ವಿಜಯಪುರ : ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ದರ ಕಡಿಮೆ ಮಾಡಿ ಪ್ರತಿ ಕ್ವಿಂಟಲ್‌ಗೆ 7550 ರೂಪಾಯಿ ನಿಗದಿ ಮಾಡುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡಲು ಹೊರಟಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರದಂದು ಹೂವಿನ ಹಿಪ್ಪರಗಿಯ ಉಪ ತಹಶೀಲ್ದಾರ ನಾಡ ಕಛೇರಿಯ ಆವರಣದಲ್ಲಿ ತೊಗರಿಯನ್ನು ತೆಗೆದುಕೊಂಡು ನೂರಾರು ರೈತರೊಂದಿಗೆ ನಾಡ ಕಚೇರಿಯ ಆವರಣದಲ್ಲಿ ಚೆಲ್ಲಿ ಸಾಂಕೇತಿಕ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಉಪ ತಹಶೀಲ್ದಾರರು ನಾಡ ಕಚೇರಿ ಹೂವಿನ ಹಿಪ್ಪರಗಿ ಅವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಯಾವುದೇ ಬೆಳೆಯ ಫಸಲನ್ನು ಕೇಂದ್ರ ಸರ್ಕಾರ ಖರೀದಿಸಲು ಮುಂದಾದ ಸಂದರ್ಭದಲ್ಲಿ ಬೆಲೆ ನಿಗದಿಪಡಿಸುವಾಗ ರೈತರೊಂದಿಗೆ ಚರ್ಚಿಸಿ ರೈತರಿಂದ ಸಲಹೆ ಪಡೆದುಕೊಂಡು ದರ ನಿಗದಿಪಡಿಸಬೇಕು. ಬಿತ್ತನೆಯ ಹಂಗಾಮದಲ್ಲಿ ಮೊದಲು ರೈತರು ಭೂಮಿ ಹದಗೊಳಿಸುತ್ತಾರೆ. ಅಲ್ಲಿಂದ ಪ್ರಾರಂಭವಾದ ಕೃಷಿ ಚಟುವಟಿಕೆಗಳ ಖರ್ಚು, ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಬೆಳೆ ಕಟಾವು ಮಾಡುವ ಖರ್ಚು ನಂತರ ಮಾರುಕಟ್ಟೆಗೆ ಸಾಗಿಸುವ ಸಾಗಣೆ ವೆಚ್ಚ ಎಲ್ಲವನ್ನು ಸೇರಿಸಿ ಸರ್ಕಾರ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಇದಾವುದನ್ನು ಗಣನೆಗೆ ತಗೆದುಕೊಳ್ಳದೆ ರೈತರಿಂದ ಮಾಹಿತಿ ಪಡೆಯದೆ ತಮಗೆ ತಿಳಿದಂತೆ ದರ ನಿಗದಿಪಡಿಸುವದು. ಅವೈಜ್ಞಾನಿಕ, ಕೃಷಿಗೆ ತಗಲುವ ಒಟ್ಟು ಖರ್ಚುವೆಚ್ಚಗಳ ಕುರಿತು ರೈತರಿಗೆ ಮಾತ್ರ ಗೊತ್ತಾಗುತ್ತದೆ. ಏಕೆಂದರೆ ಕೃಷಿ ಮಾಡುವವರೆ ರೈತರು ಆದ್ದರಿಂದ ರೈತರೊಂದಿಗೆ ಸಭೆ ನಡೆಸಿ ರೈತರ ಬೇಡಿಕೆಯಂತೆ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಈ ಮೊದಲು ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂಗಳವರೆಗೆ ದರ ಇತ್ತು. ರೈತರು ರಾಶಿ ಮಾಡಲು ಪ್ರಾರಂಭಿಸದಾಗ ಉದ್ದೇಶಪೂರ್ವಕವಾಗಿ ವಿದೇಶದಿಂದ ತೊಗರಿ ಆಮದು ಮಾಡಿಕೊಂಡು ನಮ್ಮ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮೊದಲಿದ್ದ 12 ಸಾವಿರ ದರವನ್ನು 7550 ಕ್ಕೆ ಇಳಿಸಿ ರೈತರನ್ನು ಬೀದಿ ಪಾಲು ಮಾಡಲು ಹೊರಟಿದೆ. ರೈತರ ಬಳಿ ತೊಗರಿ ಇಲ್ಲದ ಸಂದರ್ಭದಲ್ಲಿ ದರ ಹೆಚ್ಚಿಸಿದರೆ ರೈತರಿಗಾಗುವ ಪ್ರಯೋಜನವೇನು. ಇದು ರೈತರನ್ನು ವಂಚಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರ ಅನುಸರಿಸುತ್ತಿದೆ.
3-4 ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ಬರಗಾಲದ ದವಡೆಯಲ್ಲಿ ಸಿಲುಕಿದ ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ತೀರ್ವ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಬದಲು ದೇಶದ ಉದ್ದಿಮೆದಾರರಿಗೆ ಮಣೆ ಹಾಕಲಾಗುತ್ತಿದೆ. ಈ ದೇಶಕ್ಕೆ ಅನ್ನ ಬೆಳೆದುಕೊಡುವ ಅನ್ನದಾತರೆ ಈ ದೇಶಕ್ಕೆ ಮುಖ್ಯ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೆ ತೊಗರಿ ದರವನ್ನು ಮೊದಲಿನ 12 ಸಾವಿರ ರೂಗಳವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಠ್ಠಲ ಬಿರಾದಾರ, ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಗುರುಸಂಗಪ್ಪ ಶಿವಯೋಗಿ, ಮಹೇಶ ಯಡಳ್ಳಿ, ಭಾಗಪ್ಪ ನಾಟಿಕಾರ, ದಾವೂಲಸಾಬ ನಧಾಫ್, ಹಣಮಂತ ಮುರಾಳ, ಗಿರಿಮಲ್ಲಪ್ಪ ದೊಡಮನಿ, ಬಸವರಾಜ ಚೌಧರಿ, ಭೀಮನಗೌಡ ಪಾಟೀಲ, ಲಂಕೇಶ ತಳವಾರ, ಬಂಗೆಪ್ಪ ಸಾಸನೂರ, ನಿಂಗಣ್ಣ ನಾಡಗೌಡ, ಸಿದ್ದು ಮೇಟಿ, ರ‍್ಯಾಬಪ್ಪಗೌಡ ಪುಲೇಶಿ, ರಾಜೇಸಾಬ ವಾಲಿಕಾರ, ಬಂದಗಿಸಾ ಹಳ್ಳೂರ, ಸಿದ್ದಪ್ಪ ಹಳ್ಳೂರ, ಹಣಮಂತ ಸಾಸನೂರ, ಸಾಯಬಣ್ಣ ತಾಳಿಕೋಟಿ, ಗುರುಪಾದಪ್ಪ ಗುಂಡಣ್ಣನವರ, ಸಿದ್ದಪ್ಪ ಗುಂಡಣ್ಣನವರ, ಶಿವಪ್ಪ ಹುನಗುಂದ, ರುದ್ರಪ್ಪ ಕುಂಬಾರ, ಗುರಸಂಗಪ್ಪ ಶಿವಯೋಗಿ, ಲಕ್ಷö್ಮಣ ಚೌಧರಿ, ಶ್ರೀಶೈಲ ಮಾಳೂರ, ಈರಯ್ಯ ಹಿರೇಮಠ, ಶರಣಬಸಪ್ಪ ಹಾದಿಮನಿ, ಗುರಲಿಂಗಪ್ಪ ಪಡಸಲಗಿ, ಈರಣ್ಣ ಬ್ಯಾಕೋಡ, ಪ್ರಕಾಶ ಶಂಕ್ರೆಪ್ಪಗೋಳ, ವೀರಭದ್ರಯ್ಯ ಜಂಗಿನಗಡ್ಡಿ, ಎಸ್.ಎಸ್.ಬೂದಿಹಾಳ, ಅರವಿಂದ ಬ್ಯಾಕೋಡ, ಬಂದಗಿಸಾಬ ಹಳ್ಳೂರ,ರಾಚಪ್ಪ ಕೋರಿ, ಮಹಾಂತೇಶ ಕೋರಿ, ರುದ್ರಪ್ಪ ಹುನಗುಂದ, ಮಲ್ಲಪ್ಪ ಮಾದರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment