರು ಬದುಕಿದ ನಾಡು, ಜಗತ್ತನಲ್ಲಿ ಎಲ್ಲಿಯಾದರೂ ತಪೋ ಭೂಮಿ ಇದ್ದರೆ, ಅದು ಭರತ ಭೂಮಿ. ಮನುಷ್ಯನಿಗೆ ಜೀವಿಸಲು ಪ್ರಾಣವಾಯು ಸಿಗುವುದು ವನಗಳಿಂದ. ಶ್ರೀ ಸಿದ್ಧೇಶ್ವರ ಶ್ರೀಗಳು ಹೇಳಿರುವ ಗೀಡ ನೆಡುವ ಕಾರ್ಯವನ್ನು ನಾವು ಮುಂದುವರೆಸೋಣ ಎಂದು ಹೇಳಿದರು.
ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ೧೨ ನೇ ಶತಮಾನದ ಅಣ್ಣ ಬಸವಣ್ಣನವರ ತದ್ರೂಪಿಯಾಗಿ ನಾವು ಶ್ರೀ ಸಿದ್ಧೇಶ್ವರ ಅಪ್ಪಾವರನ್ನು ನೋಡಿದ್ದೇವೆ. ಅವಿಭಜಿತ ವಿಜಯಪುರ ಜಿಲ್ಲೆಯ ಬಗ್ಗೆ ಅಪ್ಪಗಳ ಕನಸು ಬಹಳ ದೊಡ್ಡದು. ಎಲ್ಲ ಪಾಟೀಲರು ಸುದ್ದ ಆದರೆ ವಿಜಯಪುರ ಸುದ್ದ ಆಗ್ತದ ಎಂದು ಅಪ್ಪಗಳು ಹೇಳಿದ್ದರು. ಅವರು ಪ್ರಾಂಜಲ ಮನಸ್ಸಿನಿಂದ ನುಡಿದ ಮಾತುಗಳು ನಮ್ಮ ಹೃದಯದಲ್ಲಿ ಉಳಿದಿವೆ. ಅವರು ನಮ್ಮ ಮನಸ್ಸಿನಲ್ಲಿಯೇ ವಾಸವಾಗಿದ್ದಾರೆ. ಅವರು ಸೂಚಿಸಿರುವ ಕೆಲಸಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಬಸವಲಿAಗ ಸ್ವಾಮೀಜಿಗಳು ಶ್ರೀ ಸಿದ್ಧೇಶ್ವರ ಅಪ್ಪಗಳ ನಡೆಸಿಕೊಟ್ಟಂತ ಮಾರ್ಗದಲ್ಲಿ ಆಶ್ರಮ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುತ್ತಿದ್ದಾರೆ. ಅವರಿಗೆ ನಾಡಿನ ಅನೇಕ ಪೂಜ್ಯರು ಹೆಗಲು ಕೊಟ್ಟಿದ್ದಾರೆ. ಶ್ರೀ ಸಿದ್ಧೇಶ್ವರ ಅಪ್ಪಗಳನ್ನು ಕಂಡಿರುವ ವಿಜಯಪುರ-ಬಾಗಲಕೋಟ ಜನ ನಾವು ಬಹಳ ಪುಣ್ಯವಂತರು. ಪೂಜ್ಯರು ಈ ಶತಮಾನದ ಶ್ರೇಷ್ಠ ಸಂತರು. ಸೂರ್ಯ-ಚಂದ್ರ ಇರುವವರೆಗೂ ಅವರ ಹೆಸರು ಈ ಭೂಮಿಯ ಮೇಲೆ ಶಾಶ್ವತವಾಗಿ ಇರಲಿದೆ ಎಂದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಳಾದ ಪೂಜ್ಯ ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಎ.ಎಸ್.ಪಾಶ್ಚಾಪುರೆ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ನಾಡಿನ ಮಠಾಧೀಶರು, ಸ್ವಾಮೀಜಿಗಳು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.