ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹಾಗೂ ನಾಡಿನ ಪೂಜ್ಯರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು
ವಿಜಯಪುರ : ಜೀವನದಲ್ಲಿ ನಾವು ಎಲ್ಲರ ಋಣ ತೀರಿಸಲು ಸಾಧ್ಯವಿದೆ. ಆದರೆ ಗುರುವಿನ ಋಣ ಹಾಗೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಎನ್ನುವುದನ್ನೇ ಶ್ರೀ ಸಿದ್ಧೇಶ್ವರ ಅಪ್ಪಗಳು ತಮ್ಮ ಜ್ಞಾನ ದಿವಿಟಿಗೆಯನ್ನು ಹಿಡಿದು ನಾಡಿನಾದ್ಯಂತ ತಿರುಗಾಡಿ ನಡೆನುಡಿ ಆಚಾರಗಳಿಂದ ನಮ್ಮಲ್ಲಿ ಬದಲಾವಣೆ ತಂದಿರುವ ಅಪರೂಪದ ಸಂತ ಎಂದು ಮಾನ್ಯ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆದು ತಾನು ಮಾಡುವ ಕೆಲಸವನ್ನು ಶಿಷ್ಯನಿಂದ ಮಾಡಿಸುವಾತ ಗುರು. ತಾಯಿ ನಮಗೆ ಜನ್ಮ ನೀಡಿದ್ದಾಳೆ ಅವಳು ಜನ್ಮಕೊಟ್ಟ ಮಗನಿಗೆ ಗುರುವಾಗಿ ನಿಲ್ಲುತ್ತಾಳೆ. ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಕೇವಲ ಗುರುವಿನ ಸ್ಥಾನವನ್ನು ತುಂಬಿಲ್ಲ. ಅವರು ತಾಯಿ ಹಾಗೂ ಗುರುವಿನ ಸ್ಥಾನ ಎರಡನ್ನೂ ತುಂಬಿದ್ದಾರೆ. ಕಲ್ಕತ್ತಾ ಸ್ವಾಮಿ ವಿವೇಕಾನಂದರ ಕರ್ಮ ಭೂಮಿ. ಹಾಗೇ ವಿಜಯಪುರ ಶ್ರೀ ಸಿದ್ಧೇಶ್ವರ ಶ್ರೀಗಳ ಕರ್ಮ ಭೂಮಿಯಾಗಿದೆ. ಈ ಭರತ ಭೂಮಿಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ರೂಪದಲ್ಲಿ ಸ್ವಾಮಿ ವಿವೇಕಾನಂದರನ್ನು ನಾವು ಮತ್ತೇ ಕಂಡಿದ್ದೇವೆ ಎಂದರು.
ಸನಾತನ ಧರ್ಮ, ನಾಡಿನ ಸಂಸ್ಕೃತಿ ಹಾಗೂ ವಚನ ಸಾಹಿತ್ಯದ ರಾಯಬಾರಿಯಾಗಿ ನಾವು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ನೋಡಿದ್ದೇವೆ. ಯಾವುದೇ ಬದಲಾವಣೆ ಪ್ರಾರಂಭವಾಗಬೇಕಾದರೆ ಅದು ನನ್ನಿಂದಲೇ ಆಗಲಿ ಎಂದು ಸರ್ವ ಸಂತರಿಗೂ ಮಾದರಿಯಾಗಿ ನಿಂತವರು ಪೂಜ್ಯರು.
ಯಾವುದನ್ನು ಸಮಾಜ ಒಪ್ಪಲ್ಲವೋ, ಅದನ್ನು ಆ ಭಗವಂತ ಕೂಡ ಒಪ್ಪಲು ಸಾಧ್ಯವಿಲ್ಲ. ಅದನ್ನೇ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಗಳು ನಮಗೆಲ್ಲ ತಿಳಿಸಿದ್ದಾರೆ.
ಶರಣರಿಗೆ ಮರಣವೇ ಮಹಾನವಮಿ. ಶ್ರೀ ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿನಲ್ಲಿ ಆನಂದವನ್ನು ಕಂಡವರು. ಬದುಕಿನ ಅವಧಿಯನ್ನೇ ಸ್ವರ್ಗವನ್ನಾಗಿ ಮಾಡಿಕೊಂಡವರು. ಕುಳಿತುಕೋಳ್ಳುವ ಜಾಗ ಮುಖ್ಯವಲ್ಲ. ನಾವು ಏನು ಮಾಡುತ್ತೇವೆ. ನಾವು ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಭಾರತ ಸಂತರು-ಶರಣರು ಬದುಕಿದ ನಾಡು, ಜಗತ್ತನಲ್ಲಿ ಎಲ್ಲಿಯಾದರೂ ತಪೋ ಭೂಮಿ ಇದ್ದರೆ, ಅದು ಭರತ ಭೂಮಿ. ಮನುಷ್ಯನಿಗೆ ಜೀವಿಸಲು ಪ್ರಾಣವಾಯು ಸಿಗುವುದು ವನಗಳಿಂದ. ಶ್ರೀ ಸಿದ್ಧೇಶ್ವರ ಶ್ರೀಗಳು ಹೇಳಿರುವ ಗೀಡ ನೆಡುವ ಕಾರ್ಯವನ್ನು ನಾವು ಮುಂದುವರೆಸೋಣ ಎಂದು ಹೇಳಿದರು.
ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ೧೨ ನೇ ಶತಮಾನದ ಅಣ್ಣ ಬಸವಣ್ಣನವರ ತದ್ರೂಪಿಯಾಗಿ ನಾವು ಶ್ರೀ ಸಿದ್ಧೇಶ್ವರ ಅಪ್ಪಾವರನ್ನು ನೋಡಿದ್ದೇವೆ. ಅವಿಭಜಿತ ವಿಜಯಪುರ ಜಿಲ್ಲೆಯ ಬಗ್ಗೆ ಅಪ್ಪಗಳ ಕನಸು ಬಹಳ ದೊಡ್ಡದು. ಎಲ್ಲ ಪಾಟೀಲರು ಸುದ್ದ ಆದರೆ ವಿಜಯಪುರ ಸುದ್ದ ಆಗ್ತದ ಎಂದು ಅಪ್ಪಗಳು ಹೇಳಿದ್ದರು. ಅವರು ಪ್ರಾಂಜಲ ಮನಸ್ಸಿನಿಂದ ನುಡಿದ ಮಾತುಗಳು ನಮ್ಮ ಹೃದಯದಲ್ಲಿ ಉಳಿದಿವೆ. ಅವರು ನಮ್ಮ ಮನಸ್ಸಿನಲ್ಲಿಯೇ ವಾಸವಾಗಿದ್ದಾರೆ. ಅವರು ಸೂಚಿಸಿರುವ ಕೆಲಸಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಬಸವಲಿAಗ ಸ್ವಾಮೀಜಿಗಳು ಶ್ರೀ ಸಿದ್ಧೇಶ್ವರ ಅಪ್ಪಗಳ ನಡೆಸಿಕೊಟ್ಟಂತ ಮಾರ್ಗದಲ್ಲಿ ಆಶ್ರಮ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುತ್ತಿದ್ದಾರೆ. ಅವರಿಗೆ ನಾಡಿನ ಅನೇಕ ಪೂಜ್ಯರು ಹೆಗಲು ಕೊಟ್ಟಿದ್ದಾರೆ. ಶ್ರೀ ಸಿದ್ಧೇಶ್ವರ ಅಪ್ಪಗಳನ್ನು ಕಂಡಿರುವ ವಿಜಯಪುರ-ಬಾಗಲಕೋಟ ಜನ ನಾವು ಬಹಳ ಪುಣ್ಯವಂತರು. ಪೂಜ್ಯರು ಈ ಶತಮಾನದ ಶ್ರೇಷ್ಠ ಸಂತರು. ಸೂರ್ಯ-ಚಂದ್ರ ಇರುವವರೆಗೂ ಅವರ ಹೆಸರು ಈ ಭೂಮಿಯ ಮೇಲೆ ಶಾಶ್ವತವಾಗಿ ಇರಲಿದೆ ಎಂದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಳಾದ ಪೂಜ್ಯ ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಎ.ಎಸ್.ಪಾಶ್ಚಾಪುರೆ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ನಾಡಿನ ಮಠಾಧೀಶರು, ಸ್ವಾಮೀಜಿಗಳು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment